ಸೋಮವಾರಪೇಟೆ ಮಾ.21 : ಕಂದಾಯ ಇಲಾಖೆ ಮತ್ತು ಸರ್ವೆ ಇಲಾಖೆಯಲ್ಲಿ ಕೆಲ ನೌಕರರಿಂದ ರೈತರ ಶೋಷಣೆ ನಡೆಯುತ್ತಿದೆ ಎಂದು ಆರೋಪಿಸಿ ಕೊಡಗು ಜಿಲ್ಲಾ ಜಾತ್ಯಾತೀತ ಜನತಾದಳದಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.
ವಿವೇಕಾನಂದ ವೃತ್ತದಿಂದ ಮೆರವಣಿಗೆಯಲ್ಲಿ ತೆರಳಿದ ಪ್ರತಿಭಟನಾಕಾರರು ಜೇಸಿ ವೇದಿಕೆಯಲ್ಲಿ ಬಹಿರಂಗ ಸಭೆ ನಡೆಸಿ ಇಲಾಖೆಯ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಮಡಿಕೇರಿ ಕ್ಷೇತ್ರ ಸಮಿತಿ ಅಧ್ಯಕ್ಷ ಎಚ್.ಆರ್.ಸುರೇಶ್ ಮಾತನಾಡಿ, 1993 ಮತ್ತು 99ರಲ್ಲಿ ಅಕ್ರಮ ಸಕ್ರಮದಲ್ಲಿ ಅರ್ಜಿ ಸಲ್ಲಿಸಿದ ಅನೇಕ ರೈತರಿಗೆ ಇದುವರಗೆ ಭೂ ಮಂಜೂರಾತಿ ಆಗಿರುವುದಿಲ್ಲ. ಕೆಲವು ಪ್ರಭಾವಿಗಳಿಗೆ ಮಾತ್ರ ಸಿ ಮತ್ತು ಡಿ ಜಾಗದಲ್ಲಿ ಭೂ ಮಂಜೂರಾತಿ ಆಗಿರುತ್ತದೆ. ಉಳಿದ ರೈತರು ಏನೂ ಅನ್ಯಾಯ ಮಾಡಿದ್ದಾರೆ. ಎಲ್ಲಾ ರೈತರಿಗೂ ಸಿ ಮತ್ತು ಡಿ ಜಾಗದಲ್ಲಿ ಭೂ ಮಂಜೂರಾತಿ ಮಾಡುವಂತೆ ಆಗ್ರಹಿಸಿದರು.
ರೈತರು ಬೀದಿಗಿಳಿದು ಪ್ರತಿಭಟನೆ ಮಾಡದಿದ್ದರೆ ರೈತರ ಶೋಷಣೆ ಮುಂದುವರಿಯಲಿದೆ ಎಂದು ಎಚ್ಚರಿಸಿದರು.
ಜಮ್ಮಾ ಹಿಡುವಳಿ, ಕಂದಾಯ ವ್ಯಾಪ್ತಿಗೆ ಬಂದೇ ಇಲ್ಲ. ಇಂದಿಗೂ ಜಮ್ಮಾ ಹಿಡುವಳಿದಾರರಿಗೆ ಬೆಳೆಹಾನಿ ಪರಿಹಾರ, ಸರ್ಕಾರದ ಸಬ್ಸಿಡಿ, ಯೋಜನೆಗಳು ಯಾವುದೂ ಸಿಗುತ್ತಿಲ್ಲ. ರೈತರ ಕಷ್ಟವನ್ನು ಕೇಳುವವರೆ ಇಲ್ಲದಂತಾಗಿದೆ ಎಂದು ಜೆಡಿಎಸ್ ಮುಖಂಡ ನಾಪಂಡ ಮುತ್ತಪ್ಪ ಹೇಳಿದರು.
