ವಿರಾಜಪೇಟೆ ನ.27 NEWS DESK : ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಿದ್ಯಾರ್ಥಿಗಳಿಂದ ‘ಸಂವಿಧಾನ ದಿನ’ ದ ಅಂಗವಾಗಿ ಸಂವಿಧಾನ ಜಾಗೃತಿ ಜಾಥಾ ನಡೆಯಿತು. ವಿರಾಜಪೇಟೆ ಪಟ್ಟಣದಲ್ಲಿ ಕಾಲೇಜು ವಿದ್ಯಾರ್ಥಿಗಳು ಸಂವಿಧಾನ ಪ್ರಸ್ತಾವನೆಯ ಗೀತೆಯ ನೃತ್ಯದ ಜಾಗೃತಿ ಮೂಡಿಸಿದರು. ವಿರಾಜಪೇಟೆಯ ಗಡಿಯಾರ ಕಂಬದ ವೃತ್ತದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿ ಜಾಥಾವನ್ನು ಉದ್ದೇಶಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ.ಸಿ.ದಯಾನಂದ ಸಂವಿಧಾನದ ಮಹತ್ವವನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕ ಡಾ.ಕೆ.ಬಸವರಾಜು, ಎನ್‍ಎಸ್‍ಎಸ್ ಅಧಿಕಾರಿ ರುದ್ರ, ಕನ್ನಡ ಸಹಾಯಕ ಪ್ರಾಧ್ಯಾಪಕ ರಘುರಾಜು, ಕನ್ನಡ ಉಪನ್ಯಾಸಕ ಡಾ.ಪ್ರಭು ಹಾಗೂ ಪಟ್ಟಣ ಠಾಣೆಯ ಉಪನೀರಿಕ್ಷಕರು ಹಾಜರಿದ್ದು ಕಾಲೇಜಿನ 150 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾಲೇಜಿನ ವಿದ್ಯಾರ್ಥಿಗಳು ಖಾಸಗಿ ಬಸ್ ನಿಲ್ದಾಣದಲ್ಲಿ ಸಂವಿಧಾನ ಪ್ರಸ್ತಾವನೆ ಗೀತೆಗೆ ಅದ್ಭುತ ನೃತ್ಯ ಮಾಡಿದರು.