ವಿರಾಜಪೇಟೆ ಏ.22 : ಒರಲ್ ಮೆಡಿಸನ್ ಹಾಗೂ ರೇಡಿಯಾಲಜಿ, ದಂತ ವಿಜ್ಞಾನದಲ್ಲಿ ಎರಡು ಪ್ರಮುಖವಾದ ಮತ್ತು ಪೂರಕವಾದ ವಿಚಾರಗಗಳಾಗಿವೆ. ಭಾರತದಲ್ಲಿ ಈ ವಿಚಾರಗಳ ಅಧ್ಯಯನಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿಲ್ಲ ಎಂದು ಕೊಡಗು ದಂತ ಮಹಾವಿದ್ಯಾಲಯದ ಡೀನ್ ಡಾ. ಸುನೀಲ್ ಮುದ್ದಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ಕೊಡಗಿನ ಪ್ರತಿಷ್ಟಿತ ದಂತ ಮಹಾವಿದ್ಯಾಲಯದಲ್ಲಿ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ರಾಷ್ಟ್ರಮಟ್ಟದ ಐಎಒಎಂಆರ್ ಸಂಘದ ಸಹಯೋಗದಲ್ಲಿ ಓರಲ್ ಮೆಡಿಸಿನ್ ಹಾಗೂ ರೇಡಿಯಾಲಜಿ ವಿಷಯ ಆಧರಿಸಿ ನಡೆದ ಎರಡು ದಿನದ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು.
ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಈ ಸಮಾವೇಶ ನಡೆಸುತ್ತಿರುವುದು ಸಂತಸ ತಂದಿದೆ. ರೋಗವನ್ನೇ ಗುರುತಿಸದೆ ಚಿಕಿತ್ಸೆ ನೀಡುವ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದೇವೆ. ಆದರೆ ಸಿಡ್ಸ್ ವತಿಯಿಂದ ಈ ಎರಡು ವಿಷಯಗಳ ಮೇಲೆ ಸಂಶೋಧನೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಮುಂಬರುವ ಪೀಳಿಗೆಗೆ ಈ ಎರಡು ವಿಚಾರಗಳು ಅತ್ಯಂತ ಪ್ರಮುಖವಾದ ಅಧ್ಯಯನದ ವಿಚಾರಗಳಾಗಲಿವೆ ಎಂದು ಅಭಿಪ್ರಾಯಪಟ್ಟರು.
ಐಎಒಎಂಆರ್ ಪ್ರಮುಖರಾದ ಡಾ.ಗೋಪಕುಮಾರ್ ಆರ್. ನಾಯರ್ ಮಾತನಾಡಿ, ಸಿಒರಲ್ ಮೆಡಿಸನ್ ಹಾಗೂ ರೇಡಿಯಾಲಜಿಗೆ ಸಂಬಂಧಿಸಿದಂತೆ ನಮ್ಮ ದೇಶದಲ್ಲಿ ಸಮರ್ಪಕವಾದ ಸಂಶೋಧನೆಗಳು ನಡೆಯುತ್ತಿಲ್ಲ. ಈ ನಿಟ್ಟಿನ್ನಲ್ಲಿ ಸರಿಯಾದ ಸಂಶೋಧನೆಗಳು ನಡೆದಿದ್ದೇ ಆದಲ್ಲಿ ಬರೀ ಹಲ್ಲಿನ ಆರೋಗ್ಯದ ಬಗ್ಗೆ ಅಧ್ಯಯನ ಮಾಡುವುದಲ್ಲ. ಬಾಯಿಯ ಆರೋಗ್ಯದ ಜೊತೆಗೆ ಆ ಮೂಲಕ ಮನುಷ್ಯನ ಶಾರೀರಿಕ ಆರೋಗ್ಯದ ಬಗ್ಗೆಯೂ ಅರಿಯಲಾಗುತ್ತದೆ ಎಂದರು.
ಇದೇ ಸಂದರ್ಭ ಡಾ.ಪ್ರಶಾಂತ್ ಶೆಣೈ ಹಾಗೂ ದಂತ ಮಹಾವಿದ್ಯಾಲಯದ ಮುಖ್ಯಸ್ಥೆ ಡಾ.ಕವಿತಾ ಮಾತನಾಡಿದರು.
ದಂತ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಕೆ.ಸಿ.ಪೊನ್ನಪ್ಪ ಸಮಾವೇಶದ ಸದುಪಯೋಗ ಪಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಿದರು.
ಸಮಾವೇಶದಲ್ಲಿ ದಂತ ವೈದ್ಯಕೀಯ ಕಾಲೇಜಿನ ಉಪ ಪ್ರಾಂಶುಪಾಲರಾದ ಜಿತೇಶ್ ಜೈನಿ, ಹಾಗೂ ದಂತ ಮಹಾವಿದ್ಯಾಲಯದ ಉಪನ್ಯಾಸಕ ವೃಂದದವರು, ಕರ್ನಾಟಕ ಸೇರಿದಂತೆ ಕೇರಳ, ಮಹಾರಾಷ್ಟ್ರ, ತೆಲಂಗಾಣ, ಆಂದ್ರಪ್ರದೇಶ ಸೇರಿದಂತೆ ಸುಮಾರು 40ಕ್ಕೂ ಅಧಿಕ ದಂತ ವೈದ್ಯಕೀಯ ಕಾಲೇಜುಗಳಿಂದ ಪದವೀಧರರು, ಉಪನ್ಯಾಸಕರು ಸೇರಿದಂತೆ ಸುಮಾರು ನಾನೂರು ಮಂದಿ ಸಮಾವೇಶದಲ್ಲಿ ಪಾಲ್ಗೋಂಡರು. ಕಾರ್ಯಕ್ರಮದಲ್ಲಿ ಡಾ.ಜೈನಿ ಪ್ರಾರ್ಥಿಸಿದರು.
ಸಮಾವೇಶದಲ್ಲಿ ಹೆಸರಾಂತ ವೈದ್ಯರುಗಳಿಂದ ಓರಲ್ ಮೆಡಿಸನ್ ವಿಷಯ ಮಂಡನೆ, ಚರ್ಚೆ, ಹೀಗೆ ಹಲವಾರು ವೈಜ್ಞಾನಿಕ ಸಂಶೋಧನೆ ವಿಚಾರಗಳನ್ನು ಆಧರಿಸಿದ ಚರ್ಚೆ ಹಾಗೂ ಸಂವಾದ ನಡೆಸಲಾಯಿತು.
Breaking News
- *ವೀರ ಸೇನಾನಿಗಳಿಗೆ ಅಗೌರವ : ಕಿಡಿಗೇಡಿಯನ್ನು ಬಂಧಿಸಲು ನಾಪೋಕ್ಲು ಕೊಡವ ಸಮಾಜ ಒತ್ತಾಯ*
- *ಇಂದಿರಾ ನಗರ : ನೂತನ ಕಾಂಕ್ರೀಟ್ ರಸ್ತೆ ಉದ್ಘಾಟಿಸಿದ ಶಾಸಕ ಡಾ.ಮಂತರ್ ಗೌಡ*
- *ವೀರ ಸೇನಾನಿಗಳಿಗೆ ಅಪಮಾನ : ವ್ಯಾಲಿಡ್ಯೂ ಕೊಡವ ಕಲ್ಚರಲ್ ಅಸೋಸಿಯೇಷನ್ ಖಂಡನೆ*
- *ವೀರ ಸೇನಾನಿಗಳಿಗೆ ಅಗೌರವ : ಜಿಲ್ಲಾ ಬಿಜೆಪಿಯಿಂದ ಎಸ್ಪಿಗೆ ದೂರು*
- *ಮಡಿಕೇರಿಯಲ್ಲಿ ವಕೀಲರ ಸಂಘದಿಂದ ಪ್ರತಿಭಟನೆ*
- *ಜಿಲ್ಲಾ ಮಟ್ಟದ ಯುವಜನೋತ್ಸವ : ಹೆಸರು ನೋಂದಾಯಿಸಿಕೊಳ್ಳಲು ನ.28 ಕೊನೆ ದಿನ*
- *ನ.26 ರಂದು ಸಿಎನ್ಸಿಯಿಂದ ಕೊಡವ ನ್ಯಾಷನಲ್ ಡೇ ಮತ್ತು ಸಂವಿಧಾನ ದಿನಾಚರಣೆ*
- *ನ.24 ರಂದು ಕೊಡಗು ಜಿಲ್ಲಾ ಕಿವುಡರ ಸಂಘದ ಸಭೆ*
- *ಕುಶಾಲನಗರದಲ್ಲಿ ಅಕ್ಷರ ಜ್ಯೋತಿ ಯಾತ್ರೆಗೆ ಸ್ವಾಗತ : ಉತ್ತಮ ಸಂಸ್ಕಾರ, ಸದ್ಗುಣ ಬೆಳೆಸಿಕೊಳ್ಳಲು ಬಸವಕುಮಾರ್ ಪಾಟೀಲ್ ಕರೆ*
- *ನ.29 ರಂದು ಮೂರ್ನಾಡುವಿನಲ್ಲಿ 69ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ*