ಮಡಿಕೇರಿ ಫೆ.28 : ಕುಲಶಾಸ್ತ್ರ ಅಧ್ಯಯನದ ಹೆಸರಿನಲ್ಲಿ ನೈಜ ಕೊಡವರನ್ನು ವಂಚಿಸಿ ಕೊಡವರ ಹೆಸರಿನಲ್ಲಿ ಕೊಡವರಲ್ಲದವರ ಅಧ್ಯಯನಕ್ಕೆ ಸರ್ಕಾರ ಮುಂದಾಗಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಗಂಭೀರ ಆರೋಪ ಮಾಡಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸರ್ಕಾರದ ನಡೆ ಸಂವಿಧಾನಿಕ ನೈತಿಕತೆಯ ಉಲ್ಲಂಘನೆಯಾಗಿದೆ. ಹುಲಿಯ ಅಧ್ಯಯನ ಹುಲಿಯ ಹೆಸರಿನಲ್ಲೇ ನಡೆಯಲಿ, ಹುಲಿ ಚಿತ್ರ ತೋರಿಸಿ ಕಾಡುಬೆಕ್ಕು ಅಧ್ಯಯನವನ್ನು ಮಾಡಬೇಡಿ. ಮುಖ್ಯಮಂತ್ರಿಗಳು ಕೊಡವ ವಿರೋಧಿ ಎಂಬ ಕಳಂಕ ಹೊತ್ತುಕೊಳ್ಳಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಕೊಡವರ ಕುಲ ಶಾಸ್ತ್ರ” ಅಧ್ಯಯನಕ್ಕೆ ಸಂಬoಧಿಸಿದ ಕಡತ (ಸಂಖ್ಯೆ SWD74 SAD 2022 ರ ಕಡತ) ಕಳೆದ ಆಗಸ್ಟ್ ತಿಂಗಳಿನಿoದ ಮುಖ್ಯಮಂತ್ರಿಗಳ ಬಳಿಯೇ ಉಳಿದಿದೆ. ನೈಜ ಕೊಡವರ ಅಧ್ಯಯನಕ್ಕೆ ತಕ್ಷಣ ಚಾಲನೆ ನೀಡುವ ಮೂಲಕ ಈ ಕಡತಕ್ಕೆ ಜೀವ ತುಂಬಬೇಕು ಎಂದು ಒತ್ತಾಯಿಸಿದ್ದಾರೆ.
ಭಾಷಿಕರ ಪ್ರತ್ಯೇಕ ವ್ಯಕ್ತಿತ್ವದ ಹೆಸರಿನಲ್ಲಿ ಕುಲಶಾಸ್ತ್ರದ ಅಧ್ಯಯನ ನಡೆಸಲಿ, ಆದರೆ ಅವರ ಅಸಲಿಯತ್ತನ್ನು ಮರೆಮಾಚಿ (ಕ್ಯಾಮೋಫ್ಲೋಜ್) ಕೊಡವ ಮುಖವಾಡ ತೊಡಿಸುವ ಮೂಲಕ ಸಾಂಸ್ಕೃತಿಕ ವಂಚನೆಯನ್ನು ನಿಲ್ಲಿಸಬೇಕು ಎಂದು ತಿಳಿಸಿದ್ದಾರೆ.
ಕೊಡವ ಬ್ರ್ಯಾಂಡ್ ಎಲ್ಲರಿಗೂ ಬೇಕು, ಆದರೇ ಮೂಲ ಕೊಡವ ರೇಸ್ ಯಾರಿಗೂ ಬೇಡ. ಕೊಡವರಿಗೆ ಸಂವಿಧಾನಿಕವಾಗಿ ಯಾವುದೂ ದೊರೆಯಬಾರದು ಎನ್ನುವ ಸಂಚು ನಡೆಯುತ್ತಿದೆ. ಕೊಡವರೇ ಬೇರೆ, ಭಾಷಿಕರೇ ಬೇರೆ. ಕೊಡವ ವಂಶವಾಹಿ ಅಂತರ್ಗತವೇ ಬೇರೆ, ಕೊಡವ ಅನುಕರಣೆಯೇ ಬೇರೆ. ಕೊಡವರ ಹಿರಿಮೆ ಗರಿಮೆಯನ್ನು ಹೊಗಳುತ್ತಾ ರಾಷ್ಟ್ರ ರಕ್ಷಣೆ ಮತ್ತು ದೇಶ ಕಟ್ಟುವ ಕಾರ್ಯಕ್ಕೆ ಅಪರಿಮಿತ ಕಾಣಿಕೆ ನೀಡಿದ ಕೊಡವರನ್ನು ಕೊಂಡಾಡುವ ನಾಟಕವಾಡುತ್ತಾ ಕೊಡವ ಬ್ರ್ಯಾಂಡ್ ನ ದುರ್ಬಳಕೆ ಮಾಡಲಾಗಿದೆ ಎಂದು ಟೀಕಿಸಿದ್ದಾರೆ.
