ಲೇಖಕ: admin

ಕುಶಾಲನಗರ ಜ.10 : ಶಿಕ್ಷಕರು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಹಾಗೂ ಮಕ್ಕಳ ಕಲಿಕಾಮಟ್ಟವನ್ನು ಉತ್ತಮಪಡಿಸುವ ಮೂಲಕ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷಾ ಫಲಿತಾಂಶವನ್ನು ಉತ್ತಮಪಡಿಸಲು ಹೆಚ್ಚಿನ ಕ್ರಮ ವಹಿಸಬೇಕು ಎಂದು ಸೋಮವಾರಪೇಟೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಭಾಗ್ಯಮ್ಮ ಹೇಳಿದರು. ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಹಾಗೂ ಸೋಮವಾರಪೇಟೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ಕುಶಾಲನಗರ ಜ್ಞಾನ ಭಾರತಿ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷಾ ಫಲಿತಾಂಶವನ್ನು ಉತ್ತಮಪಡಿಸುವ ಸಂಬಂಧ ಹಾಗೂ ಪ್ರೌಢಶಾಲಾ ಶೈಕ್ಷಣಿಕ ಚಟುವಟಿಕೆಗಳ ಅವಲೋಕನ ಕುರಿತು ಸರಕಾರಿ, ಅನುದಾನಿತ ಹಾಗೂ ಅನುದಾನರಹಿತ ತಾಲ್ಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಭೆಯಲ್ಲಿ ಶೈಕ್ಷಣಿಕ ಮಾಹಿತಿ ನೀಡಿದರು. ತಾಲ್ಲೂಕಿನ ಪ್ರೌಢಶಾಲೆಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ಪರೀಕ್ಷೆಯ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಪ್ರೌಢಶಾಲಾ ಎಲ್ಲಾ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವೃಂದ ತಮ್ಮ ಶಾಲೆಗಳು ಪ್ರಸಕ್ತ ವರ್ಷದಲ್ಲಿ ಶೇ.100 ಫಲಿತಾಂಶ ಪಡೆಯಲು ಶ್ರಮಿಸಬೇಕು ಎಂದರು. ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳಿಗೆ ವಿಶೇಷ ಆದ್ಯತೆ…

Read More

ಚೆಯ್ಯಂಡಾಣೆ ಜ 10 : ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ನಾಪೋಕ್ಲು ವಿರಾಜಪೇಟೆ ಮುಖ್ಯರಸ್ತೆಯ ಕೈಕಾಡು ಗ್ರಾಮದ ರಸ್ತೆಯ ತಿರುವಿನಲ್ಲಿ  ನಡೆದಿದೆ. ನಾಪೋಕ್ಲುವಿನ ನಾಲ್ವರು ಪ್ರಯಾಣಿಸುತ್ತಿದ್ದ  ಕಾರು ವಿರಾಜಪೇಟೆ ಕಡೆಯಿಂದ ನಾಪೋಕ್ಲುವಿಗೆ ಬರುತ್ತಿದ್ದಾಗ ವಿರಾಜಪೇಟೆ ನಾಪೋಕ್ಲು ಮುಖ್ಯರಸ್ತೆಯ ಕೈಕಾಡು ಗ್ರಾಮದ ಸೇತುವೆ ಬಳಿಯ ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಅಪ್ಪಳಿಸಿದೆ.  ಕಾರಿನ ಒಂದು ಭಾಗ ಜಖಂಗೊಂಡಿದ್ದು, ಅದೃಷ್ಟವಶಾತ್  ಕಾರಿನಲ್ಲಿದ್ದ 4 ಜನ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವರದಿ : ಅಶ್ರಫ್

Read More

ಮಡಿಕೇರಿ ಜ.10 :  ಸೋಮವಾರಪೇಟೆ ತಾಲೂಕಿನ ತಾಕೇರಿ ಗ್ರಾಮದಲ್ಲಿ ಅಯೋಧ್ಯೆ ಶ್ರೀ ರಾಮ ಮಂದಿರದ ಪವಿತ್ರ ಮಂತ್ರಾಕ್ಷತೆಯನ್ನು ಮನೆಗಳಿಗೆ ವಿತರಿಸಲಾಯಿತು. ಜಿ.ಪಂ‌ ಮಾಜಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ವಿನಯ್, ಎಂ.ಕೆ. ಕೌಶಿಕ್, ಎಂ.ಕೆ. ಭರತ್, ಎ.ಇ. ಸುರೇಶ್, ದಿಲೀಪ್, ಸಂಜಯ್ ಇತರರು ಇದ್ದರು.

