ಮಡಿಕೇರಿ ಡಿ.24 NEWS DESK : ಬಾಲಗೋಕುಲ – ಮಡಿಕೇರಿ ಹಾಗೂ ಮುಳಿಯ ಪ್ರತಿಷ್ಠಾನದ ಸಹಯೋಗದೊಂದಿಗೆ ಡಿ.25 ರಂದು “ಬಾಲಸಂಗಮ” ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಮಧ್ಯಾಹ್ನ 2 ಗಂಟೆಯಿಂದ ಪ್ರಾರಂಭವಾಗಿ ಸಂಜೆ 5 ಗಂಟೆಯವರಗೆ ನಡೆಯಲಿದೆ. ಮುಳಿಯ ಜ್ಯುವೆಲ್ಸ್ ಸಭಾಂಗಣದಲ್ಲಿ ನಡೆಯಲಿರುವ ಈ ಬಾಲ ಸಂಗಮವು ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಇದೊಂದು ವೇದಿಕೆಯಾಗಿದೆ. 6 ವಯಸ್ಸಿನಿಂದ 15 ವಯಸ್ಸಿನ ಒಳಗಿರುವ ಎಲ್ಲಾ ಮಕ್ಕಳು ಇದರಲ್ಲಿ ಭಾಗವಹಿಸಬಹುದು. ಕಾರ್ಯಕ್ರಮದಲ್ಲಿ ಭಾಗವಹಿಸಲಿಚ್ಚಿಸುವವರು ಈ ಮೊಬೈಲ್ ಸಂಖ್ಯೆಗಳನ್ನು: 97401 31805, 7348838758 ಸಂಪರ್ಕಿಸಬೇಕಾಗಿ ಕೋರಲಾಗಿದೆ.
ಲೇಖಕ: admin
ಮಡಿಕೇರಿ NEWS DESK ಡಿ.23 : ಮಡಿಕೇರಿ ತಾಲ್ಲೂಕು ಒಕ್ಕಲಿಗರ ಸಂಘದ ವಾರ್ಷಿಕ ಮಹಾಸಭೆ ನರಗದ ಹೋಟೇಲ್ ರಾಜ್ ಸಭಾಂಗಣದಲ್ಲಿ ನಡೆಯಿತು. ಸಭೆಯನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ ಅವರು ರಾಜ್ಯ ಒಕ್ಕಲಿಗರ ಸಂಘದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯಕೀಯ ಸಂಸ್ಥೆ, ವಿದ್ಯಾ ಸಂಸ್ಥೆ ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳು ಸಂಘದ ಎಲ್ಲಾ ರೀತಿಯ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು. ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ವಿ.ಜಿ.ಮೋಹನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಳೆದ ಸಾಲಿನ ಕಾರ್ಯಚಟುವಟಿಕೆಗಳ ವರದಿಯನ್ನು ಕಾರ್ಯದರ್ಶಿ ಕುಶಾಲಪ್ಪ ವಾಚಿಸಿದರು. ಖಜಾಂಚಿ ಕೆ.ರಮೇಶ್ ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು. ಕೊಡಗು ಜಿಲ್ಲಾ ಒಕ್ಕಲಿಗ ಸಂಘದ ಗೌರವ ಸಲಹೆಗಾರ ವಿ.