ಲೇಖಕ: admin

ಮಡಿಕೇರಿ ಡಿ.24 NEWS DESK : ನಗರದ ಕೊಡಗು ವಿದ್ಯಾಲಯದಲ್ಲಿ ಆಯೋಜಿತ ಅಂತರಶಾಲಾ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಜಿಲ್ಲೆಯ 15 ಶಾಲೆಗಳ ಕ್ರೀಡಾಳುಗಳು ಪಾಲ್ಗೊಂಡಿದ್ದರು.  14 ಮತ್ತು 16 ವಯೋಮಾನದ ಬಾಲಕ-ಬಾಲಕಿಯರ ನಡುವೆ ಈ ಪಂದ್ಯಾವಳಿಯು ನಡೆಯಿತು. 14 ವಯೋಮಾನದ ಬಾಲಕರ ವಿಭಾಗದಲ್ಲಿ ಲಿತೇಶ್ ಕೆ (ಸರ್ವದೈವತಾ ಶಾಲೆ) ಮತ್ತು ಅವನೀಶ್ ಕೃಷ್ಣ ಜಿ ಎಚ್ (ಕೊಡಗು ವಿದ್ಯಾಲಯ) ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸಿದರು. 14 ವಯೋಮಾನದ ಬಾಲಕಿಯರ ವಿಭಾಗದಲ್ಲಿ ಅಹಲ್ಯಾ ಮನೋಹರ್ ( ಸೆಂಟ್ ಮೇರಿಸ್ ಶಾಲೆ) ಮತ್ತು ದಕ್ಷತಾ ಡಿ (ಶಾಂತಿನಿಕೇತನ ಶಾಲೆ) ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸಿದರು. 16 ವಯೋಮಾನದ ಬಾಲಕರ ವಿಭಾಗದಲ್ಲಿ ಐಜಾನ್ (ಕೆಂದ್ರೀಯ ವಿದ್ಯಾಲಯ) ಮತ್ತು ಜಿ ಎಸ್ ಸುಧಾನ್ವ (ಜೂನಿಯರ್ ಕಾಲೇಜು ಮಡಿಕೇರಿ) ಪ್ರಥಮ ಹಾಗೂ ದ್ವಿತೀಯ ಸ್ಥಾನಗಳಿಸಿದರು. 16 ವಯೋಮಾನದ ಬಾಲಕಿಯರ ವಿಭಾಗದಲ್ಲಿ ಎಂ ಲೋಚನ್ ಸೂರಜ್ ( ಕಾಪ್ಸ್) ಮತ್ತು ಖ್ಯಾತಿ ಕಾವೇರಮ್ಮ (ಕೊಡಗು ವಿದ್ಯಾಲಯ)…

Read More

ಮಡಿಕೇರಿ ಡಿ.24 NEWS DESK : ಕರ್ನಾಟಕ ರಾಜ್ಯ ಔಖಾಫ್ ಮಂಡಳಿ ಬೆಂಗಳೂರು ವತಿಯಿಂದ ಕೊಡಗು ಜಿಲ್ಲಾ ವಕ್ಫ್ ಮಂಡಳಿ ಮಡಿಕೇರಿ ಮೂಲಕ ಮೃತದೇಹವನ್ನು ತಾತ್ಕಾಲಿಕವಾಗಿ ಸಂರಕ್ಷಿಸಿಡಲು ಸಹಕಾರಿಯಾಗುವ 5 ಫ್ರೀಜರ್‌ಗಳನ್ನು ಕೊಡಗು ಜಿಲ್ಲೆಯ ಐದು ತಾಲ್ಲೂಕುಗಳ ವಕ್ಫ್ ಸಂಸ್ಥೆಗಳಿಗೆ ಇಂದು ವಿತರಿಸಲಾಯಿತು. ವಕ್ಫ್ ಸಂಸ್ಥೆಗಳಾದ ಮಡಿಕೇರಿ ತಾಲ್ಲೂಕಿನ ಎಮ್ಮೆಮಾಡು ಗ್ರಾಮದ ತಾಜುಲ್ ಇಸ್ಲಾಮ್ ಜುಮ ಮಸೀದಿ, ಸೋಮವಾರಪೇಟೆ ತಾಲ್ಲೂಕಿನ ದೊಡ್ಡಕುಂದ ಗ್ರಾಮದ ಜುಮ ಮಸೀದಿ, ಪೊನ್ನಂಪೇಟೆ ತಾಲ್ಲೂಕಿನ ಗೋಣಿಕೊಪ್ಪಲಿನ ಹನಫಿ ಜಾಮಿಯಾ ಮಸೀದಿ, ವಿರಾಜಪೇಟೆ ತಾಲ್ಲೂಕಿನ ಬಿಸ್ಮಿಲ್ಲಾ ಶಾವಲಿ ಮಕಾನ್‍ನ ಆಡಳಿತ ಮಂಡಳಿಯವರಿಗೆ ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಜನಾಬ್ ಪಿ.ಎಂ.ಹಕೀಂ ಹಾಗೂ ಉಪಾಧ್ಯಕ್ಷ ಜೈನುಲ್ ಆಬಿದ್ ಮಡಿಕೇರಿ ಫ್ರೀಜರ್‌ಗಳನ್ನು ಹಸ್ತಾಂತರಿಸಿದರು. ಈ ಸಂದರ್ಭ ಮಾತನಾಡಿದ ಅಧ್ಯಕ್ಷ ಜನಾಬ್ ಪಿ.ಎಂ.ಹಕೀಂ ಪ್ರತಿ ತಾಲ್ಲೂಕಿಗೆ ಒಂದೊಂದು ಫ್ರೀಜರ್ ನ್ನು ನೀಡಲಾಗಿದ್ದು, ಆಯಾ ತಾಲ್ಲೂಕಿನ ಎಲ್ಲಾ ಮಸೀದಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದರು. ಸದಸ್ಯರಾದ ಇಮ್ರಾನ್ ಯು. ಮಡಿಕೇರಿ, ಆಲಿರ…

