ಲೇಖಕ: admin

ಮಡಿಕೇರಿ ನ.25 NEWS DESK : ದೇಶದ ಅಭಿವೃದ್ಧಿಯು ಯುವಜನರನ್ನು ಅವಲಂಬಿಸಿದೆ. ಆದ್ದರಿಂದ ರಾಷ್ಟ್ರದ ಸದೃಢತೆಗೆ ಯುವಜನರು ಕೈಜೋಡಿಸಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ ತಿಳಿಸಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಘಟಕ ವತಿಯಿಂದ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ತಂಬಾಕು ಮುಕ್ತ ಯುವ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯುವಜನರಲ್ಲಿ ಕನಸು ಇರಬೇಕು. ಅದನ್ನು ಸಾಕಾರಗೊಳಿಸಲು ಪ್ರಯತ್ನಿಸಬೇಕು. ದುಶ್ಚಟಗಳಿಗೆ ಬಲಿಯಾಗಬಾರದು. ಯುವ ಜನರು ಉತ್ತಮ ರೀತಿಯಲ್ಲಿ ಬದುಕು ರೂಪಿಸಿಕೊಳ್ಳಬೇಕು. ವಿದ್ಯಾರ್ಥಿಗಳಲ್ಲಿ ಸಂಕಲ್ಪ ಇರಬೇಕು ಎಂದರು. ‘ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಅವರು ಮಾತನಾಡಿ ತಂಬಾಕು ಉಪಯೋಗಿಸುವುದರಿಂದ ಕ್ಯಾನ್ಸರ್, ಹೃದ್ರೋಗಕ್ಕೆ ಹಾಗೂ ನರರೋಗಕ್ಕೆ ತುತ್ತಾಗಬೇಕಾಗುತ್ತದೆ. ಜೊತೆಗೆ ಗ್ಯಾಂಗ್ರಿನ್ ಬರುವ ಸಾಧ್ಯತೆ ಇದ್ದು, ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡದರು.…

Read More

ಮಡಿಕೇರಿ ನ.25 NEWS DESK : ಇಂದಿನ ಯುವಪೀಳೆಗೆ ಕ್ರಿಕೆಟ್ ಸೇರಿದಂತೆ ಇತರ ಕ್ರೀಡೆಗಳಲ್ಲಿಯೂ ಆಸಕ್ತಿ ತಾಳಿ ಉತ್ತಮ ಕ್ರೀಡಾಪಟುಗಳಾಗುವತ್ತ ಚಿತ್ತ ಹರಿಸಬೇಕು ಎಂದು ನಿವೃತ್ತ ಏರ್ ಮಾಷ೯ಲ್ ಕೆ.ಸಿ.ಕಾಯ೯ಪ್ಪ ಕರೆ ನೀಡಿದ್ದಾರೆ. ನಗರದ ಕೊಡಗು ವಿದ್ಯಾಲಯ ವತಿಯಿಂದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿತ ಡಾ.ಅಖಿಲ್ ಕುಟ್ಟಪ್ಪ – ಅಶ್ವಥ್ ಅಯ್ಯಪ್ಪ ಸ್ಮರಣಾಥ೯ 10ನೇ ವಷ೯ದ ಪ್ರೌಢಶಾಲಾ ವಿದ್ಯಾಥಿ೯ಗಳಿಗಾಗಿನ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು. ಕ್ರೀಡಾಕ್ಷೇತ್ರದಲ್ಲಿ ಹಿಂದಿನ ದಿನಗಳಿಗೆ ಹೋಲಿಸಿದರೆ ಈಗ ಅವಕಾಶಗಳು ವಿಸ್ತಾರವಾಗಿದ್ದು, ತಮ್ಮಲ್ಲಿನ ಕ್ರೀಡಾ ಪ್ರತಿಭೆಯನ್ನು ತೋರಲು ಯುವಪೀಳಿಗೆ ಬೆಟ್ಟದಷ್ಟು ಅವಕಾಶ ಇದೆ. ಕ್ರಿಕೆಟ್ ನಂತೆಯೇ ಇತರ ಕ್ರೀಡೆಗಳಲ್ಲಿಯೂ ಯುವಪೀಳಿಗೆ ಹೆಚ್ಚಿನ ಆಸಕ್ತಿ ತಾಳಿದರೆ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪ್ರತಿಭೆಗಳು ದೇಶಕ್ಕೆ ದೊರಕಲು ಸಾಧ್ಯವಿದೆ ಎಂದೂ ನಿವೃತ್ತ ಏರ್ ಮಾಷ೯ಲ್ ಕಾಯ೯ಪ್ಪ ಅಭಿಪ್ರಾಯಪಟ್ಟರು. ಜಾನಪದ ಪರಿಷತ್ ಜಿಲ್ಲಾ ಪ್ರಧಾನ ಕಾಯ೯ದಶಿ೯ ಎಸ್.ಐ.ಮುನೀರ್ ಅಹಮ್ಮದ್ ಮಾತನಾಡಿ, ವಿದ್ಯಾಥಿ೯ಗಳಿಗೆ ತಮ್ಮ ಜೀವನದ ಬಗ್ಗೆ ನಿದಿ೯ಷ್ಟ ಗುರಿಯಿರಬೇಕು. ದೂರದ ಬೆಟ್ಟದಲ್ಲಿ ಕಾಣುವ…

