ನಾಪೋಕ್ಲು ಮಾ.20 : ಚೆರಿಯಪರಂಬು ಮುಹಿಯದ್ದೀನ್ ಜುಮಾ ಮಸೀದಿಯ 2023-24 ನೇ ಸಾಲಿನ ನೂತನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಪರವಂಡ ಝುಬೈರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ಪಿ.ಎ ಸಿರಾಜುದ್ದೀನ್, ಉಪಾಧ್ಯಕ್ಷರಾಗಿ ಪಿ. ಎ.ಹಾರಿಸ್, ಸಹ ಕಾರ್ಯದರ್ಶಿಯಾಗಿ ಕೆ.ಎ.ಹಾರಿಸ್, ಕೆ.ಎ.ಮಾಹಿನ್, ಕೋಶಾಧಿಕಾರಿಯಾಗಿ ಪಿ.ಹೆಚ್.ಬಶೀರ್, ಸಮಿತಿ ಸದಸ್ಯರಾಗಿ ಪಿ.ಐ.ರಫೀಕ್ ಸಖಾಫಿ, ಅಶ್ರಫ್ ಪಿ.ಎಂ, ಅಬ್ದುಲ್ ರಹ್ಮಾನ್, ಪಿ.ಎ.ಹಾಶಿಮ್ , ಎಂ.ಎಸ್.ಹುಸೈನ್, ಎನ್.ಎ .ಅಶ್ರಫ್ , ಎಂ.ಎ.ಸಲಾಂ , ವಿ.ಎ.ನಝೀರ್ ಇವರುಗಳನ್ನು ಚೆರಿಯಪರಂಬುವಿನ ಮದರಸ ಸಭಾಂಗಣದಲ್ಲಿ ನಡೆದ ಜಮಾಅತ್ ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆಮಾಡಲಾಯಿತು.
ವರದಿ :ಝಕರಿಯ ನಾಪೋಕ್ಲು










