Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಕೊಡಗಿನಲ್ಲಿ ಮೋಡಬಿತ್ತನೆ ಬೇಡ ಬಿಜೆಪಿ ಕೃಷಿಮೋರ್ಚಾ ಒತ್ತಾಯ*
  • *ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಿರಿಯ ನಾಗರಿಕರಿಗೆ ರೋಟರಿ ನಮನ*
  • *ಮಡಿಕೇರಿ ಬ್ರಹ್ಮಾಕುಮಾರಿ ಲೈಟ್ ಹೌಸ್ ನಲ್ಲಿ ರಕ್ತದಾನ ಶಿಬಿರ*
  • *ಎಸ್‍ಐಆರ್ ಪ್ರಕ್ರಿಯೆ, ಸೆ.23 ರ ವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆಗೆ ಅವಕಾಶ : ಕರಡು ಮತದಾರರ ಪಟ್ಟಿ : ಜಿಲ್ಲೆಯಲ್ಲಿ 4,05,803 ಮಂದಿ ಮತದಾರರು : ಡಿಸಿ ಮಾಹಿತಿ *
  • *ಪೊನ್ನಾಡ್ ರೈತ ಉತ್ಪಾದಕ ಸಂಸ್ಥೆ(ಎಫ್‌ಪಿಓ)ಗೆ ಮಾರುಕಟ್ಟೆ ವಿಭಾಗದಲ್ಲಿ ರಾಜ್ಯ ಮಟ್ಟದ ಶ್ರೇಷ್ಠತಾ ಪ್ರಶಸ್ತಿ*
  • *ಪೂಂಪುಹಾರ್ ವರೆಗೆ 16ನೇ ವರ್ಷದ ಕಾವೇರಿ ಜಾಗೃತಿ ರಥಯಾತ್ರೆ : ಅ.26ರಿಂದ ತಲಕಾವೇರಿಯಿಂದ ಆರಂಭ*
  • *ಕಟ್ಟೆಮಾಡು ಸಕಾ೯ರಿ ಶಾಲೆಯಲ್ಲಿ ಹಿರಿಯ ಜೀವಿಗಳಿಗೆ ಗೌರವ ನಮನ*
  • *ಬುಡಕಟ್ಟು ಸಾಂಸ್ಕೃತಿಕ ಕಾರ್ಯಕ್ರಮ, ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ : ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಯುವಜನರ ಪಾತ್ರ ಮಹತ್ವದ್ದು : ಶಾಸಕ ಎ.ಎಸ್.ಪೊನ್ನಣ್ಣ*
  • *ಹಿರಿಯ ಜೀವಿಗಳಿಗೆ  ಮರಗೋಡು ಸಕಾ೯ರಿ ಶಾಲೆಯಲ್ಲಿ ಗೌರವ ನಮನ*
  • *ಪಾರಾಣೆಯ ಸಕಾ೯ರಿ ಶಾಲೆಯಲ್ಲಿ ಹಿರಿಯ ನಾಗರಿಕರಿಗೆ ಗೌರವ ಸಲ್ಲಿಕೆ ; ಕನ್ನಡದಲ್ಲಿ ಓದಿಯೂ ಉತ್ತಮ ಹುದ್ದೆಗೇರಲು ಸಾಧ್ಯ – ಕೆ.ಎ.ಉಮ್ಮರ್*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ರಾಜ್ಯ ಮಟ್ಟದ ಮೊಗೇರ ಕ್ರೀಡಾಕೂಟಕ್ಕೆ ಮಡಿಕೇರಿಯಲ್ಲಿ ಸಂಭ್ರಮದ ತೆರೆ : ಮೊಗೇರ ಸಮಾಜಕ್ಕೆ ಸಮುದಾಯ ಭವನ : ಶಾಸಕ ಎ.ಎಸ್.ಪೊನ್ನಣ್ಣ ಭರವಸೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ರಾಜ್ಯ ಮಟ್ಟದ ಮೊಗೇರ ಕ್ರೀಡಾಕೂಟಕ್ಕೆ ಮಡಿಕೇರಿಯಲ್ಲಿ ಸಂಭ್ರಮದ ತೆರೆ : ಮೊಗೇರ ಸಮಾಜಕ್ಕೆ ಸಮುದಾಯ ಭವನ : ಶಾಸಕ ಎ.ಎಸ್.ಪೊನ್ನಣ್ಣ ಭರವಸೆ*

