ಮಡಿಕೇರಿ ಜ.18 : ಆಟೋರಿಕ್ಷಾವೊಂದು ಅಗ್ನಿಗಾಹುತಿಯಾದ ಘಟನೆ ಸುಂಟಿಕೊಪ್ಪ ಸಮೀಪದ ಅಂದಗೋವೆಯಲ್ಲಿ ನಡೆದಿದೆ.
ಅಂದಗೋವೆ ನಿವಾಸಿ ಶಿವರಾಜ್ ಎಂಬುವವರಿಗೆ ಸೇರಿದ ಆಟೋರಿಕ್ಷಾ ಇದಾಗಿದ್ದು, ಮಂಗಳವಾರ ರಾತ್ರಿ ಮನೆಗೆ ಮರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ತಾವು ಕುಳಿತ್ತಿದ್ದ ಸೀಟ್ ಬಿಸಿಯಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಶಿವರಾಜ್ ಆಟೋ ನಿಲ್ಲಿಸಿ ತಕ್ಷಣ ಹೊರ ಬಂದಿದ್ದಾರೆ. ಭಯದಿಂದ ದೂರ ಸರಿಯುತ್ತಿದ್ದಂತೆ ಬೆಂಕಿ ವ್ಯಾಪಿಸಿ ಆಟೋರಿಕ್ಷಾ ಸಂಪೂರ್ಣ ಸುಟ್ಟು ಕರಕಲಾಗಿದೆ.
ಅದೃಷ್ಟವಶಾತ್ ಶಿವರಾಜ್ ಅಪಾಯದಿಂದ ಪಾರಾಗಿದ್ದಾರೆ. ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.















