ನವದೆಹಲಿ ಮಾ.8 : ಅಗ್ನಿವೀರ್ ಯೋಜನೆಯಡಿ, ಸಂಕುಚಿತ ಸಮಯದ ಚೌಕಟ್ಟಿನಲ್ಲಿ ತರಬೇತಿಯನ್ನು ಪೂರ್ಣಗೊಳಿಸಬೇಕು. ದೈಹಿಕ ಕಂಡೀಷನಿಗ್, ಶಸ್ತಾಸ್ತ್ರ ತರಬೇತಿ, ಸಣ್ಣ ಶಸ್ತ್ರಾಸ್ತ್ರಗಳ ನಿರ್ವಹಣೆ ಮತ್ತು ಮಿಲಿಟರಿ ಪೋಲೀಸ್‌ನ ಇತರ ಕಾರ್ಯಾಚರಣೆಯ ಅಂಶಗಳೂ ಅಗ್ನಿವೀರ್ ನಲ್ಲಿ ಅಡಕವಾಗಿರುತ್ತದೆ.
ದೇಶ ಸೇವೆಯ “ಅಗ್ನಿವೀರ್” ಪರಿಕಲ್ಪನೆಯಡಿ ಲಕ್ಷಾಂತರ ಯುವ ಆಕಾಂಕ್ಷಿಗಳು ತರಬೇತಿಗಾಗಿ ಮುಂದೆ ಬಂದಿದ್ದಾರೆ. ಅಗ್ನಿವೀರ್ ನೇಮಕಾತಿಗಳ ಎರಡನೇ ಬ್ಯಾಚ್ ಆಗಿದ್ದು, ಕೇಂದ್ರದಲ್ಲಿ 350 ಕ್ಕೂ ಹೆಚ್ಚು ಅಗ್ನಿವೀರ್ ತರಬೇತಿ ನಡೆಯುತ್ತಿದೆ. ಮೊದಲ ಬ್ಯಾಚ್ ಪ್ರಸ್ತುತ ಹತ್ತನೇ ವಾರದ ತರಬೇತಿಯಲ್ಲಿದೆ, ಇಲ್ಲಿ ಎಲ್ಲರೂ ಪುರುಷರೇ ಇದ್ದಾರೆ. ಎರಡನೇ ಬ್ಯಾಚ್ ನಲ್ಲಿ 100 ಯುವತಿಯರು ಹಾಗೂ 140 ಪುರುಷ ನೇಮಕಾತಿ ನಡೆಯಲಿದೆ. ಮಾರ್ಚ್ 1 ರಿಂದಲೇ ತರಬೇತಿ ಪ್ರಾರಂಭವಾಗಿದ್ದು, 31 ವಾರಗಳ ತರಬೇತಿ ನಡೆಯಲಿದೆ.
ತರಬೇತಿ ಬಳಿಕ ಯುವಕ, ಯುವತಿಯರು ಕಾರ್ಪ್ಸ್ ಆಫ್ ಮಿಲಿಟರಿ ಪೋಲೀಸ್ (ಸಿಎಂಪಿ) ಆಗಿ ಹೊರಹೊಮ್ಮಲಿದ್ದಾರೆ. ದೈನಂದಿನ ಕರ್ತವ್ಯಗಳು ಮಿಲಿಟರಿ ಪೋಲೀಸರ ಪಾತ್ರವನ್ನು ಹೋಲುತ್ತವೆ. ಕಂಟೋನ್ಮೆಂಟ್‌ನ ಶಿಸ್ತು, ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಗಳನ್ನು ನಿರ್ವಹಿಸಲಿದ್ದಾರೆ. ಮಹಿಳಾ ಅಗ್ನಿವೀರ್‌ಗಳಿಗೆ ನಿರ್ದಿಷ್ಟ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಗ್ನಿವೀರ್ ಸೇವೆ ಸಲ್ಲಿಸಲು ನಾಲ್ಕು ವರ್ಷಗಳ ಕಾಲಾವಕಾಶ ಮಾತ್ರ ನೀಡಲಾಗಿದೆ.













