ಮಡಿಕೇರಿ ಜ.3 : ಮೈಸೂರಿನ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ತಜ್ಞ ವೈದ್ಯರು ಜ.4 ರಂದು ಕೊಡಗಿನಲ್ಲಿ ಲಭ್ಯ ಇರಲಿದ್ದಾರೆ.
ಗ್ಯಾಸ್ಟ್ರೋಎಂಟೆರಾಲಜಿ ಮತ್ತು ಹೆಪಟಾಲಜಿ ತಜ್ಞ ಡಾ. ದೇವರಾಜ ಆರ್. ಬೆಳಿಗ್ಗೆ 10 ರಿಂದ ಮಧ್ಯಾಹ್ನ 12ರ ವರೆಗೆ ಹಾಗೂ ಮಧ್ಯಾಹ್ನ 2.30 ರಿಂದ 4ರ ವರೆಗೆ ವಿರಾಜಪೇಟೆಯ ಕೂರ್ಗ್ ಡಯಾಗ್ನೋಸ್ಟಿಕ್ ಸೆಂಟರ್ ಹಾಗೂ ಮಧ್ಯಾಹ್ನ 12.30 ರಿಂದ ಮಧ್ಯಾಹ್ನ 2ರ ವರೆಗೆ ನಾರಾಯಣ ಮೆಡಿಕಲ್ ಸೆಂಟರ್ (ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಡೆಂಟರ್ ಸೈನ್ಸ್) ನಲ್ಲಿ ದೊರೆಯಲಿದ್ದಾರೆ.
ಕರುಳಿನ ಕಾಯಿಲೆಗಳು, ಕಾಮಲೆ, ವಾಂತಿಯಲ್ಲಿ ರಕ್ತ, ಗುದನಾಳದ ರಕ್ತಸ್ರಾವ, ಎದೆಯುರಿ, ಡೆಸ್ಫೇಜಿಯಾ, ಜೀರ್ಣಾಂಗದ ಸಮಸ್ಯೆಗಳು, ಪಿತ್ತಕೋಶ ಮತ್ತು ಪ್ಯಾಂಕ್ರಿಯಾಟಿಕ್ ಅಸ್ವಸ್ಥತೆಗಳ ತಪಾಸಣೆ ನಡೆಸಲಿದ್ದಾರೆ. ನೋಂದಣಿಗಾಗಿ 8884458890, 9513408004, 8197623892 ಸಂಪರ್ಕಿಸಬಹುದಾಗಿದೆ.
ಪ್ರಸೂತಿ ಮತ್ತು ಸ್ತ್ರೀ ರೋಗ : ಮೆಡಿಪ್ಲೆಕ್ಸ್ ಡಯಾಗ್ನೋಸ್ಟಿಕ್ ಸೆಂಟರ್ ಸಹಯೋಗದಲ್ಲಿ ಕುಶಾಲನಗರದ ನಾರಾಯಣ ಡಯಾಗ್ನೋಸ್ಟಿಕ್ ಸೆಂಟರ್‍ನಲ್ಲಿ ಪ್ರಸೂತಿ ಮತ್ತು ಸ್ತ್ರೀ ರೋಗ ತಪಾಸಣೆ ನಡೆಯಲಿದ್ದು, ಮಧ್ಯಾಹ್ನ 2 ಗಂಟೆಯಿಂದ 4 ಗಂಟೆ ವರೆಗೆ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಡಾ.ಆರತಿ ಸಂತೋಷ್ ತಪಾಸಣೆ ನಡೆಸಲಿದ್ದಾರೆ.
ಪ್ರಸೂತಿಯ ತುರ್ತು ಸ್ಥಿತಿಗಳು, ಕಿಬ್ಬೊಟ್ಟೆಯ ಗರ್ಭಕಂಠದ ತೊಂದರೆ, ಬಂಜೆತನ ನಿರ್ವಹಣೆ, ಟ್ಯೂಬೆಕ್ಟಮಿ (ಅಬ್ಡೋಮಿನಲ್/ಲ್ಯಾಪರೋಸ್ಕೋಪಿಕ್), ಮೈಯೋಮೆಕ್ಟಮಿ (ಕೊಬ್ಬಟ್ಟೆಯ ಮತ್ತು ಲ್ಯಾಪತೋಸ್ಕೋಪಿಕ್) ಹೆಚ್ಚಿನ ಅಪಾಯದ ಗರ್ಭಧಾರಣೆ, ಶಸ್ತ್ರಚಿಕಿತ್ಸಾ ಹೆರಿಗೆ, ಹಿಸ್ಟರೋಸ್ಕೋಪಿ, ಗರ್ಭಕಂಠದ ಲ್ಯಾಪರೋಸ್ಕೋಪಿಕ್ ವಿಧಾನದ ತಪಾಸಣೆ ನಡೆಸಲಿದ್ದಾರೆ. ನೋಂದಣಿಗಾಗಿ 9513408004, 8904258788 ಸಂಪರ್ಕಿಸಬಹುದಾಗಿದೆ.
ನರರೋಗ ತಪಾಸಣೆ : ಗೋಣಿಕೊಪ್ಪಲಿನ ಆತೂರು ಗ್ರಾಮದ ಲೋಪಮುದ್ರ ಮೆಡಿಕಲ್ ಸೆಂಟರ್‍ನಲ್ಲಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಹಾಗೂ ವಿರಾಜಪೇಟೆ, ಮಗ್ಗುಲ ನಾರಾಯಣ ಮೆಡಿಕಲ್ ಸೆಂಟರ್‍ನಲ್ಲಿ ಮಧ್ಯಾಹ್ನ12.30 ರಿಂದ ಮಧ್ಯಾಹ್ನ 1.30ರವರೆಗೆ ಮತ್ತು ಮಧ್ಯಾಹ್ನ 2 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮಡಿಕೇರಿಯ ನಾರಾಯಣ ಸೂಪರ್ ಸ್ಪೆಷಾಲಿಟಿ ಒಡಿಪಿ ಕೇಂದ್ರ (ರವಿ ಆರ್ಥೋಪೆಡಿಕ್ ಸೆಂಟರ್) ನಲ್ಲಿ ನರರೋಗ ತಜ್ಞ ಡಾ.ಮೊಹಮ್ಮದ್ ಅತಾವುಲ್ಲಾ ಷರೀಫ್ ದೊರೆಯಲಿದ್ದಾರೆ.
ಪಾಶ್ರ್ವವಾಯು, ಬೆನ್ನು ನೋವು, ಕೈ ಮತ್ತು ಕಾಲುಗಳ ದೌರ್ಬಲ್ಯ, ತಲೆನೋವು ಮತು ಮೂರ್ಛೆ ರೋಗಕ್ಕೆ ಸಂಬಂಧಿಸಿದಂತೆ ತಪಾಸಣೆ ನಡೆಯಲಿದೆ. ನೋಂದಣಿಗಾಗಿ 9513408004, 8951582980, 9353595537 ಸಂಪರ್ಕಿಸಬಹುದಾಗಿದೆ.