ಮಡಿಕೇರಿ ಜ.30 NEWS DESK : 2024-25 ನೇ ಸಾಲಿನಲ್ಲಿ ಕೃಷಿ ಇಲಾಖೆಯ ಮುಖಾಂತರ ಸ್ಪ್ರಿಂಕ್ಲರ್ ಗೆ ಗೆ ಶೇ.90ರಷ್ಟು ಸಹಾಯಧನವನ್ನು ನೀಡಲಾಗುತ್ತಿದೆ. ಈ ಸೌಲಭ್ಯವು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಸಾಮಾನ್ಯ ವರ್ಗದವರಿಗೂ ಸಹ ಶೇ.90 ರಷ್ಟು ಸಹಾಯಧನವನ್ನು ನೀಡಲಾಗುತ್ತಿದೆ. ರೈತ ಬಾಂಧವರು ತಮ್ಮ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ರೈತ ಸಂಪರ್ಕ ಕೇಂದ್ರದಲ್ಲಿ ಉಚಿತವಾಗಿ ನೀಡುವ ಅರ್ಜಿಯೊಂದಿಗೆ ತಮ್ಮ ಆಧಾರ್ ಕಾರ್ಡ್ ಜೆರಾಕ್ಸ್, ಪಹಣಿ, ಬ್ಯಾಂಕ್ ಪಾಸ್ ಪುಸ್ತಕ ಜೆರಾಕ್ಸ್, ಹಾಗೂ ಎರಡು ಸ್ಟ್ಯಾಂಪ್ ಅಳತೆಯ ಫೋಟೋಗಳನ್ನು ಸಲ್ಲಿಸುವುದರ ಮುಖಾಂತರ ಈ ಯೋಜನೆ ಅಡಿ ಫಲಾನುಭವಿಗಳಾಗಬಹುದು. ಈ ಯೋಜನೆ ಅಡಿ ಒಂದು ಎಕರೆ ಜಮೀನಿಗಿಂತ ಹೆಚ್ಚಿನ ವಿಸ್ತೀರ್ಣ ಹೊಂದಿರುವ ರೈತರು 4139 ಹಣವನ್ನು ಪಾವತಿಸುವ ಮೂಲಕ ಒಟ್ಟು 30 ಪೈಪುಗಳು ಹಾಗೂ 5 ಸ್ಪ್ರಿಂಕ್ಲರ್ ಜೆಟ್‍ಗಳು ಹಾಗೂ ಇತರೆ ಸಾಮಗ್ರಿಗಳನ್ನು ಪಡೆಯಬಹುದು. ಒಂದು ಎಕರೆಗಿಂತ ಕಡಿಮೆ ವಿಸ್ತೀರ್ಣ ಹಾಗೂ ಅರ್ಧ ಎಕರೆಗಿಂತ ಹೆಚ್ಚು…
ಲೇಖಕ: admin
ಮಡಿಕೇರಿ NEWS DESK ಜ.29 : ಕಾವೇರಿ ಕ್ಷೇತ್ರ ಭಾಗಮಂಡಲದಲ್ಲಿ ಸುಮಾರು 30 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಮೇಲ್ಸೆತುವೆಯನ್ನು ಜ.31 ರಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾಧ್ಯಮ ವಕ್ತಾರ ಟಿ.ಪಿ.ರಮೇಶ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಅಂದು ಮಧ್ಯಾಹ್ನ 3 ಗಂಟೆಗೆ ನಡೆಯುವ ಮೇಲ್ಸೇತುವೆ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿಗಳೊAದಿಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬೃಹತ್ ಕೈಗಾರಿಕಾ ಇಲಾಖಾ ಸಚಿವ ಎಂ.