ಪಿ.ಸುರೇಶ್, ಸಂಘದ ನಿರ್ದೇಶಕರು, ಗೌರವ ಸಲಹೆಗಾರರು ಸದಸ್ಯರು ಹಾಗೂ ಕುಟುಂಬ ವರ್ಗದವರು ಉಪಸ್ಥಿತರಿದ್ದರು. ಧನ್ಯಶ್ರೀ ಪ್ರಾರ್ಥಿಸಿ, ಎಂ.ಧನAಜಯ ಸ್ವಾಗತಿಸಿ ನಿರೂಪಿಸಿದರು, ಶೀಲಾ ಪ್ರಕಾಶ್ ವಂದಿಸಿದರು. :: ಸನ್ಮಾನ :: ಸಭೆಯಲ್ಲಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ,…
ಮಡಿಕೇರಿ ಡಿ.23 NEWS DESK : ಕರ್ನಾಟಕ ರಾಜ್ಯದ ಆರೋಗ್ಯ ಕ್ಷೇತ್ರದಲ್ಲೇ ಮೊಟ್ಟ ಮೊದಲ ಬಾರಿಗೆ ಮೃತದೇಹದ ಮೂಳೆ ದಾನ ಮಾಡಲಾಗಿದೆ. ಸೋಮವಾರಪೇಟೆಯ ಜಂಬೂರು ಗ್ರಾಮದ ನಿವಾಸಿ ಈಶ್ವರ ಎನ್. (32) ಎಂಬುವವರೇ ಸಾವಿನಲ್ಲೂ ಸಾರ್ಥಕತೆ ಮೆರೆದವರು. ಇದೇ ಡಿ.21 ರಂದು ರಾತ್ರಿ ತಾವು ಚಲಾಯಿಸುತ್ತಿದ್ದ ಪಿಕ್ ಅಪ್ ವಾಹನ ಗರಗಂದೂರು ಬಳಿ ನಿಯಂತ್ರಣ ಕಳೆದುಕೊಂಡು ಮಗುಚಿಕೊಂಡ ಪರಿಣಾಮ ಈಶ್ವರ್ ಎನ್. ಅವರ ತಲೆಯ ಭಾಗಕ್ಕೆ ಗಂಭೀರ ಗಾಯವಾಗಿತ್ತು. ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಮಂಗಳೂರಿನ ನಿಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು. ಈಶ್ವರ ಅವರು ಗಂಭೀರ ಸ್ಥಿತಿಯಲ್ಲಿದ್ದ ವಿಚಾರವನ್ನು ವೈದ್ಯರು ಅವರ ಸಹೋದರಿ ಸೌಮ್ಯ ಬಳಿ ತಿಳಿಸಿದಾಗ ಸ್ವಯಂಪ್ರೇರಿತರಾಗಿ ಅಂಗಾಂಗ ದಾನದ ಕುರಿತು ಆಸಕ್ತಿ ತೋರಿದರು. ಕಸಿ ಸಂಯೋಜಕರಾದ ಅಕ್ಷತಾ ಶೆಟ್ಟಿ ಹಾಗೂ ನರಶಸ್ತ್ರ ಚಿಕಿತ್ಸಕರು ಸೇರಿದಂತೆ ವೈದ್ಯಕೀಯ ತಂಡ ಸಮಾಲೋಚನೆ ನಡೆಸಿತು. ನಂತರ ಸಹೋದರಿ ಸೌಮ್ಯ ಹಾಗೂ ಕುಟುಂಬ ವರ್ಗ ಈಶ್ವರ ಅವರ ಮೂಳೆಗಳನ್ನು…
ಕುಶಾಲನಗರ, ಡಿ.23 NEWS DESK : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕೊಡಗು ಜಿಲ್ಲಾ ಸಂಸ್ಥೆ, ಕುಶಾಲನಗರ ಸ್ಥಳೀಯ ಸಂಸ್ಥೆಯ ವತಿಯಿಂದ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಕುಶಾಲನಗರ ಪಟ್ಟಣದ ಪಿ.ಎಂ.ಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಎರಡು ದಿನಗಳ ಕಾಲ ಏರ್ಪಡಿಸಿದ್ದ ಕೊಡಗು ಜಿಲ್ಲಾಮಟ್ಟದ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳ ಮೇಳ ( ರ್‍ಯಾಲಿ ) ಕ್ಕೆ ವರ್ಣರಂಜಿತ ತೆರೆಬಿದ್ದಿತು. ಜಿಲ್ಲೆಯ ವಿವಿಧ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಂದ ಆಗಮಿಸಿದ್ದ 600 ಮಕ್ಕಳು ಎರಡು ದಿನಗಳ ಸ್ಕೌಟ್ಸ್ ಮತ್ತು ಗೈಡ್ಸ್ ನ ವಿವಿಧ ತರಬೇತಿ/ ಚಟುವಟಿಕೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಸ್ಕೌಟ್ಸ್ ಮತ್ತು ಗೈಡ್ಸ್ ನ ಮಹತ್ವವನ್ನು ಸಾರಿದರು. ಶಿಕ್ಷಕರು ತರಬೇತಿ ನಿರತ ವಿದ್ಯಾರ್ಥಿಗಳಿಗೆ ವಿವಿಧ ಅಭ್ಯಾಸಾತ್ಮಕ ತರಬೇತಿ ನೀಡಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕೊಡಗು ಜಿಲ್ಲಾ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯೂ ಮಾತನಾಡಿ, ಸ್ಕೌಟ್, ಗೈಡ್ ಆಂದೋಲನದ ಉದ್ದೇಶವು ವಿದ್ಯಾರ್ಥಿಗಳು, ಯುವಕರಲ್ಲಿ ಉತ್ತಮ…
ಮಡಿಕೇರಿ ಡಿ.23 NEWS DESK : ಮಡಿಕೇರಿಯ ತನಲ್ ಆಶ್ರಮದ ಸಮಿತಿಯ ವಾರ್ಷಿಕ ಮಹಾ ಸಭೆಯು ಸಮಿತಿಯ ಅಧ್ಯಕ್ಷ ಮೊಹಮ್ಮದ್ ಮುಸ್ತಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭ ತನಲ್ ಕೇರಳ ಆಡಳಿತ ಮಂಡಳಿಯ ಸದಸ್ಯ ಆಲಿ ಮೊಹಮ್ಮದ್ ಮಾತನಾಡಿ, ನಿರಂತರವಾಗಿ ಸಹಕಾರ ನೀಡುತ್ತಿರುವ ಸಮಿತಿ ಸದಸ್ಯರು ಹಾಗೂ ದಾನಿಗಳನ್ನು ಸ್ಮರಿಸಿದರು. ಮುಂದಿನ 25-26ನೇ ಸಾಲಿಗೆ ಹೊಸ ಯೋಜನೆಗಳಿಂದ ಆಶ್ರಮವನ್ನು ಮುನ್ನಡೆಸಬೇಕಾಗಿದೆ. ಇದಕ್ಕಾಗಿ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು. ದೇಶಾದ್ಯಂತ ತನಲ್ ನೆರವಿನಿಂದ ಸುಮಾರು ಮೂರು