Read More

ಮಡಿಕೇರಿ ನ.25 NEWS DESK : ಭಾರತ ದೇಶ ಕಂಡ ಅಪ್ರತಿಮ ವೀರ ಸೇನಾನಿಗಳಾದ ಫೀ.ಮಾ.ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಆರೋಪಿಯ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ ಗಡಿಪಾರು ಮಾಡಬೇಕೆಂದು ಕೊಡಗು ಜಿಲ್ಲಾ ಬಿಜೆಪಿಯ ಸಾಮಾಜಿಕ ಜಾಲತಾಣದ ಜಿಲ್ಲಾ ಪ್ರಧಾನ ಸಂಚಾಲಕರಾದ ತೇಲಪಂಡ ಶಿವಕುಮಾರ್ ನಾಣಯ್ಯ ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ದೇಶದ ಹೆಮ್ಮೆಯ ವೀರಪುತ್ರರಿಬ್ಬರನ್ನು ಅವಮಾನಿಸಿರುವುದು ಖಂಡನೀಯ ಮತ್ತು ಇದೊಂದು ದೇಶದ್ರೋಹದ ಪ್ರಕರಣವಾಗಿದೆ. ಆದ್ದರಿಂದ ಸರ್ಕಾರವೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸ್ವಯಂ ದೂರು ದಾಖಲಿಸಿಕೊಂಡು ಜಾಮೀನು ರಹಿತ ಬಂಧನಕ್ಕೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಫೀ.ಮಾ.ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಅವರುಗಳು ಭಾರತ ದೇಶದ ರಕ್ಷಣೆಗಾಗಿ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಭಾರತೀಯ ಸೇನೆಗೆ ಶಕ್ತಿ ತುಂಬಿ ಸಮರ್ಥ ಸೇನಾಧಿಕಾರಿಗಳು ಎಂಬ ಹೆಗ್ಗಳಿಕೆಯೊಂದಿಗೆ ವಿಶ್ವದ ಗಮನ ಸೆಳೆದಿದ್ದಾರೆ. ಇಂದಿಗೂ ಯುವ ಸಮೂಹಕ್ಕೆ ಈ ಇಬ್ಬರು ವೀರ ಸೇನಾನಿಗಳು ಮಾದರಿಯಾಗಿದ್ದಾರೆ. ಭಾರತ…