ಬಿ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ, ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು. ಕಾವೇರಿ ನದಿಯ ಉಗಮ ಸ್ಥಾನ ತಲಕಾವೇರಿ ಕ್ಷೇತ್ರಕ್ಕೆ ಭೇಟಿ ನೀಡಲಿರುವ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಚಿವರುಗಳನ್ನು ಕೊಡಗು ಜಿಲ್ಲಾ ಕಾಂಗ್ರೆಸ್‌ನ ಪದಾಧಿಕಾರಿಗಳು, ಕಾರ್ಯಕರ್ತರು, ಭಾಗಮಂಡಲದ ಸಾರ್ವಜನಿಕರು ಅದ್ಧೂರಿಯಾಗಿ ಸ್ವಾಗತಿಸಲಿದ್ದಾರೆ ಎಂದು…
ಮಡಿಕೇರಿ NEWS DESK ಜ.29 : ಫೈನಾನ್ಸ್, ಮೈಕ್ರೋ ಫೈನಾನ್ಸ್ ಮತ್ತು ಫಾನ್ ಬ್ರೋಕರ್‌ಗಳು ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಮೈಕ್ರೋ ಫೈನಾನ್ಸ್ ಮತ್ತು ಫಾನ್ ಬ್ರೋಕರ್‌ಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಆರ್‌ಬಿಐ ಮಾರ್ಗಸೂಚಿ ಪ್ರಕಾರ 2 ಲಕ್ಷ ರೂ.ವರೆಗೆ ಮಾತ್ರ ಸಾಲ ನೀಡಬಹುದಾಗಿದೆ. ಆದರೆ ಸಾಲ ನೀಡುವಾಗ ಸಾಲ ಪಡೆಯುವವರು ಸಾಲ ಮರುಪಾವತಿ ಮಾಡುವ ಸಾಮರ್ಥ್ಯ ಇದೆಯೇ ಎಂದು ಗಮನಿಸಿ ಸಾಲವನ್ನು ನೀಡಬೇಕು. ಅದನ್ನು ಬಿಟ್ಟು ಕಿರುಕುಳ ನೀಡುವುದು ಸರಿಯಲ್ಲ ಎಂದು ಹೇಳಿದರು. ಸಾರ್ವಜನಿಕರಿಗೆ ತೊಂದರೆಯಾಗದAತೆ ಗಮನಹರಿಸುವುದು ಎಲ್ಲರ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ತಾವೂ ಸಹ(ಪೈನಾನ್ಸ್ ಕಂಪನಿಗಳು) ಕಾನೂನು ನಿಯಮಾನುಸಾರ ನಡೆದುಕೊಳ್ಳಬೇಕು. ಅದು ಬಿಟ್ಟು ದೌರ್ಜನ್ಯ ನಡೆಯುವುದು ಕಂಡುಬಂದರೆ ನಿಯಮಾನುಸಾರ ಕ್ರಮ ಜರುಗಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಅವರು ಎಚ್ಚರಿಸಿದರು. ಪ್ರತಿಯೊಬ್ಬರಲ್ಲಿಯೂ ಆರ್ಥಿಕ ಶಿಸ್ತು ಇರಬೇಕು. ಅದನ್ನು ಬಿಟ್ಟು…
