ವಿರಾಜಪೇಟೆ ಜ.22 : ವಿರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆರ್ಜಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಭಾಂಗಣದಲ್ಲಿ ನಡೆದ 9ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆಯೋಜಿಸಲಾಗಿದ್ದ ಕವಿಗೋಷ್ಠಿಯಲ್ಲಿ ಶಾಲಾ ಕಾಲೇಜುಗಳಿಂದ ಆಗಮಿಸಿದ್ದ ವಿದ್ಯಾರ್ಥಿ ಕವಿವರ್ಯರು ಸ್ವರಚಿತ ಕಾವ್ಯಗಳನ್ನು ವಾಚಿಸಿ ಸಾಹಿತ್ಯಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದರು.
ಹೆಚ್ಚು ವಿದ್ಯಾರ್ಥಿಗಳೇ ಭಾಗವಹಿಸಿದ್ದು ವಿಶೇಷವಾಗಿತ್ತು. 3ನೇ ತರಗತಿಯ ಕು.ಸಾನ್ವಿ ಯೋಗೇಶ್ವರಿ ತನ್ನ ಹಾವ ಭಾವದೊಂದಿಗೆ ಚಿಟ್ಟೆ ಎಂಬ ಕವಿತೆಯನ್ನು ವಾಚಿಸಿ ಜನಮನ ಗೆದ್ದಳು. ಇನ್ನುಳಿದಂತೆ ವಿದ್ಯಾರ್ಥಿಗಳು, ಗೆಳತಿ, ಅಮ್ಮ ಹೀಗೆ ಹೆಣ್ಣಿನ ಬಗ್ಗೆ ಕವಿತೆ ವಾಚಿಸಿದರು.
ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಕುಶಾಲನಗರದ ಉಪನ್ಯಾಸಕಿ ಲೀಲಾಕುಮಾರಿ ತೊಡಿಕಾನ ಅವರು ಮಾತನಾಡಿ ರವಿ ಕಾಣದನ್ನು ಕವಿಕಂಡ ಎಂಬ ಮಾತಿದೆ. ನಮ್ಮ ಭಾವನೆಗಳು, ಕಲ್ಪನೆಗಳನ್ನು ಪದಪುಂಜಗಳ ಅರ್ಥಗರ್ಭಿತ ಜೋಡಣೆಯ ಮೂಲಕ ಲಿಖಿತ ಸ್ವರೂಪ ಕೊಟ್ಟು ಚೆಂದಗಾಣಿಸುವ ಅದ್ಭುತ ಶಕ್ತಿ ಕವಿಯದ್ದು. ಒಂದು ವಿಷಯವನ್ನು ನಾವು ಊಹಿಸಲೂ ಸಾಧ್ಯವಿರದ ವಿಭಿನ್ನ ಶೈಲಿಯಲ್ಲಿ ಪ್ರಸ್ತುತ ಪಡಿಸುವ ಸಾಮಥ್ರ÷್ಯ ಕವಿಗಿದೆ. ಯಾವುದೇ ಘಟನೆಯನ್ನು ಕೇವಲ ಮೇಲ್ನೋಟಕ್ಕೆ ನಿರ್ಧರಿಸದೆ ಅಥವಾ ಗ್ರಹಿಸದೇ ಅದರೊಳಹನ್ನು ಅನುಭವಿಸಿ ಪರಿಭಾವಿಸಿದಾಗಷ್ಟೇ ಆ ಕಾವ್ಯ ಯಶಸ್ವಿ ಎಂದೆನಿಸಿಕೊಳ್ಳುತ್ತದೆ ಮತ್ತು ಇದನ್ನು ಲೇಖನಿಯ ಮೂಲಕ ಹೊರಗಿಟ್ಟು ಪರಿಚಯಿಸಿಕೊಡುವವನೇ ಒಬ್ಬ ಸಮರ್ಥ ಕವಿ. ಹೇಳುವ ವಿಷಯವನ್ನೇ ಕಾವ್ಯಾತ್ಮಕವಾಗಿ ಹೇಳಿ ಅದರ ಸೌಂದರ್ಯ ಹೆಚ್ಚಿಸುವುದು ಕವನಕ್ಕಿರುವ ವ್ಯಾಪ್ತಿಯನ್ನು ತಿಳಿಸುತ್ತದೆ. ಕನ್ನಡ ಭಾಷೆಯ ಶಬ್ದಭಂಡಾರವAತೂ ಅಪರಿಮಿತ ಸೌಂದರ್ಯಯುತ ಹಾಗೂ ಸಮೃಧ್ಧ. ಅಂದಿನ ಪಂಪ, ರನ್ನ,ಜನ್ನ ರಿಂದ ಹಿಡಿದು ಇಂದಿನವರೆಗೆ ಕನ್ನಡ ಕಾವ್ಯ ಲೋಕದ ಬೆಳವಣಿಗೆಯ ಹಂತವು ಗಮನಾರ್ಹ. ಹೀಗಿರುವಾಗ ಕವಿ ಪರಂಪರೆಯನ್ನು ನೆನಪಿಸಿ, ಉಳಿಸಿ ಬೆಳೆಸುವ ಪ್ರಯತ್ನ ಕವಿಗೋಷ್ಠಿಗಳದ್ದು. ಸಾಮಾನ್ಯವಾಗಿ ಪ್ರಬುದ್ಧ ಕವಿಗಳು, ಅನುಭವಿಗಳು, ಜನ ಮನ್ನಣೆಗಳಿಸಿ ಪ್ರಚಲಿತದಲ್ಲಿರುವವರು ಕವಿಗೋಷ್ಠಿಗಳಲ್ಲಿ ಭಾಗವಹಿಸುವುದನ್ನು ನಾವು ನೋಡಿದ್ದೇವೆ ಆದರೆ ಇಲ್ಲಿನ ವಿಶೇಷತೆಯೆಂದರೆ ಈ ಕವಿಗೋಷ್ಠಿಯಲ್ಲಿ ಪಾಲ್ಗೊಂಡವರೆಲ್ಲರೂ ಶಾಲಾ ಕಾಲೇಜಿನ ವಿದ್ಯಾರ್ಥಿಗಳು. ವಿದ್ಯಾರ್ಥಿಗಳಿಗೆ ಸಾಹಿತ್ಯ ಪ್ರಜ್ಞೆಯನ್ನು ಬೆಳೆಸುವ ಕೆಲಸಗಳನ್ನು ಈ ರೀತಿಯ ಸಮ್ಮೇಳನಗಳು ಮಾಡುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಗೋಷ್ಟಿಯಲ್ಲಿ ಕವಿಗಳಾದ ಪುಗ್ಗೇರ ಸುಮಿ ಸುಬ್ಬಯ್ಯ, ಪಿ.ಬಿ.ಮಂಜುನಾಥ್, ಕಿಶೋರ್, ಕೆ.ಎಂ. ಸೂರಜ್, ಬಿ.ಹೆಚ್ ಪ್ರಶಾಂತ್, ಎಂ.ಎ. ಯೋಗೇಶ್ವರಿ, ಸಾನ್ವಿ ಯೋಗೇಶ್ವರಿ, ನಳಿನಿ ಬಿಂದು,ಕೆ.ಆರ್ ಅನುಷಾ, ತಾಜುದ್ದೀನ್, ತೌಸಿ ಅಹಮ್ಮದ್, ಪಿ.ಎಂ. ಅರ್ಚನ, ಎನ್ ಕೆ. ಚಾರಿಕ, ಎಂ.ಕೆ. ಧನ್ಯ ಮುಂತಾದವರು ಕವನ ವಾಚಿಸಿದರು.