Read More

ಸುಂಟಿಕೊಪ್ಪ ನ.25 NEWS DESK : ಕೊಡಗರಹಳ್ಳಿಯ ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ಶಾಲಾಭಿವೃದ್ಧಿಗಾಗಿ ರಾಜ್ಯ ಒಕ್ಕಲಿಗರ ಸಂಘದ ಕೊಡಗು ಪ್ರತಿನಿಧಿ ಮತ್ತು ಕಾರ್ಯರ್ದಯಕ್ಷರು ಆಗಿರುವ ಹರಪಳ್ಳಿ ರವೀಂದ್ರ ರೂ.3 ಲಕ್ಷ ದೇಣಿಗೆ ನೀಡಿದರು. ನಂತರ ಮಾತನಾಡಿದ ಅವರು, ಜೀವನದಲ್ಲಿ ಏನೇ ಕಷ್ಟ-ನಷ್ಟಗಳು ಸವಾಲುಗಳು ಎದುರಾದರೂ ಹೆದರಬಾರದು ಧೈರ್ಯದಿಂದ ಎದುರಿಸಿ ಮುನ್ನಗಬೇಕು. ವಿದ್ಯಾಭ್ಯಾಸದಲ್ಲಿ ಶೇ.100 ಅಂಕಗಳನ್ನು ತೆಗೆಯುವ ಜೋತೆಗೆ ಜೀವನದಲ್ಲೂ ಶೇ.100 ರಷ್ಟು ಸಾಧನೆ ಮಾಡಿ ಗೆಲ್ಲಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕನ್ನಡ ನಮ್ಮ ಮಾತೃಭಾಷೆಯಾಗಿದ್ದು, ಅತ್ಯಂತ ಸಂಪತ್‍ಭರಿತ ಜ್ಞಾನ ತುಂಬಿದ ಭಾಷೆಯಾಗಿದೆ. ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳ ಸಮರ್ಥ ಬಳಕೆಯಿಂದ ನಾವು ನಮ್ಮ ಜೀವನ ಉದ್ಯೋಗದಲ್ಲಿ ಉನ್ನತ ಸಾಧನೆಯನ್ನು ಮಾಡಬಹುದಾಗಿದೆ ಎಂದು ಹರಪಳ್ಳಿ ರವೀಂದ್ರ ಕಿವಿಮಾತು ಹೇಳೀದರು. ಶಾಲೆಯ ಆವರಣ, ಶುಚಿತ್ವ ಹಾಗೂ ವಿದ್ಯಾರ್ಥಿಗಳ ಶಿಸ್ತಿನ ನಡವಳಿಕೆಯನ್ನು ಶ್ಲಾಘಿಸಿದ ಅವರು ಇದಕ್ಕೆ ಕಾರಣರಾದ ಶಾಲಾ ಶಿಕ್ಷಕರ ವೃಂದ ಶಾಲಾ ಆಡಳಿತ ಮಂಡಳಿಯ ಸದಸ್ಯರನ್ನು ಅಭಿನಂದಿಸಿದರು. ಶಾಲಾ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ…

Read More

ಕುಶಾಲನಗರ ನ.25 NEWS DESK : ಕನ್ನಡ ನಾಡು – ನುಡಿ, ಕಲೆ, ಆಚಾರ, ವಿಚಾರಗಳ ಸಂರಕ್ಷಣೆ ಹಾಗೂ ಸಂವರ್ಧನೆಗೆ ಆಟೋ ಚಾಲಕರ ಕೊಡುಗೆ ಶ್ಲಾಘನೀಯವಾಗಿದ್ದು, ಚಾಲಕರು ಕನ್ನಡ ನಾಡು ನುಡಿಯ ರಾಯಭಾರಿಗಳು ಎಂದು ಕುಶಾಲನಗರ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಬಣ್ಣಿಸಿದ್ದಾರೆ. ಕೂಡಿಗೆಯ ಉದ್ಭವ ಸುಬ್ರಮಣ್ಯ ಸ್ವಾಮಿ ಆಟೋ ಚಾಲಕರ ಸಂಘದ ವತಿಯಿಂದ ಕೂಡಿಗೆಯ ಮುಖ್ಯ ವೃತ್ತದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕನ್ನಡ ಭಾಷೆ ನಶಿಸಿದರೆ ಒಂದು ಸಂಸ್ಕೃತಿಯೇ ನಶಿಸುತ್ತದೆ. ಹಾಗಾಗಿ ಶತ ಶತಮಾನಗಳಿಂದ ಜತನದಿಂದ ಜೋಪಾನವಾಗಿ ಸಂರಕ್ಷಿಸಿ ಕೊಂಡು ಬಂದಿರುವ ಕನ್ನಡ ಭಾಷೆಯನ್ನು ಶಕ್ತಿ ಶಾಲಿಗೊಳಿಸುವ ಮೂಲಕ ಸೌಹಾರ್ದದ, ಸಾಮರಸ್ಯದ, ಭಾವನಾತ್ಮಕವಾದ ನಾಡು ಕಟ್ಟಿರುವ ಕನ್ನಡದ ರಸ ಋಷಿಗಳನ್ನು ಈ ಸಂದರ್ಭ ಸ್ಮರಿಸಿದ ಶಶಿಧರ್, ವಚನ ಸಾಹಿತ್ಯ, ದಾಸ ಸಾಹಿತ್ಯ ಮೊದಲಾದ ಸಾಹಿತ್ಯದ ಪ್ರಾಕಾರಗಳು ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿವೆ ಎಂದು ಹೇಳಿದರು. ಆಟೋ ಚಾಲಕ ವೃತ್ತಿಯೊಂದಿಗೆ ಸಾಮಾಜಿಕ…

