ನಾಪೋಕ್ಲು ಜ.11 : ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆರ್.ಟಿ.ಐ. ಕಾರ್ಯಕರ್ತನೆಂಬ ಸೋಗು ಹಾಕಿಕೊಂಡು ಕರ್ತವ್ಯ ನಿರ್ವಹಿಸುತ್ತಿರುವ ವ್ಯಕ್ತಿಯನ್ನು ಗಾಡಿಪಾರು ಮಾಡಬೇಕೆಂದು ಒತ್ತಾಯಿಸಿ ನಾಪೋಕ್ಲುವಿನಲ್ಲಿ ಪ್ರತಿಭಟನೆ ನಡೆಯಿತು. ನಾಪೋಕ್ಲು ಠಾಣೆಯ ಮುಂಭಾಗದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಕೆ.ಎ.ಹ್ಯಾರಿಸ್ ಎಂಬತನ ವಿರುದ್ಧ ಘೋಷಣೆಗಳನ್ನು ಕೂಗಿ, ಕೂಡಲೇ ಈತನನ್ನು ಬಂಧಿಸಿ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು. ಕೆ.ಎ.ಹ್ಯಾರಿಸ್ ಎಂಬಾತ ಆರ್.ಟಿ.ಐ. ಕಾರ್ಯಕರ್ತನೆಂದು ಹೇಳಿಕೊಂಡು, ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು ಮತ್ತು ಅಧಿಕಾರಿಗಳಿಗೆ, ಪಂಚಾಯಿತಿ ಅಧಿಕಾರಿಗಳಿಗೆ ಮತ್ತು ಕಾಲೇಜಿನ ಪ್ರಾಂಶುಪಾಲರು ಮತ್ತು ಉಪನ್ಯಾಸಕರುಗಳಿಗೆ ಮಾನಸಿಕ ಕಿರುಕುಳ ನೀಡುತ್ತಾ ಕರ್ತವ್ಯಕ್ಕೆ ಅಡ್ಡಿಪಡಿಸಿ ಬ್ಲ್ಯಾಕ್ ಮೇಲ್ ದಂಧೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಈ ಸಂದರ್ಭ ಗ್ರಾ.ಪಂ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್ ಹಾಗೂ ಡಿ.ಸಿ.ಸಿ. ಬ್ಯಾಂಕ್ ಉಪಾಧ್ಯಕ್ಷ ಕೆಟೋಳಿರ ಹರೀಶ್ ಪೂವಯ್ಯ ಮಾತನಾಡಿ, ಆರ್.ಟಿ.ಐ. ಕಾರ್ಯಕರ್ತನೆಂದ ಮೇಲೆ ಸಾರ್ವಜನಿಕ ಸೇವೆಯಲ್ಲಿ ಸ್ವಲ್ಪ ಒಳ್ಳೆಯ ಕೆಲಸವನ್ನು ಮಾಡಬೇಕು. ಆದರೆ ಆತನ ವಿರುದ್ದ ತುಂಬಾ ದೂರುಗಳು ಕೇಳಿ ಬರುತ್ತಿವೆ. ಆಸ್ಪತ್ರೆಗೆ ಹೋಗಿ ವೈದ್ಯರು ಗಳಿಗೆ…
ಲೇಖಕ: admin
ಮಡಿಕೇರಿ ಜ.10 : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿಯಿರುವ ಸಶಸ್ತ್ರ ಪೊಲೀಸ್ ಕಾನ್ಸ್ ಟೇಬಲ್ ( ಸಿ.ಎ.ಆರ್ & ಡಿ.ಎ.ಆರ್ ) (ಪುರುಷ & ತೃತೀಯ ಲಿಂಗ ಪುರುಷ) 3,064 ಹುದ್ದೆಗಳಿಗೆ ಲಿಖಿತ ಪರೀಕ್ಷೆಯ ಪತ್ರಿಕಾ ಪ್ರಕಟಣೆ.
