ಮಡಿಕೇರಿ ಜ.2 NEWS DESK : ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಬೆಂಗಳೂರು ಹಾಗೂ ನಂ.561ನೇ ಕೊಡಗು ಸೌಹಾರ್ದ ಪತ್ತಿನ ಸಹಕಾರಿ ಸಂಘ ಮಡಿಕೇರಿಯ ಸಂಯುಕ್ತಾಶ್ರಯದಲ್ಲಿ ಸೌಹಾರ್ದ ಸಹಕಾರಿ ದಿನಾಚರಣೆ ನಡೆಯಿತು. ನಗರದ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ, ಕೊಡಗು ಸೌಹಾರ್ದ ಪತ್ತಿನ ಸಹಕಾರಿ ಸಂಘ ಹಾಗೂ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಪಿ.ಮುತ್ತಪ್ಪ, 1997 ಕರ್ನಾಟಕ ಸೌಹಾರ್ದ ಕಾಯಿದೆ 2001 ಜನವರಿ 1 ರಂದು ಜಾರಿಗೆ ಬಂದಿತು. ಇದರ ಜ್ಞಾಪಕಾರ್ಥವಾಗಿ ಸೌಹಾರ್ದ ಸಹಕಾರಿ ದಿನವನ್ನು ಆಚರಿಸಲಾಗುತ್ತದೆ ಎಂದರು. 2005ರಲ್ಲಿ 200 ಸದಸ್ಯರೊಂದಿಗೆ ಕೊಡಗಿನಲ್ಲಿ ಪ್ರಾರಂಭವಾದ ಕೊಡಗು ಸೌಹಾರ್ದ ಪತ್ತಿನ ಸಹಕಾರಿ ಸಂಘ ಕೊಡಗಿನಾದ್ಯಂತ ಸದಸ್ಯರನ್ನು ಹೊಂದಿದ್ದು, ಪ್ರಸ್ತುತ 2313 ಸದಸ್ಯರಿದ್ದಾರೆ. ಸದಸ್ಯರಿಗೆ ವಿವಿಧ ರೀತಿಯ ಸಾಲ, ಸದಸ್ಯರಿಂದ ಠೇವಣಿ ಸಂಗ್ರಹ, ವಿಮೆ ಸೇರಿದಂತೆ ಇ ಸ್ಟಾಂಪಿಂಗ್, ಆರ್.ಟಿ.ಸಿ ಸೇರಿದಂತೆ ಹತ್ತಾರು ಸೌಲಭ್ಯಗಳನ್ನು ನೀಡುತ್ತಿದ್ದು, ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಕ್ರಿಯಾಶೀಲವಾಗಿ…
ಲೇಖಕ: admin
ಮಡಿಕೇರಿ NEWS DESK ಜ.1 : ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಸೇನಾ ವಾಹನ ಕಂದಕಕ್ಕೆ ಉರುಳಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದ ಪಳಂಗೋಟು ದಿವಿನ್ ಅವರಿಗೆ ಕುಶಾಲನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಮತ್ತು ಕುಶಾಲನಗರ ಧರ್ಮಕೇಂದ್ರದ ವತಿಯಿಂದ ಗೌರವ ಅರ್ಪಿಸಲಾಯಿತು. ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಜಾನ್ಸನ್ ಪಿಂಟೋ, ಧರ್ಮಕೇಂದ್ರದ ಧರ್ಮಗುರು ಮಾರ್ಟಿನ್ ಮತ್ತಿತರ ಪ್ರಮುಖರು ದಿವಿನ್ ಅವರ ಪಾರ್ಥಿವ ಶರೀರಕ್ಕೆ ಪುಷ್ಪನಮನ ಸಲ್ಲಿಸಿದರು.