Read More

ವಿರಾಜಪೇಟೆ ನ.25 NEWS DESK : ಮನಸ್ಸು ಮತ್ತು ಮನೆಯಿಂದಲೇ ಭ್ರಷ್ಟಾಚಾರ ಪ್ರಾರಂಭವಾಗುತ್ತದೆ ಎಂದು ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕ ಡಾ.ಕೆ.ಬಸವರಾಜು ಅಭಿಪ್ರಾಯಪಟ್ಟರು. ಗೋಣಿಕೊಪ್ಪ ಕಾವೇರಿ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಆಂತರಿಕ ಭರವಸೆ ಕೋಶದ ಸಹಯೋಗದಲ್ಲಿ ಭ್ರಷ್ಟಾಚಾರ ವಿರೋಧಿ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದೇವೆ. ತಮ್ಮ ತಮ್ಮ ಮನೆಗಳಲ್ಲಿ ಮಕ್ಕಳು ಅಳುವಾಗ ಅಥವಾ ಏನಾದರೂ ಕೆಲಸ ಮಾಡಿಸಿಕೊಳ್ಳಲು ಸಿಹಿ ಆಮಿಷ ಒಡ್ಡಿ ನಮಗೆ ಬೇಕಾದಂತೆ ಮಾಡಿಸಿಕೊಳ್ಳಲುತ್ತೇವೆ. ಮಕ್ಕಳು ಅಪ್ಪ ಅಮ್ಮನಿಂದ ಲಂಚ ಪಡೆದರೆ, ಪೋಷಕರು ಮಕ್ಕಳಿಗೆ ಲಂಚ ಕೊಡುತ್ತ ಮನೆಯಿಂದಲೇ ಭ್ರಷ್ಟಾಚಾರ ನಾಂದಿ ಹಾಡುತ್ತೇವೆ. ತನ್ನ ಸ್ವಾರ್ಥ ಸಾಧನೆಗಾಗಿ ಹಣ ಕೊಟ್ಟು ನಮ್ಮ ಕೆಲಸ ಮಾಡಿಸಿಕೊಳ್ಳಲು ಮುಂದಾಗುತ್ತೇವೆ. ಲಂಚ ಕೊಡಲು ನಾವೇ ತಯಾರಿ ಇರುವಾಗ ಲಂಚ ಪಡೆಯುವರು ನಮ್ಮಗಿಂತ ಮುಂಚೂಣಿಯಲ್ಲಿ ಹಣ ಪಡೆಯಲು ತಯಾರಿ ಇರುತ್ತಾರೆ. ಇದರಿಂದ ಭ್ರಷ್ಟಾಚಾರ…

Read More

ಕಡಂಗ ನ.25 NEWS DESK : 16ನೇ ವಿಧಾನಸಭೆಯ 4ನೇ ಅಧಿವೇಶನಕ್ಕೆ ಸಮಯಕ್ಕೆ ಸರಿಯಾಗಿ ಹಾಜರಾದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ವಿಧಾನಸಭಾಧ್ಯಕ್ಷರ ಕಛೇರಿಯಿಂದ ಗೌರವಾರ್ಥವಾಗಿ ಕೊಡುಗೆಯನ್ನು ನೀಡಲಾಯಿತು. ಈ ಸಂದರ್ಭ ಕೊಡಗು ಜಿಲ್ಲಾ ಕಾಂಗ್ರೆಸ್  ಸಾಮಾಜಿಕ ಜಾಲತಾಣದ ಅಧ್ಯಕ್ಷರು ಸೂರಜ್ ಹೊಸೂರು, ಶಾಸಕರ ಆಪ್ತ ಕಾರ್ಯದರ್ಶಿ ಮಹೇಂದ್ರ, ಆಪ್ತ ಸಹಾಯಕರು ಆದರ್ಶ್, ಶಾಸಕರ ಖಾಸಗಿ ಮಾಧ್ಯಮ ಸಹಾಯಕರು ಪೆಮ್ಮಂಡ ವಿನಿಲ್ ಸೊಮ್ಮಣ್ಣ, ಕೊಡಗು ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಉಪಾಧ್ಯಕ್ಷ ಡಾ.ನಿಶ್ಚಲ್ ದಂಬೆಕೊಡಿ, ಕೆಪಿಸಿಸಿ ಕಾನೂನು ಘಟಕ ಕಾರ್ಯದರ್ಶಿ ಬೋಪಣ್ಣ, ವಿಜಯ್ ನಿಡಿoಜಿ ಹಾಜರಿದ್ದರು. ವರದಿ : ನೌಫಲ್ ಕಡಂಗ