Read More

ಮಡಿಕೇರಿ ಡಿ.24 NEWS DESK : ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ತಾವೇ ನಿರ್ಧರಿಸಿ ಜಾಗೃತರಾಗಬೇಕು, ಗುರಿ ಮುಟ್ಟಲು ಸತತ ಶ್ರಮ ವಹಿಸಬೇಕು ಎಂದು ರೋಟರಿ ಜಿಲ್ಲಾ ಮಾಜಿ ಗವರ್ನರ್ ರೋಟರಿಯನ್ ಸುರೇಶ್ ಚಂಗಪ್ಪ ಎಂದು ಕರೆ ನೀಡಿದ್ದಾರೆ. ರೋಟರಿ ಮಡಿಕೇರಿ ವತಿಯಿಂದ ನಗರದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ 10ನೇ ತರಗತಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗಾಗಿ ನಡೆದ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 10ನೇ ತರಗತಿ ಹಾಗೂ ಪಿಯುಸಿ ಹಂತ ವಿದ್ಯಾರ್ಥಿಗಳಿಗೆ ಭವಿಷ್ಯದ ನಿರ್ಧಾರವನ್ನು ಆಯ್ಕೆ ಮಾಡಿಕೊಳ್ಳಲು ಉತ್ತಮ ಕಾಲಘಟ್ಟವಾಗಿದ್ದು, ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಿಕೊಂಡು ಗುರಿ ಸಾಧನೆಗಾಗಿ ಶ್ರಮ ವಹಿಸಿದರೆ ದೇಶಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯ ಎಂದರು. ಉದ್ಯೋಗವನ್ನು ಪಡೆಯಲು ವೃತ್ತಿ ತರಬೇತಿ ಅವಶ್ಯಕವಾಗಿದ್ದು, ವಿದ್ಯಾರ್ಥಿಗಳು ಈಗಿನಿಂದಲೇ ತಯಾರಿಯನ್ನು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಸೂಕ್ತ ತರಬೇತಿಯನ್ನು ಪಡೆದುಕೊಂಡು ನಿರ್ದಿಷ್ಟ ಗುರಿಯನ್ನು ತಲುಪಬೇಕು. ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ತಾವೇ ನಿರ್ಧರಿಸಬೇಕು ಎಂದು…