ಲಕ್ಷ ಜನರು ವಿವಿಧ ವಿಭಾಗಗಳ ಮೂಲಕ ಸಹಾಯ ಪಡೆಯುತ್ತಿದ್ದಾರೆ. ಸುಮಾರು 60 ಸಾವಿರ ಅರ್ಹ ಜನರಿಗೆ ಆಹಾರ ವಿತರಣೆ ಮಾಡಲಾಗುತ್ತಿದೆ. ಸೇವೆಗಾಗಿ ಮುಡಿಪಾಗಿರುವ ತನಲ್ ಸಂಸ್ಥಯ ಭಾಗವಾಗಿರವುದು ನಮಗೆ ಅಭಿಮಾನವಿದೆ ಎಂದು ಹೇಳಿದರು. ತನಲ್ ಆಶ್ರಮದಲ್ಲಿ ಮಹಿಳಾ ವಿಭಾಗದ ಸದಸ್ಯರು ಉತ್ಸಾಹದಿಂದ ಕಾರ್ಯನಿರ್ವಹಿಸುತ್ತಿದ್ದು, ಅವರು ಪ್ರತಿ ದಿನದ ಹಾಲು, ಸಾಮಾಗ್ರಿಗಳು, ಸೌದೆ ವ್ಯವಸ್ಥೆ, ಕೋಕೋಡೊಮ ಹಾಗೂ ಅಲಂಕಾರ ಸಾಮಾಗ್ರಿಗಳನ್ನು ತಯಾರುಗೊಳಿಸುವ ಮೂಲಕ ಸಂಸ್ಥೆಯ…
ಮಡಿಕೇರಿ ಡಿ.23 NEWS DESK : ವಿಶ್ವಕ್ಕೇ ಮಾದರಿಯಾಗಿರುವ ಮಹಾನಾಯಕ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಸಂಸತ್ ನಲ್ಲಿ ಅಪಮಾನ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತಾ ಶಾ ಅವರು ದೇಶದ ಜನರ ಕ್ಷಮೆಯಾಚಿಸಬೇಕು ಮತ್ತು ಕೇಂದ್ರ ಸರಕಾರ ಇವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಸಿಪಿಐ(ಎಂ) ಪಕ್ಷ ನೆಲ್ಲಿಹುದಿಕೇರಿ ಶಾಖೆ ನೆಲ್ಲಿಹುದಿಕೇರಿಯಲ್ಲಿ ಪ್ರತಿಭಟನೆ ನಡೆಸಿತು. ನೆಲ್ಲಿಹುದಿಕೇರಿಯ ಬಸ್ ನಿಲ್ದಾಣದಲ್ಲಿ ಜಮಾಯಿಸಿದ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಕೇಂದ್ರ ಗೃಹ ಸಚಿವ ಅಮಿತಾ ಶಾ ವಿರದ್ಧ ಘೋಷಣೆಯನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭ ನೆಲ್ಲಿಹುದಿಕೇರಿ ಶಾಖಾ ಕಾರ್ಯದರ್ಶಿಯಾದ ಪಿ.ಆರ್.ಭರತ್ ಮಾತನಾಡಿ ಡಾ.ಅಂಬೇಡ್ಕರ್ ಅವರ ಕುರಿತು ಅಮಿತ್ ಶಾ ಅವರು ನೀಡಿರುವ ಹೇಳಿಕೆ ಖಂಡನೀಯ ಎಂದರು. ನೊಂದವರ ಧ್ವನಿಯಾಗಿ ಸಾಮಾಜಿಕ ನ್ಯಾಯ ಒದಗಿಸಿದ ಡಾ.ಅಂಬೇಡ್ಕರ್ ಅವರನ್ನು ಕಡೆಗಣಿಸಿರುವ ಅಮಿತ್ ಶಾ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು, ತಪ್ಪಿದಲ್ಲಿ ಸರಕಾರವೇ ಅವರನ್ನು ವಜಾಗೊಳಿಸಬೇಕು…