Read More

ವಿರಾಜಪೇಟೆ ನ.25 NEWS DESK : ಮಡಿಕೇರಿ ಮೈತ್ರಿ ಹಾಲ್‍ನಲ್ಲಿ ನಡೆದ ಕೊಡಗು ಜಿಲ್ಲಾ ಮಟ್ಟದ ಚಾಂಪಿಯನ್‍ಶಿಪ್‍ನಲ್ಲಿ ಶಾಸ್ತ್ರೀಯ ನೃತ್ಯ ಹಾಗೂ ಜಾನಪದ ನೃತ್ಯ ವಿಭಾಗಗಳಲ್ಲಿ ನಾಟ್ಯಾಂಜಲಿ ನೃತ್ಯ ಸಂಸ್ಥೆಯ ವಿದ್ಯಾರ್ಥಿಗಳು ಚಿನ್ನ, ಬೆಳ್ಳಿ ಹಾಗೂ ಕಂಚು ಸೇರಿದಂತೆ ಒಟ್ಟು 156 ಮೆಡಲ್‍ಗಳನ್ನು ಗೆದ್ದುಕೊಂಡಿದ್ದಾರೆ. ತಂಡದ ಗುರುಗಳಾದ ಹೇಮಾವತಿ ಕಾಂತ್‍ರಾಜ್ ಹಾಗೂ ಕಾವ್ಯಶ್ರೀ ಕಾಂತ್‍ರಾಜ್ ವಿದ್ಯಾರ್ಥಿಗಳಿಗೆ ನೃತ್ಯ ಹಾಗೂ ಸಂಗೀತ ತರಬೇತಿಯನ್ನು ನೀಡಿದ್ದಾರೆ.

Read More

ಮಡಿಕೇರಿ ನ.25 NEWS DESK : ಸ್ವತಂತ್ರ ಭಾರತದ ಪ್ರಪ್ರಥಮ ಸೇನಾ ಮಹಾದಂಡನಾಯಕ ಫೀ.ಮಾ.ಕೆ.ಎಂ.ಕಾರ್ಯಪ್ಪ ಹಾಗೂ ಪದ್ಮಭೂಷಣ ಕೆ.ಎಸ್.ತಿಮ್ಮಯ್ಯ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಅವಮಾನಿಸಿದ ಪ್ರಕರಣವನ್ನು ತೀವ್ರವಾಗಿ ಖಂಡಿಸುವುದಾಗಿ ಕೊಡಗು ಜಿಲ್ಲಾ ನಿವೃತ್ತ (ಮಾಜಿ)ಯೋಧರ ಒಕ್ಕೂಟ ಅರೆ ಸೇನಾಪಡೆಯ ಸಂಚಾಲಕ ಹಾಗೂ ಕಾರ್ಯದರ್ಶಿ ಎನ್.ಎಂ.ಭೀಮಯ್ಯ ಅವರು ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಅವರು ಫೀ.ಮಾ.ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರನ್ನು ಅವಹೇಳನ ಮಾಡಿ ಶಾಂತಿ ಕದಡಲು ಯತ್ನಿಸಿದ ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು. ಇದೇ ಸಂದರ್ಭ ದೊಡ್ಡ ಬಳ್ಳಾಪುರದಲ್ಲಿ ಸಿಆರ್‍ಪಿಎಫ್ ಮಾಜಿ ಯೋಧ ಅನಂತರಾಜ್ ಗೋಪಾಲ್ ಹಾಗೂ ಅವರ ಕುಟುಂಬದವರ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಎನ್.ಎಂ.ಭೀಮಯ್ಯ ತೀವ್ರವಾಗಿ ಖಂಡಿಸಿದರು. ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಲಾಗಿದ್ದು, ಗ್ರಾಮದ ರಾಜಕೀಯ ಮುಖಂಡರು ಒತ್ತಾಯ ಪೂರ್ವಕವಾಗಿ ರಾಜಿ ಸಂಧಾನಕ್ಕೆ ಪ್ರಯತ್ನಿಸುತ್ತಿದ್ದಾರೆ. ಹಲ್ಲೆ ಪ್ರಕರಣ ಮರುಕಳಿಸುತ್ತಲೇ ಇದ್ದು, ಜೀವ ಬೆದರಿಕೆ ಕೂಡ ಹಾಕಿರುವ ಆರೋಪವಿದೆ. ಆದ್ದರಿಂದ…