ಮುಖ್ಯಮಂತ್ರಿಗಳ ಕಛೇರಿಯಲ್ಲಿ ಕಳೆದ 6 ತಿಂಗಳಿನಿoದ ಕೊಳೆಯುತ್ತಾ ಬಿದ್ದಿರುವ ಕೊಡವರ ಕುಲ ಶಾಸ್ತç ಅಧ್ಯಯನದ ಹಕ್ಕನ್ನು ಕಸಿದುಕೊಂಡು ಅಸಲಿ ಮುಖ ಮರೆಮಾಚಿ ಕೊಡವ ಮುಖವಾಡದ ಮೂಲಕ ವಂಚನೆಗೆ ಇಳಿದಿರುವುದು ಸಾಬೀತಾಗುತ್ತಿದೆ. ಕೊಡವ ಹೃದಯ ಭಾಗದ (ಕೊಡವ ಜನಸಂಖ್ಯಾ ಬಾಹುಳ್ಯದ) ಜನಪ್ರತಿನಿಧಿ ಹಾಗೂ ವಕ್ರ ಇತಿಹಾಸ ರಚನೆಯ ಪಂಡಿತರೊಬ್ಬರ ಅಪವಿತ್ರ ಮೈತ್ರಿ ಈ ಬೆಳವಣಿಗೆಗೆ ಕಾರಣ ಎಂದು ನಾಚಪ್ಪ ಆರೋಪಿಸಿದ್ದಾರೆ.
ಕೊಡವರು ಒಂದು ಪ್ರತ್ಯೇಕ ರೇಸ್, ಕೊಡಗಿಗೆ ಸೀಮಿತವಾದ ಆದಿಮ ಸಂಜಾತ ಬುಡಕಟ್ಟು ಸಮುದಾಯ. ಕೊಡಗಲ್ಲದೇ ಕೊಡಗಿನ ಹೊರಗೆ ಕೊಡವರಿಗೆ ಎಲ್ಲೂ ತಾಯಿಬೇರು ಇಲ್ಲ. ಕೊಡವರು ತಮ್ಮದೇ ಆದ ಸೂಕ್ಷö್ಮ ಸಾಂಸ್ಕೃತಿಕ ಒಳಕೋಶಗಳನ್ನು ಹೊಂದಿರುತ್ತಾರೆ. ಕೊಡವರಲ್ಲಿ ಚಾತುರ್ವಣ ಪದ್ದತಿಯ ಜಾತಿ ಉಪಜಾತಿಗಳಿಲ್ಲ. ಯಾವುದೇ ವೈದಿಕ ಪರಂಪರೆ ಕೊಡವರದಲ್ಲ. ಕೊಡವರು 8 ಪುರಾತನ ಋಷಿವರ್ಯರ ಹೆಸರಿನ ಗೋತ್ರಗಳ ಅಡಿಯಲ್ಲಿ ಬರುವುದಿಲ್ಲ, ಈ ಕುರಿತು ಬ್ರಿಟೀಷರ ಅವಧಿಯಲ್ಲಿ ನೆಡೆಸಲಾದ ಮಾನವ ಶಾಸ್ತ್ರ ಅಧ್ಯಯನ (ಆಂಥ್ರೋಪಾಲಿಜಿಕಲ್ ಸರ್ವೆ ಆಫ್ ಇಂಡಿಯಾ) ಎಫಿಗ್ರಾಫಿ ಆಫ್ ಇಂಡಿಯಾದಲ್ಲಿ ಸ್ಪಷ್ಟವಾಗಿ ದಾಖಲೀಕರಣಗೊಂಡಿದೆ. ಮತ್ತು 1881 ರಿಂದ 1931 ರ ತನಕ ನೆಡೆಸಿದ ಜನಗಣತಿಯಲ್ಲೂ ಇದನ್ನೇ ಪುನರುಚ್ಚರಿಸಲಾಗಿದೆ. (ಪ್ರತ್ಯೇಕ ಬುಡಕಟ್ಟು ರೇಸ್ ಎಂಬುದಾಗಿ ಗುರುತಿಸಲಾಗಿದೆ).