ಮಡಿಕೇರಿ ಜ.10 : ಪೊನ್ನಂಪೇಟೆ ತಾಲ್ಲೂಕಿನ ಬಾಳೆಲೆ ಹೋಬಳಿಯ ಕೊಟ್ಟಗೇರಿ ಗ್ರಾಮದ ಕಾಫಿ ತೋಟವೊಂದರಲ್ಲಿ ಹುಲಿಯ ಮೃತದೇಹ ಪತ್ತೆಯಾಗಿದೆ. ಅರಣ್ಯ ಅಧಿಕಾರಿಗಳು ಹುಲಿಯ ಮೃತದೇಹ ಪರಿಶೀಲಿಸಿದಾಗ ಬೇರೆ ಪ್ರಾಣಿಗಳೊಂದಿಗೆ ಕಾದಾಡಿರುವ ಗಾಯದ ಗುರುತುಗಳು ಕಂಡು ಬಂದಿದೆ. ಅಂದಾಜು 14 ವರ್ಷದ ಹುಲಿ ನಿತ್ರಾಣದಿಂದ ಸಾವನ್ನಪ್ಪಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ತೋಟದ ಮಾಲೀಕರು ಮಾಹಿತಿ ನೀಡಿದ ಹಿನ್ನೆಲೆ ತಿತಿಮತಿ ಎಸಿಎಫ್ ಗೋಪಾಲ್, ಪೊನ್ನಂಪೇಟೆ ಆರ್‌ಎಫ್‌ಓ ಶಂಕರಪ್ಪ, ಡಿಆರ್‌ಎಫ್‌ಓ ದಿವಾಕರ್, ತಿತಿಮತಿ ವಲಯದ ಡಿಆರ್‌ಎಫ್‌ಓ ರವಿಕಿರಣ್, ಚೇತನ್, ಕಲ್ಲಳ್ಳ ವಿಭಾಗದ ಅರಣ್ಯ ಇಲಾಖೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಹುಲಿಯ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಮಡಿಕೇರಿ ಜ.10 : ತಾಂತ್ರಿಕ ಮತ್ತು ತಾಂತ್ರಿಕೇತರ ಕ್ಷೇತ್ರದಲ್ಲಿ ಅಗ್ನಿಪತ್ ಯೋಜನೆಯ ಅಡಿಯಲ್ಲಿ ಭಾರತೀಯ ವಾಯುಸೇನೆಯಲ್ಲಿ ಅಗ್ನಿವೀರ್ ವಾಯು ಹುದ್ದೆಯಲ್ಲಿ ಸೇವೆ ಸಲ್ಲಿಸಲು 2025 ಜನವರಿಯಲ್ಲಿ ನಡೆಯುವ ಆನ್‍ಲೈನ್ ಪರೀಕ್ಷೆಗೆ ಪೂರ್ವ ನೋಂದಣಿ ಪ್ರಕ್ರಿಯೆಯು ಪ್ರಾರಂಭವಾಗಿದ್ದು, ಆಸಕ್ತರು ಜನವರಿ, 17 ರಿಂದ ಫೆಬ್ರವರಿ, 6 ರೊಳಗೆ ವೆಬ್‍ಸೈಟ್ http://agnipathvayu.cdac.in ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಅರ್ಜಿ ಸಲ್ಲಿಸಲು 17 1/2 ವರ್ಷದಿಂದ 21 ವರ್ಷ ವಯಸ್ಸಿನವರು ಮತ್ತು ಪಿಯುಸಿ/ ತತ್ಸಮಾನ ಪರೀಕ್ಷೆಯಲ್ಲಿ ಕಲಾ, ವಾಣಿಜ್ಯ, ವಿಜ್ಞಾನ ಮತ್ತು ಯಾವುದೇ ವಿಷಯದಲ್ಲಿ ಡಿಪ್ಲೊಮಾ ವಿಭಾಗದಲ್ಲಿ ಶೇ.50 ಅಂಕಗಳೊಂದಿಗೆ ಹಾಗೂ ಇಂಗ್ಲೀಷ್ ಪರೀಕ್ಷೆಯಲ್ಲಿ ಶೇ.50 ರೊಂದಿಗೆ ತೇರ್ಗಡೆ ಹೊಂದಿರಬೇಕು. ಹೆಚ್ಚಿನ ಮಾಹಿತಿಗೆ ಉದ್ಯೋಗಾಧಿಕಾರಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಮಡಿಕೇರಿ ಇವರನ್ನು ಖುದ್ದಾಗಿ ಅಥವಾ ದೂ.ಸಂ. 08272-225851 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಉಮಾ ಅವರು ತಿಳಿಸಿದ್ದಾರೆ.