Read More

ಮಡಿಕೇರಿ ನ.25 NEWS DESK : ಕೊಡಗು ಜಿಲ್ಲಾ ದಿವ್ಯಜ್ಯೋತಿ ಪತ್ತಿನ ಸಹಕಾರ ಸಂಘದ ಚುನಾವಣೆ ನಗರದ ಬಾಲಭವನ ಸಭಾಂಗಣದಲ್ಲಿ ಶಾಂತಿಯುತವಾಗಿ ನಡೆಯಿತು. ಬ್ಯಾಂಕ್ ಆಡಳಿತ ಮಂಡಳಿಯ ಒಟ್ಟು 14 ಸ್ಥಾನಗಳಿಗೆ 24 ಮಂದಿ ಸ್ಪರ್ಧಿಸಿದ್ದರು. ಸಾಮಾನ್ಯ ಕ್ಷೇತ್ರದ 11 ಸ್ಥಾನಗಳಿಗೆ 18, ಮಹಿಳಾ ಕ್ಷೇತ್ರದ 2 ಸ್ಥಾನಗಳಿಗೆ 4, ಹಿಂದುಳಿದ ವರ್ಗ ಬಿ ಕ್ಷೇತ್ರಕ್ಕೆ 1 ಸ್ಥಾನಕ್ಕೆ ಇಬ್ಬರು ಸ್ಪರ್ಧೆಯಲ್ಲಿದ್ದರು. 1048 ಮತದಾರರ ಪೈಕಿ 691 ಮಂದಿ ಮತದಾನ ಮಾಡಿದರು. ಸಾಮಾನ್ಯ ವರ್ಗದಿಂದ ಸ್ಪರ್ಧಿಸಿದ್ದ ಅಂಥೋಣಿ ಕ್ಲೆಮೆಂಟದ ರೆಗೋ (421 ಮತ), ಜೋಕಿಮ್ ವಾಸ್ (500), ಎನ್.ಟಿ.ಜೋಸೆಫ್ (401), ಜೋಸೆಫ್ ವಿ.ವಿನ್ಸೆಂಟ್ (399), ಎಸ್.ಎಂ.ಡಿಸಿಲ್ವ (492), ಫ್ರಾನ್ಸಿಸ್ ಡಿಸೋಜ (462), ಬೆನ್ ಡಿಕ್ಟ್ ರೇಮಂಡ್ ಸಲ್ಹಾನ್ಹಾ (400), ರಿಚರ್ಡ್ ಉಲ್ಲಾಸ್ ಕುಮಾರ್ (369), ಸಾರ್ಜೆಂಟ್ ಎಮಾನ್ಯುಯಲ್ (352), ಸಿರಿಲ್ ಮೊರಾಸ್ (566), ಜೆ.ಸುನಿಲ್ ಲೋಬೋ (387) ಜಯಶಾಲಿಗಳಾದರು. ಗಾಡ್ವಿನ್ ಪ್ರಮೋದ್ ಮಸ್ಕರನೇಸ್ (200), ವಿ.ಜೆ.ಟೋನಿ (180), ಕೆ.ಕೆ.ಪೌಲೋಸ್ (115), ಮರ್ವಿನ್…

Read More