ಮಡಿಕೇರಿ ಆ.4 NEWS DESK : ಮಂಡ್ಯ ಜಿಲ್ಲೆಯ ರಾಜ್ಯ ಮಟ್ಟದ ಕನ್ನಡ ಮಾಸ ಪತ್ರಿಕೆ ಜೀವನಾಡಿ ಪತ್ರಿಕೆಯು ರಾಜ್ಯ ಮಟ್ಟದ ಕನ್ನಡ ಸಾಹಿತ್ಯ ಸ್ಪರ್ಧೆ 2026 ಏರ್ಪಡಿಸಿದ್ದು ರಾಜ್ಯ ಮಟ್ಟದ ಜೀವನಾಡಿ ಕನ್ನಡ ಕಥಾ ಸ್ಪರ್ಧೆ, ಕನ್ನಡ ಪ್ರಬಂಧ ಸ್ಪರ್ಧೆ ಮತ್ತು ಕನ್ನಡ ಕವನ ಸ್ಪರ್ಧೆ ಏರ್ಪಡಿಸಿದೆ. ಕಥೆ ಪ್ರಬಂಧ ಕವಿತೆಗಳು ಸ್ವ ರಚನೆಯಾಗಿದ್ದು ಬೇರೆಲ್ಲೂ ಪ್ರಕಟವಾಗಿರಬಾರದು. ಕಥೆ 2,500 ಪದಗಳಿಗೆ ಮೀರಬಾರದು ಪ್ರಬಂಧ 2 ಸಾವಿರ ಪದಗಳಿಗೆ ಮೀರಿರಬಾರದು, ಕವಿತೆ 24 ಸಾಲುಗಳನ್ನು ಮೀರಿರಬಾರದು. ಅನುವಾದಿತ ಕಥೆ ಪ್ರಬಂಧ ಕವಿತೆಗಳಿಗೆ ಅವಕಾಶವಿಲ್ಲ. ಆಗಸ್ಟ್ 15 ರೊಳಗೆ ಜೀವನಾಡಿ ಮಾಸಪತ್ರಿಕೆ, ನಂ3, “ಚೈತ್ರ”, ಚಾಲುಕ್ಯರಸ್ತೆ, ನಾಡಪ್ರಭು ಕೆಂಪೇಗೌಡ ಬಡಾವಣೆ, ಕಿರಗಂದೂರು, ಮಂಡ್ಯ. ಇಲ್ಲಿಗೆ ಕಳುಹಿಸಬೇಕು. ಹೆಚ್ಚಿನ ವಿವರಗಳಿಗೆ ಡಾ. ಎಚ್.ಎಸ್ ಮುದ್ದೇಗೌಡ 98451 98098 ಅಥವಾ ಎಂ.ಪಿ ಕೇಶವ ಕಾಮತ್ 94483 46276 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.
ಲೇಖಕ: admin
ಕಾರ್ಕಳ ಆ.4 NEWS DESK : ಕಾರ್ಕಳದ ಜೋಡು ರಸ್ತೆಯಲ್ಲಿರುವ ಕ್ರಿಯೇಟಿವ್ ಪುಸ್ತಕ ಮನೆಯ ವತಿಯಿಂದ ಮಾನ್ಸೂನ್ ಪ್ರಯುಕ್ತವಾಗಿ ಪುಸ್ತಕಗಳ ವಿಶೇಷರಿಯಾಯಿತಿಯೊಂದಿಗೆ ಭರ್ಜರಿ ಮಾರಾಟ ನಡೆಯುತ್ತಿದೆ. ಯಾವುದೇ ಪ್ರಕಾಶನದ 2 ಪುಸ್ತಕಗಳಿಗೆ ಶೇ.20 ರಿಯಾಯಿತಿ, 3 ಪುಸ್ತಕಗಳಿಗೆ ಶೇ.30 ರಿಯಾಯಿತಿ ಹಾಗೂ ಪುಸ್ತಕ ಮನೆ ಪ್ರಕಾಶನದ 5 ಅಥವಾ ಅದಕ್ಕಿಂತ ಹೆಚ್ಚಿನ ಪುಸ್ತಕಗಳಿಗೆ ಶೇ.50 ರಿಯಾಯಿತಿ! ಈ ವಿಶೇಷ ಕೊಡುಗೆ ಆಗಸ್ಟ್ 15 ರವರೆಗೆ ಮಾತ್ರ. ಹೆಚ್ಚಿನ ಮಾಹಿತಿಗಾಗಿ : 9606474296.
ಮಡಿಕೇರಿ NEWS DESK ಆ.4 : ಕೊಡಗು ಗೌಡ ವಿದ್ಯಾಸಂಘದ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯು ಗೌಡ ಜನಾಂಗದ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು, ಸೆ.15 ರೊಳಗೆ ಅರ್ಜಿಯನ್ನು ಸಲಿಸುವಂತೆ ವಿದ್ಯಾಸಂಘದ ಅಧ್ಯಕ್ಷ ಅಂಬೆಕಲ್ ನವೀನ್ ಮನವಿ ಮಾಡಿದ್ದಾರೆ. 10ನೇ ತರಗತಿ ಕನ್ನಡ ಮಾಧ್ಯಮದಲ್ಲಿ ಶೇ.85 ಮೇಲ್ಪಟ್ಟು ಮತ್ತು ಆಂಗ್ಲ ಮಾಧ್ಯಮದಲ್ಲಿ ಶೇ.90 ಮೇಲ್ಪಟ್ಟು ಅಂಕ ಪಡೆದ ವಿದ್ಯಾರ್ಥಿಗಳಿಗೆ, ಪಿ.ಯು.ಸಿಯಲ್ಲಿ ಗ್ರಾಮೀಣ ವಿಭಾಗದಲ್ಲಿ ಶೇ.90 ಮೇಲ್ಪಟ್ಟು ಮತ್ತು ನಗರ ವಿಭಾಗದಲ್ಲಿ ಶೇ.95 ಮೇಲ್ಪಟ್ಟು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಪದವಿ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದು ಉತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಸಿ.ಇ.ಟಿ ಯಲ್ಲಿ 1000 ರ‍್ಯಾಂಕ್ ಒಳಗೆ ಮತ್ತು ಎನ್.ಇ.ಇ.ಟಿ ಯಲ್ಲಿ ರಾಷ್ಟ್ರಮಟ್ಟದಲ್ಲಿ 5000 ರಾಂಕ್ ಒಳಗೆ ಪಡೆದುಕೊಂಡಿರುವ ಪ್ರತಿಭಾವಂತ ವಿದ್ಯಾರ್ಥಿಗಳು ‘ಪ್ರತಿಭಾ ಪುರಸ್ಕಾರ’ ಪಡೆಯಲು ಅರ್ಹರಾಗಿದ್ದಾರೆ. ಗೌಡ ಜನಾಂಗದ ಪ್ರತಿಭಾವಂತ ವಿದ್ಯಾರ್ಥಿಗಳು ದಿನಾಂಕ 15-09-2026ರ ಒಳಗೆ ಅಂಕಪಟ್ಟಿಯ ಜೆರಾಕ್ಸ್ ಪ್ರತಿಯೊಡನೆ…
ಮಡಿಕೇರಿ ಆ.4 NEWS DESK : ರೋಟರ್ಯಾಕ್ಟ್ ಜಿಲ್ಲೆ 3181 ನ ಜಿಲ್ಲಾ ಪ್ರತಿನಿಧಿಯಾಗಿ ಕೊಡಗು ಮೂಲದ ಶ್ರೀರಕ್ಷಾ ಮೈಸೂರಿನಲ್ಲಿ ಆಯೋಜಿತ ಸಮಾರಂಭದಲ್ಲಿ ತನ್ನ ತಂಡದೊಂದಿಗೆ ಪದಗ್ರಹಣ ಸ್ವೀಕರಿಸಿದರು. ಮೈಸೂರಿನ ಶ್ರೀ ಕಂಠೀರವ ನರಸಿಂಹರಾಜ ಸ್ಪೋಟ್ಸ್೯ ಕ್ಲಬ್ ನಲ್ಲಿ ಆಯೋಜಿತ ಸಮಾರಂಭದಲ್ಲಿ ರೋಟರ್ಯಾಕ್ಟ್ ಗೆ ಸೇರಿದ 56 ಸಂಸ್ಥೆಗಳಿಗೆ ಜಿಲ್ಲಾ ಪ್ರತಿನಿಧಿಯಾಗಿ ನೇಮಕಗೊಂಡ ಶ್ರೀರಕ್ಷಾ ಮತ್ತು ಕಾಯ೯ದಶಿ೯ಯಾಗಿ ನೇಮಕಗೊಂಡ ಮೂಕಳೇರ ತುಳಸಿ ತಂಗಮ್ಮ ಅವರಿಗೆ ರೋಟರಿ ಗವನ೯ರ್ ಸತೀಶ್ ಬೋಳಾರ್ ಪದಗ್ರಹಣ ನೀಡಿದರು ನಾಪೋಕ್ಲುವಿನ ಹಿರಿಯ ಪತ್ರಕತ೯ ಪ್ರಭಾಕರ್ ಮತ್ತು ಅಶ್ವಿನಿ ದಂಪತಿ ಪುತ್ರಿಯಾದ ಶ್ರೀರಕ್ಷಾ ಅಧಿಕಾರ ಸ್ವೀಕರಿಸಿ ಮಾತನಾಡಿ, , ಇದೇ ಮೊದಲ ಬಾರಿಗೆ ಕೊಡಗು ಜಿಲ್ಲೆಯಿಂದ ರೋಟರ್ಯಾಕ್ಟ್ ನ ಈ ಪ್ರಮುಖ ಹುದ್ದೆಗೆ ನೇಮಕಗೊಂಡ ಸಂತೋಷ ತನ್ನದಾಗಿದ್ದು, ಸಾಕಷ್ಟು ಯೋಜನೆಗಳೊಂದಿಗೆ ಯುವತಂಡದ ನೆರವಿನೊಂದಿಗೆ ಜನಸೇವೆಗೆ ಮುಂದಾಗುವುದಾಗಿ ಭರವಸೆ ನೀಡಿದರು. ಮಾಜಿ ಸೈನಿಕರಿಗೆ ನೆರವು, ಪರಿಸರ ಸಂರಕ್ಷಣೆಗಾಗಿ ಮ್ಯಾರಾಥಾನ್, ಆಥಿ೯ಕ ನಿಧಿ ಸಂಗ್ರಹ, ಕನ್ನಡ ನಾಡು ನುಡಿಗಗಿ ಕಾಯ೯ಕ್ರಮಗಳೂ ಸೇರಿದಂತೆ…
ಮಡಿಕೇರಿ NEWS DESK ಆ.4 : ಸೋಮವಾರಪೇಟೆ ತಾಲ್ಲೂಕಿನ ಹೊಸಗುತ್ತಿ ಸರಕಾರಿ ಶಾಲೆಯಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಬಿ.ಡಿ.ವನಜಾಕ್ಷಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು. ಬಿ.ಡಿ.ವನಜಾಕ್ಷಿ ಅವರು ಸಕಲೇಶಪುರ ತಾಲ್ಲೂಕಿನಲ್ಲಿ ಶಿಕ್ಷಕ ವೃತ್ತಿಯನ್ನು ಆರಂಭಿಸಿ ಸೋಮವಾರಪೇಟೆ ತಾಲ್ಲೂಕಿನ ಕೊಡ್ಲಿಪೇಟೆ, ಶನಿವಾರಸಂತೆಯಲ್ಲಿ ಸೇವೆ ಸಲ್ಲಿಸಿದರು. ಪ್ರಸ್ತುತ ಹೊಸಗುತ್ತಿ ಸರಕಾರಿ ಶಾಲೆಯಲ್ಲಿ ವಯೋ ನಿವೃತ್ತಿ ಹೊಂದಿ ತಮ್ಮ 30 ವರ್ಷಗಳ ಸುದೀರ್ಘ ಸೇವೆಯನ್ನು ಸಾರ್ಥಕಗೊಳಿಸಿದ್ದಾರೆ. ಶಾಲಾ ಆಡಳಿತ ಮಂಡಳಿಯ ಪ್ರಮುಖರು, ಶಿಕ್ಷಕರು ಹಾಗೂ ಗ್ರಾಮಸ್ಥರು ಬಿ.ಡಿ.ವನಜಾಕ್ಷಿ ಅವರ ಕರ್ತವ್ಯ ನಿಷ್ಠೆಯನ್ನು ಶ್ಲಾಘಿಸಿ ಸನ್ಮಾನಿಸಿ ಗೌರವಿಸಿದರು.
ಮಡಿಕೇರಿ ಆ.4 NEWS DESK : ಭಾರತ್ ಜೋಡೋ ಯುವ ಸಂಘ ಸ್ಥಾಪನೆಗೆ ಅಗತ್ಯ ಕ್ರಮವಹಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ನಿರ್ದೇಶನ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಭಾರತ್ ಜೋಡೋ ಯುವ ಸಂಘ ಸ್ಥಾಪನೆ ಸಂಬಂಧ ಮಂಗಳವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಯುವ ಜನರಲ್ಲಿ ಕ್ರೀಡೆ, ಸಂಸ್ಕøತಿ, ವೈಜ್ಞಾನಿಕ ಮನೋಭಾವ ಹಾಗೂ ಸಮುದಾಯಿಕ, ಸಾಮಾಜಿಕ ಸಾಮರಸ್ಯವನ್ನು-ಉತ್ತೇಜಿಸುವಲ್ಲಿ ಸರ್ಕಾರ ಭಾರತ್ ಜೋಡೋ ಯುವ ಸಂಘಗಳನ್ನು ಸ್ಥಾಪಿಸಲು ಉದ್ದೇಶಿಸಿದ್ದು, ಆ ನಿಟ್ಟಿನಲ್ಲಿ ಪಂಚಾಯತ್ ರಾಜ್ ಹಾಗೂ ನಗರಾಭಿವೃದ್ಧಿ, ಪೌರಾಡಳಿತ ಇಲಾಖೆ ಅಧಿಕಾರಿಗಳು ತುರ್ತು ಕ್ರಮವಹಿಸುವಂತೆ ಸೂಚಿಸಿದರು. ಜಿಲ್ಲೆಯಲ್ಲಿ ಪ್ರತೀ ಗ್ರಾ.ಪಂ.ವ್ಯಾಪ್ತಿಯಲ್ಲಿ ತಲಾ ಒಂದು ಭಾರತ್ ಜೋಡೋ ಯುವ ಸಂಘ ಸ್ಥಾಪಿಸಬೇಕಿದೆ. ಪ್ರತೀ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸರಾಸರಿ 4 ಸಾವಿರ ಜನಸಂಖ್ಯೆಗೆ ಒಂದು ಸಂಘ, ಪ್ರತೀ ಪುರಸಭೆಯಲ್ಲಿ ಸರಾಸರಿ 6 ಸಾವಿರ ಜನಸಂಖ್ಯೆಗೆ ಒಂದು ಸಂಘ, ನಗರಸಭೆ ವ್ಯಾಪ್ತಿಯಲ್ಲಿ ಸರಾಸರಿ 8…
ಮಡಿಕೇರಿ NEWS DESK ಆ.4 : ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಹಿಂದೂ ಜಾಗರಣ ವೇದಿಕೆ ವತಿಯಿಂದ ಕೊಡಗಿನ ಏಳು ಕಡೆಗಳಲ್ಲಿ ಅಖಂಡ ಭಾರತ ಸಂಕಲ್ಪ ದಿನದ ಭಾಗವಾಗಿ ಸಭಾ ಕಾರ್ಯಕ್ರಮ, ಪಂಜಿನ ಮೆರವಣಿಗೆ ಹಾಗೂ ವಾಹನ ಜಾಥವನ್ನು ಆಯೋಜಿಸಲಾಗಿದೆ ಎಂದು ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ ಭೋಜೇಗೌಡ ಅವರು ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಆ.7ರಂದು ಸಂಜೆ 6 ಗಂಟೆಗೆ ನಗರದ ಕುಂದುರುಮೊಟ್ಟೆ ಶ್ರೀಚೌಟಿ ಮಾರಿಯಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸುವುದರ ಮೂಲಕ ಪಂಜಿನ ಮೆರವಣಿಗೆ ಆರಂಭಗೊಳ್ಳಲಿದೆ. ಸಂಜೆ 7 ಗಂಟೆಗೆ ಕಾವೇರಿ ಹಾಲ್‌ನಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು. ಆ.8ರಂದು ಸಂಜೆ 6 ಗಂಟೆಗೆ ಮಾದಾಪುರದ ಇಗ್ಗೋಡ್ಲು ಶ್ರೀ ಚಾಮುಂಡೇಶ್ವರಿ ದೇವಾಲಯದಿಂದ ಪಂಜಿನ ಮೆರವಣಿಗೆ ಆರಂಭವಾಗಿ ಎಫ್‌ಎಂಸಿ ರಸ್ತೆಯ ಮೂಲಕ ಶ್ರೀಗಣಪತಿ ದೇವಾಲಯದವರೆಗೆ ಸಾಗಲಿದೆ. 7.30ಗಂಟೆಗೆೆ ಸಭಾ ಕಾರ್ಯಕ್ರಮ ನಡೆಯಲಿದೆ. ಕೊಡ್ಲಿಪೇಟೆಯಲ್ಲಿ ಆ.9 ರಂದು ಸಂಜೆ 6 ಗಂಟೆಗೆ ಆರ್‌ಎಂಸಿ ಮಾರುಕಟ್ಟೆ ಸಮೀಪದ…
ಮಡಿಕೇರಿ ಆ.3 NEWS DESK : ಕೊಡಗು ಪತ್ರಕರ್ತ ಸಂಘ ಪೊನ್ನಂಪೇಟೆ ತಾಲೂಕು ಘಟಕ, ಮಡಿಕೇರಿ ವಿಸ್ತಾರಣ ಶಿಕ್ಷಣ ಘಟಕ ಮತ್ತು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಸಹಯೋಗದಲ್ಲಿ ಪೊನ್ನಂಪೇಟೆ ತಾಲೂಕು ಘಟಕದ ಅಧ್ಯಕ್ಷ ಕಿರಿಯಮಾಡ ರಾಜ್ ಕುಶಾಲಪ್ಪ ಅವರ ಮುಂದಾಳತ್ವದಲ್ಲಿ ಅರಣ್ಯ ಮಹಾವಿದ್ಯಾಲಯದ ಗದ್ದೆಯಲ್ಲಿ ಆಯೋಜಿಸಿದ್ದ ಪತ್ರಕರ್ತರ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಜಿಲ್ಲೆಯ ಪತ್ರಕರ್ತರು ಕೆಸರಿನಲ್ಲಿ ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಕೃಷಿ ಹಾಗೂ ತೋಟಗಾರಿಕೆ ಸಂಶೋಧನಾ ಘಟಕದ ಕ್ಷೇತ್ರ ಅಧೀಕ್ಷಕ ಡಾ. ಸಿ. ಪ್ರಶಾಂತ್ ಅವರು ಚೆಂಡು ಎಸೆಯುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ ಕೆಸರುಗದ್ದೆ ಕ್ರೀಡಾಕೂಟ ಎನ್ನುವುದು ಕೊಡಗಿನ ಅನಾದಿಕಾಲದ ಸಂಪ್ರದಾಯಗಳಲ್ಲಿ ಒಂದಾಗಿದೆ, ಇಂತಹ ಕ್ರೀಡಾಕೂಟಗಳಿಂದ ಗ್ರಾಮೀಣ ಪ್ರತಿಭೆಗಳು ಬೆಳಕಿಗೆ ಬರಲು ಸಾಧ್ಯವಾಗುತ್ತದೆಂದರಲ್ಲದೆ ದಿನಗಳಲ್ಲಿಯೂ ಕೂಡ ಗ್ರಾಮ ಮಟ್ಟದಲ್ಲಿ ಇಂತಹ ಕ್ರೀಡಾಕೂಟಗಳನ್ನು ಆಯೋಜಿಸುವಂತಾಗಲಿ ಎಂದು ಆಶೀಸಿದರು. ಹ್ಯಾಂಡ್‌ಬಾಲ್ , ಹಗ್ಗಜಗ್ಗಾಟ, ಹಾಗೂ ಓಟದ ಸ್ಪರ್ಧೆ, ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಜಿಲ್ಲೆಯ ಸುಮಾರು 50 ಕ್ಕೂ ಹೆಚ್ಚು ಪತ್ರಕರ್ತರು ಪಾಲ್ಗೊಂಡು…
ಮಡಿಕೇರಿ ಆ.03 NEWS DESK : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಕೊಡಗು ಜಿಲ್ಲೆಯ ವತಿಯಿಂದ ವಿರಾಜಪೇಟೆ ಗ್ರಾಮಾಂತರ ಹಾಗೂ ಪಟ್ಟಣ ಪೊಲೀಸ್ ಠಾಣೆಗಳ ಸಿಬ್ಬಂದಿಗಾಗಿ ಎಚ್‍ಐವಿ, ಸಿಪಿಲಿಸ್, ಕ್ಷಯರೋಗ, ವೈರಲ್ ಹೆಪಟೈಟಿಸ್, ಅಸಾಂಕ್ರಾಮಿಕ ರೋಗಗಳು ಹಾಗೂ ಸಾಮಾನ್ಯ ಆರೋಗ್ಯ ತಪಾಸಣೆ ಒಳಗೊಂಡ ಸಮಗ್ರ ಆರೋಗ್ಯ ತಪಾಸಣಾ ಶಿಬಿರವು ಇತ್ತೀಚೆಗೆ ನಡೆಯಿತು. ಕಾರ್ಯಕ್ರಮವನ್ನು ವಿರಾಜಪೇಟೆ ಡಿವೈಎಸ್‍ಪಿ ಮಹೇಶ್ ಕುಮಾರ್ ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ಅನುಪ್ ಮಾದಪ್ಪ ಅವರು ಉದ್ಘಾಟಿಸಿದರು. ವೇದಿಕೆಯಲ್ಲಿ ವೈದ್ಯಾಧಿಕಾರಿ ಡಾ.ಸೌಮ್ಯಶ್ರೀ ಹಾಗೂ ಐಸಿಟಿಸಿ (ಚರ್ಮರೋಗ ತಜ್ಞರು), ಸರ್ಕಾರಿ ಆಸ್ಪತ್ರೆ ವಿರಾಜಪೇಟೆ, ಡಾ.ಹರೀಶ್, ಡಾ.