ಮಡಿಕೇರಿ NEWS DESK ಜ.1 : ಜನವರಿ 1ರಂದು ಬುಧವಾರ ಅಸ್ತಮಿಸಿದ ಗುರುವಾರ ರಾತ್ರಿ ರಜಬ್ ತಿಂಗಳ ಪ್ರಥಮ ಚಂದ್ರದರ್ಶನವಾಗಿರುವುದರಿಂದ ಜನವರಿ 2 ಗುರುವಾರ ರಜಬ್ 1 ಹಾಗೂ ಜನವರಿ 28 ಮಂಗಳವಾರ ಮಿಹ್ರಾಜ್ ದಿನ ಆಗಿರುತ್ತದೆ ಎಂದು ಕೊಡಗು ಜಿಲ್ಲೆಯ ಸುನ್ನೀ ಸಂಯುಕ್ತ ಜಮಾಅತ್ ಖಾಝಿಗಳಾದ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಡಿಕೇರಿ NEWS DESK ಜ.1 : ಎಲ್ಲಾ ಜಾತಿ ಜನಾಂಗಗಳು ಸರ್ವ ಸಮಾನತೆಯಿಂದ ದೇವತಾ ಕಾರ್ಯಗಳಲ್ಲಿ ಒಂದಾಗಿ ಬೆರೆಯಬೇಕೆನ್ನುವ ಚಿಂತನೆಗಳಡಿ ಕಟ್ಟೆಮಾಡಿನ ಶ್ರೀ ಮಹಾ ಮೃತ್ಯುಂಜಯ ದೇವಸ್ಥಾನದಲ್ಲಿ ಯಾವುದೇ ಜನಾಂಗದ ಸಾಂಪ್ರದಾಯಿಕ ಆಚರಣೆಗಳು ಬೇಡವೆನ್ನುವ ನಿಯಮವನ್ನು ಮಾಡಿಕೊಳ್ಳಲಾಗಿದೆ. ಇದನ್ನು ಜಿಲ್ಲಾಡಳಿತ ಗೌರವಿಸಲಿದೆ ಎನ್ನುವ ವಿಶ್ವಾಸವಿದೆ ಎಂದು ಗ್ರಾಮಸ್ಥರು ಹಾಗೂ ದೇವಸ್ಥಾನದ ಸ್ವಯಂ ಸೇವಕ ಕಟ್ಟೆಮನೆ ಸೋನಾ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಟ್ಟೆಮಾಡು ಗ್ರಾಮ ವ್ಯಾಪ್ತಿಯಲ್ಲಿ ಅಂದಾಜು ಶೇ.30 ರಷ್ಟು ಗೌಡರು, ಶೇ.15 ರಿಂದ 20 ರಷ್ಟು ಕೊಡವ ಸಮೂಹ ಬಾಂಧವರಿದ್ದಾರೆ. ಶೇ.50 ರಷ್ಟು ಮಂದಿ ವಿವಿಧ ಜನಾಂಗಗಳಿಗೆ ಸೇರಿದವರಾಗಿದ್ದಾರೆ. ಇವರೆಲ್ಲರು ದೇವಸ್ಥಾನದಲ್ಲಿ ಸರ್ವ ಸಮಾನವಾಗಿ ತೊಡಗಿಸಿಕೊಳ್ಳಬೇಕೆನ್ನುವ ಚಿಂತನೆಯಿoದ, ದೇವಸ್ಥಾನದಲ್ಲಿ ಯಾವುದೇ ಸಮೂಹದ ಸಾಂಪ್ರದಾಯಿಕ ಉಡುಪು, ಆಚರಣೆೆಗಳು ಬೇಡವೆನ್ನುವ ನಿಯಮವನ್ನು ಗ್ರಾಮಸ್ಥರೆಲ್ಲರ ಸಮ್ಮತಿಯೊಂದಿಗೆ ರಚಿಸಲಾಗಿದೆ. ಅದರಂತೆ ಕಳೆದ ಒಂದು ವರ್ಷದಿಂದ ಗ್ರಾಮದ ಎಲ್ಲಾ ಸಮೂಹದವರು ನಡೆದುಕೊಂಡು ಬಂದಿರುವುದಾಗಿ ಸ್ಪಷ್ಟಪಡಿಸಿದರು. ಕಟ್ಟೆಮಾಡು ಗ್ರಾಮದ ವಿವಿಧ ಜನಾಂಗಗಳ ಹಾಗೂ ಕುಟುಂಬಗಳ ಪ್ರತಿನಿಧಿಗಳಿಗೆ ಕಟ್ಟೆಮಾಡು ದೇವಸ್ಥಾನ…
ಮಡಿಕೇರಿ ಜ.1 NEWS DESK : ಕೊಡಗು ಜಿಲ್ಲಾ ಕಾಂಗ್ರೆಸ್ ವತಿಯಿಂದ ಅಖಿಲ ಭಾರತ ಕಾಂಗ್ರೆಸ್ ಪಕ್ಷದ 139ನೇ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು. ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷ ಬಿ.ಕೆ.ಕೃಷ್ಣ, ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಕೆಪಿಸಿಸಿ ಸದಸ್ಯ ಟಿ.ಪಿ.ರಮೇಶ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ.ಹಂಸ, ಮಡಿಕೇರಿ ನಗರ ಕಾಂಗ್ರೆಸ್ ಹಾಗೂ ಮೂಡ ಅಧ್ಯಕ್ಷ ಬಿ.ವೈ.ರಾಜೇಶ್, ಡಿಸಿಸಿ ಪದಾಧಿಕಾರಿಗಳಾದ ಮೋಹನ್‍ದಾಸ್, ವಿ.ಪಿ.ಸುರೇಶ್, ಕೆ.ಜಿ.ಪೀಟರ್, ಖಲೀಲ್ ಭಾಷಾ, ಪ್ರಕಾಶ್ ಆಚಾರ್ಯ, ಕೆ.ಅಬ್ದುಲ್ ರಜಾಕ್, ಕೆ.ಎ.ಮೊಣ್ಣಪ್ಪ, ಲೀಲಾ ಶೇಷಮ್ಮ, ಚುಮ್ಮಿ ದೇವಯ್ಯ, ಬೊಳ್ಯಂಡ ಗಣೇಶ್, ಸುನೀಲ್ ನಂಜಪ್ಪ, ಸುನೀಲ್ ಪತ್ರಾವೋ, ನಟೇಶ್ ಗೌಡ, ಆರ್‍ಟಿಸಿ ಸಲಹಾ ಸಮಿತಿ ಮಾಜಿ ನಿರ್ದೇಶಕರಾದ ಶೌಕತ್ ಆಲಿ, ಜನಾರ್ಧನ್, ಹೆಚ್.ಎಂ.ನಂದಕುಮಾರ್, ಸದಾಮುದ್ದಪ್ಪ, ಮುದ್ದುರಾಜ್, ಸದಾನಂದ ಬಂಗೇರ, ಜಾನ್ಸನ್ ಪಿಂಟೋ, ಬಿ.ಎಂ.ಪೂಣಚ್ಚ, ನಾಪಂಡ ಮುತ್ತಪ್ಪ, ಜಫ್ರುಲ್ಲ, ಬಿ.ಆರ್.ರಾಣಿ ಮತ್ತಿತರರು ಹಾಜರಿದ್ದರು.
