ಮಡಿಕೇರಿ ಮೇ 1 : ದುಡಿಯುವವನಿಗೆ ಸಂಬಳ ಕೊಡುವವನೇ ಮಾಲೀಕ ಆದರೆ ಆತನನ್ನು ಸಂಬಳ ಕೊಡುವ ಮಟ್ಟಕ್ಕೆ ಬೆಳೆಸುವವನೇ ಕಾರ್ಮಿಕ. ಒಂದೆಡೆ ಬಡತನ, ಮತ್ತೊಂದೆಡೆ ಅನಕ್ಷರತೆ. ಮತ್ತೊಂದು ಕಡೆ ಸಕಲ ಸಂಪತ್ತಿನಿಂದ ವಂಚಿತವಾದ ಜನಾಂಗ ಕಾರ್ಮಿಕರಾಗಿ ಬದುಕುತ್ತಾರೆ.
ಇಂತಹ ಸೋಚನೀಯ ಆರ್ಥಿಕ ಪರಿಸ್ಥಿತಿಯ ಕುಟುಂಬದಿಂದ ಬೆಳೆದು ಬಂದ ವ್ಯಕ್ತಿ ನನ್ನನ್ನು ನಂಬಿರುವ ಅಪ್ಪ, ಅಮ್ಮ, ಹೆಂಡತಿ, ಮಕ್ಕಳ ಲಾಲನೆ, ಪೋಷಣೆ ರಕ್ಷಣೆ ಜೊತೆಗೆ ಸರ್ವರ ತುತ್ತಿನ ಚೀಲ ತುಂಬಲು ಕಾರ್ಮಿಕ ವೃತ್ತಿಯನ್ನು ಆರಿಸಿಕೊಳ್ಳುತ್ತಾರೆ. ಇಂತಹ ಕಾರ್ಮಿಕರಲ್ಲಿ ಕೆಲವರು ಕಾಯಕ ವೆಂಬುದು ಕೇವಲ ಕಾಸು ಸಂಪಾದನೆಯಲ್ಲ, ಕಾಯಕವೆಂಬುದು ಹೊಟ್ಟೆಪಾಡಲ್ಲ, ಕಾಯಕ ಎಂಬುದು ಸಮಾಜ ಸೇವೆ ಎಂದು ದುಡಿಯುತ್ತಾರೆ.
ಕೂಲಿ ಅಥವಾ ಸಂಬಳ ಕಡಿಮೆ ಇದ್ದರೂ ಬೆವರಿನ ದುಡಿಮೆಯೂ ಗೌರವವನ್ನು ಹೆಚ್ಚಿಸುತ್ತದೆ ಎಂದು ಹೆಚ್ಚಿನ ಕಾರ್ಮಿಕರು ಬದುಕಿನುದ್ದಕ್ಕೂ ದುಡಿಯುತ್ತಾರೆ. ಜೀವನದಲ್ಲಿ ಯಾರು ಕೈ ಬಿಟ್ಟರು ನನ್ನ ತೊಳ್ ಬಲ ಇರವತನಕ ಜೀವನ ಸಾಗಿಸೋಣ ಎಂದು, ನಡು ನಾಡೆ ಇರಲಿ ಗಡಿನಾಡೆ ಇರಲಿ ತಮ್ಮ ಕಾಯಕವ ಮಾಡುವರು ಹೆಚ್ಚಿನ ಕಾರ್ಮಿಕರು.
ಅಂದುಕೊಳ್ಳುವುದಕ್ಕಿಂತ ಹೊಂದಿಕೊಳ್ಳುವುದು ಲೇಸೆಂದು ಕಾರ್ಮಿಕರು ದುಡಿಯುತ್ತಾರೆ. ಜೀವನದ ಉದ್ದಕ್ಕೂ ಎದುರಾಗುವ ಸೋಲನ್ನು ಪ್ರತಿ ಹೆಜ್ಜೆಯಲ್ಲೂ ಗೆಲುವನ್ನು ಕಾಣುತ್ತ ಕಾರ್ಮಿಕರು ದುಡಿಯುತ್ತಾರೆ. ಬದುಕಿನುದ್ದಕ್ಕೂ ಬಂದೊದಗುವ ಕಷ್ಟಗಳನ್ನು ಮೌನವಾಗಿ ಸ್ವೀಕರಿಸಿ ದುಡಿಯುತ್ತಾರೆ. ಕಾರ್ಮಿಕರು, ಬಣ್ಣ ಬದಲಾಯಿಸುವ ಜನರ ನಡುವೆ, ಭಗವಂತನು ನಮ್ಮ ಬದುಕನ್ನು ಬದಲಾಯಿಸುತ್ತಾನೆ ಎಂಬ ನಂಬಿಕೆಯ ಮೇಲೆ ಕಾಯಕವೆ ಕೈಲಾಸವೆಂದು ದುಡಿಯುತ್ತಾನೆ.
