ವಿರಾಜಪೇಟೆ ಆ.3 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ವಿರಾಜಪೇಟೆ ತಾಲೂಕಿನ ಕಾನೂರು ವಲಯದ ಕುಟ್ಟ ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಶಾಲೆಯ ಮುಖ್ಯ ಶಿಕ್ಷಕರಾದ ದಿನೇಶ್ ಉದ್ಘಾಟಿಸಿ ಮಾತನಾಡಿ, ಧರ್ಮಸ್ಥಳ ಯೋಜನೆಯ ಜನಮಂಗಳ ಕಾರ್ಯಗಳು ಹಾಗೂ ಸಮಾಜಮುಖಿ ವಿಚಾರಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಡಾ. ಕಾರ್ಯಪ್ಪ ಅವರು, “ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋೀಜನೆಯು ಅನೇಕ ಜನಮಂಗಳ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ‘ಸ್ವಾಸ್ಥ್ಯ ಸಂಕಲ್ಪ’ ಕಾರ್ಯಕ್ರಮವನ್ನು ಪ್ರತಿವರ್ಷ ಆಯೋಜಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿನ ಬೆಳವಣಿಗೆಗಳು ಹಾಗೂ ಮಕ್ಕಳ ಕುತೂಹಲದ ಗುಣದಿಂದಾಗಿ ಕೆಲವರು ಮಾದಕ ವಸ್ತುಗಳ ದಾಸರಾಗುತ್ತಿದ್ದಾರೆ. ಇದರಿಂದ ಕ್ಯಾನ್ಸರ್ ನಂತಹ ಮಾರಕ ರೋಗಗಳು ಬರುವ ಅಪಾಯವಿದ್ದು, ಜೀವನ ಕತ್ತಲತ್ತ ತಳ್ಳಲ್ಪಡುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ದುಶ್ಚಟ ಮುಕ್ತ ಜೀವನವನ್ನು ಅಳವಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು”ಎಂದು ಮಕ್ಕಳಿಗೆ ಮನಮುಟ್ಟುವಂತೆ ತಿಳಿಸಿದರು.…
ಲೇಖಕ: admin
ವಿರಾಜಪೇಟೆ ಆ.3 NEWS DESK : ಯುವಜನತೆ ಕೃಷಿ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಅಧಿಕ ಉತ್ಪಾದನೆ ಸಾಧಿಸುವ ಮೂಲಕ ಕೃಷಿ ಕ್ಷೇತ್ರದತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ರಾಮದಾಸ್ ಹೆಚ್.ವಿ. ಕರೆ ನೀಡಿದರು. ಪಾಲಿಬೆಟ್ಟ ಸರಕಾರಿ ಪದವಿ ಪೂರ್ವ ಕಾಲೇಜು ವತಿಯಿಂದ ಬಿ.