ಮಡಿಕೇರಿ ಮಾ.28 : ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ, ಅಂಗವಿಕಲರಿಗೆ(ಪಿಡಬ್ಲ್ಯುಡಿಎಸ್) ಮತ್ತು ಕೋವಿಡ್-19 ಸೋಂಕಿತ ಅಥವಾ ಬಾಧಿತ ವ್ಯಕ್ತಿಗಳಿಗೆ ಹಾಗೂ ಅಗತ್ಯ ಸೇವೆಗಳ ಮೇಲಿರುವ ಅಂದರೆ ಗೈರು ಹಾಜರಿ ಮತದಾರರಿಗೆ ಅಂಚೆ ಮತಪತ್ರ ವಿತರಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಿಳಿಸಿದ್ದಾರೆ.
ಬೂತ್ ಮಟ್ಟದ ಅಧಿಕಾರಿಗಳು ಮತದಾನ ಕೇಂದ್ರವಿರುವ ಪ್ರದೇಶದಲ್ಲಿ ಚುನಾವಣಾಧಿಕಾರಿಯು ಒದಗಿಸಿದ ವಿವರಗಳ ಅನುಸಾರ ಎವಿಎಸ್‍ಸಿ(ಅಬ್ಸೆಂಟೀ ವೋಟರ್ಸ್ ಆಫ್ ಸೀನಿಯರ್ ಸಿಟಿಜನ್ ಕೆಟಗರಿ) ಎವಿಪಿಡಿ(ಅಬ್ಸೆಂಟೀ ವೋಟರ್ಸ್ ಬಿಲಾಂಗಿಂಗ್ ಟು ಪಿಡಬ್ಲ್ಯುಡಿ ಕೆಟಗರಿ) ಮತ್ತು ಎವಿಸಿಓ(ಅಬ್ಸೆಂಟೀ ವೋಟರ್ಸ್ ಬಿಲಾಂಗಿಂಗ್ ಟು ಕೋವಿಡ್-19 ಕೆಟಗರಿ) ಪ್ರವರ್ಗಗಳಲ್ಲಿನ ಗೈರು ಹಾಜರಿ ಮತದಾರರ ಮನೆಗಳಿಗೆ ಭೇಟಿ ನೀಡಿ ಸಂಬಂಧಪಟ್ಟ ಮತದಾರನಿಗೆ ನಮೂನೆ 12 ಡಿ ಯನ್ನು ವಿತರಿಸಿ, ನಂತರ ಮತದಾರರಿಂದ ಚಲಾಯಿಸಿದ ನಮೂನೆ 12 ಡಿ ಯನ್ನು ಪಡೆಯಲಿದ್ದಾರೆ.
ಸೆಕ್ಟರ್ ಅಧಿಕಾರಿಗಳು ನಮೂನೆ 12 ಡಿ ಅರ್ಜಿಗಳನ್ನು ವಿತರಿಸುವ ಹಾಗೂ ಸಂಗ್ರಹಿಸುವ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲಿದ್ದಾರೆ. ಈ ಎಲ್ಲಾ ಕಾರ್ಯದ ಸಂಪೂರ್ಣ ಮೇಲ್ವಿಚಾರಣೆಯನ್ನು ಸಂಬಂಧಪಟ್ಟ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳು ನೋಡಿಕೊಳ್ಳುತ್ತಾರೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಿಳಿಸಿದ್ದಾರೆ.
ಅಂಚೆ ಮತದಾರನು ಒಂದು ಬಾರಿ ಅಂಚೆ ಮತಪತ್ರದ ಮೂಲಕ ಮತ ಚಲಾಯಿಸುವುದಾಗಿ ಆಯ್ಕೆ ಮಾಡಿಕೊಂಡಲ್ಲಿ ಯಾವುದೇ ಕಾರಣಕ್ಕೂ ಮತಗಟ್ಟೆಗೆ ಹೋಗಿ ಮತಚಲಾಯಿಸಲು ಆಗುವುದಿಲ್ಲ.