ಹಲವು ಕಾರ್ಮಿಕರು ಅರ್ಹತೆಯಿಂದ ಅವಕಾಶ ದೊರೆತರೆ, ನಂಬಿಕೆಯಿಂದ ಮರ್ಯಾದೆ ಸಿಗುತ್ತದೆಂದು ತಮ್ಮ ಕಾಯಕ ಮಾಡುತ್ತಾರೆ. ಮತ್ತೆ ಕೆಲವರು ಸತ್ಯವಾದ ಮಾರ್ಗದಲ್ಲಿ ನಿಸ್ವಾರ್ಥತೆ ಮತ್ತು ಪರಿಶುದ್ಧವಾದ ಗುಣಗಳಿಂದ ದುಡಿಯುತ್ತಾರೆ. ಮತ್ತೆ ಕೆಲವು ಕಾರ್ಮಿಕರು ನಿoಧಿಸುವವರಿಂದ ದೂರ ಸರಿದು ಸ್ಪಂದಿಸುವವರ ಜೊತೆ ಸೇರಿ ದುಡಿಯುತ್ತಾರೆ. ಕೆಲವು ಕಾರ್ಮಿಕರು ಸ್ವಜಾತಿ ಮತ್ತು ಉನ್ನತ ವರ್ಗದ ಅಡಿಯಲ್ಲಿ ದುಡಿಯಲು ಪ್ರಯತ್ನಿಸುವುದು ಉಂಟು.
ಹೆಚ್ಚಿನ ಕಾರ್ಮಿಕರು ಇವನಾರವ, ಇವನಾರವ ನೆಂದೇಣಿಸದೆ, ಇವ ನಮ್ಮವ, ಇದು ನನ್ನ ಕಾಯಕ ಎಂದು ಹೊಟ್ಟೆ ಪಾಡಿಗಾಗಿ ದುಡಿಯುತ್ತಾರೆ. ಕೆಲವರು ಒಪ್ಪಂದ ಮೇರೆಗೆ ದುಡಿಯುವ ಜೀತ ಕಾರ್ಮಿಕರಾಗಿ ದುಡಿಯುತ್ತಾರೆ. ಕೆಲವು ಕಾರ್ಮಿಕರು ಸೋಮಾರಿಗಳಿದ್ದು, ಅಂತವರು ನಾಟಕ, ಯಕ್ಷಗಾನ, ಬಯಲಾಟ, ಸಿನಿಮಾ ಖಿಗಿ, ಮೊಬೈಲ್ ನೋಡುತ ಕುಳಿತು ಇತರರಿಗೆ ಭಾರವಾದರೆ, ಹೆಚ್ಚಿನ ಕಾರ್ಮಿಕರು ಕಥೆ, ಪೂರಾಣ, ನಾಟಕ ಯಕ್ಷಗಾನ ಗಳಿಂದ ಹೊಟ್ಟೆ ತುಂಬುವುದಿಲ್ಲ ವೆಂದು ಸಮಯವನ್ನು ವ್ಯರ್ಥ ಮಾಡದೆ ದುಡಿದು ತಮ್ಮ ಕುಟುಂಬಕ್ಕೆ ಆಸರೆಯಾಗುತ್ತಾರೆ.
ಒಂದು ದೇಶದ ಕಾರ್ಮಿಕರು ಆಯಾ ದೇಶದ ಸರ್ವಾಂಗೀಣ ಪ್ರಗತಿಯ ರೂವಾರಿಗಳಾಗಿರುತ್ತಾರೆ. ಉದಾ : ರೈಲ್ವೆ ಮಾರ್ಗಗಳು ರಸ್ತೆಗಳು ಸೇತುವೆಗಳು, ಮಂದಿರ, ಮಹಲುಗಳು, ಆಡಳಿತ ಸೌಧಗಳು, ಶಾಲಾ-ಕಾಲೇಜು ಕಟ್ಟಡಗಳು, ಉದ್ಯಾನವನಗಳು ವಸ್ತು ಮತ್ತು ಪ್ರಾಣಿ ಸಂಗ್ರಹಾಲಯಗಳು, ಕೆರೆ, ಕಟ್ಟೆ, ಬಾವಿಗಳು, ಮಾತ್ರವಲ್ಲದೆ ಇಡೀ ವಿಶ್ವದಲೇ ವಿಖ್ಯಾತವಾದ ಪಿರಮಿಡ್ ಗಳ ನಿರ್ಮಾಣದಲ್ಲೋ ಕಾರ್ಮಿಕರ ಬೆವರಿನ ಹನಿ ಬೆರೆತಿರುತ್ತದೆ, ಇಂತಹ ಮಹತ್ ಕಾರ್ಯಗಳಿಂದಾಗಿ ಕಾರ್ಮಿಕರ ಪಾತ್ರ ಒಂದು ದೇಶದ ಪ್ರಗತಿಯಲ್ಲಿ ಮಹತ್ವವನ್ನು ಹೊಂದಿರುತ್ತದೆ.