ಡಿ. ಮುಕುಂದ ಅವರ ಅತ್ತೂರು ಗದ್ದೆ ಮನೆಯಲ್ಲಿ ಆಯೋಜಿಸಲಾಗಿದ್ದ ಭೂಮಾತೆಯ ಮಡಿಲಲ್ಲಿ ಗದ್ದೆಯಲ್ಲಿ ಗೆಲುವಿನ ಹೆಜ್ಜೆ ಗದ್ದೆ ಕ್ರೀಡೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳಿಗೆ ಜಾನಪದ ಹಾಗೂ ಗ್ರಾಮೀಣ ಕ್ರೀಡೆಗಳ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿದ್ದ ಈ ಕ್ರೀಡಾಕೂಟದಲ್ಲಿ ಕೆಸರಿನ ಕಿಡಿಗಳು, ಮಣ್ಣಿನ ಮಕ್ಕಳು, ಮಣ್ಣಿನ ಮೇಘಗಳು, ಗದ್ದೆಯ ಗೆಳೆಯರು, ಮಣ್ಣಿನ ರಾಣಿಯರು ಹಾಗೂ ಗ್ರಾಮೀಣ ಚಕ್ರವರ್ತಿಗಳು ಎಂಬ ವಿವಿಧ ತಂಡಗಳು ರಚನೆಗೊಂಡಿದ್ದವು. ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಹಗ್ಗ-ಜಗ್ಗಾಟ, ವಿಷದ ಚೆಂಡು ಹಾಗೂ ಕೆಸರುಗದ್ದೆ ಓಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಮ್ಮಿಲನಗೊಂಡರು. :: ಸಮಾಜ ಸೇವಕರಿಗೆ ಸನ್ಮಾನ: ಇದೇ…
ವಿರಾಜಪೇಟೆ ಆ.3 NEWS DESK : ಸೋಮವಾರಪೇಟೆ ತಾಲೂಕಿನ ಜಂಬೂರಿನಲ್ಲಿ ಇತ್ತೀಚೆಗೆ ಮರ ಬಿದ್ದು ಮೃತಪಟ್ಟ ಅಸ್ಸಾಂ ಮೂಲದ ಇಬ್ಬರು ಕಾರ್ಮಿಕರ ಪರಿಹಾರ ವಿಚಾರದಲ್ಲಿ ಕೆಲವು ರಾಜಕೀಯ ಪಕ್ಷಗಳು ಕ್ರೆಡಿಟ್ ತೆಗೊಳ್ಳಲು ಯತ್ನಿಸುತ್ತಿರುವುದನ್ನು ಯುನೈಟೆಡ್ ಪ್ಲಾಂಟೇಶನ್ ವರ್ಕರ್ಸ್ ಯೂನಿಯನ್ (ಎಐಟಿಯುಸಿ) ತೀವ್ರವಾಗಿ ಖಂಡಿಸಿದೆ. ಯುನೈಟೆಡ್ ಪ್ಲಾಂಟೇಶನ್ ವರ್ಕರ್ಸ್ ಯೂನಿಯನ್ ಕೊಡಗು ಶಾಖೆ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸಿ.ಧರ್ಮರಾಜ್ ಅವರು, ವಾಸ್ತವಾಂಶವನ್ನು ಮುಂದಿಟ್ಟು ಮಾತನಾಡಿ”ಕೊಡಗು ಜಿಲ್ಲೆಯಲ್ಲಿ 2004 ರಿಂದಲೂ ನಮ್ಮ ಪ್ಲಾಂಟೇಶನ್ ಸಂಘಟನೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ತೋಟಗಳಲ್ಲಿ ಅನಾಹುತ ಸಂಭವಿಸಿದಾಗ ಕಾರ್ಮಿಕ ಸಂಘಟನೆ ಮತ್ತು ಮಾಲೀಕರ ಸಂಘಟನೆಗಳು ಜಂಟಿಯಾಗಿ ಮಾತುಕತೆ ನಡೆಸಿ ಪರಿಹಾರ ಒದಗಿಸುತ್ತವೆ. ದುರಂತ ಸಂಭವಿಸಿದ ದಿನವೇ ನಾವು ಐಆರ್ ಅಧಿಕಾರಿಯೊಂದಿಗೆ ಸಂಧಾನ ನಡೆಸಿ, ಕಂಪನಿಯಿಂದ ಮೃತರ ಕುಟುಂಬಗಳಿಗೆ ತಲಾ ರೂ 5 ಲಕ್ಷದಂತೆ ಈಗಾಗಲೇ 10 ಲಕ್ಷ ಪರಿಹಾರ ವಿತರಿಸಲಾಗಿದೆ. ಮರಣ ಪ್ರಮಾಣಪತ್ರ ಬಂದ ನಂತರ ಪಿಎಫ್ ಒಳಗೊಂಡಂತೆ ಒಟ್ಟು ರೂ.30 ಲಕ್ಷದಷ್ಟು ಮೊತ್ತ…