ಚುನಾವಣೆಗೆ ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕದಂದು ಆ ಮತದಾರರ ಪಟ್ಟಿಯನ್ನು ಅಂತಿಮಗೊಳಿಸಲಾಗುವುದು ಹಾಗೂ ಚುನಾವಣೆಯು ಮುಕ್ತಾಯಗೊಳ್ಳುವವರೆಗೂ ಆ ಪಟ್ಟಿಯಲ್ಲಿ ಯಾವುದೇ ಹೆಚ್ಚುವರಿ ಸೇರ್ಪಡೆ ಅಥವಾ ತೆಗೆದುಹಾಕುವಿಕೆಯನ್ನು ಮಾಡುವುದಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೋವಿಡ್-19 ಪ್ರವರ್ಗಕ್ಕೆ ಸೇರಿದ ಗೈರು ಹಾಜರಿ ಮತದಾರರ ಸಂದರ್ಭದಲ್ಲಿ ಅಂಚೆ ಮತದಾನಕ್ಕಾಗಿ ನಮೂನೆ-12 ಡಿ ಯನ್ನು ಅನುಮೋದಿಸುವ ಮುಂಚೆ ಚುನಾವಣಾಧಿಕಾರಿಯು ಸಕ್ಷಮ ಪ್ರಾಧಿಕಾರವು ನೀಡಿದ ಪ್ರಮಾಣ ಪತ್ರವನ್ನು ಪರಿಶೀಲಿಸಲಿದ್ದಾರೆ.
ಅಂಚೆ ಮತಪತ್ರವನ್ನು ನೀಡಲಾದ ಮತದಾರನಿಗೆ ಮತದಾನ ಕೇಂದ್ರದಲ್ಲಿ ಮತ ಹಾಕಲು ಅನುಮತಿ ನೀಡುವುದಿಲ್ಲ. ನಮೂನೆ-12 ಡಿ ಅರ್ಜಿಯು ಕೊಡಗು ಜಿಲ್ಲಾ ಅಧಿಕೃತ ವೆಬ್‍ಸೈಟ್ www.kodagu.nic.in ರಲ್ಲಿ ಅಪ್‍ಲೋಡ್ ಮಾಡಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಹೇಳಿದ್ದಾರೆ.
Breaking News
- *ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಮೂರ್ನಾಡು ಭಾರತೀಯ ನೃತ್ಯಕಲಾ ಶಾಲೆಯ ವಿದ್ಯಾರ್ಥಿಗಳ ಸಾಧನೆ*
- *ಕಟ್ಟೆಮಾಡು ಪ್ರಕರಣ : ಉಸ್ತುವಾರಿ ಸಚಿವರು, ಶಾಸಕರುಗಳು ತಮ್ಮ ಜವಾಬ್ದಾರಿಯನ್ನು ಪ್ರದರ್ಶಿಸಲಿ*
- *ವಸತಿ ಸಚಿವರನ್ನು ಭೇಟಿ ಮಾಡಿದ ಅಲ್ಪಸಂಖ್ಯಾತ ಮುಖಂಡರು : ಮೂಲ ಸೌಕರ್ಯಗಳ ಕುರಿತು ಚರ್ಚೆ*
- *ಎಂ.ಎಂ.ಸುಪ್ರಿತಾಗೆ ಚಿನ್ನದ ಪದಕ*
- *ಜ.25 ರಂದು ಕಸಾಪ ದತ್ತಿ ಉಪನ್ಯಾಸ ಕಾರ್ಯಕ್ರಮ*
- *ಸುಂಟಿಕೊಪ್ಪ : ಸಾರ್ವಜನಿಕರು ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಳ್ಳಿ : ಎ.ಲೋಕೇಶ್ ಕುಮಾರ್*
- *ಮಡಿಕೇರಿಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನ ಆಚರಣೆ*
- *ಮಡಿಕೇರಿಯಲ್ಲಿ ಪರಾಕ್ರಮ್ ದಿವಸ್ ಆಚರಣೆ : ಪರೀಕ್ಷಾ ಪೇ ಚರ್ಚಾ 9ನೇ ಆವೃತ್ತಿ*
- *ಕಳೆದು ಹೋಗಿದೆ*
- *ಫೆ.27 ಮತ್ತು 28 ರಂದು ಕೊಡವ ಬಲ್ಯನಮ್ಮೆ : ವಿವಿಧ ಸ್ಪರ್ಧೆಗಳಿಗೆ ಆಹ್ವಾನ*