Read More

ಮಡಿಕೇರಿ ಜ.10 : ಮಡಿಕೇರಿ ಟೌನ್ ಸಹಕಾರ ಬ್ಯಾಂಕ್ ಅಧ್ಯಕ್ಷರಾಗಿ ಸತೀಶ್ ಪೈ ಹಾಗೂ ಉಪಾಧ್ಯಕ್ಷರಾಗಿ ಕೆ.ಆರ್.ನಾಗೇಶ್ ಆಯ್ಕೆಯಾಗಿದ್ದಾರೆ. ಇಂದು ಬ್ಯಾಂಕ್ ಸಭಾಂಗಣದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಇಬ್ಬರು ಅವಿರೋಧವಾಗಿ ಆಯ್ಕೆಯಾದರು. ಇತ್ತೀಚೆಗೆ ನಡೆದ ನಿರ್ದೇಶಕರ ಆಯ್ಕೆ ಚುನಾವಣೆ ಸಂದರ್ಭ ಬಿಜೆಪಿ ಬೆಂಬಲಿತರು ಬಹುಮತ ಪಡೆದಿದ್ದರು.

Read More

ಮಡಿಕೇರಿ ಜ.10  : ಮಡಿಕೇರಿಯ ಕೊಡಗು ವಿದ್ಯಾಲಯದ 7ನೇ ತರಗತಿ ತರಗತಿ ವಿದ್ಯಾಥಿ೯ಗಳು ರಾಜ್ಯಮಟ್ಟದ ರಾಷ್ಟ್ರೀಯ ವಿಜ್ಞಾನ ಸಮಾವೇಶಕ್ಕೆಆಯ್ಕೆಯಾಗಿದ್ದು, ಜೇನುನೊಣಗಳ ಸಂರಕ್ಷಣೆಗೆ ಸಂಬಂಧಿತ ಪ್ರಬಂಧ ಮಂಡಿಸುತ್ತಿದ್ದಾರೆ. ಕೊಡಗು ವಿದ್ಯಾಲಯದ ವಿಜ್ಞಾನ ಶಿಕ್ಷಕಿ ಎಮ್. ಎಸ್.ಶೃತಿ ಅವರ ಮಾಗ೯ದಶ೯ನದಲ್ಲಿ ವಿದ್ಯಾಥಿ೯ಗಳಾದ ಶ್ರೇಯ ಕಿರಣ್ ಮತ್ತು ಶ್ಲೋಕ್ಸಿ. ಸಂಶೋಧನಾತ್ಮಕ ಪ್ರಬಂಧವನ್ನು ಜೇನುನೊಣ ಕುರಿತಂತೆ ಮಂಡಿಸಲಿದ್ದಾರೆ. ಕೊಡಗು ಕೃಷಿ ಪ್ರಧಾನ ಜಿಲ್ಲೆಯಾಗಿದೆ. ಜೀವಸಂಕುಲದಲ್ಲಿ ಎರೆಹುಳು ಕೃಷಿಯಲ್ಲಿ ರೈತನ ಮಿತ್ರನಾಗಿರುವಂತೆ ಕೀಟಗಳ ಗುಂಪಿಗೆ ಸೇರುವ ಜೇನುಹುಳುವಿನದೂ ಕೃಷಿಯಲ್ಲಿ ವಿಶಿಷ್ಟ ಪಾತ್ರವಿದೆ. ಪರಾಗ ಪ್ರಕ್ರಿಯೆಯ ಮೂಲಕ ತಮ್ಮ ಆಹಾರವನ್ನು ಪಡೆದುಕೊಳ್ಳುವ ಶ್ರಮದಲ್ಲಿ ರೈತ ಬೆಳೆಯುವ ಆಹಾರ ಬೆಳೆಗಳ ಇಳುವರಿಯನ್ನು ಹೆಚ್ಚಿಸುವ ಕಾಯ೯ ಜೇನುಹುಳುವಿನಿಂದ ಆಗುತ್ತದೆ. ಆಯುವೇ೯ದ, ನಾಟಿ ಔಷಧಿಗಳಲ್ಲಿ ಜೇನಿನದು ಪ್ರಮುಖ ಪಾತ್ರವಾಗಿದೆ. ಆಹಾರಕ್ರಮ, ಸೌಂದಯ೯ವಧ೯ಕಗಳಲ್ಲಿಯೂ ಜೇನು ಬಹು ಉಪಯೋಗಗಳನ್ನು ಹೊಂದಿದೆ. ಜೇನು ಹುಳುಗಳು ಪರಿಸರ ಸಮತೋಲನದಲ್ಲಿಯೂ ಪ್ರಧಾನ ಪಾತ್ರವಹಿಸುತ್ತದೆ. ಕೊಡಗು ಜಿಲ್ಲೆಯ ಮೂಲಬೆಳೆಗಳು, ಕಾಫಿ ಹಾಗೂ ಕರಿಮೆಣಸು. ಇವುಗಳ ಇಳುವರಿಯನ್ನು ಹೆಚ್ಚಿಸುವಲ್ಲಿ ಜೇನುಹುಳುಗಳ ಸೇವೆ ಹಾಗೂ ಕೊಡಗು…