Read More

ಮಡಿಕೇರಿ ಡಿ.24 NEWS DESK : ಬೆಂಗಳೂರು ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಹಾಗೂ  ಧಿರಾಜ್ ಮುನಿರಾಜ್ ಬ್ರಿಗ್ರೆಡ್  ಸ0ಯುಕ್ತ ಆಶ್ರಯದಲ್ಲಿ ಜ.6 ರಿಂದ ಜ.8ರ ವರೆಗೆ ದೊಡ್ಡಬಳ್ಳಾಪುರ ಖಾಸ್ ಬಾಗ್ ದುರ್ಗಾಪುರ್ ಆಂಜನೇಯ ದೇವಸ್ಥಾನ ಹತ್ತಿರ ನಡೆಯಲಿರುವ  ಪುರುಷರ ಸೀನಿಯರ್ ನ್ಯಾಷನಲ್ ಸ್ಟೇಟ್ ಕಬ್ಬಡಿ ಚಾಂಪಿಯನ್ ಶಿಪ್ ಪಂದ್ಯಾವಳಿಗೆ ಡಿ.29 ರಂದು ಕೊಡಗು ತಂಡದ ಆಟಗಾರರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಅಂದು ಬೆಳಗ್ಗೆ 10 ಗಂಟೆ ಗೆ ಕುಶಾಲನಗರದ ಜ್ಞಾನ ಭಾರತಿ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು,  ಆಟಗಾರರು 85 ಕೆಜಿ ಒಳಗಿರಬೇಕು. ಆಸಕ್ತ ಆಟಗಾರರು ಆಧಾರ್ ಕಾರ್ಡ್ ಹಾಗೂ ಸೂಕ್ತ ದಾಖಲೆಯೊಂದಿಗೆ ಹಾಜರಿರುವಂತೆ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ನ ಪ್ರಧಾನ ಕಾರ್ಯದರ್ಶಿ ಕಪಿಲ್ ಕುಮಾರ್ ದುಗ್ಗಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.   ಹೆಚ್ಚಿನ ಮಾಹಿತಿಗಾಗಿ ಕಪಿಲ್ ದುಗ್ಗಳ 9731009841, ಮಣಿಕಂಠ 9482863707,  ಅವಿನಾಶ್ 9036000141 ಸಂಪರ್ಕಿಸಬಹುದಾಗಿದೆ.

Read More

ಮಡಿಕೇರಿ ಡಿ.24 NEWS DESK : ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಹೆಸರನ್ನು ಸಂಸತ್‍ನಲ್ಲಿ ಪ್ರಸ್ತಾಪಿಸಿ ಅಪಹಾಸ್ಯ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ನಿಲುವನ್ನು ಖಂಡಿಸಿ ಕೊಡಗು ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟದಿಂದ  ಮಡಿಕೇರಿಯಲ್ಲಿ ಪ್ರತಿಭಟನೆ ನಡೆಯಿತು. ನಗರದ ಜನರಲ್ ಕೆ.ಎಸ್.ತಿಮ್ಮಯ್ಯ ವೃತ್ತದಲ್ಲಿ ಜಮಾಯಿಸಿದ ಒಕ್ಕೂಟದ ಪ್ರಮುಖರು ಹಾಗೂ ಪದಾಧಿಕಾರಿಗಳು, ಮಾನವ ಸರಪಳಿ ರಚಿಸಿ, ಕೇಂದ್ರ ಗೃಹ ಸಚಿವ ಅಮಿತಾ ಶಾ ವಿರದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಅಪಮಾನಿಸುವ ಮೂಲಕ ಅಮಿತ್ ಷಾ ಅವರು ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ. ತಕ್ಷಣವೆ ಗೃಹ ಸಚಿವರು ರಾಷ್ಟ್ರದ ಜನತೆಯ ಮುಂದೆ ಕ್ಷಮೆ ಯಾಚನೆ ಮಾಡಬೇಕು ಮತ್ತು ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕೆಂದು ಆಗ್ರಹಿಸಿದರು. ಜಿಲ್ಲಾ ದಸಂಸ ಸಂಚಾಲಕರಾದ ದಿವಾಕರ್, ಒಕ್ಕೂಟದ ಸಂಚಾಲಕ ಮೋಹನ್ ಮೌರ್ಯ, ಕಾರ್ಯದರ್ಶಿ ಗಣೇಶ್, ಪ್ರಮುಖರಾದ ಟಿ.ಪಿ.ರಮೇಶ್, ಚಂದ್ರಶೇಖರ್, ಇಸಾಖಾನ್, ಕೆ.ಜಿ.ಪೀಟರ್,  ಮುಸ್ತಪಾ…