ಏಪ್ರಿಲ್ 22, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಏ.22 NEWS DESK : ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಮಡಿಕೇರಿ ತಾಲ್ಲೂಕು ಸಮಿತಿಯ ವತಿಯಿಂದ ಮಡಿಕೇರಿಯಲ್ಲಿ ನಡೆದ 10ನೇ ವರ್ಷದ ರಾಜ್ಯ ಮಟ್ಟದ ಮೊಗೇರ ಕ್ರೀಡಾಕೂಟಕ್ಕೆ ಸಂಭ್ರಮದ ತೆರೆ ಬಿದ್ದಿತು. ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ ಕ್ರಿಕೆಟ್, ಕಬಡ್ಡಿ, ವಾಲಿಬಾಲ್, ಥ್ರೋಬಾಲ್, ಹಗ್ಗಜಗ್ಗಾಟ ಮತ್ತಿತರ ಕ್ರೀಡಾಕೂಟಗಳಲ್ಲಿ ಹಾಸನ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಸಾವಿರಾರು ಸಂಖ್ಯೆಯ ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಕ್ರಿಕೆಟ್ ಪಂದ್ಯಾವಳಿಯಲ್ಲ್ಲಿ ಡಾಮಿನೇಟರ್ ಮಾರ್ಗೊಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದರೆ, ವಿನಾಯಕ ಕೊಡಗು ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ಪುರುಷರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಮೊಗೇರ ಫ್ರೆಂಡ್ಸ್ ಸುಳ್ಯ ಪ್ರಥಮ ಹಾಗೂ ಭರತ್ ಫ್ರೆಂಡ್ಸ್ ಬೆಳ್ಳಾರಿಮಾಡು ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ಹಗ್ಗಜಗ್ಗಾಟ ಮಹಿಳೆಯರ ಸ್ಪರ್ಧೆಯಲ್ಲಿ ಡಾಮಿನೇಟರ್ ಚೆಯ್ಯಂಡಾಣೆ ಪ್ರಥಮ ಮತ್ತು ಕಿಗ್ಗಾಲು ವಾರಿಯರ್ಸ್ ದ್ವಿತೀಯ ಸ್ಥಾನವನ್ನು ಪಡೆಯಿತು. ವಾಲಿಬಾಲ್ ಪಂದ್ಯಾವಳಿಯಲ್ಲಿ ಷಣ್ಮುಗ ಹೆಬ್ಬೆಟ್ಟಗೇರಿ ಎ ಮತ್ತು ಬಿ ತಂಡ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಪಡೆಯಿತು. ಮಹಿಳೆಯರ ಥ್ರೋಬಾಲ್ ಪಂದ್ಯಾವಳಿಯಲ್ಲಿ ಕಾರ್ಣಿಕ ಹೆಬ್ಬೆಟ್ಟಗೇರಿ ಕೊಡಗು ಪ್ರಥಮ ಸ್ಥಾನ ಹಾಗೂ ಟೇಮ್ ಬಾಳಿಲ ಸುಳ್ಯ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ಕ್ರಿಕೆಟ್ ಅಂತಿಮ ಪಂದ್ಯವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಮೊಗೇರ ಜನಾಂಗ ಕ್ರೀಡೆಯ ಮೂಲಕ ಸಂಘಟಿತರಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಮೊಗೇರ ಬಂಧುಗಳು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ, ಮೊಗೇರ ಸಮಾಜದ ಹಲವು ವರ್ಷಗಳ ಬೇಡಿಕೆಯಾದ ಮೊಗೇರ ಸಮುದಾಯ ಭವನದ ನಿರ್ಮಾಣಕ್ಕೆ ಶಕ್ತಿಮೀರಿ ಪ್ರಯತ್ನಿಸಲಾಗುವುದು ಮತ್ತು ನಿವೇಶನ ರಹಿತ ಕುಟುಂಬಗಳಿಗೆ ನಿವೇಶನ ಒದಗಿಸಿಕೊಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಎಲ್ಲಾ ಸಮುದಾಯದವರು ಕ್ರೀಡಾಕೂಟಗಳನ್ನು ಆಯೋಜಿಸುತ್ತಾ ಬರುತ್ತಿದ್ದಾರೆ. ಕ್ರೀಡೆಯ ಮೂಲಕ ಸರ್ವರೂ ಒಗ್ಗಟ್ಟನ್ನು ಕಾಪಾಡಿಕೊಳ್ಳುವಂತೆ ಕಿವಿ ಮಾತು ಹೇಳಿದರು. ಶಾಸಕರು ಬ್ಯಾಟಿಂಗ್ ಮಾಡಿ ಕ್ರಿಕೆಟ್ ಪಂದ್ಯವನ್ನು ಉದ್ಘಾಟಿಸಿದರು. ಸಮಾಜ ಸೇವಕರು ಹಾಗೂ ಉದ್ಯಮಿ ಎಡಿಕೇರಿ ಪ್ರಸನ್ನ ಅವರು ಬೌಲಿಂಗ್ ಮಾಡಿದರು. *ಮೊಗೇರ ಹಬ್ಬ* ರಾಜ್ಯ ಮಟ್ಟದ ಮೊಗೇರ ಕ್ರೀಡಾಕೂಟ ವಿಶಿಷ್ಟ ಕಾರ್ಯಕ್ರಮಗಳೊಂದಿಗೆ ಹಬ್ಬದಂತೆ ನಡೆಯಿತು. ಮೊಗೇರ ಜನಾಂಗದ ಸಾಂಸ್ಕøತಿಕ ದುಡಿ ನಲಿಕೆ ಹಾಗೂ ಅದರ ಪ್ರದರ್ಶನ ಗಮನ ಸೆಳೆಯಿತು. ವೇದಿಕೆಯ ಒಂದು ಭಾಗದಲ್ಲಿ ಮೊಗೇರ ಜನಾಂಗದ “ಬರಿ”ಯ ಹೆಸರು, ಮತ್ತೊಂದು ಭಾಗದಲ್ಲ್ಲಿ ಜಿಲ್ಲೆಯಲ್ಲಿ ಮೊಗೇರ ಜನಾಂಗದ ಲಾಂಛನ ಅಸ್ತಿತ್ವಕ್ಕೆ ಬಂದ ಬಗ್ಗೆ ಮಾಹಿತಿಯ ಫಲಕ ಹಾಕಲಾಗಿತ್ತು. ಕ್ರೀಡಾಕೂಟದ ಉದ್ಘಾಟನೆಯಂದು ಮೊಗೇರ ಲಾಂಛನದ ಧ್ವಜಾರೋಹಣ ಮಾಡಲಾಯಿತು. ಮೊಗೇರ ಸಮುದಾಯದ ರಂಗಭೂಮಿ ಕಲಾವಿದರು ಹಾಗೂ ಸು-ಫ್ರಮ್-ಸೊ ಸಿನಿಮಾದ ಕಲಾವಿದರಾದ ಶಿವು ಅಳಿಕೆ, ಪದ್ಮಾನಾಭ ತುಮಿನಾಡು ಮತ್ತಿತರರು ಪಾಲ್ಗೊಂಡು ಕ್ರೀಡಾಕೂಟಕ್ಕೆ ಮತ್ತಷ್ಟು ಮೆರುಗು ತಂದರು. ಮಡಿಕೇರಿ ತಾಲ್ಲೂಕು ಮೊಗೇರ ಸಮಾಜದ ಅಧ್ಯಕ್ಷ ಪಿ.