ಮಡಿಕೇರಿ ಆ.3 NEWS DESK : ಕೊಡಗು ಜಿಲ್ಲಾ ಡೆಕೊರೇಷನ್, ಶಾಮಿಯಾನ, ಲೈಟಿಂಗ್ಸ್ ಮತ್ತು ಸೌಂಡ್ಸ್ ಮಾಲೀಕರ ಸಂಘ ಆ.5 ರಂದು ಉದ್ಘಾಟನೆಯಾಗಲಿದೆ. ನಗರದ ಹೊರವಲಯದಲ್ಲಿನ ಅಪ್ಪಂಗಳದ ಸ್ವಾಗತ್ ಸಭಾಂಗಣದಲ್ಲಿ ಆ. 5 ರಂದು ಬುಧವಾರ ಬೆಳಗ್ಗೆ 10.30 ಗಂಟೆಗೆ ಅಸೋಸಿಯೇಷನ್ ನ ನೂತನ ಅಧ್ಯಕ್ಷರಾಗಿ ಅಜ್ಜೇಟಿರ ಲೋಕೇಶ್, ಪ್ರಧಾನ ಕಾಯ೯ದಶಿ೯ಯಾಗಿ ಅವಿನ್ ಕುಮಾರ್ ಮತ್ತು ಆಡಳಿತ ಮಂಡಳಿ ನಿದೇ೯ಶಕರು ಅಧಿಕಾರ ಸ್ವೀಕರಿಸಲಿದ್ದಾರೆ. ಸಂಘದ ಉದ್ಘಾಟನೆಯನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ ನೆರವೇರಿಸಲಿದ್ದು, ಸಂಘದ ಲೋಗೋವನ್ನು ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅನಾವರಣ ಮಾಡಲಿದ್ದಾರೆ. ಸಂಘದ ಉದ್ಘಾಟನಾ ಕಾಯ೯ಕ್ರಮದಲ್ಲಿ ಗೌರವಾನ್ತಿನ ಅತಿಥಿಗಳಾಗಿ ಸಂಸದ ಯದುವೀರ್ ಒಡೆಯರ್, ವಿಧಾನಪರಿಷತ್ ಸದಸ್ಯ ಎಂ.ಪಿ. ಸುಜಾಕುಶಾಲಪ್ಪ, ಜಿಲ್ಲಾದಿಕಾರಿ ಎಸ್.ಡಿ. ಸೋಮಶೇಖರ್, ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಆರ್. ಎನ್. ಬಿಂದುಮಣಿ, ಕನಾ೯ಟಕ ರಾಜ್ಯ ಶಾಮಿಯಾನ, ಧ್ವನಿ ಮತ್ತು ಕ್ಷೇಮಾಭಿವೖದ್ದಿ ಸಂಘದ ರಾಜ್ಯಾಧ್ಯಕ್ಷ ಅಬ್ದುಲ್ ಕರೀಂ ಅತ್ತಾರ್, ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮಸ್೯ನ ಅಧ್ಯಕ್ಷ ಬಿ.ಆರ್.…
ಮಡಿಕೇರಿ NEWS DESK ಆ.3 : ರಾಜ್ಯ ಸರಕಾರದ ಸಂಪುಟ ಪುನರ್ ರಚನೆಯ ಸಂದರ್ಭ ಸಚಿವ ಸ್ಥಾನ ಸಿಗದೆ ಕೊಡಗು ಜಿಲ್ಲೆಗೆ ಅನ್ಯಾಯವಾಗಿದೆ. ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಹಾಗೂ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಇಬ್ಬರೂ ಸಚಿವರಾಗಿದ್ದರೆ ಕೊಡಗಿನ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗುತ್ತಿತ್ತು ಎಂದು ವ್ಯಾಲಿಡ್ಯೂ ಕೊಡವ ಕಲ್ಚರಲ್ ಅಸೋಸಿಯೇಷನ್ ನ ಅಧ್ಯಕ್ಷ ಹಂಚೆಟ್ಟಿರ ಮನು ಮುದ್ದಪ್ಪ ಅವರು ತಿಳಿಸಿದ್ದಾರೆ. ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡದೆ ಇರುವುದರಿಂದ ಕೊಡವ ಸಮುದಾಯ ಮತ್ತು ಕೊಡಗು ಜಿಲ್ಲೆಗೆ ಅನ್ಯಾಯವಾಗಿದೆ. ಅತ್ಯಂತ ಅನುಭವಿ ರಾಜಕಾರಣಿ ಹಾಗೂ ಈ ಹಿಂದೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿದ್ದ ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ಲಭಿಸುವ ಎಲ್ಲಾ ವಿಶ್ವಾಸವಿತ್ತು. ಆದರೆ ವಿಧಾನಸಭೆಯ ಉಪಾಧ್ಯಕ್ಷ ಸ್ಥಾನವನ್ನು ನೀಡಿ ಕಣ್ಣೊರೆಸುವ ಪ್ರಯತ್ನ ಮಾಡಲಾಗಿದೆ. ಈ ಸ್ಥಾನದಿಂದ ಕೊಡವರಿಗೆ ಹಾಗೂ ಕೊಡಗು ಜಿಲ್ಲೆಗೆ ಯಾವುದೇ ಲಾಭವಿಲ್ಲ. ಪಕ್ಷ ಸಂಘಟನೆಗೂ ಇದು ತೊಡಕಾಗಬಹುದು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ…
ಮಡಿಕೇರಿ NEWS DESK ಆ.3 : ರೋಟರಿ ಮಡಿಕೇರಿ ವತಿಯಿಂದ ನಗರದ ರೋಟರಿ ಸಭಾಂಗಣದಲ್ಲಿ ನಡೆದ ಸಾಪ್ತಾಹಿಕ ಸಭೆಯಲ್ಲಿ ವೈದ್ಯರ ದಿನ ಹಾಗೂ ಚಾರ್ಟರ್ಡ್ ಅಕೌಂಟೆಂಟ್ಸ್ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರೋಟರಿ ಮಡಿಕೇರಿ ಅಧ್ಯಕ್ಷ ಮನೋಹರ್ ಕಾಮತ್ ಅವರು ಆರೋಗ್ಯ ಕ್ಷೇತ್ರದಲ್ಲಿ ವೈದ್ಯರು ಹಾಗೂ ಆರ್ಥಿಕ ಕ್ಷೇತ್ರದಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಗಳು ನೀಡುತ್ತಿರುವ ಸೇವೆಯನ್ನು ಶ್ಲಾಘಿಸಿದರು. ರೋಟರಿ ಸಂಸ್ಥೆಯಲ್ಲಿ ಸಕ್ರಿಯರಾಗಿರುವ ವೈದ್ಯರಾದ ಡಾ.ಕೆ.ರವಿ ಅಪ್ಪಾಜಿ, ಡಾ.ಸಂದೀಪ್ ಜೈಪುರ್ಕರ್, ಡಾ.ಎಂ.ಎ.ಕುಟ್ಟಪ್ಪ, ಡಾ.ರಾಘವನ್, ಡಾ.ಮಿನಲ್ ಜೈಪುರ್ಕರ್ ಹಾಗೂ ಡಾ.ಶಿಥಿಲ್ ಕುಟ್ಟಪ್ಪ, ಚಾರ್ಟರ್ಡ್ ಅಕೌಂಟೆಂಟ್ ಗಳಾದ ಈಶ್ವರ್ ಭಟ್, ಅಮರ್ ಶರ್ಮಾ ಹಾಗೂ ವಿನುತಾ ಶರ್ಮಾ ಅವರುಗಳ ಸೇವೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ಸನ್ಮಾನಿಸಿ ಅಭಿನಂದಿಸಲಾಯಿತು. ರೋಟರಿ ಸದಸ್ಯ ಡಾ.