ಮಡಿಕೇರಿ ಡಿ.23 NEWS DESK : ಪ್ರತಿಷ್ಠಿತ ಮ್ಯಾನ್ಸ್ ಕಾಂಪೌಂಡ್ ಕ್ಲಬ್(ಎಂಸಿಸಿ) ವತಿಯಿಂದ ನೂತನ ಸಾಲಿನ ಜ.4 ಮತ್ತು 5ರಂದು ನಗರದ ಜನರಲ್ ಕೆ.ಎಸ್.ತಿಮ್ಮಯ್ಯ ಮೈದಾನದಲ್ಲಿ 5+2 ಆಟಗಾರರ ಜಿಲ್ಲಾ ಮಟ್ಟದ ಫುಟ್ಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆಯೆಂದು ಕ್ಲಬ್ ಅಧ್ಯಕ್ಷ ಎ.ಎಂ. ಕ್ರಿಸ್ಟೋಫರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಜಿಲ್ಲಾ ಮಟ್ಟದ ಈ ಪಂದ್ಯಾವಳಿಯಲ್ಲಿ ಮೊದಲು ನೋಂದಣಿ ಮಾಡಿಕೊಂಡ 32 ತಂಡಗಳ ಪಾಲ್ಗೊಳ್ಳುವಿಕೆಗೆ ಅವಕಾಶವನ್ನು ನೀಡಲಾಗುತ್ತದೆ. ಪ್ರತಿ ತಂಡದಲ್ಲಿ ಇಬ್ಬರು ಅತಿಥಿ ಆಟಗಾರರನ್ನು ಆಡಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಪಂದ್ಯಾವಳಿ ನಾಕ್‍ಔಟ್ ಮಾದರಿಯಲ್ಲಿ ನಡೆಯಲಿದೆ. ಅಂತಿಮ ಪಂದ್ಯ ಜ.5ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆಯೆಂದು ಮಾಹಿತಿಯನ್ನಿತ್ತರು. ಪಂದ್ಯಾವಳಿಯಲ್ಲಿ ಜಿಲ್ಲೆಯ ಹೆಸರಾಂತ ತಂಡಗಳು ಪಾಲ್ಗೊಳ್ಳಲಿದ್ದು, ವಿಜೇತ ತಂಡಕ್ಕೆ 30 ಸಾವಿರ ರೂ. ನಗದು ಮತ್ತು ಆಕರ್ಷಕ ಟ್ರೋಫಿ, ರನ್ನರ್ಸ್ ಅಪ್ ತಂಡಕ್ಕೆ 20 ಸಾವಿರ ರೂ. ನಗದು ಮತ್ತು ಆಕರ್ಷಕ ಟ್ರೋಫಿಯನ್ನು ಬಹುಮಾನವಾಗಿ ನೀಡಲಾಗುತ್ತದೆ. ಇದರೊಂದಿಗೆ ಉತ್ತಮ ಆಟಗಾರ, ಉತ್ತಮ ತಂಡ,…
ನಾಪೋಕ್ಲು ಡಿ.23 NEWS DESK : ಕಾಫಿ ಕೃಷಿಯ ನಡುವೆ ವೈವಿಧ್ಯಮಯ ಹಣ್ಣಿನ ಗಿಡಗಳನ್ನು ಬೆಳೆಸುವುದರ ಮೂಲಕ ಕೃಷಿಕರು ಆರ್ಥಿಕವಾಗಿ ಸಬಲರಾಗಬಹುದು ಎಂದು ಚೆಟ್ಟಳ್ಳಿಯ ಹಣ್ಣಿನ ತಳಿಗಳ ವಿಜ್ಞಾನಿ ಮುರಳೀಧರ್ ಹೇಳಿದರು. ಎಲ್.ಡಿ.