ಸೋಮವಾರಪೇಟೆ ಮಾ.23 : ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಪಟ್ಟಣದ ಜನತಾಕಾಲೋನಿಯಲ್ಲಿ 35 ಲಕ್ಷ ವೆಚ್ಚದ ಅಭಿವೃದ್ದಿ ಕಾಮಗಾರಿಗೆ ಶಾಸಕ ರಂಜನ್ ಭೂಮಿಪೂಜೆ ನೆರವೇರಿಸಿದರು
ಪಟ್ಟಣದಲ್ಲಿ ಇದೆ ಮೊದಲ ಭಾರಿಗೆ ಜನತಾ ಕಾಲೋನಿಯ ನ್ನು ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಸೇರಿಸಲಾಗಿದ್ದು ಮುಂದೆ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಕೈಗೆತ್ತಿ ಕೊಳ್ಳಲಾಗುವುದು ಎಂದು ಶಾಸಕ ರಂಜನ್ ತಿಳಿದರು.
ಈ ಭಾರಿ ಬಿಡುಗಡೆಯಾಗಿರುವ 35 ಲಕ್ಷ ರೂ ಗಳಲ್ಲಿ ಕಾಂಕ್ರೀಟ್ ರಸ್ತೆ, ಚರಂಡಿ, ರಸ್ತೆ ಡಾಂಬರೀಕರಣ ಮುಂತಾದ ಕಾಮಗಾರಿಗಳು ನಡೆಯಲಿವೆ ಎಂದರು.
ಈ ಸಂದರ್ಭ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಚಂದ್ರು, ಸದಸ್ಯರಾದ ಶುಭಕರ,ಎಸ್.ಮಹೇಶ್,ಶರತ್,ಮೋಹಿನಿ,ನಾ ಗರತ್ನ,ಸೋಮೇಶ್,ಜಯಂತಿ,ಮಹೇಶ್, ಮುಖ್ಯಾಧಿಕಾರಿ ನಾಚಪ್ಪ,ಕೊಳಗೇರಿ ಅಭಿವೃದ್ಧಿ ಮಂಡಳಿಯ ಕಾರ್ಯಪಾಲಕ ಅಭಿಯಂತರ ತೇಜಶ್ರೀ,ಅಭಿಯಂತರ ಜವಾಹರ್ ಜೋಗಿ ಹಾಗೂ ಮುಂತಾದವರು ಹಾಜರಿದ್ದರು.