ರೈತಾಪಿ ವರ್ಗದ ಶೋಷಣೆ ನಿಲ್ಲಬೇಕು. ಸರ್ಕಾರ ನೂತನ ಮಸೂದೆಯನ್ನು ಮಂಡಿಸಿ, ಒತ್ತುವರಿ ಭೂಮಿ, ಸಿ.ಎನ್.ಡಿ.ಭೂಮಿ, ಜಮ್ಮಾ ಭೂಮಿಗೆ ಹಕ್ಕುಪತ್ರಗಳನ್ನು ನೀಡಿ ರೈತರನ್ನು ರಕ್ಷಣೆ ಮಾಡಬೇಕಾಗುತ್ತದೆ. ತಪ್ಪಿದಲ್ಲಿ ಸರ್ಕಾರಿ ಸೌಲಭ್ಯಗಳನ್ನು ರೈತರು ಪಡೆಯಲು ಸಾಧ್ಯವಾಗದೆ, ಎಲ್ಲವನ್ನೂ ಕಳೆದುಕೊಳ್ಳಬೇಕಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಂತರ ಪ್ರತಿಭಟನಾಕಾರರು ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ, ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬಂದು ತಮ್ಮ ಅಹವಾಲು ಸ್ವೀಕರಿಸುವಂತೆ ಪಟ್ಟುಹಿಡಿದರು. ನಂತರ ತಹಸೀಲ್ದಾರ್ ಸ್ಥಳಕ್ಕೆ ಬಂದು ಪ್ರತಿಭಟನಾಕಾರರ ಬೇಡಿಕೆಗಳನ್ನು ಆಲಿಸಿದರು. ಪ್ರತಿಯೊಂದು ಕೆಲಸಕ್ಕೂ ಇಂತಿಷ್ಟು ಹಣವನ್ನು ಫಿಕ್ಸ್ ಮಾಡಿದ್ದಾರೆ. ಒಂದು ಸರ್ವೆ ನಂ ದುರಸ್ತಿಗೆ 1ಲಕ್ಷ ರೂ ಕೇಳುತ್ತಾರೆ. ಅದು ಬ್ರೋಕರ್ ಮೂಲಕ ಹೋಗಬೇಕು. ಬಡ ರೈತರ ಫೈಲ್ ವರ್ಷಾನುಗಟ್ಟಲೆ ಕಚೇರಿಯಲ್ಲೇ ಕೊಳೆಯುತ್ತಿವೆ. ಕೆಲವು ಸಿಬ್ಬಂದಿಗಳು ಲೋಕಾಯುಕ್ತರಿಗೂ ಭಯಪಡುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿನ ಸುರಿಮಳೆಗೈದರು.
ಶಾಂತಳ್ಳಿ ಹೋಬಳಿಯಲ್ಲಿ ಅನೇಕ ಪ್ರಭಾವಿಗಳಿಗೆ ಸಿ ಮತ್ತು ಡಿ ಜಾಗದಲ್ಲೂ ಹಕ್ಕುಪತ್ರ ನೀಡಿದ್ದಾರೆ. ಬಡ ರೈತರಿಗೆ ಯಾಕೆ ಹಕ್ಕುಪತ್ರ ನೀಡುತ್ತಿಲ್ಲ ಎಂದು ಪ್ರಶ್ನಿಸಿದ ಪ್ರತಿಭಟನಾಕರರು ಬಡವರಿಗೆ ಮಾತ್ರ ನಿಯಮಗಳನ್ನು ಪಾಲಿಸಬೇಕೆ ? ಎಂದು ಆರ್.ಟಿ.ಐ.ಕಾರ್ಯಕರ್ತ ಬಿ.ಪಿ.ಅನಿಲ್ ಕುಮಾರ್ ತಹಸೀಲ್ದಾರ್ ಎಸ್.ಎನ್.ನರಗುಂದ ಅವರನ್ನು ಪ್ರಶ್ನಿಸಿದರು.
ತಾಲ್ಲೂಕಿನಲ್ಲಿ ದುರಸ್ತಿ ಅರ್ಜಿಗಳ ಪಟ್ಟಿಯನ್ನು ಕೊಟ್ಟರೆ, ಎಲ್ಲವನ್ನೂ ಪರಿಶೀಲಿಸಿ, ವಿಲೇವಾರಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರರು ಭರವಸೆ ನೀಡಿದರು. ಅಕ್ರಮ- ಸಕ್ರಮದಲ್ಲಿ ಅರ್ಜಿಗಳನ್ನು ಪರಿಶೀಲಿಸಿ ಕ್ರಮ ಜರುಗಿಸಲಾಗುವುದು. ಉಳಿದ ಬೇಡಿಕೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಹಸೀಲ್ದಾರರು ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಯಿತು. ಪ್ರತಿಭಟನೆಯಲ್ಲಿ ಜೆಡಿಎಸ್ ಮುಖಂಡರಾದ ಕೆ.ಟಿ.ಪರಮೇಶ್, ತ್ರಿಶೂಲ್, ಪ್ರವೀಣ್, ಆದರ್ಶ್, ಜಲಾ ಹೂವಯ್ಯ, ಜಾನಕಿ ವೆಂಕಟೇಶ್, ಎಂ.ಎ.ರುಬಿನಾ, ಪುಷ್ಪ, ಅಜಿತ್, ಸಂಭ್ರಮ್ ಮತ್ತಿತರರು ಇದ್ದರು.
Breaking News
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*
- *ಕೊಡಗು ಕೃಷಿ ವಿಜ್ಞಾನ ವೇದಿಕೆಯ ಬೆಳ್ಳಿ ಮಹೋತ್ಸವ : ನ.26 ರಂದು ರೈತ ಮೇಳ*
- *ಡಿ.1 ರಂದು ಗಾಳಿಬೀಡುವಿನಲ್ಲಿ ಬಾಣೆ ಹಬ್ಬ*
- *ನ.26 ರಂದು ಮಡಿಕೇರಿಯಲ್ಲಿ ಜಿಕೀರ್, ಜಾರಿ ಮತ್ತು ನಾತೆ-ರಸುಲ್” ಗಾಯನ*
- *ವಿಶ್ವಾಸ್ ವೆಂಕಟ್ ಗೆ ಟೇಬಲ್ ಟೆನ್ನಿಸ್ ನಲ್ಲಿ ರನ್ನರ್ ಪ್ರಶಸ್ತಿ*