ಅರ್ಚನಾ, ಉಪ ನಿರೀಕ್ಷಕ ಪ್ರಮೋದ್ ಹಾಗೂ ಲತಾ, ಐಸಿಟಿಸಿ ಆಪ್ತ ಸಮಾಲೋಚಕರಾದ ಚಿಟ್ಟಿಯಪ್ಪ ಹಾಗೂ ಚಂದ್ರಶೇಖರ್, ಎಸ್‍ಟಿಎಸ್ ವಿನಿಲ್ ಉಪಸ್ಥಿತರಿದ್ದರು. ಈ ಶಿಬಿರವನ್ನು ಐಸಿಟಿಸಿ, ಎನ್‍ಟಿಇಪಿ, ಎನ್‍ಸಿಡಿ, ಆರ್‍ಬಿಎಸ್‍ಕೆ ಹಾಗೂ ಎನ್‍ವಿಎಚ್‍ಸಿಪಿ ತಂಡಗಳು, ಪ್ರಾಥಮಿಕ ಆರೋಗ್ಯ ಕೇಂದ್ರ ಕುಟ್ಟಂದಿ ಹಾಗೂ ಕಾಕೋಟುಪರಂಬು ಅವರ ಸಹಯೋಗದೊಂದಿಗೆ ಆಯೋಜಿಸಲಾಯಿತು.…
ಮಡಿಕೇರಿ ಆ.3 NEWS DESK : ಪತ್ರಕರ್ತನಿಗೆ ಸಮಾಜಮುಖಿ ಬದ್ಧತೆ, ಸತ್ಯನಿಷ್ಠೆ ಮತ್ತು ಜನಪರ ಕಾಳಜಿ ಮುಖ್ಯ. ಪತ್ರಕರ್ತನು ತನ್ನ ಪದವಿಯಿಂದಲ್ಲ, ತನ್ನ ಕಾರ್ಯದಿಂದ ಗುರುತಿಸಲ್ಪಡುತ್ತಾನೆ ಎಂದು ಬೆಳಗಾವಿ ಆವೃತ್ತಿಯ ದಿ ಹಿಂದೂ ಪತ್ರಿಕೆಯ ಹಿರಿಯ ಸಹಾಯಕ ಸಂಪಾದಕ ಹೃಷಿಕೇಶ್ ಬಹದ್ದೂರ್ ದೇಸಾಯಿ ಹೇಳಿದರು. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್‍ಕ್ಲಬ್ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾ ದಿನಾಚರಣೆ ಹಾಗೂ ಶೈಕ್ಷಣಿಕವಾಗಿ ಸಾಧನೆಗೈದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಾಗಾರರಾಗಿ ಪಾಲ್ಗೊಂಡು ಅವರು ಮಾತನಾಡಿದರು. ಪತ್ರಿಕಾ ದಿನವು ಕೇವಲ ಸಂಭ್ರಮದ ದಿನವಲ್ಲ, ಆತ್ಮಾವಲೋಕನ ಮಾಡಿಕೊಳ್ಳುವ ದಿನವೂ ಹೌದು. ಕೃತಕ ಬುದ್ಧಿಮತ್ತೆ (ಎಐ) ಮತ್ತು ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಸಾಂಪ್ರದಾಯಿಕ ಮಾಧ್ಯಮಗಳು ಅಸ್ತಿತ್ವದ ಪ್ರಶ್ನೆಯನ್ನು ಎದುರಿಸುತ್ತಿವೆ. ‘ಎಐ’ನಂತಹ ಅವಿಷ್ಕಾರಗಳು ಪತ್ರಕರ್ತರು ಪ್ರಶ್ನಿಸುವ ಮನೋಭಾವವನ್ನೇ ಕಸಿಯುತ್ತಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೂ ಪರಿಣಾಮ ಬೀರುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು ಇಂದು ಫೇಸ್‍ಬುಕ್ ಮುಂತಾದ…