ಮಡಿಕೇರಿ ಜ.10 : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಪರಿಶಿಷ್ಟ ಜಾತಿಯ ಯುವಕರಿಗೆ ಸ್ವಯಂ ಉದ್ಯೋಗ ಒದಗಿಸಿಕೊಡುವ ನಿಟ್ಟಿನಲ್ಲಿ ತರಬೇತಿ ಶಿಬಿರ ಏರ್ಪಡಿಸಲಾಗಿದೆ. ಜ.24 ರಿಂದ ಫೆ.7 ರವರೆಗೆ ಜಿಮ್/ಫಿಟ್ನೆಸ್ ತರಬೇತಿ ಶಿಬಿರ(15 ದಿನಗಳು), ವಿದ್ಯಾರ್ಹತೆ ದ್ವಿತೀಯ ಪಿಯುಸಿ, 16 ರಿಂದ 30 ವರ್ಷದೊಳಗಿರಬೇಕು. ತರಬೇತಿಯು ಬೆಂಗಳೂರು ವಿದ್ಯಾನಗರ/ ಶ್ರೀಕಂಠೀರವ ಶ್ರೀ ಜಯಪ್ರಕಾಶ ನಾರಾಯಣ ರಾಷ್ಟ್ರೀಯ ಯುವ ತರಬೇತಿ ಕೇಂದ್ರದಲ್ಲಿ ನಡೆಯಲಿದೆ. ಜನವರಿ, 26 ರಿಂದ ಫೆಬ್ರವರಿ, 07 ರವರೆಗೆ ಬ್ಯೂಟೀಷಿಯನ್ ತರಬೇತಿ ಶಿಬಿರ ನಡೆಯಲಿದೆ. ಎಸ್‍ಎಸ್‍ಎಲ್‍ಸಿ (ಪಾಸ್/ಫೇಲ್). 15 ರಿಂದ 29 ವರ್ಷದೊಳಗಿರಬೇಕು. ತರಬೇತಿಯು ಬೆಂಗಳೂರು ಕುಂಬಳಗೋಡು ತರಬೇತಿ ಕೇಂದ್ರದಲ್ಲಿ ನಡೆಯಲಿದೆ. ಜನವರಿ, 27 ರಿಂದ ಫೆಬ್ರವರಿ, 07 ರವರೆಗೆ ವೀಡಿಯೋಗ್ರಫಿ ತರಬೇತಿ ಶಿಬಿರ ನಡೆಯಲಿದೆ. ದ್ವಿತೀಯ ಪಿಯುಸಿ ವಿದ್ಯಾರ್ಹತೆ ಹೊಂದಿರಬೇಕು. 15 ರಿಂದ 29 ವರ್ಷದೊಳಗಿರಬೇಕು. ತರಬೇತಿಯು ಬೆಂಗಳೂರು ಕುಂಬಳಗೋಡು ತರಬೇತಿ ಕೇಂದ್ರದಲ್ಲಿ ನಡೆಯಲಿದೆ. ಜನವರಿ, 31 ರಿಂದ ಫೆಬ್ರವರಿ, 07 ರವರೆಗೆ ನಿರೂಪಣಾ ಮತ್ತು ವಾರ್ತಾ…
ಮಡಿಕೇರಿ ಜ.10 : ಆಹಾರ ಪದಾರ್ಥಗಳ ತಯಾರಕರು, ವ್ಯಾಪಾರ, ವಹಿವಾಟುದಾರರು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ (ಎಫ್‍ಎಸ್‍ಎಸ್‍ಎ) ವತಿಯಿಂದ ಆಹಾರ ನೋಂದಣಿ/ ಪರವಾನಗಿಯನ್ನು ಪಡೆದುಕೊಳ್ಳುವುದು ಕಡ್ಡಾಯವಾಗಿದ್ದು, ಜಿಲ್ಲೆಯಲ್ಲಿ ಬೆರಳೆಣಿಕೆಯಷ್ಟು ಹೋಮ್ ಸ್ಟೇ ಮಾಲೀಕರು ಕಾಯ್ದೆಯಡಿ ನೋಂದಣಿ/ ಪರವಾನಗಿಯನ್ನು ಪಡೆದುಕೊಂಡಿದೆ. ಇಲಾಖೆಯ ನೋಂದಣಿ/ ಪರವಾನಗಿ ಇಲ್ಲದೆ ಅನಧಿಕೃತವಾಗಿ ಹೋಮ್ ಸ್ಟೇಗಳನ್ನು ನಡೆಸುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಕೊಡಗು ಜಿಲ್ಲೆಯು ಪ್ರವಾಸೋದ್ಯಮಕ್ಕೆ ಹೆಸರಾಗಿದ್ದು, ಪ್ರವಾಸಿಗರ ಹಿತದೃಷ್ಟಿ ಗಮನದಲ್ಲಿರಿಸಿಕೊಂಡು ಉತ್ತಮ ಗುಣಮಟ್ಟದ ಹಾಗೂ ಶುಚಿಯಾದ ಆಹಾರ ಪದಾರ್ಥಗಳನ್ನು ನೀಡುವ ಸಲುವಾಗಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ವತಿಯಿಂದ ಎಲ್ಲಾ ಹೋಮ್ ಸ್ಟೇ ನಡೆಸುತ್ತಿರುವವರು ಕಡ್ಡಾಯವಾಗಿ ಆಹಾರ ನೋಂದಣಿ/ ಪರವಾನಗಿಯನ್ನು ಪಡೆದುಕೊಳ್ಳುವಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅಂಕಿತಾಧಿಕಾರಿ ಡಾ.ಅನಿಲ್ ಧಾವನ್ ಇ. ಅವರು ತಿಳಿಸಿದ್ದಾರೆ.