ಮಡಿಕೇರಿ ಜ.1 NEWS DESK : ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಸೇನಾ ವಾಹನವು ಕಂದಕಕ್ಕೆ ಉರುಳಿ ತೀವ್ರ ಗಾಯಗೊಂಡು ಹುತಾತ್ಮರಾದ ಸೈನಿಕ ಪಿ.ಪಿ.ದಿವಿನ್ ಅವರ ಅಂತ್ಯಕ್ರಿಯೆಯು ಹುಟ್ಟೂರಾದ ಕೊಡಗು ಜಿಲ್ಲೆಯ ಆಲೂರು ಸಿದ್ದಾಪುರದ ಬಳಿಯ ಮಾಲಂಬಿ ಗ್ರಾಮದದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಸಾಂಪ್ರದಾಯಿಕ ವಿಧಿ ವಿಧಾನಗಳ ನಂತರ ಮಾಲಂಬಿಯ ಜಮೀನಿನಲ್ಲಿ ಅಗ್ನಿಸ್ಪರ್ಶ ಮಾಡುವುದರೊಂದಿಗೆ ದಿವಿನ್ ಪಂಚಭೂತಗಳಲ್ಲಿ ಲೀನವಾದರು. ಇದಕ್ಕೂ ಮೊದಲು ಮೇಜರ್ ನಿಖಿಲ್ ಹಾಗೂ ಸುಬೇದಾರ್ ಮಹೇಶ್ ಜಾಧವ್ ಅವರ ನೇತೃತ್ವದಲ್ಲಿ ಆಗಮಿಸಿದ್ದ ಭಾರತೀಯ ಸೇನಾ ತಂಡ ಹಾಗೂ ಪೊಲೀಸರು ಕುಶಾಲತೋಪು ಸಿಡಿಸಿ ಅಂತಿಮ ಗೌರವ ಸಲ್ಲಿಸಿದರು. ಮಂಗಳವಾರ ರಾತ್ರಿ ಬೆಂಗಳೂರಿನಿಂದ ಪಾರ್ಥಿವ ಶರೀರವನ್ನು ಸೇನಾ ವಾಹನದ ಮೂಲಕ ಕುಶಾಲನಗರಕ್ಕೆ ತರಲಾಗಿತ್ತು, ಬುಧವಾರ ಬೆಳಗ್ಗೆ 8 ರಿಂದ 11 ಗಂಟೆ ವರೆಗೆ ಕುಶಾಲನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಜಿಲ್ಲಾ ಹಾಗೂ ತಾಲ್ಲೂಕು ಆಡಳಿತ ವ್ಯವಸ್ಥೆ ಮಾಡಿತ್ತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೆಂಕಟ್‌ರಾಜಾ,…
ಮಡಿಕೇರಿ ಜ.1 NEWS DESK : ಮಡಿಕೇರಿ ತಾಲ್ಲೂಕಿನ ಕಟ್ಟೆಮಾಡು ಶ್ರೀ ಮಹಾಮೃತ್ಯುಂಜಯ ದೇವಾಲಯದ ಜಾತ್ರೋತ್ಸವದ ಸಂದರ್ಭ ಕುಪ್ಯಚೇಲೆ ಧರಿಸಿ ಹೋದ ಕೊಡವರನ್ನು ತಡೆಯಲಾಗಿದೆ ಎಂದು ಆರೋಪಿಸಿ ಬೇಂಗ್‍ನಾಡ್ ಕೊಡವ ಸಮಾಜದ ಪ್ರಮುಖರು ಹಾಗೂ ಸದಸ್ಯರು ಚೇರಂಬಾಣೆಯಲ್ಲಿ ಪ್ರತಿಭಟನೆ ನಡೆಸಿದರು. ಚೇರಂಬಾಣೆ ನಗರದಲ್ಲಿ ಒಂದು ಗಂಟೆಗಳ ಕಾಲ ಸ್ವಯಂ ಘೋಷಿತ ಬಂದ್ ಆಚರಿಸಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ನಂತರ ಮಾನವ ಸರಪಳಿ ರಚಿಸಿದ ಪ್ರತಿಭಟನಾಕಾರರು ಪ್ರಕಣದ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭ ಮಾತನಾಡಿದ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯ ನಾಪಂಡ ಗಣೇಶ್, ಕೊಡವ ಸಮಾಜದ ಅಧ್ಯಕ್ಷ ಬಾಚರಣಿಯಂಡ ಗಣಪತಿ, ಉಪಾಧ್ಯಕ್ಷ ಕೇಕಡ ಮೊಣ್ಣಪ್ಪ ಹಾಗೂ ಪ್ರಮುಖರಾದ ಮಂದಪಂಡ ಮನೋಜ್ ಕಟ್ಟೆಮಾಡು ದೇವಾಲಯದಲ್ಲಿ ನಡೆದ ಘಟನೆ ಖಂಡನೀಯವೆಂದರು. ಶ್ರೀಮಹಾಮೃತ್ಯುಂಜಯ ದೇವಾಲಯದಲ್ಲಿ ವಾರ್ಷಿಕ ಉತ್ಸವ ನಡೆಯುತ್ತಿರುವ ಸಂದರ್ಭ ಕೊಡವ ಜನಾಂಗದವರು ಕೊಡವ ಸಾಂಪ್ರದಾಯಿಕ ಉಡುಪು ಕುಪ್ಯಚೇಲೆ, ಪೀಚೆಕತ್ತಿ ತೊಟ್ಟು, ಕೊಡವ ಮಹಿಳೆಯರು ಕೊಡವ ಸೀರೆ ಧರಿಸಿ ದೇವಾಲಯ ಪ್ರವೇಶಿಸುವ ಸಂದರ್ಭ ಕೆಲವರು ತಡೆಯೊಡ್ಡಿ…
ಮಡಿಕೇರಿ ಜ.1 NEWS DESK : ಕನ್ನಡ ನಾಡಿನ ಹಿರಿಯ ಸಾಹಿತಿ ಶಿಶು ಸಾಹಿತ್ಯದ ಪಿತಾಮಹ “ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಭಿಮ್ಮನೆ ಬಂದಳೊ” ಕೊಡಗಿನ ನಾಡಗೀತೆಯ ರಚನಾಕಾರ ಮಡಿಕೇರಿ ಸೆಂಟ್ರಲ್ ಹೈ ಸ್ಕೂಲ್ ನಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಏಕೈಕ ಭಾರತೀಯ ಕನ್ನಡ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ ಬ್ರಿಟಿಷರ ಕಾಲದಲ್ಲಿ ಕೊಡಗಿನ ಶಾಲಾ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿದ ಅಪ್ರತಿಮಾ ಸಂಘಟಕ, ದಿ. ಪಂಜೆ ಮಂಗೇಶರಾಯರ 150ನೇ ವರ್ಷಾಚರಣೆ ಕಾರ್ಯಕ್ರಮಗಳನ್ನು ಆಯೋಜಿಸುವ ಸಲುವಾಗಿ ಜ.6 ರಂದು ಪೂರ್ವಭಾವಿ ಸಭೆ ನಡೆಯಲಿದೆ. ಅಂದು ಬೆಳಿಗ್ಗೆ 10.30 ಗಂಟೆಗೆ ಮಡಿಕೇರಿಯ ಜೂನಿಯರ್ ಕಾಲೇಜು ಆವರಣದ ಸರಕಾರಿ ಪ್ರೌಢಶಾಲಾ ಸಭಾಂಗಣದಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರ ಶಾಸಕ ಡಾ. ಮಂಥರ್ ಗೌಡ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಕಾರ್ಯಕ್ರಮದ ರೂಪರೇಷೆಗಳ ಬಗ್ಗೆ ಚರ್ಚಿಸಬೇಕಾಗಿದೆ. ಶ್ರೇಷ್ಠ ಶಿಕ್ಷಕರಾದ ಹಿರಿಯ ತಲೆಮಾರಿನ ಹಿರಿಯ ಸಾಹಿತಿಗಳಾದ ಪಂಜೆ ಮಂಗೇಶರಾಯರ 150ನೇ ವರ್ಷಾಚರಣಾ ಕಾರ್ಯಕ್ರಮವನ್ನು ಯಶಸ್ವಿ ಪೂರ್ಣವಾಗಿ ನಡೆಸಲು ತಮ್ಮ…