1870 ರಲ್ಲಿ ರೆವರೆಂಡ್ ಜಿ ರಿಚ್ಟರ್ ರವರು ಹೊರತಂದ ಸರಕಾರದ ಅಧಿಕೃತ ರಾಜ್ಯ ಕೋಶ ಗೆಜೆಟಿಯರ್ ಆಫ್ ಕೂರ್ಗ್ ನಲ್ಲಿ ಕೊಡವರು ಬೇರೆ ರೇಸ್ ಎಂದು ಕೊಡವರಲ್ಲಿ ಯಾವುದೇ ಉಪಜಾತಿಗಳಿಲ್ಲವೆಂದು ಸ್ಪಷ್ಟವಾಗಿ ನಮೂದಿಸಿದ್ದಾರೆ. ಅದಲ್ಲದೇ ಹಿಂದೂ ಸಮುದಾಯದಡಿಯಲ್ಲಿ ಬರುವ ಹತ್ತಾರು ಸಮುದಾಯಗಳು ಮಲಬಾರು ಪ್ರದೇಶದಿಂದ ಹೊರಗಿನ ರಾಜರ ಅದರಲ್ಲೂ ಪಾಲೇರಿ / ಇಕ್ಕೇರಿ ರಾಜರ ಆಳ್ವಿಕೆಯಲ್ಲಿ ಕರೆತಂದ ವಿವಿಧ ಕುಶಲ ಕರ್ಮಿ ವರ್ಗದವೆರೆಂದು ಅವರ ಕಸುಬುಗಳ ಸಮೇತ ದಾಖಲಿಸಲ್ಪಟ್ಟಿದೆ. (ಅಂದಿನ ಜನಗಣತಿಯ ಕಲಂನಲ್ಲಿ ಕೊಡವ / ಕೂರ್ಗ್ಸ್ ಬೇರೆ ಎಂದು ನಮೂದಿಸಲ್ಪಟ್ಟಿದೆ) ಪುಟ ಸಂಖ್ಯೆ : 111 ನೋಡಿ.
1878 ರಲ್ಲಿ ಲೆವಿಸ್ ರೈಸ್ ರವರು ಹೊರತಂದ ಸರಕಾರದ ಅಧಿಕೃತ ರಾಜ್ಯ ಕೋಶ ಗೆಜೆಟಿಯರ್ ಆಫ್ ಮೈಸೂರು & ಕೂರ್ಗ್ ನಲ್ಲೂ ಮತ್ತೆ ಇದೇ ಅಭಿಪ್ರಾಯವನ್ನು ಪುನರುಚ್ಚರಿಸಲಾಗಿದೆ. 1975 ರಲ್ಲಿ ಖ್ಯಾತ ಸಮಾಜ ವಿಜ್ಞಾನಿ ಮತ್ತು ಕಾನೂನು ಪಂಡಿತರಾದ ಪ್ರೊ ಎಲ್.ಜಿ ಹಾವನೂರು (ಲಕ್ಷ್ಮಣ ಜಿ ಹಾವನೂರು) ರವರ ಅಧ್ಯಕ್ಷತೆಯಲ್ಲಿ ಸಲ್ಲಿಸಲಾದ ಪ್ರಥಮ ಹಿಂದುಳಿದ ವರ್ಗಗಳ ಆಯೋಗದ ವರದಿಯಲ್ಲೂ (ಹಾವನೂರು ಆಯೋಗದ ವರದಿಯನ್ನು ಹಿಂದುಳಿದ ವರ್ಗಗಳ ಭಗವದ್ಗೀತೆಯೆಂದು ಪರಿಗಣಿಸಲ್ಪಟ್ಟಿದೆ) ಕೊಡವ ರೇಸ್ ಬೇರೆ, ಇತರ ಹತ್ತಾರು ಕುಶಲಕರ್ಮಿಗಳೇ ಬೇರೆ ಎಂದು ನಮೂದಿಸಿ ಇಡೀ ಕರ್ನಾಟಕ ರಾಜ್ಯದಲ್ಲಿ ಎಲ್ಲೆಲ್ಲಿ ಇದೇ ತೆರನಾದ ಕುಲ-ಕಸುಬುದಾರಿಕೆ ಹೊಂದಿರುವ ವಿಭಿನ್ನ ಹೆಸರಿನ ಸಮುದಾಯವನ್ನು ಕೊಡಗಿನಲ್ಲಿ ನೆಲೆಸಿರುವ ಹತ್ತಾರು ಸಮುದಾಯಕ್ಕೆ ಹೋಲಿಕೆ ಮಾಡಿ ಭಾಷೆಯಲ್ಲಿ ಮಾತ್ರ ವ್ಯತ್ಯಾಸವಿದ್ದರೂ ಒಂದೇ ತರನಾದ ಕಸುಬುದಾರರೆಂದು ಪರಿಗಣಿಸಿ ಅದೇ ಆಧಾರಿತ ಸವಲತ್ತುಗಳನ್ನು ಕಲ್ಪಿಸಲು ಶಿಫಾರಸ್ಸು ಮಾಡಲಾಗಿದೆ.
