ವಿರಾಜಪೇಟೆ ಜ.22 : ವಿರಾಜಪೇಟೆಯ ಆರ್ಜಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ಕನ್ನಡ ನುಡಿ ಜಾತ್ರೆಗೆ ಸಂಭ್ರಮದ ತೆರೆ ಬಿದ್ದಿತು. ಸಮಾರೋಪ ಸಮಾರಂಭಕ್ಕೂ ಮುನ್ನ ನಡೆದ ಬಹಿರಂಗ ಅಧಿವೇಶನದಲ್ಲಿ ಆರು ನಿರ್ಣಯಗಳನ್ನು ಅಂಗೀಕರಿಸಲಾಯಿತು.
ಕೊಡವ ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕು, ಗಡಿನಾಡಲ್ಲಿ ಕನ್ನಡ ಭವನಗಳನ್ನು ತೆರೆಯುವಂತಾಗಬೇಕು, ಕನ್ನಡಪರ ಚಟುವಟಿಕೆಗಳನ್ನು ಉತ್ತೇಜಿಸುವ ಸಲುವಾಗಿ ಸರಕಾರದಿಂದ ಅನುದಾನ ಬಿಡುಗಡೆಗೊಳಿಸಬೇಕು, ಕನ್ನಡ ಶಾಲೆಗಳಿಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಬೇಕು, ಕೊಡಗಿನ ಕೃಷಿ ಚಟುವಟಿಕೆಗೆ ಉತ್ತೇಜನವನ್ನು ನೀಡಬೇಕು, ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಿರ್ಣಯ ಅಂಗೀಕರಿಸಲಾಯಿತು.
ಕಸಾಪ ತಾಲೂಕು ಅಧ್ಯಕ್ಷ ರಾಜೇಶ್ ಪದ್ಮನಾಭ ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ಶಬರೀಶ್ ಶೆಟ್ಟಿ ನಿರ್ಣಯ ಮಂಡನೆ ಮಾಡಿದರು.
ಬಹಿರಂಗ ಅಧಿವೇಷನದ ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಕಸಾಪ ಕೊಡಗು ಜಿಲ್ಲೆ ಗೌರವ ಕಾರ್ಯದರ್ಶಿ ಮುನೀರ್ ಅಹಮದ್ ಸಮಾರೋಪ ಭಾಷಣ ಮಾಡಿ ಕನ್ನಡ ಬರಿ ಕರ್ನಾಟಕದಲ್ಲಿ ಅಲ್ಲ ಅದು ಅಸೀಮ, ಕೊಡಗು ಎಂದಾಕ್ಷಣ ಕುತೂಹಲ, ಆಸಕ್ತಿ, ಸದಾ ಗೌರವ ಮೂಡುವಂತದ್ದು, ಇಲ್ಲಿನ ನಾಡು ನುಡಿ ಸಂಸ್ಕೃತಿ ಆಚಾರ ವಿಚಾರ, ಪ್ರಕೃತಿ ಎಲ್ಲವೂ ವೈಶಿಷ್ಟö್ಯ ಎಂದೆನಿಸಿ ಪ್ರಖ್ಯಾತಿ ಹೊಂದಿದೆ, ಪಂಜೆ ಮಂಗೇಶರಾಯರು ಈ ಹಿಂದೆಯೇ ಬರೆದಂತೆ ಸುಂದರ ಜಿಲ್ಲೆಯ ಮುಕುಟಮಣಿ ವಿರಾಜಪೇಟೆಯಲ್ಲಿ ಎಲ್ಲೆಲ್ಲೂ ಹಸಿರು ಕಾಣಿಸುತ್ತದೆ. ಸಾಹಿತ್ಯ ಎನ್ನುವುದು ಜ್ಞಾನದ ಒಂದು ಭಾಗದಲ್ಲಿ ಮಿಳಿತವಾಗಿರುತ್ತದೆ. ಕವಿಯಾದವನಿಗೆ ಭಾವನೆಯ ನೂತನ ಪ್ರಪಂಚ ಸೃಷ್ಟಿಸುವ ಶಕ್ತಿಯಿರುತ್ತದೆ. ಪಂಪ ಮಹಾಕವಿಯ ತ್ಯಾಗ ಭೋಗಗಳ ಸಮನ್ವಯವೇ ಜೀವನ ಎಂಬುದನ್ನು ಸಾಹಿತ್ಯ ತೋರಿಸಿಕೊಡಬೇಕಿದೆ. ಸಾಹಿತ್ಯ ಸಮ್ಮೇಳವೆಂಬುವುದು ಕನ್ನಡಿಗರಿಗೆ ಒಂದು ರೀತಿಯ ಹಬ್ಬವಿದ್ದಂತೆ. ಕನ್ನಡದ ಮನಸ್ಸುಗಳನ್ನು ಸಮ್ಮೀಲನಗೊಳಿಸುವ ಈ ಹಬ್ಬ ದೇಶದ ಐಕ್ಯತೆ ಮತ್ತು ಸಮಗ್ರತೆಯನ್ನು ಕಾಪಾಡಿಕೊಂಡು ಹೋಗುವಂತಹ ವಾತಾವರಣವನ್ನು ಇಂತಹ ಸಮ್ಮೇಳನಗಳು ಉಂಟು ಮಾಡಬೇಕು. ಮನಸ್ಸಿನ ಆರೋಗ್ಯಕ್ಕೆ ಕಲೆ ಸಂಗೀತ, ಸಾಹಿತ್ಯ, ನಾಟಕ ಎಲ್ಲವೂ ಬೇಕು. ಈ ನಿಟ್ಟಿನಲ್ಲಿ ಇದನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕೆಲಸ ಆಗಬೇಕೆಂದರು.