Read More

ಮಡಿಕೇರಿ ಜ.10 : ನಗರದ ಕೊಡಗು ವಿದ್ಯಾಲಯದ ವಿಶೇಷ ಚೇತನ ಶಾಲೆಗೆ ಮಡಿಕೇರಿಯ ಇನ್ನರ್ ವೀಲ್ ಸಂಸ್ಥೆ ವತಿಯಿಂದ ಎರಡು ವೀಲ್ ಚೇರ್ ಗಳನ್ನು ಕೊಡುಗೆಯಾಗಿ ನೀಡಲಾಯಿತು. ಇನ್ನರ್ ವೀಲ್ ಸಂಸ್ಥೆಯ ಅಧ್ಯಕ್ಷೆ ಕನ್ನು ದೇವರಾಜ್, ಕಾಯ೯ದಶಿ೯ ದಿವ್ಯ ಮುತ್ತಣ್ಣ, ಉಪಾಧ್ಯಕ್ಷೆ ಲತಾ ಚಂಗಪ್ಪ, ಸದಸ್ಯೆಯರಾದ ಲತಾ ಸುಬ್ಬಯ್ಯ, ಗುಲಾಬಿ ಜನಾಧ೯ನ್, ಆಗ್ನೇಸ್ ಮುತ್ತಣ್ಣ, ಕೊಡಗು ವಿದ್ಯಾಲಯದ ವಿಶೇಷ ಚೇತನ ಮಕ್ಕಳ ಶಾಲೆಯ ವ್ಯವಸ್ಥಾಪಕ ನಿದೇ೯ಶಕಿ ವೀಣಾ ಚಂಗಪ್ಪ, ಟ್ರಸ್ಟಿಗಳಾದ ಮೀನಾ ಕಾಯ೯ಪ್ಪ, ಪ್ರಾಂಶುಪಾಲರಾದ ಗೀತಾ ಶ್ರೀಧರ್ ಹಾಜರಿದ್ದರು.

Read More

ನಾಪೋಕ್ಲು ಜ.10 : ಎಸ್ ಎಸ್ ಎಲ್ ಸಿ ಫಲಿತಾಂಶ ಉತ್ತಮ ಪಡಿಸಲು ಶಿಕ್ಷಕರು ವಿಶೇಷ ಶ್ರಮ ವಹಿಸಬೇಕು ಎಂದು ಮಡಿಕೇರಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ ಹೇಳಿದರು. ಮೂರ್ನಾಡಿನ ಪ್ರೌಢಶಾಲೆಯಲ್ಲಿ ನಡೆದ ಪ್ರೌಢಶಾಲಾ ಶಿಕ್ಷಕರ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶವನ್ನು ಉತ್ತಮಪಡಿಸಲು ಹತ್ತು ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ ನಿವಾರಣೆಗೆ ಸಂಬಂಧಿಸಿದಂತೆ ತಾಯಂದಿರ ಸಭೆ, ವಿಷಯ ಶಿಕ್ಷಕರ ಕಾರ್ಯಾಗಾರವನ್ನು ಹಮ್ಮಿಕೊಂಡು ಉತ್ತಮ ಫಲಿತಾಂಶ ತರಲು ಶ್ರಮಿಸಲಾಗುತ್ತಿದೆ ಎಂದರು. ವಿದ್ಯಾರ್ಥಿಗಳು ಪರೀಕ್ಷೆಯನ್ನು ಸಂತಸದಿಂದ ಬರೆಯುವಂತಾಗಬೇಕು. ಅದಕ್ಕಾಗಿ ಪೂರ್ವ ತಯಾರಿ ಅಗತ್ಯ. ಶಿಕ್ಷಕರು ಫಲಿತಾಂಶ ಸುಧಾರಣೆಗೆ ವಿನೂತನ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರ ಮೂಲಕ ವಿಶೇಷ ಪ್ರಯತ್ನ ವಹಿಸಬೇಕು. ಮಕ್ಕಳಿಗೆ ಪಾಸಿಂಗ್ ಪ್ಯಾಕೇಜ್ ಹಾಗೂ ಸ್ಕೋರಿಂಗ್ ಪ್ಯಾಕೇಜ್ ಗಳನ್ನು ಪರಿಚಯ ಮಾಡಿಸಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಲು ಪ್ರೇರೇಪಿಸಬೇಕು ಎಂದರು. ಮೂರ್ನಾಡು ಪ್ರೌಢಶಾಲಾ ಮುಖ್ಯ ಶಿಕ್ಷಕಿ ರಶ್ಮಿ ಮಾತನಾಡಿ, ಕಾರ್ಯಾಗಾರದ ಪ್ರಯೋಜನವನ್ನು ಎಲ್ಲಾ ಶಿಕ್ಷಕರು…

