ಮಡಿಕೇರಿ ಮಾ.23 : ಕೆದಂಬಾಡಿ ಕ್ರಿಕೆಟ್ ಹಬ್ಬದ 27ನೇ ಆವೃತ್ತಿಯ ಪಂದ್ಯಾವಳಿ ಚೆಟ್ಟಿಮಾನಿಯ ಕೆದಂಬಾಡಿ ಐನ್ ಮನೆಯ ಮೈದಾನದಲ್ಲಿ ಏ.15 ರಿಂದ ಹತ್ತು ದಿನಗಳ ಕಾಲ ನಡೆಯಲಿದೆಯೆಂದು ಕ್ರಿಕೆಟ್ ಹಬ್ಬದ ಆಯೋಜಕ ಸಮಿತಿಯ ಅಧ್ಯಕ್ಷರಾದ ಕೆದಂಬಾಡಿ ಎಸ್.ಕೀರ್ತಿ ಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಕೊಡಗು ಮತ್ತು ದಕ್ಷಿಣ ಕನ್ನಡ ವಿಭಾಗದ ಗೌಡ ಸಮುದಾಯದ ಕಟುಂಬಗಳಿಗೆ ಸೀಮಿತವಾಗಿ ನಡೆಯುವ ಪಂದ್ಯಾವಳಿಯಲ್ಲಿ 80 ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
2018-2019ರಲ್ಲಿ ಕ್ರಿಕೆಟ್ ಹಬ್ಬವನ್ನು ಆಯೋಜಿಸಲಾಗಿತ್ತು. ಆದರೆ, ಕೊರೊನಾ ಹಾಗೂ ಇನ್ನಿತರ ಸಮಸ್ಯೆಗಳಿಂದ ಕ್ರೀಡಾಕೂಟವನ್ನು ಆಯೋಜಿಸಲು ಸಾಧ್ಯವಾಗಿರಲಿಲ್ಲ.ಈ ಬಾರಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದರು.
ಆಸಕ್ತ ತಂಡಗಳು ಏ.5ರೊಳಗೆ ಮೈದಾನ ಶುಲ್ಕ 2500 ರೂ.ನೀಡಿ ಹೆಸರು ನೋಂದಾಯಿಸಿಕೊಳ್ಳಬೇಕು. ನಾಕೌಟ್ ಮಾದರಿಯ ಪಂದ್ಯಾವಳಿಯ ಆರಂಭಿಕ ಪಂದ್ಯಗಳು 6 ಓವರ್‍ಗೆ ಸೀಮಿತವಾಗಿರುತ್ತದೆ. ಪ್ರೀ ಕ್ವಾರ್ಟರ್ ಫೈನಲ್‍ನಿಂದ ಸೆಮಿಫೈನಲ್‍ವರೆಗಿನ ಪಂದ್ಯಗಳು 8 ಓವರ್ ಹಾಗೂ ಫೈನಲ್ ಪಂದ್ಯ 12 ಓವರ್‍ನದ್ದಾಗಿರುತ್ತದೆ.ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ತಂಡಗಳಿಗೆ ನಗದು ಹಾಗೂ ಆಕರ್ಷಕ ಟ್ರೋಫಿ ಮತ್ತು ನಾಲ್ಕನೇ ಸ್ಥಾನ ಪಡೆದ ತಂಡಕ್ಕೆ ಟ್ರೋಫಿ ನೀಡಿ ಗೌರವಿಸಲಾಗುವುದು ಎಂದರು.
ಹೆಚ್ಚಿನ ಮಾಹಿತಿಗಾಗಿ ಶೋಧನ್ ಕೆದಂಬಾಡಿ, 8277779954, ಭರತ್ ಕೆದಂಬಾಡಿ 9740782444, ಕೃಷ್ಣ ಕೆದಂಬಾಡಿ 9481701032, ನಿತಿನ್ ಕೆದಂಬಾಡಿ 8088536117 ಅವರನ್ನು ಸಂಪರ್ಕಿಸಬಹುದೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕ್ರಿಕೆಟ್ ಸಮಿತಿಯ ಕಾರ್ಯದರ್ಶಿ ಕೆದಂಬಾಡಿ ನಿತಿನ್, ಖಜಾಂಚಿ ಶೋಧನ್ ಕೆದಮಬಾಡಿ, ಸದಸ್ಯರಾದ ಕೆ.ಎಸ್. ವರದರಾಜು, ಕೆ.ಹೆಚ್.ಪುಷನ್ ಉಪಸ್ಥಿತರಿದ್ದರು.