ಸಂದೀಪ್ ಜೈಪುರ್ಕರ್ ಅವರು “Muscle Matters, Live Better” ವಿಷಯದ ಕುರಿತು ಉಪನ್ಯಾಸ ನೀಡಿದರು. ಉತ್ತಮ ಆರೋಗ್ಯಕ್ಕಾಗಿ ಸ್ನಾಯುಗಳ ಆರೈಕೆ, ನಿಯಮಿತ ವ್ಯಾಯಾಮ, ಸಮತೋಲನ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯ ಮಹತ್ವವನ್ನು ವಿವರಿಸಿದರು. ರೋ.ಮಲ್ಲಿಗೆ ಪೈ…
ಮಡಿಕೇರಿ NEWS DESK ಆ.3 : ಚೇರಂಬಾಣೆಯ ಬೇಂಗ್ ನಾಡ್ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ವತಿಯಿಂದ ಕಕ್ಕಡ ತೀನಿ ನಮ್ಮೆ ಪೈಪೋಟಿ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಆ.10 ರಂದು ನಡೆಯಲಿದೆ. ಬೇಂಗ್ ನಾಡ್ ಕೊಡವ ಸಮಾಜದ ಸಭಾಂಗಣದಲ್ಲಿ ಬೆಳಿಗ್ಗೆ 10.30 ಗಂಟೆಗೆ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಬಡ್ಡಿರ ನಳಿನಿ ಪೂವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಬೇಂಗ್ ನಾಡ್ ಕೊಡವ ಸಮಾಜದ ಅಧ್ಯಕ್ಷ ಬಾಚಿರಣಿಯಂಡ ದಿನೇಶ್ ಗಣಪತಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೇಂಗ್ ನಾಡ್ ಕೊಡವ ಸಮಾಜದ ಮಾಜಿ ಅಧ್ಯಕ್ಷ ಕುಟ್ಟೇಟಿರ ಕೆ.ಕುಂಞಪ್ಪ ಪಾಲ್ಗೊಳ್ಳಲಿದ್ದಾರೆ. ಸಿನಿಮಾ ಕ್ಷೇತ್ರದ ಸಾಧಕರಾದ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ನಿರ್ಮಾಪಕ, ನಿರ್ದೇಶಕ, ನಟ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ನಿರ್ಮಾಪಕಿ, ನಿರ್ದೇಶಕಿ ಕೊಟ್ಟುಕತ್ತಿರ ಯಶೋಧ ಪ್ರಕಾಶ್ ದಂಪತಿಯನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಗುವುದು. ‘ಕಕ್ಕಡತ್ ರ ಬದ್ ಕ್ – ಅಂದ್ ಇಂದ್’ ವಿಷಯದ ಕುರಿತು ಅಪ್ಪಾರಂಡ ರತಿ…