Read More

ಹೆಬ್ಬಾಲೆ NEWS DESK ಡಿ.24 : ಮೈಸೂರು-ಕೊಡಗು ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಇಂದು ಕುಶಾಲನಗರ ತಾಲ್ಲೂಕಿನ ಹೆಬ್ಬಾಲೆಯಲ್ಲಿ ಗ್ರಾಮಸ್ಥರ ಅಹವಾಲು ಸ್ವೀಕರಿಸಿದರು. ಬನಶಂಕರಿ ಕಲ್ಯಾಣಮಂಟಪದಲ್ಲಿ ನಡೆದ ಕಾರ್ಯಕರ್ತರ ಅಭಿನಂದನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಂಸದರು ಕೊಡಗು ಜಿಲ್ಲೆಯ ವಿವಿಧೆಡೆ ಟವರ್ ಸಮಸ್ಯೆ ಇರುವುದು ಗಮನಕ್ಕೆ ಬಂದಿದೆ. ಈ ಕುರಿತು ಕೇಂದ್ರ ಸಚಿವರ ಬಳಿ ಚರ್ಚಿಸಿ ಶಾಶ್ವತ ಪರಿಹಾರ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. ಜಿಲ್ಲೆಯ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವುದಾಗಿ ತಿಳಿಸಿದರು. ಇದೇ ಸಂದರ್ಭ ಗ್ರಾಮಸ್ಥರು ಸಂಸದರನ್ನು ಭೇಟಿಯಾಗಿ ಸಮಸ್ಯೆಗಳ ಕುರಿತು ವಿವರಿಸಿ ಮನವಿ ಸಲ್ಲಿಸಿದರು. ಬಿಜೆಪಿ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಪಟಾಕಿ ಸಿಡಿಸಿ ಸಂಭ್ರಮದಿ0ದ ಯದುವೀರ್ ಅವರನ್ನು ಸ್ವಾಗತಿಸಿದರು.

Read More

ಮಡಿಕೇರಿ ಡಿ.24 NEWS DESK : ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಮೈಸೂರು ಪ್ರಾಂತೀಯ ಕಛೇರಿಯ ವತಿಯಿಂದ ಕೊಡಗು ಜಿಲ್ಲಾ ಸಹಕಾರಿಗಳ ಮುಖ್ಯ ಕಾರ್ಯ ನಿರ್ವಾಹಕರ ವಾರ್ಷಿಕ ಸಭೆಯು  ಕೊಡವ ಎಂಟರ್ಪ್ರೆನರ್ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಕೊಡವ ಸಮಾಜ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.  ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಕೊಡಗು ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿಯಮಿತ ಅಧ್ಯಕ್ಷ ಎಂ.ಪಿ.ಮುತ್ತಪ್ಪ ಕೊಡಗಿನ ಸಹಕಾರಿ ಮತ್ತು ಅದರ ಕಾರ್ಯವೈಖರಿಯ ಕುರಿತು ವಿಮರ್ಶಿಸಿದರು. ಸಂಯುಕ್ತ ಸಹಕಾರಿಯ ಮೈಸೂರು ಪ್ರಾಂತೀಯ ಅಧಿಕಾರಿ ಗುರುಪ್ರಸಾದ್ ಬಂಗೇರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜಿಲ್ಲಾ ವ್ಯವಸ್ಥಾಪಕ ಮನೋಜ್ ಕುಮಾರ್ ಸಾಮಾನ್ಯ ಸೇವಾ ಕೇಂದ್ರದ ಕುರಿತು (ಸಿಎಸ್ ಸಿ) ಮಾಹಿತಿಯನ್ನು ನೀಡಿದರು. ಪ್ರಾಂತೀಯ ಅಧಿಕಾರಿ ಗುರುಪ್ರಸಾದ್ ಬಂಗೇರ ಮುಖ್ಯ ಕಾರ್ಯನಿರ್ವಾಹಕರ ಶಾಸನಬದ್ಧ ಜವಾಬ್ದಾರಿ ಮತ್ತು ಕರ್ತವ್ಯಗಳ ಕುರಿತು ಉಪನ್ಯಾಸ ನೀಡಿದರು. ಸಹಕಾರಿ ಅಭಿವೃದ್ಧಿ ಅಧಿಕಾರಿ ಆರ್‌.ಎಸ್.ಸುರೇಶ ಆರ್ಥಿಕ ಸಬಲತೆಯ ಮಾನದಂಡಗಳ ಸುತ್ತೋಲೆ & ಲೆಕ್ಕಪರಿಶೋಧನ ವರದಿಯಲ್ಲಿ ಕಂಡುಬಂದಿರುವ ನ್ಯೂನ್ಯತೆಗಳ ಕುರಿತು ‌…