ಸಮ್ಮೇಳನಾಧ್ಯಕ್ಷ ಡಾಕ್ಟರ್ ಎಸ್.ವಿ ನರಸಿಂಹನ್ ಆಶಯ ನುಡಿಗಳನ್ನಾಡಿ ಸಾಹಿತ್ಯವೆಮಬುವುದು ಜನರ ಬದುಕಿನ ಪ್ರತಿಬಿಂಬವಾಗಬೇಕು, ಮನಸ್ಸುಗಳ ನಡುವಿನ ಕಂದರ ಹೆಚ್ಚಿಸದೆ ಮನಸ್ಸುಗಳನ್ನು ಕೂಡಿಸುವ ಸೇತುವೆಯಾಗಬೇಕು. ಇತ್ತಿಚೆಗೆ ಶಿಶು ಗೀತೆಗಳನ್ನು ಬರೆಯುವುದು ಕಡಿಮೆಯಾಗಿದೆ. ಶಿಶು ಗೀತೆಗಳನ್ನು ರಚಿಸಲು ಶಿಶುಗಳೇ ಆಗಬೇಕೆಂದಿಲ್ಲ. ದೊಡ್ಡವರು ಮಗುವಿನ ಮನಸ್ಸಿನ ಭಾವನೆಗಳನ್ನು ಹೊರಗೆಡವಬಹುದು ಎಂದರಲ್ಲದೆ ವಿರಾಜಪೇಟೆಯ ಗಡಿಭಾಗವಾದ ಆರ್ಜಿ ಗ್ರಾಮದಲ್ಲಿ ಹೆಚ್ಚು ಅನ್ಯ ಭಾಷಿಕರು ಇರುವ ಇಲ್ಲಿ ಅವರುಗಳನ್ನೇ ಬಳಸಿಕೊಂಡು ಯಶಸ್ವಿ ಸಮ್ಮೇಳನ ನಡೆದಿರುವುದು ಹೆಮ್ಮೆಯ ವಿಚಾರ. ಗಡಿನಾಡು ಎಂದು ಹೇಳುವ ಪ್ರಮೇಯವೇ ಇಲ್ಲಿಲ್ಲ. ಎಲ್ಲವೂ ಅಚ್ಚುಕಟ್ಟಾಗಿಯೇ ನಡೆದಿದೆ ಎಂದು ಪ್ರಶಂಸನೀಯ ನುಡಿಗಳನ್ನಾಡಿದರು.