1986 ರಲ್ಲಿ ಹೊರಬಂದ 2ನೇ ಹಿಂದುಳಿದ ವರ್ಗಗಳ ವೆಂಕಟಸ್ವಾಮಿ ಆಯೋಗದ ವರದಿಯಲ್ಲೂ ಮೇಲಿನ ಕೂರ್ಗ್ ಗೆಜೆಟಿಯರ್ ಮತ್ತು ಹಾವನೂರು ವರದಿಯ ಮಾನದಂಡಗಳನ್ನೇ ಬಳಸಿ ಕೊಡವರನ್ನು ಪ್ರತ್ಯೇಕಗೊಳಿಸಿ ಉಳಿದ ಹತ್ತಾರು ಸಮುದಾಯಗಳನ್ನು ಕರ್ನಾಟಕದ ಇತರೆ ಸಮುದಾಯಗಳ ಇದೇ ತೆರನಾದ ಕುಲ ಕಸುಬಿನೊಂದಿಗೆ ಗುರುತಿಸಿ ಮೀಸಲಾತಿಗೆ ಶಿಫಾರಸ್ಸು ಮಾಡಲಾಗಿತ್ತು.
1990 ರಲ್ಲಿ ಹೊರಬಂದ ಮೂರನೇ ಹಿಂದುಳಿದ ವರ್ಗಗಳ ಓ ಚಿನ್ನಪ್ಪ ರೆಡ್ಡಿ ಆಯೋಗದ ವರದಿಯಲ್ಲೂ ಮೇಲಿನ ಎರಡು ಕೂರ್ಗ್ ಗೆಜೆಟಿಯರ್‌ಗಳು, ಹಾವನೂರು ಆಯೋಗದ ವರದಿ ಮತ್ತು ವೆಂಕಟಸ್ವಾಮಿ ಆಯೋಗದ ವರದಿಯಲ್ಲಿ ಕೊಡವರನ್ನು ಬೇರೆ ಕುಲವೆಂದು ಗುರುತಿಸಿದ್ದನ್ನು ಪುನರುಚ್ಚರಿಸಿದ್ದಲ್ಲದೇ ಮಲಬಾರ್ ಮೂಲದಿಂದ ಬಂದ ಇತರೆ ಹತ್ತಾರು ಸಮುದಾಯಗಳು ಕರ್ನಾಟಕದ ಇತರೆ ಭಾಗದ ಕುಶಲಕರ್ಮಿಗಳ ತೆರನಾದ ಕುಲಕಸುಬನ್ನು ಹೊಂದಿದವರೆAದು ಪರಿಗಣಿಸಿ ಏಕ ರೀತಿಯ ಮೀಸಲಾತಿ ಕಲ್ಪಿಸಲಾಗಿದೆ. ಓ ಚಿನ್ನಪ್ಪ ರೆಡ್ಡಿ ಆಯೋಗದ ವರದಿಯನ್ನು ಅತ್ಯಂತ ವೈಜ್ಞಾನಿಕ ವರದಿಯೆಂದು ಪರಿಗಣಿಸಲಾಗಿದೆ.
