ಮಡಿಕೇರಿ ಏ.28 : ಬೆಂಗಳೂರಿನ ಟಯೋಟದ ಪ್ರಮುಖ ಡೀಲರ್ ಗಳಲ್ಲಿ ಒಂದಾಗಿರುವ ನಂದಿ ಟೊಯೋಟೊ ಸಂಸ್ಥೆಯು ಭಾಗಮಂಡಲದ ಕೆವಿಜಿ ಐಟಿಐ ನಲ್ಲಿ ಕ್ಯಾಂಪಸ್ ಸಂದರ್ಶನ ನಡೆಸಿದರು.
ಈ ಸಂದರ್ಭದಲ್ಲಿ ಆಯ್ಕೆಯಾದ ತರಬೇತುದಾರರಿಗೆ ಪ್ರಾಂಶುಪಾಲರು ಅಭಿನಂದನೆ ಸಲ್ಲಿಸಿದರು.
ನಂದಿ ಟೊಯೋಟಾದ ಹೆಚ್ ಆರ್ ಮಧುಸೂಧನ್ , ಕಾಲೇಜಿನ ಪ್ರಾಂಶುಪಾಲ ಕೆ.ವಿ.ಶ್ರೀಕಾಂತ್ , ಕಿರಿಯ ತರಬೇತಿ ಅಧಿಕಾರಿಗಳಾದ ಜೆ.ಕೃಷ್ಣಮೂರ್ತಿ, ಪದ್ಮ ಕುಮಾರ್ ಮತ್ತು ಪುನೀತ್ ಉಪಸ್ಥಿತರಿದ್ದರು.