ಸಿ.ರಘು ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮಗಳು ನಡೆಯಿತು. ಮೊಗೇರ ಸಮಾಜದ ಸ್ಥಾಪಕಾಧ್ಯಕ್ಷ ಟಿ.ಸದಾನಂದ ಮಾಸ್ತರ್, ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತ ಪದ್ಮನಾಭ ಕಿರಗಂದೂರು, ಜಿಲ್ಲಾ ಮೊಗೇರ ಸಮಾಜದ ಅಧ್ಯಕ್ಷ ಜನಾರ್ಧನ್ ಪಿ.ಬಿ, ರಾಜ್ಯ ಮೊಗೇರ ಸಮಾಜದ ಉಪಾಧ್ಯಕ್ಷ ಪಿ.ಕೆ.ಚಂದ್ರು, ಜಿ.ಪಂ ಮಾಜಿ ಅಧ್ಯಕ್ಷ ಬಿ.ಶಿವಪ್ಪ, ಜಿಲ್ಲಾ ಮೊಗೇರ ಸಮಾಜದ ಉಪಾಧ್ಯಕ್ಷ ದಾಮೋದರ ಬಿ.ಎಂ, ಜಿಲ್ಲಾ ಸಲಹೆಗಾರ ಪಿ.ಎಂ.ರವಿ, ಕ್ರೀಡಾಕೂಟದ ಅಧ್ಯಕ್ಷ ಎಂ.ಜಿ.ಚಂದ್ರ, ಮುಖ್ಯಮಂತ್ರಿಗಳ ಚಿನ್ನದ ಪದಕ ವಿಜೇತ ಪೋಲಿಸ್ ಸಿಬ್ಬಂದಿ ಕಿಶೋರ್ ಬೋಯಿಕೇರಿ, ಸೋಮವಾರಪೇಟೆ ತಾಲ್ಲೂಕು ಉಪಾಧ್ಯಕ್ಷ ರಾಮಚಂದ್ರ, ಗುತ್ತಿಗೆದಾರ ಮುತ್ತಣ್ಣ, ಹಾಸನ ಜಿಲ್ಲಾ ಮೊಗೇರ ಸಂಘದ ಮಾಜಿ ಅಧ್ಯಕ್ಷ ಅಣ್ಣಪ್ಪ ಬಾಳುಪೇಟೆ ಸೇರಿದಂತೆ ಸಮಾಜದ ಪ್ರಮುಖರು ಹಾಗೂ ಕ್ರೀಡಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ರಮೇಶ್ ಹೆಬ್ಬೆಟ್ಟಗೇರಿ ನಿರೂಪಿಸಿ ವಂದಿಸಿದರು. ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯಿತು. ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಸಂಗೀತ ಕ್ಷೇತ್ರದಲ್ಲಿ ರವಿ ಭೂತನಕಾಡು, ಸಾಹಿತ್ಯ ಕ್ಷೇತ್ರದಲ್ಲಿ ಚೈತ್ರಾ ಬೊಳ್ಳಾರಿ ಮಾಡು ಹಾಗೂ ಸಮಾಜ ಸೇವೆಯಲ್ಲಿ ಚಂದ್ರ ಎಂ.ಜಿ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