ಇಂದು ಅತ್ಯಂತ ಸೂಕ್ಷ್ಮ ವಿಭಿನ್ನ ಪ್ರತ್ಯೇಕ ಸಮುದಾಯವಾದ ಕೊಡವರನ್ನು ಸಂವಿಧಾನದ 340 ಮತ್ತು 342 ರಡಿ ಎಸ್.ಟಿ ಪಟ್ಟಿಗೆ ಸೇರಿಸಬೇಕೆಂದು ಕೊಡವರ ಬಹುದಿನಗಳ ಆಂದೋಲನ ನಡೆಯುತ್ತಿದ್ದು ಇದು ಪ್ರತಿ ಕೊಡವನ ಶಾಸನಬದ್ಧ ಬೇಡಿಕೆಯಾಗಿದೆ. ಕೊಡವರು ತಮ್ಮ ಅಂತರಾಳದ ಆಕಾಂಕ್ಷೆ ಮತ್ತು ಆಶೋತ್ತರವನ್ನು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಮೂಲಕ ಅಭಿವ್ಯಕ್ತಿಗೊಳಿಸುತ್ತಾ ಬಂದಿದೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ 2016 ರಲ್ಲಿ ಕೊಡವರ ಸಮಗ್ರ ಕುಲಶಾಸ್ತç ಅಧ್ಯಯನಕ್ಕೆ ಆದೇಶ ನೀಡಿದ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಸರಕಾರದ ಸಮಾಜ ಕಲ್ಯಾಣ ಇಲಾಖೆಯು ಈ ಅಧ್ಯಯನದ ಜವಾಬ್ದಾರಿಯನ್ನು ಮೈಸೂರು ಬುಡಕಟ್ಟು ಸಂಶೋಧನಾ ಸಂಸ್ಥೆಗೆ ವಹಿಸಿತ್ತು. ಅಲ್ಲಿ ಪೂರ್ವಗ್ರಹ ಪೀಡಿತರಾದ ನಿದೇರ್ಶಕರ ಕುತಂತ್ರ ಮತ್ತು ಈಗ ಕೊಡವರ ಹೆಸರಿನಲ್ಲಿ ಪರಕಾಯ ಪ್ರವೇಶಮಾಡಲು ಪ್ರೇರೇಪಣೆ ನೀಡುತ್ತಿರುವ ಜನಪ್ರತಿನಿಧಿ ಹಾಗೂ ಚರಿತ್ರೆಯ ವ್ಯಭಿಚಾರದ ಕರಾರು ಮಾಡಿಕೊಂಡಿರುವ ವಿಶ್ವವಿದ್ಯಾನಿಲಯವೊಂದರ ಕುಲನಾಶಕ ವಿದ್ವಾಂಸರ ಹೇಯ ಪಿತೂರಿಯಿಂದ ಸತತ ಹಳಿ ತಪ್ಪುತ್ತಾ ಬಂದಾಗ ಸಿ.ಎನ್.ಸಿ ಸಂಘಟನೆ ರಾಜ್ಯ ಹೈಕೋರ್ಟ್ ನ ಮೊರೆ ಹೋಗಬೇಕಾಯಿತು.