ಸಿ ಕಂಪನಿ ಕುಶಾಲನಗರ ಮತ್ತು ಜಯ ಕಾಫಿ ನೆಲಜಿ ಸಂಯುಕ್ತ ಆಶ್ರಯದಲ್ಲಿ ನಾಪೋಕ್ಲು ಕೊಡವ ಸಮಾಜದಲ್ಲಿ ನಡೆದ ಕಾಫಿಯಲ್ಲಿ ಉತ್ತಮ ಕೃಷಿ ಪದ್ಧತಿಗಳು ಮತ್ತು ಹಣ್ಣಿನ ಬೆಳೆಗಳ ವೈವಿಧ್ಯಕರಣ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಜಾಗತಿಕವಾಗಿ ಕಾಫಿಗೆ ಅಧಿಕ ಬೇಡಿಕೆ ಇದೆ. ಅದರಲ್ಲೂ ಕೊಡಗಿನ ಕಾಫಿ ಉತ್ಕೃಷ್ಟವಾದದ್ದು, ಕಾಫಿ ತೋಟದ ಒಳಗಡೆ ಹಣ್ಣಿನ ತಳಿಗಳನ್ನು ಬೆಳೆಸುವುದರಿಂದ ಕೃಷಿಕರು ಆರ್ಥಿಕವಾಗಿ ಸಬಲರಾಗಬಹುದು. ಬೆಣ್ಣೆ ಹಣ್ಣು, ರಾಂಬುಟನ್, ಲಿಚ್ಚಿ, ಮ್ಯಾಂಗೋ ಸ್ಟೀನ್, ಕಿತ್ತಳೆ ಮುಂತಾದ ವೈವಿಧ್ಯಮಯ ತಳಿಗಳು ಇಲ್ಲಿನ ಹವಾಮಾನಕ್ಕೆ ಸೂಕ್ತವಾಗಿವೆ. ಉತ್ತಮ ಮಾರುಕಟ್ಟೆಯೂ ಹಣ್ಣಿನ ಬೆಳೆಗಳಿಗೆ ಲಭಿಸುತ್ತಿದೆ. ಹಣ್ಣಿನ ಗಿಡಗಳನ್ನು ಬೆಳೆಸುವುದರ ಮೂಲಕ ಕೃಷಿಕರು ವೈವಿಧ್ಯತೆಯನ್ನು ಕಾಪಾಡಿಕೊಳ್ಳಬಹುದು ಎಂದರು. ಹಣ್ಣಿನ ಗಿಡಗಳ ಬೇಸಾಯ ಹಾಗೂ ಗಿಡಗಳ ಪೋಷಣೆ, ಗಿಡಗಳಿಗೆ…
ನಾಪೋಕ್ಲು ಡಿ.23 NEWS DESK : ಕ್ರೀಡೆಯಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ನೆರವಂಡ ಸುನಿಲ್ ದೇವಯ್ಯ ಹೇಳಿದರು. ನಾಪೋಕ್ಲುವಿನ ಶ್ರೀ ರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆ ವತಿಯಿಂದ ಆಯೋಜಿಸಲಾಗಿದ್ದ ವಾರ್ಷಿಕ ಕ್ರೀಡೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕ್ರೀಡೆಗೂ ಆದ್ಯತೆ ನೀಡಬೇಕು. ಆಗ ಮಾತ್ರ ಕ್ರೀಡೆಯಲ್ಲಿ ಉನ್ನತ ಸ್ಥಾನಕ್ಕೆ ಏರಲು ಸಾಧ್ಯ ಎಂದರು. ಕ್ರೀಡಾಕೂಟದಲ್ಲಿ ಸಿಂಧು ತಂಡ ಸಮಗ್ರ ಪಾರಿತೋಷಕವನ್ನು ಪಡೆದುಕೊಂಡರೆ, ದ್ವಿತೀಯ ಸ್ಥಾನವನ್ನು ಕೃಷ್ಣ ತಂಡದವರು ಪಡೆದುಕೊಂಡರು. ವಿದ್ಯಾ ಸಂಸ್ಥೆಯ ಅಧ್ಯಕ್ಷ ಕಲಿಯಂಡ ಹ್ಯಾರಿ ಮಂದಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ಪ್ರೊ.ಕಲ್ಯಾಟಂಡ ಪೂಣಚ್ಚ, ಅಪ್ಪಾರಂಡ ಅಪ್ಪಯ್ಯ, ಬಿದ್ದಾಟಂಡ ಮುದ್ದಯ್ಯ, ಕೊಂಬಂಡ ಗಣೇಶ, ನಾಯಕಂಡ ದೀಪಕ್ ಚಂಗಪ್ಪ, ಕಲಿಯಂಡ ಕೌಶಿಕ್ ಕುಶಾಲಪ್ಪ, ಪ್ರಾಂಶುಪಾಲರಾದ ಬಿ.