ಮಡಿಕೇರಿ ಜ.10 : ಕೊಡಗು ಜಿಲ್ಲಾ ವ್ಯಾಪ್ತಿಯ ಹಾಗೂ ನೆರೆಯ ಜಿಲ್ಲೆಗಳ ದೇವಾಲಯಗಳಲ್ಲಿನ ಗಂಟೆಗಳನ್ನು ಕಳ್ಳತನ ಮಾಡುತ್ತಿದ್ದ ನಾಲ್ವರು ಅಂತರ ರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ವಿಶೇಷ ತಂಡ ಯಶಸ್ವಿಯಾಗಿದೆ.
ಮೈಸೂರಿನ ಆರ್.ಎಸ್.ನಾಯ್ಡು ನಗರದ ಅಮ್ಜದ್ ಆಹಮ್ಮದ್ (37), ಅಜ್ಜು ಲೇಜೌಟ್ ನ ಸಮಿವುಲ್ಲಾ (22), ಹೈದರ್ (36) ಹಾಗೂ ಕೆಸರೆ ನಗರದ ಜುಲ್ಪಿಕರ್ (36) ಬಂಧಿತ ಆರೋಪಿಗಳು.
ಕಳವು ಮಾಡಿದ ಸುಮಾರು 750 ಕೆ.ಜಿ.ತೂಕದ ವಿವಿಧ ಮಾದರಿಯ ಲೋಹದ ಗಂಟೆಗಳು ಹಾಗೂ 1 ಕಾರು ಸೇರಿದಂತೆ ಒಟ್ಟು ರೂ.10 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡು, ಆರೋಪಿಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಮಾಯಮುಡಿ ಕಮಟೆ ಶ್ರೀ ಮಹದೇವ ದೇವಸ್ಥಾನ, ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ನಿಟ್ಟೂರು ಕಾರ್ಮಾಡಿನ ಶ್ರೀ ಕಾಲಭೈರವೇಶ್ವರ ದೇವಸ್ಥಾನ, ಬಿಳೂರಿನ ಕಲ್ಲುಗುಡಿ ಶ್ರೀ ಈಶ್ವರ ದೇವಸ್ಥಾನ, ಬೆಸಗೂರಿನ ಶ್ರೀ ಮಹಾದೇವ ದೇವಸ್ಥಾನ ಮತ್ತು ಶ್ರೀ ದುರ್ಗಿ ದೇವಸ್ಥಾನ ಹಾಗೂ ಹಳ್ಳಿಗಟ್ಟಿನ ಭದ್ರಕಾಳಿ ದೇವಸ್ಥಾನ, ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕರಡ ಮಲೆತಿರಿಕೆ ಈಶ್ವರ ದೇವಸ್ಥಾನ, ಕೆದಮಳ್ಳೂರಿನ ಶ್ರೀ ಮಹದೇವ ದೇವಸ್ಥಾನ, ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಮಕ್ಕಿ ಶಾಸ್ತವು ದೇವಸ್ಥಾನಗಳಿಂದ ಕಳೆದ 2022 ನೇ ಸಾಲಿನ ಫೆಬ್ರವರಿ ತಿಂಗಳಿನಿಂದ ಅಕ್ಟೋಬರ್ ತಿಂಗಳಿನ ವರೆಗೆ ಸುಮಾರು 800 ಕೆ.ಜಿ ತೂಕದ ಗಂಟೆಗಳು ಕಳ್ಳತನವಾದ ಬಗ್ಗೆ ಗೋಣಿಕೊಪ್ಪ ಪೊನ್ನಂಪೇಟೆ, ವಿರಾಜಪೇಟೆ ಗ್ರಾಮಾಂತರ ಹಾಗೂ ನಾಪೋಕ್ಲು ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕವಾಗಿ ಒಟ್ಟು 18 ಪ್ರಕರಣಗಳು ದಾಖಲಾಗಿತ್ತು.