Read More

ಮೂರ್ನಾಡು ಡಿ.24 NEWS DESK : ರಾಜ್ಯಮಟ್ಟದ 16ನೇ ಈಶ ಗ್ರಾಮೋತ್ಸವದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಕಾಂತೂರು-ಮೂರ್ನಾಡು ಮಹಿಳಾ ತಂಡವು ಪ್ರಥಮ ಸ್ಥಾನ ಪಡೆದು ರಾಷ್ಟಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಚಿಕ್ಕಬಳ್ಳಾಪುರದ ಸದ್ಗುರು ಸನ್ನಿಧಿಯಲ್ಲಿ ಆಯೋಜಿಸಲಾಗಿದ್ದ ಈಶ ಗ್ರಾಮೋತ್ಸವದ ಥ್ರೋಬಾಲ್ ಪಂದ್ಯಾವಳಿಗೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 14 ತಂಡಗಳ ನಡುವೆ ರೋಮಾಂಚಕ ಪ್ರದರ್ಶನಗಳು ನಡೆದು, ಕೊಡಗು ಜಿಲ್ಲೆಯ ಕಾಂತೂರು-ಮೂರ್ನಾಡು ಮಹಿಳಾ ತಂಡ ಮತ್ತು ಮರಗೋಡು ಬ್ಯಾಕ್ ಪ್ಯಾಂಥರ್ರ್ಸ್ ಪ್ರವೇಶಿಸಿತು. ಈ ಎರಡು ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಕಾಂತೂರು-ಮೂರ್ನಾಡು ಮಹಿಳಾ ತಂಡ ವಿಜಯ ಸಾಧಿಸಿತು. ಈ ತಂಡವು ಇದೆ ತಿಂಗಳು 28 ರಂದು ಕೊಯಂಬುತ್ತೂರಿನ ಈಶ ಯೋಗಕೇಂದ್ರದಲ್ಲಿ ನಡೆಯುವ ರಾಷ್ಟಮಟ್ಟದ ಗ್ರಾಮ ನಾಲೆಯಲ್ಲಿ ಭಾಗವಹಿಸಲಿದ್ದಾರೆ. ವರದಿ : ಟಿ.ಸಿ.ನಾಗರಾಜ್, ಮೂರ್ನಾಡು.

Read More

ಸೋಮವಾರಪೇಟೆ ಡಿ.24 NEWS DESK : ಕ್ರೀಡೆಯಲ್ಲಿ ಸೋಲು ಗೆಲುವನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಬೇಕು ಎಂದು ಶಾಸಕ ಡಾ.ಮಂತರ್‌ಗೌಡ ಹೇಳಿದರು. ಕೊಡಗು ಪತ್ರಕರ್ತರ ಸಂಘದ ಸೋಮವಾರಪೇಟೆ ತಾಲೂಕು ಘಟಕದ ಆಶ್ರಯದಲ್ಲಿ ಸಮೀಪದ ಬಳಗುಂದ ಸರ್ಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಭಾನುವಾರ ಜಿಲ್ಲೆಯ ಪತ್ರಕರ್ತರಿಗೆ ಆಯೋಜಿಸಿದ್ದ ಕೆ.ಪಿ.ಎಸ್, ಕ್ರಿಕೆಟ್ ಲೀಗ್ ಪಂದ್ಯಾಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕ್ರೀಡೆಯಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬಹುದು. ಕ್ರೀಡೆ ಎಂಬುದು ಕೊಡಗಿನ ಜನರ ರಕ್ತದಲ್ಲೇ ಇದೆ. ಪತ್ರಕರ್ತರು ಕೂಡ ಶಾಲಾ, ಕಾಲೇಜು ದಿನಗಳಲ್ಲಿ ಎಲ್ಲಾ ಆಟಗಳನ್ನು ಆಡಿರುತ್ತಾರೆ. ಇಂತಹ ಕ್ರೀಡಾಕೂಟಗಳಲ್ಲಿ ಪರಸ್ಪರ ಭೇಟಿಯ ಸುಸಂದರ್ಭ ಒದಗುತ್ತದೆ ಎಂದರು. ಪತ್ರಕರ್ತರು ಪ್ರತಿನಿತ್ಯ ಒತ್ತಡದಿಂದ ಕೆಲಸ ಮಾಡಲೇಬೇಕಾದ ಅನಿವಾರ್ಯತೆಯಿದೆ. ದಿನಕ್ಕೆ ಅರ್ಧಗಂಟೆ ಸಮಯವನ್ನು ವ್ಯಾಯಾಮಕ್ಕಾಗಿ ಮೀಸಲಿಡಬೇಕು. ವಯಸ್ಸಿಗೆ ಅನುಗುಣವಾಗಿ ವ್ಯಾಯಾಮ ಮಾಡಬೇಕು ಎಂದು ಕಿವಿ ಮಾತು ಹೇಳಿದರು. ಗ್ರಾಮೀಣ ಪತ್ರಕರ್ತರಿಗೂ ಸರ್ಕಾರದ ಸೌಲಭ್ಯಗಳು ಸಿಗಬೇಕು ಎಂಬುದು ನಮ್ಮ ಅಶಯವಾಗಿದೆ. ರಾಜ್ಯದ ಗ್ರಾಮೀಣ ಪತ್ರಕರ್ತರಿಗೆ ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಸಂಚರಿಸಲು…

Read More

ಮಡಿಕೇರಿ NEWS DESK ಡಿ.24 : ಕ್ರಿಸ್‌ಮಸ್ ಹಾಗೂ ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಮಡಿಕೇರಿಗೆ ದಾಖಲೆ ಸಂಖ್ಯೆಯ ಪ್ರವಾಸಿಗರು ಆಗಮಿಸುವ ನಿರೀಕ್ಷೆ ಇದ್ದು, ವಾಹನದಟ್ಟಣೆಯನ್ನು ತಡೆಯಲು ವರ್ತಕರು ನಾಲ್ಕು ಚಕ್ರದ ವಾಹನವನ್ನು ಬಳಸದೆ ಆದಷ್ಟು ದ್ವಿಚಕ್ರ ವಾಹನದಲ್ಲೇ ಸಂಚರಿಸುವ0ತೆ ನಗರ ಚೇಂಬರ್ ಆಫ್ ಕಾಮರ್ಸ್ ಮನವಿ ಮಾಡಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಚೇಂಬರ್ ಆಫ್ ಕಾಮರ್ಸ್ನ ನಗರಾಧ್ಯಕ್ಷ ಸಂತೋಷ್ ಅನ್ವೇಕರ್, ಮಡಿಕೇರಿಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದ್ದು, ಭಾರೀ ವಾಹನದಟ್ಟಣೆ ಎದುರಾಗುವ ಸಂಭವವಿದೆ. ಆದ್ದರಿಂದ ಸ್ಥಳೀಯ ವರ್ತಕರು ಅಗತ್ಯವಿದ್ದರೆ ಮಾತ್ರ ನಾಲ್ಕು ಚಕ್ರದ ವಾಹನದಲ್ಲಿ ಸಂಚರಿಸುವ0ತೆ ಕೋರಿದ್ದಾರೆ. ದ್ವಿಚಕ್ರ ವಾಹನದಲ್ಲಿ ಸಂಚರಿಸುವುದರಿ0ದ ನಗರದಲ್ಲಿ ವಾಹನದಟ್ಟಣೆ ಕಡಿಮೆಯಾಗುತ್ತದೆ. ಸಂಚಾರ ವ್ಯವಸ್ಥೆ ಸುಗಮಗೊಳಿಸಲು ಪೊಲೀಸ್ ಇಲಾಖೆಗೆ ಸಹಕರಿಸಿದಂತಾಗುತ್ತದೆ. ವಸ್ತುಗಳ ಖರೀದಿಗೆ ಅಂಗಡಿಗಳಿಗೆ ಬರುವ ಪ್ರವಾಸಿಗರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದ್ದಾರೆ. ಹೆಸರುವಾಸಿ ಪ್ರವಾಸಿತಾಣಗಳಿರುವ ಮಡಿಕೇರಿ ನಗರವನ್ನು ಟ್ರಾಫಿಕ್ ಫ್ರೀ ಪ್ರವಾಸಿತಾಣವನ್ನಾಗಿ ಮಾಡಲು ಎಲ್ಲರೂ ಸಹಕಾರ ನೀಡಬೇಕೆಂದು ಸಂತೋಷ್ ಅನ್ವೇಕರ್ ಮನವಿ ಮಾಡಿದ್ದಾರೆ.

Read More