ಎಂ.ಶಾರದಾ ಅಪ್ಪಣ್ಣ ಉಪಸ್ಥಿತರಿದ್ದರು. ಪರಿಧಿ ಪೊನ್ನಮ್ಮ ಪ್ರಾರ್ಥಿಸಿದರು. ಬಿ.ಎಂ.ಶಾರದ ಸ್ವಾಗತಿಸಿದರು, ಶಿಕ್ಷಕರಾದ ಎಂ.ಡಿ.ಕಾಳಯ್ಯ ಮತ್ತು ಎ.ಟಿ.ಭಗವತಿ ಪ್ರಸಾದ್ ನಿರೂಪಿಸಿದರು. ಬಿ.ಪಿ.ಸೌಮ್ಯ ಅತಿಥಿಗಳ ಪರಿಚಯಿಸಿದರು. ಕೆ.ಕೆ.ಸರಿತಾ ಕ್ರೀಡಾ ವರದಿ ವಾಚಿಸಿದರು. ವಿ.ಎನ್.ರೇಷ್ಮಾ…
ಕುಶಾಲನಗರ ಡಿ.23 NEWS DESK : ಕುಶಾಲನಗರ ತಾಲ್ಲೂಕಿನ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿರೂಪಾಕ್ಷಪುರ ಗ್ರಾಮ ಅರಣ್ಯ ಸಮಿತಿಗೆ ನೂತನವಾಗಿ ಪದಾಧಿಕಾರಗಳನ್ನು ನೇಮಕ ಮಾಡಲಾಗಿದ್ದು, ಈ ಸಂಬಂಧ ಗ್ರಾಮದ ಹೆಬ್ಬಾಗಿಲಿನಲ್ಲಿ ಅರಣ್ಯ ಸಮಿತಿ ನಾಮಫಲಕವನ್ನು ಗಿರಿಜನ ಮುಖಂಡ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್.ಕೆ.ಚಂದ್ರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಅರಣ್ಯದ ಅಂಚಿನಲ್ಲಿ ವಾಸಿಸುತ್ತಿರುವ ಗಿರಿಜನ ನಿವಾಸಿಗಳೂ ಸೇರಿದಂತೆ ಇತರೇ ನಿವಾಸಿಗಳಿಗೆ ಸರ್ಕಾರದ ಸವಲತ್ತುಗಳು ಸಮರ್ಪಕವಾಗಿ ದೊರಕುವಂತಾಗಬೇಕು. ಈ ನಿಟ್ಟಿನಲ್ಲಿ ಗ್ರಾಮದ ನಿವಾಸಿಗಳು ಸಂಘಟಿತರಾಗಿ ಹೋರಾಟ ನಡೆಸುವ ಮೂಲಕ ಸೌಲಭ್ಯಗಳನ್ನು ಪಡೆದುಕೊಳ್ಳಲು ಗ್ರಾಮ ಅರಣ್ಯ ಸಮಿತಿ ರಚಿಸಲಾಗಿದೆ ಎಂದರು. ಈ ಸಂದರ್ಭ ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷ ಹೆಚ್.ಕೆ.ಗಿರೀಶ, ಉಪಾಧ್ಯಕ್ಷೆ ಹೆಚ್.ಕೆ.ಗಿರಿಜ, ಕಾರ್ಯದರ್ಶಿ ಕೆ.ಟಿ.ಕೇಶವ, ಗ್ರಾಮದ ಯಜಮಾನ ಪಿ.ಹೆಚ್.ದೇವರಾಜು, ಸದಸ್ಯರುಗಳಾದ ಬಿ.ಟಿ.ಪೊನ್ನಪ್ಪ, ಸಿ.ಆರ್.ಪದ್ಮಾವತಿ, ಎನ್.ಶೀಬಾ, ಹೆಚ್.ಟಿ.ಜಯ, ಎಂ.ಎ.ಬಶೀರ್, ಕೆ.ಎಸ್.ಮಣಿ, ಕೆ.ಎಂ.ಅಬ್ಬಾಸ್, ಹೆಚ್.ಎಸ್.ಶಾರದಾ, ಕೆ.ಜಿ.ಮಂಜುನಾಥ ಸೇರಿದಂತೆ ಮತ್ತಿತರ ಪ್ರಮುಖರು ಹಾಜರಿದ್ದರು.