ಮಡಿಕೇರಿ NEWS DESK ಆ.2 : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ವತಿಯಿಂದ 31ನೇ ವರ್ಷದ ಕೊಡವ ಸಾಂಪ್ರದಾಯಿಕ “ಕಕ್ಕಡ ಪದ್ನೆಟ್” ಹಬ್ಬವನ್ನು ಸಂಭ್ರಮದಿoದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಹಿರಿಯ ಮಾಧ್ಯಮ ವರದಿಗಾರರು ಹಾಗೂ ಹಿಂದಿನ ಉಪ ಮುಖ್ಯಮಂತ್ರಿಗಳ ಮಾಜಿ ಮಾಧ್ಯಮ ಮತ್ತು ರಾಜಕೀಯ ಸಲಹೆಗಾರ ದೀಪಕ್ ತಿಮ್ಮಯ್ಯ ಅವರು ಕೊಡವ ಭೂಮಿಯನ್ನು ಕಳೆದುಕೊಂಡರೆ ಮುಂದೆ ಕೊಡವರ ಅಸ್ತಿತ್ವಕ್ಕೆ ದಕ್ಕೆ ಬರಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಮಡಿಕೇರಿ ಸಮೀಪದ ಕ್ಯಾಪಿಟಲ್ ವಿಲೇಜ್ ನಲ್ಲಿ ನಡೆದ “ಕಕ್ಕಡ ಪದ್ನೆಟ್” ಹಬ್ಬವನ್ನು ಕೊಡವ ಪರಂಪರೆಯ ಪವಿತ್ರ ಮಂದ್ ನಲ್ಲಿ ಆರಂಭಿಸಲಾಯಿತು. ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ, ಮುಖ್ಯ ಅತಿಥಿ ದೀಪಕ್ ತಿಮ್ಮಯ್ಯ ಹಾಗೂ ಮಂದಪoಡ ಮನೋಜ್ ಮಂದಣ್ಣ ಅವರು ಪೂರ್ವಜರ ಗೌರವ ಸೂಚಕವಾಗಿ ಗಾಳಿಯಲ್ಲಿ ಗುಂಡು ಹಾರಿಸಿದರು. ನಂತರ ಬಾಳೆಕಂಬ ಕತ್ತರಿಸುವ ಬಾಳೆಬೆಂಗುವ ವಿಧಿಯನ್ನು ನೆರವೇರಿಸಲಾಯಿತು. ಮೆರವಣಿಗೆಯ ಮೂಲಕ ಭತ್ತದ ಗದ್ದೆಗೆ ತೆರಳಿದ ನಾಚಪ್ಪ ಅವರು ಕೃಷಿ ಋತುವಿನ ಆರಂಭವನ್ನು ಸೂಚಿಸಲು…
ಮಡಿಕೇರಿ NEWS DESK ಆ.2 : ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ದಂಡಿನ ಮಾರಿಯಮ್ಮ ದೇವಾಲಯದ 96ನೇ ವರ್ಷದ ದಸರಾ ಮಹೋತ್ಸವದ ನೂತನ ಸಮಿತಿಯನ್ನು ಇಂದು ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ಚೇತನ್ ಎಂ.ಆರ್., ನವೀನ್ ಯು., ಪ್ರಧಾನ ಕಾರ್ಯದರ್ಶಿಯಾಗಿ ಅಭಿಜಿತ್ ಹಾಗೂ ಖಜಾಂಚಿಯಾಗಿ ಪವನ್ ಕುಮಾರ್ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಎ.ಬಿ.ಅನಿಲ್, ಮಧು, ಸೂರಜ್ ಸುಬ್ರಮಣಿ, ಸದಾಶಿವ ಶೆಟ್ಟಿ, ಪುರುಷೋತ್ತಮ್, ರಂಜಿತ್ ಮಾಸ್ಟರ್, ಸಹ ಕಾರ್ಯದರ್ಶಿಯಾಗಿ ನಿತೇಶ್, ಅರವಿಂದ್, ಸಹ ಖಜಾಂಚಿಯಾಗಿ ಕಾರ್ತಿಕ್, ಉತ್ಸವ ಸಮಿತಿ ಕಾರ್ಯಾಧ್ಯಕ್ಷರಾಗಿ ನಾಗರಾಜ್, ಚಲನವಲನ ಅಧ್ಯಕ್ಷರಾಗಿ ದಿನೇಶ್ ನಾಯರ್, ಸಂತೋಷ್, ನಿಖಿಲ್, ಸುರೇಶ್, ಹರೀಶ್, ವಿಜಯ್ ಕರ್ಕೆರ, ದೇವಸ್ಥಾನ ಅಲಂಕಾರ ಸಮಿತಿಯ ಅಧ್ಯಕ್ಷರಾಗಿ ಸಿ.