ಮಡಿಕೇರಿ ಮಾ.15 : ಸಾರ್ವಜನಿಕರಿಗೆ ಸರ್ಕಾರದ ಸೇವೆಗಳನ್ನು ಒಂದೇ ಸೂರಿನಡಿಯಲ್ಲಿ ಎಲ್ಲಾ ಇಲಾಖೆಗಳ ಆಯ್ಕೆ ಸೇವೆಗಳನ್ನು ನಗರ ಸ್ಥಳಿಯ ಸಂಸ್ಥೆಯ ಭಾಗದ ನಾಗರೀಕರಿಗೆ ನೀಡುವ ಸದುದ್ದೇಶದಿಂದ “ಕರ್ನಾಟಕ ಒನ್” ಸೇವಾ ಕೇಂದ್ರಗಳನ್ನು ಸ್ಥಾಪಿಸಲು ಆಸಕ್ತ ಪ್ರಾಂಚೈಸಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅದರಂತೆ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಈ ಕೆಳಕಂಡ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕರ್ನಾಟಕ ಒನ್ ಸೇವಾ ಕೇಂದ್ರಗಳನ್ನು ಸ್ಥಾಪಿಸಲು ಅವಕಾಶ ಕಲ್ಪಿಸಲಾಗಿರುತ್ತದೆ. ಮಡಿಕೇರಿ ನಗರ ಸಭೆ (1 ಕೇಂದ್ರ), ಕುಶಾಲನಗರ ಪಟ್ಟಣ ಪಂಚಾಯತ್ (2 ಕೇಂದ್ರ), ಸೋಮವಾರಪೇಟೆ ಪಟ್ಟಣ ಪಂಚಾಯತ್ (1 ಕೇಂದ್ರ), ವಿರಾಜಪೇಟೆ ಪಟ್ಟಣ ಪಂಚಾಯತ್ (2 ಕೇಂದ್ರ).
ಜಿಲ್ಲೆಯಲ್ಲಿ ಒಟ್ಟು 6 ಕರ್ನಾಟಕ ಒನ್ ಕೇಂದ್ರಗಳನ್ನು ಸ್ಥಾಪಿಸಲು ಅವಕಾಶ ಕಲ್ಪಿಸಲಾಗಿದ್ದು, ಆಸಕ್ತ ಪ್ರಾಂಚೈಸಿಗಳು https://www.karnatakaone.gov.in/Public/FranchiseeTerms ಲಿಂಕ್‍ನ ಮೂಲಕ ಮಾತ್ರವೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಮಾರ್ಚ್, 20 ರ ರಾತ್ರಿ 8 ಗಂಟೆಯವರೆಗೆ ಕಾಲಾವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಜಿಲ್ಲಾ ಪ್ರಾಜೆಕ್ಟ್ ಮ್ಯಾನೇಜರ್, ಜಿಲ್ಲಾಧಿಕಾರಿಯವರ ಕಚೇರಿ (ದೂ.ಸಂ.9900385301) ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಮಟ್ಟದ ಕರ್ನಾಟಕ ಒನ್ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಿಳಿಸಿದ್ದಾರೆ.