ಮಡಿಕೇರಿ ಜ.29 NEWS DESK : ನೋವಿನ ಬದುಕು ಸಾಗಿಸುತ್ತಿರುವ ಆದಿವಾಸಿ ಕುಟುಂಬಗಳ ಮಕ್ಕಳಿಗೆ ಸರಕಾರ ಅಗತ್ಯ ಶಿಕ್ಷಣ ನೀಡುವ ಮೂಲಕ ಬಲ ತುಂಬಬೇಕು ಎಂದು ಕೇರಳ ಸರಕಾರದ ಸಮಾಜ ಕಲ್ಯಾಣ ಮತ್ತು ಗಿರಿಜನ ಖಾತೆ ಸಚಿವ ಓ.ಆರ್.ಕೇಳು ಕರೆ ನೀಡಿದ್ದಾರೆ. ಇತ್ತೀಚೆಗೆ ಅನಾರೋಗ್ಯದಿಂದ ನಿಧನರಾದ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಂಚಾಲಕ ಕೊಡಗಿನ ವೈ.ಕೆ.ಗಣೇಶ್ ಅವರಿಗೆ ವಿವಿಧ ಸಂಘಟನೆಗಳು ಗೋಣಿಕೊಪ್ಪಲಿನಲ್ಲಿ ನುಡಿನಮನದ ಮೂಲಕ ಶ್ರದ್ಧಾಂಜಲಿ ಅರ್ಪಿಸಿದವು. ಹೋರಾಟಗಾರ್ತಿ ಜೆ.ಆರ್.ಪ್ರೇಮ ಅವರ ಅಧ್ಯಕ್ಷತೆಯಲ್ಲಿ ಎಪಿಎಂಸಿ ಸಭಾಂಗಣದಲ್ಲಿ ನಡೆದ ನುಡಿನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು ತುಳಿತಕ್ಕೊಳಗಾದವರ ಪರ ಧ್ವನಿ ಎತ್ತುತ್ತಿದ್ದ ವೈ.ಕೆ.ಗಣೇಶ್ ಅವರು ಅನಾರೋಗ್ಯದಿಂದ ಸಣ್ಣ ವಯಸ್ಸಿನಲ್ಲೇ ನಮ್ಮನ್ನು ಅಗಲಿರುವುದು ನೋವಿನ ಸಂಗತಿಯಾಗಿದೆ. ಆದಿವಾಸಿಗಳ ಏಳಿಗೆಗಾಗಿ ಅಪಾರ ಕೊಡುಗೆ ನೀಡಿದ್ದಾರೆ, ದಲಿತರ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನ ಮಾಡಿದ್ದಾರೆ ಎಂದರು. ಜಿಲ್ಲೆಯಲ್ಲಿ ಆದಿವಾಸಿಗಳು ಕೂಲಿ ಕೆಲಸ ಮಾಡಿಕೊಂಡು ಸಂಕಷ್ಟದ ಬದುಕು ಸಾಗಿಸುತ್ತಿದ್ದಾರೆ. ಮೂಲಭೂತ ಸೌಲಭ್ಯಗಳ ಕೊರತೆಯಿಂದ ನೋವು ಅನುಭವಿಸುತ್ತಿದ್ದಾರೆ. ಸರಕಾರ…
ಸೋಮವಾರಪೇಟೆ ಜ.29 NEWS DESK : ಕೂಗೆಕೋಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳ್ಳತನ ನಡೆದಿದೆ ಸಿ.ಸಿ.ಕ್ಯಾಮೆರಾ ಅಳವಡಿಸಿಕೊಡಬೇಕು. ಶಾಲೆಯ ಸುತ್ತ ಕಾಂಪೌಂಡ್ ನಿರ್ಮಿಸಿಕೊಡಿ, ಗ್ರಂಥಾಲಯಕ್ಕೆ ಪುಸ್ತಕಗಳು ಬೇಕು ಎಂದು ವಿದ್ಯಾರ್ಥಿಗಳಾದ ನಂದಿನಿ, ಜಾಹ್ನವಿ ಮತ್ತು ಮೋಕ್ಷ ಕೇಳಿಕೊಂಡರು. ದೊಡ್ಡಮಳ್ತೆ ಗ್ರಾ.