ಎಸ್.ರಂಜಿತ್ ಕುಮಾರ್, ಟಿ.ಎಸ್.ಪ್ರಕಾಶ್, ಎಂ.ಎಲ್.ಸತೀಶ್, ಮಹಾ ಪೋಷಕರಾಗಿ ಜೇಮ್ಸ್, ದೇಜುಶೆಟ್ಟಿ, ರಾಜು ಎಂ.ಬಿ., ಡಿ.ಪಿ.ದಯಾನಂದ, ಟಿ.ಹೆಚ್.ಉದಯ ಕುಮಾರ್, ಹರೀಶ್ ಕುಮಾರ್ ಪಿ.ಜಿ., ಎಸ್.ಸಿ.ಹರೀಶ್, ಉಮೇಶ್ (ಪೂಜಾರಿ), ಕೆ.ಎಸ್.ರಮೇಶ್, ಕೆ.ವಿ.ಸುಬ್ರಮಣಿ, ಮಂಟಪ ಅಲಂಕಾರ ಸಮಿತಿಗೆ ಚರಣ್, ಲಿಖಿತ್, ರಂಜಿತ್ ಕೃಷ್ಣಮೂರ್ತಿ, ಸೆಟ್…
ಮಡಿಕೇರಿ NEWS DESK ಆ.2 : ತುಳುವ ಮಹಾಸಭೆ ಇಂಟರ್‌ನ್ಯಾಷನಲ್ ನ ನೂತನ ಕೊಡಗು ಜಿಲ್ಲಾ ಸಮಿತಿಯನ್ನು ರಚಿಸಲಾಗಿದ್ದು, ಜಿಲ್ಲಾಧ್ಯಕ್ಷರಾಗಿ ಬಿ.ಬಿ.ಐತ್ತಪ್ಪ ರೈ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ರಾಜೀವ ಲೋಚನ ಬಿ.ಪಿ., ಕೋಶಾಧಿಕಾರಿ ರತ್ನಾಕರ ರೈ, ಗೌರವ ಅಧ್ಯಕ್ಷರಾಗಿ ಶೇಖರ್ ಭಂಡಾರಿ, ಉಪಾಧ್ಯಕ್ಷರುಗಳಾಗಿ ಬಿ.ವೈ.ಆನಂದ ರಘು, ಬಿ.ಕೆ.ಮೋಹನ, ಬಿ.ಶಿವಪ್ಪ, ಜಿಲ್ಲಾ ಪ್ರಧಾನ ಸಂಚಾಲಕರಾಗಿ ಪಿ.ಎಂ.ರವಿ ಮೊಗೇರ, ಜಿಲ್ಲಾ ಸಲಹೆಗಾರರಾಗಿ ಅಶೋಕ್ ಆಚಾರ್ಯ ಬಿ.ಸಿ., ಮಡಿಕೇರಿ ತಾಲ್ಲೂಕು ಅಧ್ಯಕ್ಷ ಬಿ.ಆರ್.ಸದಾಶಿವ ರೈ, ತಾಲ್ಲೂಕು ಸಂಚಾಲಕರಾಗಿ ಮಡಿಕೇರಿಯ ಸುರೇಶ್ ಕುಲಾಲ್, ವಿರಾಜಪೇಟೆ ಶಬರೀಶ್ ಶೆಟ್ಟಿ, ಕುಶಾಲನಗರದ ಗೌತಮ ಶಿವಪ್ಪ, ಪೊನ್ನಂಪೇಟೆಯ ಶೇಖರ್ ಭಂಡಾರಿ ಹಾಗೂ ಸೋಮವಾರಪೇಟೆಯ ದಾಮೋದರ ಬಿ.ಎಂ. ಆಯ್ಕೆಯಾದರು. ಯುವ ಘಟಕದ ಅಧ್ಯಕ್ಷರಾಗಿ ಶರದ್ ಶೆಟ್ಟಿ, ಮಹಿಳಾ ವಿಭಾಗದ ಗೌರವ ಅಧ್ಯಕ್ಷರಾಗಿ ವಿಜಯಲಕ್ಷ್ಮಿ, ಅಧ್ಯಕ್ಷರಾಗಿ ಲೀಲಾ ಶೇಷಮ್ಮ, ಉಪಾಧ್ಯಕ್ಷರಾಗಿ ಶಶಿಕಲಾ ರೈ, ಪ್ರಧಾನ ಕಾರ್ಯದರ್ಶಿಯಾಗಿ ಶೋಭಾ ಮುತ್ತಪ್ಪ, ಕೋಶಾಧಿಕಾರಿಯಾಗಿ ಸಾವಿತ್ರಿ ಹಾಗೂ ಸಲಹೆಗಾರರಾಗಿ ಲೀಲಾವತಿ ಬಿ.ಎಸ್. ನೇಮಕಗೊಂಡರು. ಮಡಿಕೇರಿಯಲ್ಲಿ ನಡೆದ ತುಳುವ ಮಹಾಸಭೆ…