ಈ ಸಂದರ್ಭ ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷ ಡಾ. ಎಸ್ ವಿ ನರಸಿಂಹನ್ ಉಪಸ್ಥಿತರಿದ್ದರು. ವಿಮಲಾ ದಶರಥ ಸ್ವಾಗತಿಸಿದರೆ, ಕೆ.ಸಿ. ಗೀತಾಂಜಲಿ ನಿರೂಪಿಸಿದರು.
Breaking News
- *ಇಂಡಿಯನ್ ಫಿಲ್ಟರ್ ಕಾಫಿ ಚಾಂಪಿಯನ್ಶಿಪ್ : ಶಶಾಂಕ್ ರಾಜ್ಯಮಟ್ಟಕ್ಕೆ ಆಯ್ಕೆ*
- *ಮಡಿಕೇರಿಯಲ್ಲಿ ಜಿಲ್ಲಾ ಮಟ್ಟದ ರಸ ಪ್ರಶ್ನೆ ಸ್ಪರ್ಧೆ ಮತ್ತು ಗೀತ ಗಾಯನ ಕಾರ್ಯಕ್ರಮ : ಮಕ್ಕಳಲ್ಲಿ ಕನ್ನಡ ಪ್ರೀತಿಯನ್ನು ಬೆಳೆಸಿ : ಎಂ.ಪಿ.ಕೇಶವ ಕಾಮತ್*
- *ನ.26ರಂದು ಸಿಎನ್‌ಸಿಯಿಂದ ಮಡಿಕೇರಿ ಸಮೀಪ ಕ್ಯಾಪಿಟಲ್ ವಿಲೇಜ್ ನಲ್ಲಿ ಕೊಡವ ನ್ಯಾಷನಲ್ ಡೇ ಮತ್ತು ಸಂವಿಧಾನ ದಿನಾಚರಣೆ*
- *ಶಿಶು ಸಾಹಿತ್ಯದ ಪಿತಾಮಹ ಪಂಜೆ ಮಂಗೇಶರಾಯರು*
- *ಸುಂಟಿಕೊಪ್ಪದಲ್ಲಿ ಹಳೆ ವಿದ್ಯಾರ್ಥಿಗಳ ಸ್ನೇಹಮಿಲನ ಕಾರ್ಯಕ್ರಮ : ಸಾಧಕರಿಗೆ ಸನ್ಮಾನ*
- *ಹೆಗ್ಗಳ ಶ್ರೀ ಗೋಪಾಲಕೃಷ್ಣ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ವಾರ್ಷಿಕ ಮಹಾಪೂಜೆ*
- *ಕೂತಿನಾಡು : ದೇವಾಲಯದ ಜೀರ್ಣೋದ್ಧಾರಕ್ಕೆ ಆರೋಡ ತಾಂಬೂಲ ಪ್ರಶ್ನೆ*
- *ಮಡಿಕೇರಿ : ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ವಾರ್ಷಿಕ ಬಹುಮಾನ ವಿತರಣಾ ಸಮಾರಂಭ*
- ಕುಶಾಲನಗರ ಕನ್ನಡ ಭಾರತಿ ಕಾಲೇಜಿನಲ್ಲಿ ಅಕ್ಷರ ಜ್ಯೋತಿ ಯಾತ್ರೆ ಕುರಿತು ಉಪನ್ಯಾಸ : ವಿದ್ಯಾರ್ಥಿಗಳಲ್ಲಿ ಉತ್ತರ ಪ್ರೇರಣೆ, ಸ್ಫೂರ್ತಿ ಬೆಳೆಸಬೇಕು : ಬಸವಕುಮಾರ್ ಪಾಟೀಲ್*
- *ಶ್ರದ್ಧಾಭಕ್ತಿಯಿಂದ ಜರುಗಿದ ಅರಪಟ್ಟು ಶ್ರೀ ಅಯ್ಯಪ್ಪ ಸ್ವಾಮಿ ವಾರ್ಷಿಕ ಮಹಾಪೂಜೆ*