ಮಡಿಕೇರಿ ಜ.10 : ಅಂತರರಾಷ್ಟ್ರೀಯ ಸೇವಾ ಸಂಸ್ಥೆಯಾದ ರೋಟರಿಯು ಮಹಿಳೆಯರಿಗೆ ಆದ್ಯತೆ ನೀಡಿದ್ದು, ರೋಟರಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸದಸ್ಯೆಯರಾಗಿ ಸೇಪ೯ಡೆಯಾಗುತ್ತಿರುವುದು ಮಹತ್ವದ ವಿಚಾರವಾಗಿದೆ ಎಂದು ರೋಟರಿ ಜಿಲ್ಲೆ 3181 ನ ಗವನ೯ರ್ ಪ್ರಕಾಶ್ ಕಾರಂತ್ ಶ್ಲಾಘಿಸಿದ್ದಾರೆ.
ಮಡಿಕೇರಿ ರೋಟರಿ ವುಡ್ಸ್ ಗೆ ಅಧಿಕೖತ ಭೇಟಿ ನೀಡಿ ಸಭಾ ಕಾಯ೯ಕ್ರಮ ಉದ್ಗಾಟಿಸಿ ಮಾತನಾಡಿದ ರೋಟರಿ ಜಿಲ್ಲಾ ಗವನ೯ರ್ ಪ್ರಕಾಶ್ ಕಾರಂತ್, ಪರಿಪೂಣ೯ತೆಯತ್ತ ಸಾಗಲು ಕಾಲದಿಂದ ಕಾಲಕ್ಕೆ ಬದಲಾವಣೆ ಅಗತ್ಯ. ರೋಟರಿಯು ಸದಾ ಬದಲಾವಣೆಗೆ ಒಗ್ಗುತ್ತಾ, ಅಂಥ ಬದಲಾವಣೆಗಳಿಗೆ ತಕ್ಕಂತೆ ತನ್ನ ಕಾಯ೯ಯೋಜನೆಗಳನ್ನು ರೂಪಿಸುತ್ತಿದೆ. ಮಹಿಳಾ ಸದಸ್ಯರನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸೇಪ೯ಡೆ ಮಾಡುತ್ತಾ ಮಹಿಳೆಯರಿಗೂ ಸೂಕ್ತ ಅವಕಾಶ ಕಲ್ಪಿಸುತ್ತಾ ಬಂದಿರುವ ರೋಟರಿಗೆ 117 ವಷ೯ಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಈ ವಷ೯ ಜೆನಿಫರ್ ಜೋನ್ಸ್ ಎಂಬ ಮಹಿಳೆಯೇ ಅಂತರರಾಷ್ಟ್ರೀಯ ಅಧ್ಯಕ್ಷೆಯಾಗಿ ನೇಮಕವಾಗಿ ಅತ್ಯಂತ ಸಶಕ್ತವಾಗಿ ಕಾಯ೯ನಿವ೯ಹಿಸುತ್ತಿರುವುದು ಶ್ಲಾಘನೀಯ ಮತ್ತು ಹೆಮ್ಮೆಯ ವಿಚಾರ. ಮಹಿಳೆಯರ ಸಮಾನ ಹಕ್ಕುಗಳಿಗೆ ರೋಟರಿಯು ಮನ್ನಣೆ ನೀಡಿದೆ.
ಶೇ.30 ರಷ್ಟು ಮಹಿಳಾ ಸದಸ್ಯೆಯರನ್ನು ಪ್ರತೀ ರೋಟರಿ ಸಂಸ್ಥೆಗಳೂ ಸೇಪ೯ಡೆಗೊಳಿಸುವ ಹೊಣೆಗಾರಿಕೆ ಹೊಂದಿದೆ, ರೋಟರಿಯಂಥ ಸಾಮಾಜಿಕ ಸೇವಾ ಸಂಸ್ಥೆಗೆ ಸೇಪ೯ಡೆಯಾಗಲು ಮಹಿಳೆಯರೂ ಮುಂದೆ ಬರಬೇಕು ಎಂದೂ ಕಾರಂತ್ ಕರೆ ನೀಡಿದರು. ಪ್ರತೀಯೋವ೯ರು ತಾವು ಜೀವಿಸಿದ ಕಾಲಮಾನದಲ್ಲಿ ಸಮಾಜಕ್ಕೆ ನೀಡಿದ ಕೊಡುಗೆಯೇ ಶಾಶ್ವತವೇ ವಿನಾ ಬದುಕಿನಲ್ಲಿ ಗಳಿಸಿದ್ದು ಉಳಿಸಿದ್ದು ಬೇರೆಯವರ ಪಾಲಾಗಿ ಆಥಿ೯ಕ ಸಾಧನೆಗಳು ಮೂಲೆಗುಂಪಾಗಿ ಸಮಾಜಕ್ಕೆ ನೀಡಿದ ಕೊಡುಗೆಗಳೇ ಶಾಶ್ವತವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.
