ಮಡಿಕೇರಿ ಜ.1 : ರಾಷ್ಟ್ರಮಟ್ಟದ ಅಥ್ಲೆಟಿಕ್ಸ್’ಗೆ ಆಯ್ಕೆಯಾಗಿರುವ ಸ್ನೇಹಾಳಿಗೆ ಜೆಸಿಐ ಸೋಮವಾರಪೇಟೆ ಪುಷ್ಪಗಿರಿ ಸಂಸ್ಥೆಯಿಂದ 10 ಸಾವಿರ ರೂ. ಆರ್ಥಿಕ ನೆರವು ನೀಡಲಾಯಿತು.
ಜ.8 ರಂದು ಅಸ್ಸಾಂನ ಕಾಮರೂಪ್’ನಲ್ಲಿ ನಡೆಯಲಿರುವ 57ನೇ ನ್ಯಾಷನಲ್ ಕ್ರಾಸ್ ಕಂಟ್ರಿ ಅಥ್ಲೆಟಿಕ್ಸ್ ಚಾಂಪಿಯನ್ ಶಿಫ್’ಗೆ ಆಯ್ಕೆಯಾಗಿರುವ ಸ್ನೇಹಾಳಿಗೆ ನೆರವು ಕೋರಿ ಸ್ನೇಹಾಳ ಪೋಷಕರು ಜೆಸಿಐ ಅಧ್ಯಕ್ಷರಲ್ಲಿ ಮನವಿ ಮಾಡಿಕೊಂಡಿದ್ದರು.
ಜೆಸಿಐ ಸದಸ್ಯರಿಂದ ಸಂಗ್ರಹವಾದ ನಗದನ್ನು ಸೋಮವಾರಪೇಟೆಯ ಪತ್ರಿಕಾ ಭವನದಲ್ಲಿ ಅಧ್ಯಕ್ಷೆ ರುಬೀನಾ ಎಂ.ಎ ಹಸ್ತಾಂತರಿಸಿದರು. ನಂತರ ಸ್ನೇಹಾಳನ್ನು ಸನ್ಮಾನಿಸಿ ಗೌರವಿಸಲಾಯಿತು.
ನಿಕಟ ಪೂರ್ವ ಅಧ್ಯಕ್ಷೆ ಮಾಯಾಗಿರೀಶ್, ಕಾರ್ಯದರ್ಶಿ ಜಗದಾಂಭ ಗುರುಪ್ರಸಾದ್, ಲೇಡಿ ಜೇಸಿ ಚೇರ್ ಪರ್ಸನ್ ಪವಿತ್ರ ಲಕ್ಷ್ಮಿ ಕುಮಾರ್, ಜೆಸಿ ಚೇರ್ ಪರ್ಸನ್ ರಿಶಾ ಎಸ್ ಎ, ಪ್ರಕಾಶ್ ಕೆ ಎ, ಪುರುಷೋತ್ತಮ್, ನಾಗರಾಜು, ಪೃಥ್ವಿ ಗೌಡ, ಗಿರೀಶ್, ಮನೋಹರ್, ಸುದೀಪ್, ಕೃಷ್ಣ ಮೂರ್ತಿ, ರಾಜೇಶ್, ಕಸ್ತೂರಿ, ಜ್ಯೋತಿ, ಸ್ನೇಹ ಪೋಷಕರು ಮಹೇಶ್ ಮಂಜುಳಾ ಮತ್ತು ಜೆಸಿ ಪದಾಧಿಕಾರಿಗಳು ಉಪಸ್ಥಿತರಿದ್ದರು.