Read More

ಮಡಿಕೇರಿ ಜ.10 : ಧ್ಯಾನ ಮನುಷ್ಯನ ಮಾನಸಿಕ ವಿಕಸನ ಮತ್ತು ಜ್ಞಾನ ವೃದ್ಧಿಗೆ ಸಹಕಾರಿಯಾಗಿದೆ ಎಂದು ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ ಅಭಿಪ್ರಾಯಪಟ್ಟಿದ್ದಾರೆ. ರಾಮನಗರ ಪಿರಮಿಡ್ ಧ್ಯಾನ ಮಂದಿರ ಹಾಗೂ ವಿವಿಧ ಜಿಲ್ಲೆಗಳ ಪಿರಮಿಡ್ ಕೇಂದ್ರಗಳ ಪಿರಮಿಡ್ ಮಾಸ್ಟರ್ಸ್‍ಗಳಿಂದ ಮಡಿಕೇರಿಯ ಓಂಕಾರ ಸದನದಲ್ಲಿ ನಡೆದ “ಅನಾಪಾನಸತಿ ಧ್ಯಾನ” ಉಚಿತ ಧ್ಯಾನ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಧ್ಯಾನದಿಂದ ಮನುಷ್ಯನಿಗೆ ಅನೇಕ ಪ್ರಯೋಜನಗಳಿವೆ, ಈ ರೀತಿಯ ಧ್ಯಾನ ಶಿಬಿರಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಮಾನಸಿಕವಾಗಿ ವಿಕಸನ ಹೊಂದಬೇಕು ಎಂದು ಧ್ಯಾನ ಪ್ರಕಾರಗಳ ಕುರಿತು ವಿವರಿಸಿದರು. ಶಿಬಿರದ ಸಂಯೋಜಕ, ಅರಣ್ಯ ಇಲಾಖೆಯ ನಿವೃತ್ತ ಉದ್ಯೋಗಿ ಹೆಚ್.ಎಂ.ಕೃಷ್ಣ ಅವರು ಮಾತನಾಡಿ, ನಗರದ ಪ್ರತಿಯೊಬ್ಬರು ಧ್ಯಾನದಿಂದ ಪ್ರಯೋಜನ ಪಡೆಯಲಿ ಎಂದು ಈ ಶಿಬಿರವನ್ನು ಆಯೋಜಿಸಿದ್ದೇವೆ. ಆದರೆ ನಿರೀಕ್ಷಿಸಿದಷ್ಟು ಸಂಖ್ಯೆಯಲ್ಲಿ ಜನರು ಬರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಕಳೆದ ಒಂದು ವರ್ಷದಿಂದ “ಅನಾಪಾನಸತಿ ಧ್ಯಾನದ ಸತ್ಯತೆಯನ್ನು ಪಿಎಂಸಿ ವಾಹಿನಿಯಿಂದ ದೃಢಪಡಿಸಿಕೊಂಡು ನಗರದ ಮನೆ ಮನೆಗಳಿಗೆ ತೆರಳಿ…