ನಮ್ಮ ನ್ಯಾಯಬದ್ಧ ಬೇಡಿಕೆಯನ್ನು ಪರಿಗಣಿಸಿದ ಘನ ನ್ಯಾಯಲಯವು ಅಧ್ಯಯನದಲ್ಲಿ ಲೋಪ ದೋಷಗಳಿದ್ದರೆ ಸರಕಾರವು ಹೊಸದಾಗಿ ಮರು ಅಧ್ಯಯನ ಮಾಡಲು ಸ್ವತಂತ್ರವಾಗಿದೆಯೆAದು ದಿನಾಂಕ : 22-07-2021 ರಂದು ಆದೇಶ ಹೊರಡಿಸಿತ್ತು. ಇದರಂತೆ 2022 ಏಪ್ರಿಲ್ ತಿಂಗಳಿನಲ್ಲಿ ಸಚಿವ ಶ್ರೀರಾಮುಲು ಅವರು ತಮ್ಮನ್ನು ವಿಕಾಸಸೌಧದ ಕಛೇರಿಗೆ ಕರೆಸಿಕೊಂಡು ಕುಲಶಾಸ್ತçದ ಮರು ಅಧ್ಯಯನದ ಕುರಿತು ಚರ್ಚಿಸಿದರು. ಪೂರಕ ಶಿಫಾರಸ್ಸು ನೀಡುವ ಮೂಲಕ ಕಡತವನ್ನು ಮುಖ್ಯಮಂತ್ರಿಗಳಿಗೆ ತಲುಪಿಸಿದರು. ಮುಖ್ಯಮಂತ್ರಿಗಳ ಕಛೇರಿಯಲ್ಲಿ ಈ ಬಗ್ಗೆ ವಿಚಾರಿಸಿದಾಗ ಕೆಲವೊಮ್ಮೆ ತಿರಸ್ಕೃತಗೊಂಡಿದೆ ಎಂದು, ಮಗದೊಮ್ಮೆ ಕಡತ ಚಾಲ್ತಿ ಪ್ರಕ್ರಿಯೆಯಲ್ಲಿದೆಯೆಂದು ಕಣ್ಣಾ ಮುಚ್ಚಾಲೆ ಆಡುತ್ತಾ ಬಂದಿದ್ದರು. ಕಡತ ವಿಲೇವಾರಿ ವಿಚಾರದಲ್ಲಿ ಕಾಲಹರಣ ಮಾಡಲಾಗುತ್ತಿದ್ದು, ನ್ಯಾಯಾಲಯದ ತೀರ್ಪನ್ನೇ ದಿಕ್ಕರಿಸಿದ ಪ್ರಕರಣ ಇದಾಗಿದೆ. ಇದರಿಂದ ಸರ್ಕಾರ ಈ ನೆಲದ ಕಾನೂನಿಗೆ ಗೌರವ ನೀಡುವುದಿಲ್ಲವೆಂಬ ಸಂದೇಶ ರವಾನೆಯಾದಂತಾಗಿದೆ ಎಂದು ನಾಚಪ್ಪ ಆರೋಪಿಸಿದ್ದಾರೆ.
ಮುಖ್ಯಮಂತ್ರಿಗಳಿಗೆ ಕೊಡವರ ಬಗ್ಗೆ ನೈಜ ಕಾಳಜಿ ಇದ್ದಲ್ಲಿ ತಕ್ಷಣ ಕಡತವನ್ನು ವಿಲೇವಾರಿ ಮಾಡಿ ಕೊಡವರ ಕುಲಶಾಸ್ತç ಮರು ಅಧ್ಯಯನಕ್ಕೆ ಆದೇಶಿಸಬೇಕು. ಇಲ್ಲದಿದ್ದರೆ ಕೊಡವರು ಕಲ್ಯಾಣ ರಾಜ್ಯ ವ್ಯಾಪ್ತಿಯಲ್ಲಿ ಬರುವುದಿಲ್ಲ, ಆದ್ದರಿಂದ ಕೊಡವರ ಸಬಲೀಕರಣ ಅಸಾಧ್ಯವೆಂದು ನೇರವಾಗಿ ನುಡಿಯಲಿ ಎಂದು ಒತ್ತಾಯಿಸಿದ್ದಾರೆ.
ಸಂವಿಧಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ್ ಅವರು ಭಾರತದ ಸರ್ವ ಜನರ ಕಲ್ಯಾಣಕ್ಕಾಗಿ ರಚಿಸಿದ ಸಂವಿಧಾನದ ಮೇಲೆ ಪ್ರಮಾಣ ಮಾಡಿ ಅಧಿಕಾರ ನಡೆಸುವವರು ಸಂವಿಧಾನಿಕ ಆಶಯಕ್ಕೆ ಅಪಚಾರವೆಸಗಬಾರದು. ಕೊಡವ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸಲು ಮರು ಅಧ್ಯಯನಕ್ಕೆ ಆದೇಶ ಮಾಡುವ ಮೂಲಕ ನೈಜ ಕೊಡವರಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ, ಸಮಾಜ ಕಲ್ಯಾಣ ಇಲಾಖೆ ಮತ್ತು ಬುಡಕಟ್ಟು ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಣಿವಣ್ಣನ್ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿ ತುಳಸಿ ಮದ್ದಿನೇನಿ ಅವರಿಗೆ ಪತ್ರ ಬರೆದು ಒತ್ತಾಯಿಸಿರುವುದಾಗಿ ನಾಚಪ್ಪ ತಿಳಿಸಿದ್ದಾರೆ.