ಇನ್ನು ವಾಹನಗಳ ಕ್ಷೆeತ್ರಕ್ಕೆ ಬಂದರೆ ಒಂದು ಅದ್ಭುತವೇ ಸರಿ, ಮಾನವನ ಉಗುರು ಕತ್ತರಿಸುವ ಸಣ್ಣ nail clutter ನಿಂದ ಹಿಡಿದು ಗುದ್ದಲಿ, ಪಿಕಾಸಿ ಚಾಕು, ಚೂರಿ ಗಳು ಸೇರಿದಂತೆ ಸೈಕಲ್ ಗಳಿಂದ ಪ್ರಾರಂಭವಾಗಿ ಸ್ಕೂಟರ್, ಬೈಕ್ ಕಾರು ಬಸ್ಸು, ಟ್ರ್ಯಾಕ್ಟರ್, ಟ್ರಿಲ್ಲರ್ ಲಾರಿ, ಯುದ್ಧ ವಿಮಾನಗಳು, ಬಾಂಬ್ ಗಳು ಮದ್ದು ಗುಂಡು ಬಂದೂಕು ವಿಮಾನಗಳು ಹೆಲಿಕಾಪ್ಟರ್ ಗಳ ಟ್ಯಾಂಕರ್ಸ್, ಬೋರ್ವೆಲ್ ಕೊರೆಯುವ, ಸುರಂಗ ಕೊರೆಯುವ ಯಂತ್ರಗಳು ಅಲ್ಲದೆ ಬೃಹತ್ ಕ್ರೇನ್ ಗಳ ತಯಾರಿಕೆಯಲ್ಲಿ ಕಾರ್ಮಿಕರ ಪಾತ್ರ ಅವಿಸ್ಮರಣೀಯ.
ಕೆಲವು ಸಂದರ್ಭದಲ್ಲಿ ಹಲವಾರು ಕಾರ್ಮಿಕರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಾರೆ (ಉದಾ : ಗಣಿಗಳಲ್ಲಿ, ಕಲ್ಲು ಕೊರೆಗಳಲ್ಲಿ, ಬೃಹತ್ ಕಟ್ಟಡಗಳು ಕುಸಿದುಬಿದ್ದಾಗ, ಕಾಫಿ ತೋಟಗಳಲ್ಲಿ ಕರಿ ಮೆಣಸು ಕುಯ್ಯುವಾಗ ಅಲ್ಲುಮಿನಿಯಂ ಏಣಿಗಳು ವಿದ್ಯುತ್ ತಂತಿಗಳಿಗೆ ತಗುಲಿ, ಮರ ಕಪಾತ್ ಮಾಡುವಾಗ ಮರದಿಂದ ಬಿದ್ದು, ಹೀಗೆ ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯoತ ಲಕ್ಷಾಂತರ ಕಾರ್ಮಿಕರು ತಮ್ಮ ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ.) ಇಂತಹ ಘಟನೆಗಳಿಂದ ಕಾರ್ಮಿಕರನ್ನು ನಂಬಿದ ಲಕ್ಷಾಂತರ ಕುಟುಂಬಗಳು ಬೀದಿಪಾಲಾಗುತ್ತಿವೆ, ದೀಪವು ತಾನುರಿದು ಇತರರಿಗೆ ಬೆಳಕು ಕೊಡುವಂತೆ, ಕಾರ್ಮಿಕರು ತಮ್ಮ ಬದುಕಿನುದ್ದಕ್ಕೂ ತಮ್ಮನ್ನು ತಾವೇ ಸವೇಸಿಕೊಳುತ್ತ, ಆರೋಗ್ಯ ಕೆಟ್ಟಾಗ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರಕದೆ ಮರಣ ಹೊಂದುತ್ತಾರೆ. ಮಾಲೀಕ, ದಿವಾನ ಕಂಪನಿ, ಧಣಿ, ಒಡೆಯ, ಬುದ್ಧಿ ಎಂದೆನ್ನುತ್ತಾ ದುಡಿದು ತಮ್ಮ ಅಂತ್ಯ ವನ್ನು ಕಾಣುವ ಕಾರ್ಮಿಕರ ಶ್ರಮ ಜಗತ್ತಿನಲ್ಲಿ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ.
ವಿಶ್ವದ ಅಥವಾ ಯಾವುದೇ ದೇಶದ ಒಂದು ವರ್ಗದ ಜನರ ಸಂತೋಷದಲ್ಲಿ ಕಾರ್ಮಿಕ ವರ್ಗದ ಶ್ರಮ ನೋವು, ಯಾತನೆ ಯಾರಿಗೂ ಕಾಣದಂತೆ ಮಾಯವಾಗಿರುತ್ತದೆ. ಇತರರ ಬದುಕಿಗೆ ದಾರಿದೀಪವಾಗಿರುತ್ತದೆ.
ವರದಿ : ಸಿದ್ದರಾಜು ಬೆಳ್ಳಯ್ಯ,
ಪ್ರಾಂಶುಪಾಲರು, ಮದೆ ಮಹೇಶ್ವರ ಪದವಿ ಪೂರ್ವ ಕಾಲೇಜು
ಮದೆ ಗ್ರಾಮ,
ಮಡಿಕೇರಿ ತಾಲ್ಲೂಕು
ಕೊಡಗು.
ಮೊಬೈಲ್ 9449405609