ಪಂ ವತಿಯಿಂದ ದೊಡ್ಡಮಳ್ತೆ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆದ ಮಕ್ಕಳ ಗ್ರಾಮಸಭೆಯಲ್ಲಿ ವಿದ್ಯಾರ್ಥಿಗಳು ವಿವಿಧ ಬೇಡಿಕೆಯನ್ನು ಸಭೆಯ ಮುಂದಿಟ್ಟರು. ದೊಡ್ಡಮಳ್ತೆ ಗ್ರಾಮ ಹೊನ್ನಮ್ಮನ ಕೆರೆ ಸಮೀಪದಲ್ಲಿ ವಾಸವಿರುವ 5ನೇ ತರಗತಿ ವಿದ್ಯಾರ್ಥಿನಿ ಮಾತನಾಡಿ ನಮ್ಮ ಮನೆಲಿ ಕರೆಂಟ್ ಇಲ್ಲ, ಕರೆಂಟ್ ಹಾಕಿಸಿಕೊಡಿ ಎಂದು ಮನವಿ ಮಾಡಿದಳು. ದೀಪಕ್ಕೆ ಸೀಮೇಣ್ಣೆಯೂ ಸಿಗುತ್ತಿಲ್ಲ. ದುಡ್ಡಿಲ್ಲ ಅಂತ ಕ್ಯಾಂಡಲ್ ತರುತ್ತಿಲ್ಲ. ಓದಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದಳು. ವಿದ್ಯುತ್ ಹಾಕಿಸಿ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಪಂಚಾಯಿತಿ ಅಧ್ಯಕ್ಷ ಗೋಪಾಲಕೃಷ್ಣ ಭರವಸೆ ನೀಡಿದರು. ನಾವು ಹಳ್ಳಿಗಳಿಂದ ನಡೆದುಕೊಂಡು ಬರಬೇಕು. ದಾರಿಯಲ್ಲಿ ಬೀದಿನಾಯಿಗಳ ಕಾಟ ಪ್ರಾಥಮಿಕ ಶಾಲೆಯ ಮಕ್ಕಳಿಗೂ ಸೈಕಲ್ ಕೊಡಬೇಕೆಂದು ದೊಡ್ಡಮಳ್ತೆ ಶಾಲೆಯ ಭುವನ್…
ಮಡಿಕೇರಿ ಜ.29 NEWS DESK : ಮಡಿಕೇರಿಯ ಮುಖ್ಯ ರಸ್ತೆಯಲ್ಲಿರುವ ಬ್ಯಾಂಕ್ ಆಫ್ ಬರೋಡಾದ ನವೀಕೃತ ಆವರಣವನ್ನು ಬ್ಯಾಂಕ್ ನ ಮಂಗಳೂರು ವಲಯದ ಜನರಲ್ ಮ್ಯಾನೇಜರ್ ಮತ್ತು ವಲಯ ಮುಖ್ಯಸ್ಥ ರಾಜೇಶ್ ಖನ್ನಾ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಬ್ಯಾಂಕ್ ಆಫ್ ಬರೋಡಾ ಪ್ರಸ್ತುತ ಎಸ್ ಬಿ ಐ ಹೊರತುಪಡಿಸಿದಂತೆ ದೇಶದಲ್ಲಿಯೇ ಅತ್ಯದಿಕ ವಹಿವಾಟಿನಲ್ಲಿ ಎರಡನೇ ರಾಷ್ಟ್ರೀಕೃತ ಬ್ಯಾಂಕ್ ಎಂಬ ಹಿರಿಮೆ ಹೊಂದಿದೆ. 25 ಲಕ್ಷ ಕೋಟಿ ರುಪಾಯಿ ವಹಿವಾಟು ನಡೆಸುತ್ತಿರುವ ಬ್ಯಾಂಕ್ ಆಫ್ ಬರೋಡಾ, ಗ್ರಾಹಕರ ವಿಶ್ವಾಸಾಹ೯ ಸೇವೆಗೆ ಆದ್ಯತೆ ನೀಡುತ್ತಿದೆ. ಖ್ಯಾತ ಕ್ರಿಕೆಟಿಗ ಸಚಿನ್ ತೆಂಡೋಲ್ಕರ್ ನಮ್ಮ ಬ್ಯಾಂಕ್ ನ ರಾಯಬಾರಿಯಾಗಿದ್ದು, ಗ್ರಾಹಕರಿಗೆ ಉತ್ತಮ ಸೇವೆ ನೀಡುವಲ್ಲಿ ನಮ್ಮ ಬದ್ದತೆಯನ್ನು ಸದಾ ತೋರುತ್ತಿದ್ದೇವೆ ಎಂದರು. ಬ್ಯಾಂಕ್ ಆಫ್ ಬರೋಡಾದ ಎಜಿಎಂ ಮತ್ತು ಪುತ್ತೂರು ಕ್ಷೇತ್ರದ ಪ್ರಾದೇಶಿಕ ವ್ಯವಸ್ಥಾಪಕರಾದ ದೇವಿಪ್ರಸಾದ್ ಶೆಟ್ಟಿ ಮಾತನಾಡಿ, 1946 ರಲ್ಲಿಯೇ ಮಡಿಕೇರಿಯಲ್ಲಿ ಶಾಖೆಯನ್ನು ತೆರೆಯಲಾಗಿದ್ದು, 1996 ರಿಂದ ಮುಖ್ಯರಸ್ತೆಯಲ್ಲಿ ಸ್ವಂತ ಕಟ್ಟಡದಲ್ಲಿ ಕಾಯ೯ನಿವ೯ಹಿಸುತ್ತಿರುವ ಬ್ಯಾಂಕ್, ನ…