Read More

ನಾಪೋಕ್ಲು ಜ.10 : ನಾಪೋಕ್ಲು ನಾಡ್ ಕೊಡವ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಆಡಳಿತ ಮಂಡಳಿಯ 2023-24ನೇ ಸಾಲಿನ ಅಧ್ಯಕ್ಷರಾಗಿ ಅಪ್ಪಾರಂಡ.ಎಸ್.ಅಯ್ಯಪ್ಪ ಹಾಗೂ ಉಪಾಧ್ಯರಾಗಿ ಮಾಳೆಯಂಡ ಎ. ಅಯ್ಯಪ್ಪ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಬಿದ್ದಾಟಂಡ.ಎ.ರಮೇಶ್ ಚಂಗಪ್ಪ, ಚೇನಂಡ ಈ.ಗಿರೀಶ್ ಪೂಣಚ್ಚ, ಮೂವೇರ ರೇಖಾ ಪ್ರಕಾಶ್, ಕೋಟೇರ ನೈಲಾ ಚಂಗಪ್ಪ, ಅರೇಯಡ.ಎಂ.ಅಶೋಕ್, ಬೋಳ್ಯಂಡ.ಪಿ.ಹರೀಶ್ ಕಾರ್ಯಪ್ಪ, ಚೋಕಿರ.ಎಸ್.ಸಜಿತ್ ಚಿಣ್ಣಪ್ಪ, ಕುಂಡ್ಯೋಳಂಡ.ಸಿ.ವಿಶು ಪೂವಯ್ಯ, ಕುಲ್ಲೇಟ್ಟಿರ.ಎಂ.ದೇವಯ್ಯ, ಕನ್ನಂಬೀರ.ಸಿ.ತಿಮ್ಮಯ್ಯ, ಕಾಟುಮಣಿಯಂಡ.ಎಂ.ಉಮೇಶ್ ಆಯ್ಕೆಯಾದರು. ಇತ್ತೀಚೆಗೆ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ವಿರಾಜಪೇಟೆಯ ರಿಟರ್ನಿಂಗ್ ಆಫೀಸರ್ ಸಹಕಾರ ಸಂಘಗಳ ಸಹಾಯಕ ನಿರ್ದೇಶಕರು (ಅಧಿಕ ಪ್ರಭಾರ) ಜೆ.ಮಾಲತಿ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ಎಲ್ಲರಿಗೂ ಶುಭ ಹಾರೈಸಿದರು. ವರದಿ : ದುಗ್ಗಳ ಸದಾನಂದ 

Read More

ನಾಪೋಕ್ಲು ಜ.10 : ನರಿಯಂದಡ ಗ್ರಾ.ಪಂ ವ್ಯಾಪ್ತಿಯ ಚೇಲಾವರ ಗ್ರಾಮದಲ್ಲಿ ಕಾಡಾನೆಗಳ ಉಪಟಳದಿಂದ ಗ್ರಾಮಸ್ಥರು ಪರದಾಡುವಂತಾಗಿದೆ. ಪ್ರತಿದಿನ ಕಾಫಿಯ ತೋಟಗಳಿಗೆ ಲಗ್ಗೆ ಇಡುತ್ತಿರುವ ಕಾಡಾನೆಗಳು ಕಾಫಿಯ ರೆಂಬೆಗಳನ್ನು ಮುರಿದು ನಷ್ಟಪಡಿಸುತ್ತಿರುವುದಲ್ಲದೇ ತೆಂಗು, ಅಡಿಕೆ , ಬಾಳೆ ಮತ್ತಿತರ ಕೃಷಿ ಯನ್ನು ನಾಶಪಡಿಸುತ್ತಿವೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಗ್ರಾಮ ವ್ಯಾಪ್ತಿಯ ಕಾಫಿ ಬೆಳೆಗಾರರಾದ ಮನೆಯಪಂಡ ಧೀರಜ್ ತಿಮ್ಮಯ್ಯ , ಕುಟ್ಟನ ಶಶಿ ಹಾಗೂ ಕುಟ್ಟನ ಪೂವಯ್ಯ ಅವರ ತೋಟಗಳಿಗೆ ನುಗ್ಗಿದ ಕಾಡಾನೆಗಳು ಅಪಾರ ಪ್ರಮಾಣದ ನಷ್ಟವನ್ನು ಉಂಟು ಮಾಡಿವೆ. ಕಾಡಾನೆಗಳ ಸಂಚಾರದಿಂದ ಜನಸಾಮಾನ್ಯರು ಸಂಚರಿಸಲು ಭಯಪಡುವಂತಾಗಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಸಮಸ್ಯೆಯನ್ನು ಎದುರಿಸುತ್ತಿದ್ದು, ಕಾಡಾನೆಗಳ ಹಾವಳಿಯನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ವರದಿ : ದುಗ್ಗಳ ಸದಾನಂದ 

Read More