ಮಡಿಕೇರಿ ಜ.10 : ಕೋವಿಡ್ ನಿಯಂತ್ರಣ ಸಂಬಂಧಿಸಿದಂತೆ ಸರ್ಕಾರವು ಕಾಲ ಕಾಲಕ್ಕೆ ಹೊರಡಿಸುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಆ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗೆ ಸೂಚಿಸಿದರು. ಕೋವಿಡ್-19 ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆ ಜಿಲ್ಲೆಯಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ನೇತೃತ್ವದಲ್ಲಿ ವಿಡಿಯೋ ಸಂವಾದ ಮೂಲಕ ಅಧಿಕಾರಿಗಳ ಜೊತೆ ಸಭೆ ನಡೆಯಿತು. ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ಕೋವಿಡ್-19 ನಿಯಂತ್ರಣ ಸಂಬಂಧ ಅಗತ್ಯ ಮುನ್ನೆಚ್ಚರ ವಹಿಸುವಲ್ಲಿ 15 ದಿನಕ್ಕೊಮ್ಮೆ ವಿಡಿಯೋ ಸಂವಾದ ಮೂಲಕ ಸಭೆ ಏರ್ಪಡಿಸುವಂತೆ ಸಲಹೆ ನೀಡಿದರು. ಗಡಿಭಾಗಕ್ಕೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ಅಗತ್ಯ ಪರೀಕ್ಷೆ ನಡೆಸಿ ವರದಿ ಸಲ್ಲಿಸುವುದು, ಆಸ್ಪತ್ರೆಗಳಲ್ಲಿ ಅಗತ್ಯ ಔಷಧೋಪಚಾರಗಳನ್ನು ದಾಸ್ತಾನು ಮಾಡಿಕೊಳ್ಳುವುದು ಸೇರಿದಂತೆ ಕೋವಿಡ್ ನಿಯಂತ್ರಣ ಸಂಬಂಧಿಸಿದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ವೆಂಕಟ್ ರಾಜಾ ಅವರು ಸೂಚಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್…
ಮಡಿಕೇರಿ ಜ.10 : ಕೇರಳದ ಪಯ್ಯವೂರ್ ನಲ್ಲಿ ವರ್ಷಂಪ್ರತಿ ನಡೆಯಲಿರುವ ಊಟ್ ಮಹೋತ್ಸವದ ಪ್ರಯುಕ್ತ ನಾಡ್ ಗೆ ಒಳಪಟ್ಟ ಗ್ರಾಮಸ್ಥರ ವಿಶೇಷ ಸಭೆಯು ಲಕ್ಷ್ಮಿ ಮಹಿಳಾ ಸಮಾಜದಲ್ಲಿ ನಡೆಯಿತು. ಕುಟುಂಬದ ತಕ್ಕಮುಖ್ಯಸ್ಥರಾದ ಮುಂಡಿಯೊಳಂಡ ತಮ್ಮಯ್ಯ ಹಾಗೂ ಬೊವೈರಿಯಂಡ ತಿಮ್ಮಯ್ಯ ಅವರ ನೇತೃತ್ವದಲ್ಲಿ ಸಭೆ ನಡೆಯಿತು. ಗ್ರಾಮಸ್ಥರಾದ ಐತಿಚಂಡ ಬಿಮ್ಮಯ್ಯ, ಅರುಣಾ, ರಾಜೇಶ್ ಅಚ್ಚಯ್ಯ, ಪಟ್ಟಚೆರುವಂಡ ಹರಿ ಮುತ್ತಪ್ಪ, ಜೀವನ್, ಕುಮ್ಮಂಡ ಕಾಯಪ್ಪ ಹಲವು ಕುಂದು ಕೊರೆತೆಗಳ ಬಗ್ಗೆ ಗಮನ ಸೆಳೆದರು. ಈ ಸಂದರ್ಭ ದೇವಸಂ ಬೋರ್ಡ್ ನ ಬಿಜು ಮಾತನಾಡಿ ನಾವು ದೇವಸ್ಥಾನದ ಅಧಿಕಾರ ಸ್ವೀಕರಿಸಿ 4 ತಿಂಗಳುಗಳು ಮಾತ್ರವಾಗಿದ್ದು, ತಮ್ಮ ಅಭಿಪ್ರಾಯ ಸಂಗ್ರಹಿಸದೆ ಯಾವುದೇ ಕಾರ್ಯಕ್ರಮ ಕೈಗೊಳ್ಳುದಿಲ್ಲ ಎಂದರು. ಮುಂದಿನ ದಿನಗಳಲ್ಲಿ ಸರಕಾರದ ಅನುದಾನ ಪಡೆದು ಹಾಗೂ ದಾನಿಗಳಿಂದ ಹಣ ಸಂಗ್ರಹಿಸಿ ಕೊಡಗಿನ ಸ್ಥಾನ(ಗುದ್ದ)ದಲ್ಲಿ ಕಟ್ಟಡ ನಿರ್ಮಿಸಿ ಕೊಡಗಿನಿಂದ ಬರುವ ಯಾತ್ರಾಥಿಗಳಿಗೆ ತಂಗಲು ಅವಕಾಶ ಕಲ್ಪಿಸಲಾಗುವುದೆಂದು ತಿಳಿಸಿದರು. ಟ್ರಸ್ಟಿ ಮುಂಡಿಯೋಳಂಡ ಅಜಿತ್ ಸುಬ್ಬಯ್ಯ ಮಾತನಾಡಿ ಈ ವರ್ಷದ ಊಟ್ ಹಬ್ಬಕ್ಕೆ ಬೇಕಾದ…
ಮಡಿಕೇರಿ ಜ.10 : ಕರ್ನಾಟಕ ಸ್ಟೇಟ್ ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ಮಂಡ್ಯದಲ್ಲಿ ನಡೆದ ಡ್ಯಾನ್ಸ್ ಚಾಂಪಿಯನ್ ಶಿಪ್ ನ ಸಾಮೂಹಿಕ ನೃತ್ಯದಲ್ಲಿ ಎಸ್.ಎಂ.ಎಸ್. ವಿದ್ಯಾಸಂಸ್ಥೆಯ ವಿದ್ಯಾರ್ಥಿ ಕಾಳಿಮಾಡ ಡಿಂಶ ಚಿನ್ನ ಹಾಗೂ ಏಕ ವ್ಯಕ್ತಿ ನೃತ್ಯದಲ್ಲಿ ಬೆಳ್ಳಿಯ ಪದಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾಳೆ. ಇವಳು ನೃತ್ಯ ತರಬೇತುದಾರರಾದ ವಿಷ್ಣು ಅವರಲ್ಲಿ ತರಬೇತಿ ಪಡೆಯುತ್ತಿದ್ದಾಳೆ.
ಚೆಯ್ಯಂಡಾಣೆ ಜ.10 : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಕ್ಕಬ್ಬೆ ಕಾರ್ಯ ಕ್ಷೇತ್ರದ ಸದಸ್ಯರು ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಸ್ವಚ್ಛತಾ ಶ್ರಮದಾನ ನಡೆಸಿದರು. ದೇವಾಲಯದ ಕುಡಿಯುವ ನೀರಿನ ಟ್ಯಾಂಕ್ ಹಾಗೂ ದೇವಾಲಯದ ಆವರಣದ ಸುತ್ತಮುತ್ತಲು ಬೆಳೆದಿದ್ದ ಕುರುಚಲು ಗಿಡಗಂಟಿಗಳನ್ನು ಕಡಿದು ಸುಚಿಗೊಳಿಸಿದರು. ಸ್ವಚ್ಛತಾ ಕಾರ್ಯದಲ್ಲಿ ಒಕ್ಕೂಟದ ಅಧ್ಯಕ್ಷೆ ಸರೋಜಿನಿ, ಮಾಜಿ ಅಧ್ಯಕ್ಷ ಮಣಿ, ಸೇವಾಪ್ರತಿನಿಧಿ ಉಮಾಲಕ್ಷ್ಮಿ, ಸದಸ್ಯರಾದ ಬೋಜಕ್ಕಿ, ವೇಣುಗೋಪಾಲ್, ಸೋಜ, ಶರಿನ್ ಸೇರಿದಂತೆ ಸಂಘದ ಎಲ್ಲಾ ಸದಸ್ಯರು ಪಾಲ್ಗೊಂಡಿದ್ದರು. ವರದಿ : ಅಶ್ರಫ್