ಮಡಿಕೇರಿ ಜ.29 NEWS DESK : ಕಟ್ಟೆಮಾಡು ಗ್ರಾಮದ ಶ್ರೀಮಹಾ ಮೃತ್ಯುಂಜಯ ದೇವಾಲಯದ ಪ್ರಧಾನ ಅರ್ಚಕ ವಿಘ್ನೇಶ್ ಭಟ್ ಅವರ ಮೇಲೆ ನಡೆದಿರುವ ಹಲ್ಲೆ ಪ್ರಕರಣವನ್ನು ಕೊಡಗು ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಅರ್ಚಕರ ಮೇಲೆ ಹಲ್ಲೆ ಮಾಡಿರುವ ಆರೋಪಿಗಳನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಕೊಡಗು ಜಿಲ್ಲೆಯಲ್ಲಿ ಇನ್ನು ಮುಂದೆ ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಅರ್ಚಕರ ಮನೆಯ ಬಳಿ ತೆರಳಿ ಅರ್ಚಕರು ಹಾಗೂ ಅವರ ತಾಯಿಯ ಮೇಲೆ ಹಲ್ಲೆ ಮಾಡಿರುವುದು ಅಮಾನವೀಯ ಕೃತ್ಯವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಕಿಡಿಗೇಡಿಗಳಿಗೆ ಕಾನೂನಿನ ಬಗ್ಗೆ ಭಯವಿಲ್ಲದಾಗಿದೆ. ಹಲ್ಲೆ, ದೌರ್ಜನ್ಯ, ಜನಾಂಗೀಯ ಸಂಘರ್ಷ, ದರೋಡೆ, ಗೋಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಗೃಹ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ. ಜನಸಾಮಾನ್ಯರು…
ಸುಂಟಿಕೊಪ್ಪ ಜ.29 NEWS DESK : ಮಾದಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 76ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಶಾಲೆಯಲ್ಲಿ ವಿದ್ಯಾರ್ಥಿಗಳ ಪಥಸಂಚಲನ ಸಾಂಸ್ಕೃತಿಕ ಕಾರ್ಯಕ್ರಮ ಜನಮನ ರಂಜಿಸಿತು. ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ನಸೀಮ, ಉಪಾಧ್ಯಕ್ಷ ಮನು, ಗ್ರಾ.ಪಂ.ಸದಸ್ಯ ಕೆ.ಎ.ಲತೀಫ್, ಮುಖ್ಯೋಪಾದ್ಯಾಯರಾದ ಮಂಜಯ್ಯ, ಶಿಕ್ಷಕಿ ಶೋಭ ಸದಸ್ಯ ಅಣಿ ಉಪಸ್ಥಿತರಿದ್ದರು.