ಜಿಲ್ಲಾಧ್ಯಕ್ಷ ಕೇಶವ ಕಾಮತ್ ಮಾತನಾಡಿ ಕನ್ನಡ ನಾಡು ನುಡಿಯನ್ನು ಕಾಪಾಡುವುದು, ಸಾಹಿತ್ಯ, ಕಲೆ, ಸಂಗೀತ ಹಾಗೂ ಸಂಸ್ಕೃತಿಯನ್ನು ಬೆಳೆಸುವುದು ಈ ಸಾಹಿತ್ಯ ಸಮ್ಮೇಳನದ ಮುಖ್ಯ ಉದ್ದೇಶ. ಗಡಿನಾಡಿನಲ್ಲಿ ಅತ್ಯಂತ ಯಶಸ್ವಿಯಾಗಿ ಸಮ್ಮೇಳನ ನಡೆದಿದೆ. ಇದು ಹೆಚ್ಚು ಸಂತೋಷದ ವಿಚಾರ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಕಸಾಪ ಅಧ್ಯಕ್ಷ ರಾಜೇಶ್ ಪದ್ಮನಾಭ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ತಾ.ಪಂ.ಕಾರ್ಯ ನಿರ್ವಹಣಾಧಿಕಾರಿ ಕೆ.ಅಪ್ಪಣ್ಣ, ತಾ.ಪಂ. ಮಾಜಿ ಉಪಾಧ್ಯಕ್ಷ ಧರಣಿಕಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜಿ ಪೂಣಚ್ಚ, ವಿ.ಎಸ್‌ಎಸ್‌ಎನ್‌ಎಲ್ ಅಧ್ಯಕ್ಷ ಪಟ್ಟಡ ಮನು ರಾಮಚಂದ್ರ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮಣಿ ಉಪಸ್ಥಿತರಿದ್ದರು.
Breaking News
- *ಇಂಡಿಯನ್ ಫಿಲ್ಟರ್ ಕಾಫಿ ಚಾಂಪಿಯನ್ಶಿಪ್ : ಶಶಾಂಕ್ ರಾಜ್ಯಮಟ್ಟಕ್ಕೆ ಆಯ್ಕೆ*
- *ಮಡಿಕೇರಿಯಲ್ಲಿ ಜಿಲ್ಲಾ ಮಟ್ಟದ ರಸ ಪ್ರಶ್ನೆ ಸ್ಪರ್ಧೆ ಮತ್ತು ಗೀತ ಗಾಯನ ಕಾರ್ಯಕ್ರಮ : ಮಕ್ಕಳಲ್ಲಿ ಕನ್ನಡ ಪ್ರೀತಿಯನ್ನು ಬೆಳೆಸಿ : ಎಂ.ಪಿ.ಕೇಶವ ಕಾಮತ್*
- *ನ.26ರಂದು ಸಿಎನ್ಸಿಯಿಂದ ಮಡಿಕೇರಿ ಸಮೀಪ ಕ್ಯಾಪಿಟಲ್ ವಿಲೇಜ್ ನಲ್ಲಿ ಕೊಡವ ನ್ಯಾಷನಲ್ ಡೇ ಮತ್ತು ಸಂವಿಧಾನ ದಿನಾಚರಣೆ*
- *ಶಿಶು ಸಾಹಿತ್ಯದ ಪಿತಾಮಹ ಪಂಜೆ ಮಂಗೇಶರಾಯರು*
- *ಸುಂಟಿಕೊಪ್ಪದಲ್ಲಿ ಹಳೆ ವಿದ್ಯಾರ್ಥಿಗಳ ಸ್ನೇಹಮಿಲನ ಕಾರ್ಯಕ್ರಮ : ಸಾಧಕರಿಗೆ ಸನ್ಮಾನ*
- *ಹೆಗ್ಗಳ ಶ್ರೀ ಗೋಪಾಲಕೃಷ್ಣ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ವಾರ್ಷಿಕ ಮಹಾಪೂಜೆ*
- *ಕೂತಿನಾಡು : ದೇವಾಲಯದ ಜೀರ್ಣೋದ್ಧಾರಕ್ಕೆ ಆರೋಡ ತಾಂಬೂಲ ಪ್ರಶ್ನೆ*
- *ಮಡಿಕೇರಿ : ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ವಾರ್ಷಿಕ ಬಹುಮಾನ ವಿತರಣಾ ಸಮಾರಂಭ*
- ಕುಶಾಲನಗರ ಕನ್ನಡ ಭಾರತಿ ಕಾಲೇಜಿನಲ್ಲಿ ಅಕ್ಷರ ಜ್ಯೋತಿ ಯಾತ್ರೆ ಕುರಿತು ಉಪನ್ಯಾಸ : ವಿದ್ಯಾರ್ಥಿಗಳಲ್ಲಿ ಉತ್ತರ ಪ್ರೇರಣೆ, ಸ್ಫೂರ್ತಿ ಬೆಳೆಸಬೇಕು : ಬಸವಕುಮಾರ್ ಪಾಟೀಲ್*
- *ಶ್ರದ್ಧಾಭಕ್ತಿಯಿಂದ ಜರುಗಿದ ಅರಪಟ್ಟು ಶ್ರೀ ಅಯ್ಯಪ್ಪ ಸ್ವಾಮಿ ವಾರ್ಷಿಕ ಮಹಾಪೂಜೆ*