ಪೊಲೀಸ್ ಅಧೀಕ್ಷಕ ಕ್ಯಾಪ್ಟನ್ ಎಂ.ಎ.ಅಯ್ಯಪ್ಪ, ವಿರಾಜಪೇಟೆ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ನಿರಂಜನ್ ರಾಜೇ ಆರಸ್ ಅವರ ಮಾರ್ಗದರ್ಶನದಲ್ಲಿ ಕುಟ್ಟ ವೃತ್ತ ಸಿಪಿಐ ಸಿ.ಎ.ಮಂಜಪ್ಪ, ಮಡಿಕೇರಿ ಗ್ರಾಮಾಂತರ ವೃತ್ತ ಸಿಪಿಐ ಅನೂಪ್ ಮಾದಪ್ಪ, ಡಿಎಸ್‍ಬಿ ಐ.ಪಿ.ಮೇದಪ್ಪ, ಡಿಸಿಆರ್‍ಬಿ ಪಿ.ಐ.ನಾಗೇಶ್ ಕದ್ರಿ, ವಿರಾಜಪೇಟೆ ವೃತ್ತ ಸಿಪಿಐ ಬಿ.ಎಸ್.ಶಿವರುದ್ರ, ಗೋಣಿಕೊಪ್ಪ ವೃತ್ತ ಸಿಪಿಐ ಗೋವಿಂದರಾಜು, ಗೋಣಿಕೊಪ್ಪ ಪೊಲೀಸ್ ಠಾಣಾ ಪಿಎಸ್‍ಐ ಕೆ.ಪಿ.ದಿಕ್ಷೀತ್ ಕುಮಾರ್, ಪೊನ್ನಂಪೇಟೆ ಪೊಲೀಸ್ ಠಾಣಾ ಪಿಎಸ್‍ಐ ಸುಬ್ರಮಣಿ, ಕುಟ್ಟ ಅಪರಾಧ ಘಟಕದ ಪಿಎಸ್‍ಐ ರವಿ, ವಿರಾಜಪೇಟೆ ಪಿಎಸ್‍ಐ ರವಿಕುಮಾರ್, ನಾಪೋಕ್ಲು ಪಿಎಸ್‍ಐ ಎಂ.ಕೆ.ಸದಾಶಿವ, ವಿರಾಜಪೇಟೆ ಪ್ರೋ.ಪಿಎಸ್‍ಐ ಮಂಜುನಾಥ್, ಗೋಣಿಕೊಪ್ಪ ಸುಬ್ರಮಣಿ, ಸಿಬ್ಬಂದಿ ಹೆಚ್.ಕೆ.ಕೃಷ್ಣ, ನಾಪೋಕ್ಲು ಸಿಬ್ಬಂದಿ ಎಂ.ಎ.ಸಾಜನ್, ಶ್ರೀಮಂಗಲ ಪೊಲೀಸ್ ಠಾಣ ಸಿಬ್ಬಂದಿ ಚಂದ್ರಶೇಖರ್, ಡಿಸಿಆರ್‍ಬಿ ಎಂ.ಎನ್.ನಿರಂಜನ್, ಬಿ.ಎಲ್.ಯೋಗೇಶ್ ಕುಮಾರ್, ಕೆ.ಆರ್.ವಸಂತ, ಎ.ಆರ್.ಸುರೇಶ್, ವಿರಾಜಪೇಟೆಯ ಡಿವೈಎಸ್‍ಪಿ ಕಚೇರಿ ಸಿಬ್ಬಂದಿ ಸಿ.ಎ.ಜೋಶ್ ನಿಶಾಂತ್, ಕುಟ್ಟ ಪೊಲೀಸ್ ಠಾಣಾ ಹೆಚ್.ಸಿ.ಎಂ.ಎಸ್.ರಂಜಿತ್, ಮಡಿಕೇರಿ ಗ್ರಾಮಾಂತರ ವೃತ್ತ ಕಚೇರಿ ಎಸ್.ಜಿ.ಪ್ರೇಮ್ ಕುಮಾರ್, ಭಾಗಮಂಡಲದ ಪೊಲೀಸ್ ಠಾಣೆಯ ಎಂ.ಆರ್.ರವಿಕುಮಾರ್, ಗೋಣಿಕೊಪ್ಪ ಪೊಲೀಸ್ ಠಾಣೆಯ ಎನ್.ಕೆ.ಉಮೇಶ್, ಸಿಡಿಆರ್ ವಿಭಾಗದ ಸಿ.ಕೆ.ರಾಜೇಶ್, ಡಿಸಿಆರ್‍ಬಿ ವಿಭಾಗದ ಬಿ.ಜೆ.ಶರತ್ ರೈ, ನಾಪೋಕ್ಲು ಪೊಲೀಸ್ ಠಾಣೆಯ ಶರತ್ ಕುಮಾರ್, ಎನ್.ನವೀನ್ ಕುಮಾರ್, ವಿರಾಜಪೇಟೆ ಪೊಲೀಸ್ ಠಾಣೆ ಪಿಸಿ ಟಿ.ಎಸ್.ಗಿರೀಶ್, ಕೆ.ಎಂ.ಧರ್ಮ, ಪೊನ್ನಂಪೇಟೆ ಪೊಲೀಸ್ ಠಾಣೆಯ ಪಿಸಿ ಎಂ.ಎಸ್.ಜೀವನ್, ಶ್ರೀಮಂಗಲ ಪೊಲೀಸ್ ಠಾಣೆಯ ಪಸನ್ನ, ಡಿಸಿಆರ್‍ಬಿ ಕೆ.ಎಸ್.ಶಶಿಕುಮಾರ್, ಮಡಿಕೇರಿ ಗ್ರಾಮಾಂತರ ವೃತ್ತ ಪೊಲೀಸ್ ಠಾಣೆಯ ಪಿ.ಎನ್.ಉಮೇಶ್, ನಾಪೋಕ್ಲು ಕೆ.ಈ.ಷರೀಫ್, ಗೋಣಿಕೊಪ್ಪ ಠಾಣೆಯ ಬಿ.ಎಂ.ಕೃಷ್ಣಪ್ಪ, ಡಿಎಸ್‍ಬಿ ಎಸ್.ಆರ್.ಅಭಿಲಾಷ್, ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯ ಕೆ.ಬಿ.ಸಂದೀಪ್, ಪೊನ್ನಂಪೇಟೆ ಪೊಲೀಸ್ ಠಾಣೆಯ ಹೆಚ್.ಎನ್.ಸಂತೋಷ್ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.
ಅಪರಾಧ ಪ್ರಕರಣವನ್ನು ಪತ್ತೆ ಹಚ್ಚಿದ ತಂಡದ ಕಾರ್ಯಕ್ಷಮತೆಯನ್ನು ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿದ್ದಾರೆ.