ಮಡಿಕೇರಿ ಜ.1 NEWS DESK : ಮಡಿಕೇರಿ ತಾಲ್ಲೂಕಿನ ಕಟ್ಟೆಮಾಡು ಶ್ರೀ ಮಹಾ ಮೃತ್ಯುಂಜಯ ದೇವಾಲಯದ ಜಾತ್ರೋತ್ಸವದ ಸಂದರ್ಭ ಎರಡು ಗುಂಪುಗಳ ನಡುವೆ ನಡೆದ ಸಂಘರ್ಷದ ಹಿನ್ನೆಲೆ ದೇವಸ್ಥಾನ ವ್ಯಾಪ್ತಿಯಲ್ಲಿ ವಿಧಿಸಲಾಗಿದ್ದ ನಿರ್ಬಂಧಕಾಜ್ಞೆಯನ್ನು ಜ.7 ರ ಬೆಳಗ್ಗೆ 6 ಗಂಟೆಯವರೆಗೆ ವಿಸ್ತರಿಸಿ ಉಪವಿಭಾಗಾಧಿಕಾರಿ ಹಾಗೂ ಉಪವಿಭಾಗೀಯ ದಂಡಾಧಿಕಾರಿ ವಿನಾಯಕ್ ನರ್ವಡೆ ಅವರು ಆದೇಶಿಸಿದ್ದಾರೆ. ಸದರಿ ಸ್ಥಳದಲ್ಲಿ ಪ್ರಸ್ತುತ ಉಂಟಾಗಿರುವ ಬೆಳವಣಿಗೆಗಳ ಸಂಬಂಧ ಆರಕಕ್ಷ ಅಧೀಕ್ಷಕರ ಕೋರಿಕೆಯನ್ನು ಪರಿಗಣಿಸಿ, ಜ.2 ರ ಬೆಳಗ್ಗಿನಿಂದ ಜ.7ರ ಬೆಳಗ್ಗೆ 6ರವರೆಗೆ ದೇವಸ್ಥಾನದ ಸುತ್ತಮುತ್ತಲಿನ 5 ಕಿ.ಮೀ. ವ್ಯಾಪ್ತಿಯಲ್ಲಿ ನಿರ್ಬಂಧಕಾಜ್ಞೆ ವಿಧಿಸಲಾಗಿದೆ. ಈ ಅವಧಿಯಲ್ಲಿ 5ಕ್ಕಿಂತ ಹೆಚ್ಚು ಜನ ಗುಂಪು ಸೇರದಂತೆ, ಪ್ರತಿಭಟನೆ, ಮೆರವಣಿಗೆ, ರ್ಯಾಲಿ, ಜಾಥಾ ನಡೆಸದಂತೆ ಮತ್ತು ಪ್ರಚೋದನಾತ್ಮಕ ಘೋಷಣೆ ಕೂಗದಂತೆ ಆದೇಶದಲ್ಲಿ ತಿಳಿಸಲಾಗಿದೆ. ಇತ್ತೀಚೆಗೆ ಜಿಲ್ಲಾಡಳಿತ ನಡೆಸಿದ ಶಾಂತಿ ಸಭೆಯಲ್ಲಿ, ಬೈಲಾ ಗೊಂದಲ ನಿವಾರಣೆಗೆ ಮುಂದಿನ ಸೋಮವಾರದವರೆಗೆ ಕಾಲಾವಕಾಶವನ್ನು ನೀಡಲಾಗಿತ್ತು. ವಿಷಯಕ್ಕೆ ಸಂಬಂಧಿಸಿದಂತೆ ಅಗತ್ಯ ತೀರ್ಮಾನಗಳನ್ನು ಕೈಗೊಳ್ಳುವ ಸಲುವಾಗಿ ಜ.2 ರಂದು ಗ್ರಾಮಸ್ಥರು…
ವಿರಾಜಪೇಟೆ ಜ.1 NEWS DESK : ವಿರಾಜಪೇಟೆಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಸಿ.ದಯಾನಂದ ಅವರಿಗೆ ಯು.ಜಿ.ಸಿ ನಿಯಮದ ಪ್ರಕಾರ ಅಸೋಸಿಯೇಟ್ ಪ್ರೊಫೆಸರ್ ನಿಂದ ಪ್ರೊಫೆಸರ್ ಆಗಿ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರು ವೃತ್ತಿಪದೋನ್ನತಿ ನೀಡಿ ಆದೇಶಿಸಿದ್ದಾರೆ. ಇವರು ಭಾಗಮಂಡಲ ನಾಡು ತಾವೂರು ಗ್ರಾಮದ ಕೂಡಕಂಡಿ ಚಂದ್ರಹಾಸ ಮತ್ತು ಹರಿಣಾಕ್ಷಿ ದಂಪತಿಯ ಪುತ್ರ. ಪ್ರಸ್ತುತ ಮಡಿಕೇರಿ ನಗರದ ಕಾವೇರಿ ಲೇಔಟ್ ನಲ್ಲಿ ನೆಲೆಸಿದ್ದಾರೆ.






