ಸೋಮವಾರಪೇಟೆ ಮಾ.23 : ತಾಲೂಕಿನ ಅಕ್ರಮಸಕ್ರಮ ಸಮಿತಿ ಸಭೆಯ ಇಲ್ಲಿನ ತಾಲೂಕು ಕಚೇರಿ ಸಭಾಂಗಣದಲ್ಲಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅಧ್ಯಕ್ಷತೆಯಲ್ಲಿ ನಡೆಯಿತು.
ಫಾಂ 57 ರ ಅಡಿಯಲ್ಲಿ ಅಕ್ರಮಸಕ್ರಮ ಅರ್ಜೀವಿಲೇವಾರಿಗೆ ಸಮಿತಿಯ ಸದಸ್ಯರಿಗೂ ಹಣ ನೀಡಬೇಕೆಂದು ತಾಲೂಕು ಕಚೇರಿ ಸಿಬ್ಬಂದಿಗಳು ಹಾಗೂ ಕೆಲವು ದಲ್ಲಾಳಿಗಳು ಹಣ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ ಎಂದು ಸಮಿತಿ ಸದಸ್ಯ ಎಂ.ಎನ್.ಕುಮಾರಪ್ಪ ಗಂಭೀರ ಆರೋಸಿದರು. ಯಾರು, ಯಾರಿಗೆ ಹಣಕೊಡುತಿದ್ದಾರೆ ಕೇಳಬೇಕು. ಇಲ್ಲಿ ಹಣವಿಲ್ಲದೆ ಕಡತವೇ ಮುಂದೆ ಹೋಗುತ್ತಿಲ್ಲ ಎಂದು ಸಾರ್ವನಿಕವಾಗಿ ಕೇಳಿಬರುತ್ತಿದೆ ಎಂದರು.
ಈ ಸಂದರ್ಭ ಮಾತನಾಡಿದ ಶಾಸಕರು ಯಾರಿಗೆ ಹಣಕೊಡುತ್ತಿದ್ದೀರಿ ಹೇಳಿ ಅಧಿಕಾರಿಗಳೇ, ನಾವು ಸಭೆಯಲ್ಲಿ ನೀವು ಕೊಡುವ ಟೀ ಬಿಟ್ಟರೆ ಏನೂ ಕೇಳುತ್ತಿಲ್ಲ, ಬೇಕಾದರೆ ಮುಂದಿನ ಸಭೆಯಿಂದ ಅದನ್ನು ನೀಡಬೇಡಿ. ಹಣಕ್ಕಾಗಿ ಜನ ಸಾಮಾನ್ಯರಿಗೆ ತೊಂದರೆ ಕೊಡಬೇಡಿ, ಹಾಗೆಯೇ ಜನರೂ ಅಷ್ಟೇ ಸುಮ್ಮನೆ ಲಂಚ ಕೊಡಬೇಡಿ ಎಂದರು.
ಚುನಾವಣೆ ಹಿನ್ನೆಲೆ ಇದು ಕೊನೆಯ ಸಬೆಯಾದ ಕಾರಣ ಸಾಕಷ್ಟು ಕಡತ ವಿಲೇವಾರಿ ಮಾಡಲಾಯಿತು ಮತ್ತು ಪಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು.
ಸಭೆಯಲ್ಲಿ ಸಮಿತಿ ಸದಸ್ಯರುಗಳಾದ ಸುಮಾ ಸುದೀಪ್, ಕೆಂಚೇಶ್ವರ, ತಹಶೀಲ್ದಾ ರ್ ನರಗುಂದ ಹಾಗು ಅಧಿಕಾರಿಗಳು ಉಪಸ್ಥಿತರಿದ್ದರು.