ಮಡಿಕೇರಿಯಲ್ಲಿ 3 ನೇ ಸಂಸ್ಥೆಯಾಗಿ, ರೋಟರಿ ವಲಯ 6 ರಲ್ಲಿ 14 ನೇ ಕ್ಲಬ್ ಆಗಿ ಪ್ರಾರಂಭವಾದ ರೋಟರಿ ವುಡ್ಸ್ ಕಳೆದ 7 ತಿಂಗಳಲ್ಲಿ ಬೇರೆ ಯಾವುದೇ ಹಳೇ ಸಂಸ್ಥೆಗಳಿಗೆ ಕಡಮೆಯಿಲ್ಲದಂತೆ ಅತ್ಯುತ್ತಮವಾಗಿ ಕಾಯ೯ನಿವ೯ಹಿಸಿದೆ. ತ್ರಿವಿಕ್ರಮ ಸಾಧನೆ ರೋಟರಿ ವುಡ್ಸ್ ನಿಂದ ಸಾಮಾಜಿಕ ಸೇವಾ ಕಾಯ೯ಗಳಲ್ಲಿ ಆಗಿದೆ ಎಂದೂ ಹೇಳಿದ ಕಾರಂತ್, ಹೊಸ ಸಂಸ್ಥೆಯಾಗಿ 25 ಸ್ಥಾಪಕ ಸದಸ್ಯರೊಂದಿಗೆ 10 ಹೊಸ ಸದಸ್ಯರನ್ನು 7 ತಿಂಗಳಲ್ಲಿ ರೋಟರಿ ಸಮುದಾಯಕ್ಕೆ ಸೇಪ೯ಡೆ ಮಾಡಿರುವುದು ಮಾದರಿ ಕಾಯ೯ವಾಗಿದೆ ಎಂದೂ ಅವರು ಶ್ಲಾಘಿಸಿದರು.
ರೋಟರಿ ವಲಯ 6 ರ ಸಹಾಯಕ ಗವನ೯ರ್ ರತನ್ ತಮ್ಮಯ್ಯ ಮಾತನಾಡಿ, ರೋಟರಿ ವುಡ್ಸ್ ನ ಕಾಯ೯ಚಟುವಟಿಕೆಗಳ ಬಗ್ಗೆ ಶ್ಲಾಘಿಸಿದರಲ್ಲದೇ ಈ ವಷ೯ದ ರೋಟರಿಯ ಜಿಲ್ಲಾ ಯೋಜನೆಗಳಾದ ವನಸಿರಿ, ಆರೋಗ್ಯ ಸಿರಿ, ಜಲಸಿರಿ, ವಿದ್ಯಾಸಿರಿಗಳನ್ನು ಯಶಸ್ವಿಯಾಗಿ ರೋಟರಿ ವುಡ್ಸ್ ಅಳವಡಿಸಿಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರೋಟರಿ ವುಡ್ಸ್ ಅಧ್ಯಕ್ಷ ಎಸ್.ಎಸ್.ಸಂಪತ್ ಕುಮಾರ್ ಮಾತನಾಡಿ, ಮಡಿಕೇರಿಯಲ್ಲಿ 3 ನೇ ರೋಟರಿ ಸಂಸ್ಥೆಯಾಗಿ ಉದಯಿಸಿದ ರೋಟರಿ ವುಡ್ಸ್ ಸದಸ್ಯರೆಲ್ಲರ ಸಹಕಾರದೊಂದಿಗೆ ಅನೇಕ ಜನೋಪಯೋಗಿ ಯೋಜನೆಗಳನ್ನು ಕೈಗೊಂಡಿದ್ದು ಆರೋಗ್ಯ ಸಂಬಂಧಿತ ಚಟುವಟಿಕೆಗಳಿಗೆ ಆದ್ಯತೆ ನೀಡಿದೆ ಎಂದು ಮಾಹಿತಿ ನೀಡಿದರು.
ರೋಟರಿ ವಲಯ ಸೇನಾನಿ ಎನ್.ಡಿ. ಅಚ್ಚಯ್ಯ, ರೋಟರಿ ವುಡ್ಸ್ ಕಾಯ೯ದಶಿ೯ ವಸಂತ್ ಕುಮಾರ್ ವೇದಿಕೆಯಲ್ಲಿದ್ದರು.
ರೋಟರಿ ವುಡ್ಸ್ ಮಡಿಕೇರಿ ವತಿಯಿಂದ ಸೇವಾ ಸಾಧನೆಗಾಗಿ ಮಡಿಕೇರಿಯ ಹಿರಿಯ ವೈದ್ಯ ಡಾ.ಕೆ.ಬಿ.ಸೂಯ೯ಕುಮಾರ್ ಮತ್ತು ತೋಟಗಾರಿಕೆ ಇಲಾಖಾಧಿಕಾರಿ ಪ್ರಮೋದ್ ಕುಮಾರ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ರೋಟರಿ ಜಿಲ್ಲಾ ಗವನ೯ರ್ ಪ್ರಕಾಶ್ ಕಾರಂತ್, ಸಹಾಯಕ ಗವನ೯ರ್ ರತನ್ , ವಲಯ ಸೇನಾವಿ ಅಚ್ಚಯ್ಯ, ರೋಟರಿ ವುಡ್ಸ್ ಅಧ್ಯಕ್ಷ ಸಂಪತ್ ಕುಮಾರ್, ಕಾಯ೯ದಶಿ೯ ವಸಂತ್ ಕುಮಾರ್ ಗೌರವ ನೆರವೇರಿಸಿದರು.