ಮೂರ್ನಾಡು ಮಾ.23 : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ 2022-23ನೇ ಸಾಲಿನಲ್ಲಿ ನಡೆಸಿದ ಕಿರಿಯ ದರ್ಜೆಯ ಭರತನಾಟ್ಯ ಪರೀಕ್ಷೆಯಲ್ಲಿ ಭಾರತೀಯ ನೃತ್ಯ ಶಾಲೆಯ ಮೂರ್ನಾಡು ಮತ್ತು ಸಿದ್ದಾಪುರದ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ಭರತನಾಟ್ಯ ಪರೀಕ್ಷೆಗೆ ತೆಗೆದುಕೊಂಡ ಹತ್ತು ವಿದ್ಯಾರ್ಥಿಗಳು ಉನ್ನತ, ಪ್ರಥಮ ಹಾಗೂ ದ್ವಿತೀಯ ಸ್ಥಾನದ ಅಂಕಗಳನ್ನು ಪಡೆದು ಸಾಧನೆ ಗೈದಿದ್ದಾರೆ ಎಂದು ಶಾಲಾ ನೃತ್ಯ ಶಿಕ್ಷಕಿ ವಿದುಷಿ ಜಲಜ ನಾಗರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.