 

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಕೊಡಗಿನಲ್ಲಿ ಮೋಡಬಿತ್ತನೆ ಬೇಡ ಬಿಜೆಪಿ ಕೃಷಿಮೋರ್ಚಾ ಒತ್ತಾಯ*

ಆಗಷ್ಟ್ 24, 2026

*ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಿರಿಯ ನಾಗರಿಕರಿಗೆ ರೋಟರಿ ನಮನ*

ಆಗಷ್ಟ್ 24, 2026

*ಮಡಿಕೇರಿ ಬ್ರಹ್ಮಾಕುಮಾರಿ ಲೈಟ್ ಹೌಸ್ ನಲ್ಲಿ ರಕ್ತದಾನ ಶಿಬಿರ*

ಆಗಷ್ಟ್ 24, 2026

*ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಿರಿಯ ನಾಗರಿಕರಿಗೆ ರೋಟರಿ ನಮನ*

ಆಗಷ್ಟ್ 24, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ಆ.24 : ನಾಪೋಕ್ಲುವಿನ ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆ ನಾಪೋಕ್ಲು, ರೋಟರಿ ಮಿಸ್ಟಿ ಹಿಲ್ಸ್…

*ಮಡಿಕೇರಿ ಬ್ರಹ್ಮಾಕುಮಾರಿ ಲೈಟ್ ಹೌಸ್ ನಲ್ಲಿ ರಕ್ತದಾನ ಶಿಬಿರ*

ಆಗಷ್ಟ್ 24, 2026

*ಎಸ್‍ಐಆರ್ ಪ್ರಕ್ರಿಯೆ, ಸೆ.23 ರ ವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆಗೆ ಅವಕಾಶ : ಕರಡು ಮತದಾರರ ಪಟ್ಟಿ : ಜಿಲ್ಲೆಯಲ್ಲಿ 4,05,803 ಮಂದಿ ಮತದಾರರು : ಡಿಸಿ ಮಾಹಿತಿ *

ಆಗಷ್ಟ್ 24, 2026

*ಪೊನ್ನಾಡ್ ರೈತ ಉತ್ಪಾದಕ ಸಂಸ್ಥೆ(ಎಫ್‌ಪಿಓ)ಗೆ ಮಾರುಕಟ್ಟೆ ವಿಭಾಗದಲ್ಲಿ ರಾಜ್ಯ ಮಟ್ಟದ ಶ್ರೇಷ್ಠತಾ ಪ್ರಶಸ್ತಿ*

ಆಗಷ್ಟ್ 24, 2026

*ಪೂಂಪುಹಾರ್ ವರೆಗೆ 16ನೇ ವರ್ಷದ ಕಾವೇರಿ ಜಾಗೃತಿ ರಥಯಾತ್ರೆ : ಅ.26ರಿಂದ ತಲಕಾವೇರಿಯಿಂದ ಆರಂಭ*

ಆಗಷ್ಟ್ 24, 2026

*ಕಟ್ಟೆಮಾಡು ಸಕಾ೯ರಿ ಶಾಲೆಯಲ್ಲಿ ಹಿರಿಯ ಜೀವಿಗಳಿಗೆ ಗೌರವ ನಮನ*

ಆಗಷ್ಟ್ 24, 2026

*ಬುಡಕಟ್ಟು ಸಾಂಸ್ಕೃತಿಕ ಕಾರ್ಯಕ್ರಮ, ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ : ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಯುವಜನರ ಪಾತ್ರ ಮಹತ್ವದ್ದು : ಶಾಸಕ ಎ.ಎಸ್.ಪೊನ್ನಣ್ಣ*

ಆಗಷ್ಟ್ 24, 2026

*ಹಿರಿಯ ಜೀವಿಗಳಿಗೆ  ಮರಗೋಡು ಸಕಾ೯ರಿ ಶಾಲೆಯಲ್ಲಿ ಗೌರವ ನಮನ*

ಆಗಷ್ಟ್ 24, 2026

*ಪಾರಾಣೆಯ ಸಕಾ೯ರಿ ಶಾಲೆಯಲ್ಲಿ ಹಿರಿಯ ನಾಗರಿಕರಿಗೆ ಗೌರವ ಸಲ್ಲಿಕೆ ; ಕನ್ನಡದಲ್ಲಿ ಓದಿಯೂ ಉತ್ತಮ ಹುದ್ದೆಗೇರಲು ಸಾಧ್ಯ – ಕೆ.ಎ.ಉಮ್ಮರ್*

ಆಗಷ್ಟ್ 24, 2026

*ಮಳೆಗಾಗಿ ಸಚಿವರಿಂದ ವಿಶೇಷ ಪೂಜೆ*

ಆಗಷ್ಟ್ 23, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.