ಮಡಿಕೇರಿ ಜ.1 : ಚಿನ್ನ, ಬೆಳ್ಳಿ ವರ್ತಕರು ಹಾಗೂ ಕೆಲಸಗಾರರ ಸಂಘದ ಮಹಾಸಭೆ ಜ.3 ರಂದು ಸಂಘದ ಅಧ್ಯಕ್ಷ ಪ್ರಶಾಂತ್ ವರ್ಣೇಕರ್ ಅವರ ಅಧ್ಯಕ್ಷತೆಯಲ್ಲಿ ನಗರದ ಶೇಖರ್ ಕಾಂಪ್ಲೆಕ್ಸ್ ನಲ್ಲಿ ನಡೆಯಲಿದೆ.
ಮಹಾಸಭೆಯ ಕಾರಣದಿಂದ ಅಂದು ಮಧ್ಯಾಹ್ನ 3 ಗಂಟೆಯ ನಂತರ ಯಾವುದೇ ಚಿನ್ನಾಭರಣ ಮಳಿಗೆಗಳಲ್ಲಿ ವ್ಯಾಪಾರ ವಹಿವಾಟು ಇರುವುದಿಲ್ಲ. ಸಾರ್ವಜನಿಕರು ಸಹಕರಿಸಬೇಕೆಂದು ಸಂಘದ ಪ್ರಕಟಣೆ ಮನವಿ ಮಾಡಿದೆ.