ವಿರಾಜಪೇಟೆ ಜ.29 NEWS DESK : ಕೊಂಡಂಗೇರಿ ವಿವಿಧೋದ್ದೇಶ ಸಹಕಾರ ದವಸ ಭಂಡಾರ ನಿಯಮಿತ ಇದರ 2025-30ನೇ ಸಾಲಿನ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಹಿಂದುಳಿದ ಕ್ಷೇತ್ರದಿಂದ ಚುನಾಯಿತರಾದ ಎ.ಎಂ.ಸಾದುಲಿ ಮತ್ತು ಉಪಾಧ್ಯಕ್ಷರಾಗಿ ಸಾಮಾನ್ಯ ಕ್ಷೇತ್ರದಿಂದ ಚುನಾಯಿತರಾದ ಪುಡಿಯಂಡ.ಇ.ಸಾದುಲಿ ಆಯ್ಕೆಗೊಂಡಿದ್ದಾರೆ. ಕೊಂಡಂಗೇರಿ ಸಹಕಾರ ದವಸ ಭಂಡಾರದ ನೂತನ ಆಡಳಿತ ಮಂಡಳಿಗೆ ಒಟ್ಟು 11 ಜನ ಆಯ್ಕೆಗೊಂಡಿದ್ದರು. ಈ ಪೈಕಿ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಟಿ.ಎ.ಆಲಿ, ಎನ್.ಈ. ಇಬ್ರಾಹಿಂ, ಜೆ.ಎಂ.ಇಬ್ರಾಹಿಂ, ಪುದಿಯಪೊರೆ ಹಸಿನಾರ್, ಮೇಕೇರಿರ ಪಿ. ರಾಧಾಪತಿ, ಜೆ.ಎ.ಸಾದುಲಿ, ಮಹಿಳಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮೇಕೇರಿರ ಜಲಾಶ್ ರಾಧಾಪತಿ, ಮೇಕೇರಿರ ರಾಧಾ ತಮ್ಮಯ್ಯ ಮತ್ತು ಹಿಂದುಳಿದ ವರ್ಗದಿಂದ ಸ್ಪರ್ಧಿಸಿದ್ದ ಎಂ.ಎಂ. ಮಮ್ಮದ್ ನಿರ್ದೇಶಕರಾಗಿ ಚುನಾಯಿತರಾಗಿದ್ದರು. ದವಸ ಭಂಡಾರದ ಆಡಳಿತ ಮಂಡಳಿಗೆ ಸ್ಪರ್ಧಿಸಿದ್ದ ಈ 11 ಜನರು ಸಹಕಾರ ಸಂಘಗಳ ನಿಯಮ1960, 14(ಜಿ)ನಲ್ಲಿನ ಉಪಬಂಧಾನುಸಾರ ಕ್ರಮಬದ್ಧವಾಗಿ ಚುನಾಯಿತರಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಹಾಲುಗುಂದ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಉಜ್ಮಾ ಜಬೀನ್ ಅಧಿಕೃತವಾಗಿ ಘೋಷಿಸಿರುವುದಾಗಿ ಕೊಂಡಂಗೇರಿ…
ಮಡಿಕೇರಿ ಜ.29 NEWS DESK : ಮಡಿಕೇರಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ವೀರ ಸೇನಾನಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ 126ನೇ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ನಗರದಲ್ಲಿರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಪ್ರತಿಮೆಗೆ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಹಾಗೂ ಪ್ರಮುಖರು ಪುಷ್ಪ ನಮನ ಸಲ್ಲಿಸಿ ಗೌರವ ಅರ್ಪಿಸಿದರು. ಶಿಸ್ತಿಗೆ ಹೆಸರುವಾಸಿಯಾಗಿದ್ದ ಸೇನಾ ದಂಡ ನಾಯಕ ಕಾರ್ಯಪ್ಪ ಅವರು ಭಾರತೀಯ ಸೇನಾ ಕ್ಷೇತ್ರಕ್ಕೆ ನೀಡಿದ ಅಪಾರ ಕೊಡುಗೆಯ ಬಗ್ಗೆ ಶಾಸಕರು ಗುಣಗಾನ ಮಾಡಿದರು. ಈ ಸಂದರ್ಭ ಕೆಪಿಸಿಸಿ ಕಾರ್ಯದರ್ಶಿ ಹೆಚ್.ಎಂ.ನಂದಕುಮಾರ್, ಬ್ಲಾಕ್ ಉಪಾಧ್ಯಕ್ಷ ವಿ.ಜಿ.ಮೋಹನ್, ನಾಮ ನಿರ್ದೇಶಿತ ಸದಸ್ಯರು, ವಿವಿಧ ಘಟಕಗಳ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದು ವೀರ ಸೇನಾನಿಗೆ ನಮಿಸಿದರು.






