ಮಡಿಕೇರಿ ಮೇ 2 : ಕೊಡಗು ಹೆಗ್ಗಡೆ ಸಮಾಜದ ವತಿಯಿಂದ ನಡೆದ ಸೀನಿಯರ್ ಕ್ರಿಕೆಟ್ ನಲ್ಲಿ ಹಾಲುಗುಂದ ತಂಡ ಚಾಂಪಿಯನ್ ಪಟ್ಟ ಪಡೆದುಕೊಂಡಿದೆ.
ಮೂರ್ನಾಡುವಿನ ಬಾಚಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಕಳೆದ ಮೂರು ದಿನಗಳಿಂದ ನಡೆದ ಕ್ರೀಡಾಕೂಟದ ಸೀನಿಯರ್ ಕ್ರಿಕೆಟ್ ನಲ್ಲಿ ಹಾಲುಗುಂದ ತಂಡವು ಪಾರಣೆ ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟವನ್ನು ಆಲಂಕರಿಸಿತು.
ಮೊದಲು ಬ್ಯಾಟ್ ಮಾಡಿದ ಹಾಲುಗುಂದ ತಂಡವು ಶ್ರೇಯಸ್ ಅರ್ಧಶತಕ ಹಾಗೂ ಅವಿನಾಶ್ ಉಪಯುಕ್ತ 35 ರನ್ನುಗಳ ನೆರವಿನಿಂದ ನಿಗದಿತ 8 ಓವರ್ ಗಳಲ್ಲಿ 8 ವಿಕೇಟ್ ನಷ್ಟಕ್ಕೆ 114 ರನ್ನು ಗಳ ಗುರಿಯನ್ನು ನೀಡಿತು.
ಪಾರಣೆ ತಂಡದ ಅಕ್ಷಿತ್ 5 ವಿಕೇಟ್ ಪಡೆದರು. ಗುರಿ ಬೆನ್ನತ್ತಿದ ಪಾರಣೆ ತಂಡವು 53 ರನ್ನು ಗಳಿಸುವಷ್ಟೇ ಶಕ್ತರಾಗಿ ಸೋಲು ಒಪ್ಪಿಕೊಂಡಿತು.
ಉತ್ತಮ ಬ್ಯಾಟ್‌ಮ್ಯಾನ್, ಪಂದ್ಯ ಪುರುಷೋತ್ತಮ ಮತ್ತು ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ಶ್ರೇಯಸ್, ಉತ್ತಮ ಬೌಲರ್ ಪ್ರಶಸ್ತಿಯನ್ನು ಪಾರಣೆ ತಂಡದ ಅಕ್ಷತ್ ಪಡೆದು ಕೊಂಡರು.
ಜೂನಿಯರ್ ವಿಭಾಗದಲ್ಲಿ ಪೊನ್ನಂಪೇಟೆ ತಂಡವು ಬೆಟ್ಟಗೇರಿ ತಂಡವನ್ನು ಸೋಲಿಸಿ ಪ್ರಶಸ್ತಿ ಪಡೆದಕೊಂಡಿತು. ಪಂದ್ಯ ಪುರುಷೋತ್ತಮ ಹಾಗೂ ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ಕೆವಿನ್ ಕುಟ್ಟಪ್ಪ ಪಡೆದುಕೊಂಡರು. ಮಹಿಳೆಯರ ಥ್ರೋಬಾಲ್ ಪಂದ್ಯದಲ್ಲಿ ಬಿಟ್ಟಂಗಾಲ ತಂಡವು ಪಾರಣೆ ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳಲು ಸಾಧ್ಯವಾಯಿತು.
ಇದೆ ಪ್ರಥಮ ಬಾರಿಗೆ ನಡೆದ ಮಹಿಳಾ ಹಗ್ಗ ಜಗ್ಗಾಟ ದಲ್ಲಿ ಹಾತೂರು ತಂಡವು ಒಂಟಿಯಂಗಡಿ ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಪುರುಷರ ವಿಭಾಗದಲ್ಲಿ ಪಾರಣೆ ತಂಡವು ಹಾತೂರು ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು.
ನಂತರ ನಡೆದ ಸಮರೋಪ ಸಮಾರಂಭದ ಅಧ್ಯಕ್ಷತೆಯನ್ನು ಕೊಡಗು ಹೆಗ್ಗಡೆ ಸಮಾಜದ ಅಧ್ಯಕ್ಷ ಪಡಿಞರಂಡ ಅಯ್ಯಪ್ಪ ವಹಿಸಿ ಕ್ರೀಡಾಕೂಟದ ಯಶಸ್ಸು ಕೊಡಗು ಜಿಲ್ಲೆಯ ಜನತೆಯ ಕ್ರೀಡಾ ಪ್ರೇಮ ಮತ್ತು ಕ್ರೀಡಾ ಆಸಕ್ತಿಗೆ ಮತ್ತಷ್ಟು ಮೆರುಗನ್ನು ನೀಡಿದೆ ಎಂದರು.
ಕಾರ್ಯಕ್ರಮದಲ್ಲಿ ಟ್ರೋಫಿ ದಾನಿಗಳಾದ ಮೇಜರ್ ಮಳ್ಳಡ ದೀಕ್ಷಿತ್ ದೇವಯ್ಯ, ಪೋಷಕರಾದ ಮಳ್ಳಡ ಪೂಣಚ್ಚ, ಸುತಾ ಪೂಣಚ್ಚ, ಕ್ರೀಡಾ ಸಮಿತಿ ಅಧ್ಯಕ್ಷ ಪಡಿಞರಂಡ ಪ್ರಭುಕುಮಾರ್, ಕೊಡಗು ಹೆಗ್ಗಡೆ ಸಮಾಜದ ಉಪಾಧ್ಯಕ್ಷ ಕೊರಕುಟ್ಟೀರ ಸರ ಚಂಗಪ್ಪ, ಖಚಾಂಚಿ ಪಾನಿಕುಟ್ಟಿರ ಕುಟ್ಟಪ್ಪ, ನಿರ್ದೇಶಕರಗಳಾದ ತೊರೇರ ಮುದ್ದಯ್ಯ, ಪದಿಕಂಡ ಸುನಾ, ಚರ್ಮಂಡ ಅಪ್ಪುಣು ಪೂವಯ್ಯ, ಮುರೀರ ಕುಶಾಲಪ್ಪ, ಕೊಪ್ಪಡ ಪಳಂಗಪ್ಪ ಕೊಂಗೆಪಂಡ ರವಿ, ಮೂರೀರ ಶಾಂತಿ, ತಂಬಂಡ ಮಂಜುನಾಥ್, ಚಳಿಂಡ ಕಮಲ, ಪುದಿಯತಂಡ ಜಾಲಿ, ಪ್ರಮುಖರಾದ ತೊರೇರ ರಾಜ, ಬೊಳ್ಳಡಿಚಂಡ ರಂಜಿ, ಬೈರಿಕುಂದಿರ ಪ್ರವೀಣ್, ಪಡಿಞರಂಡ ಗಿರೀಶ್ ಕಾಕೇರ ರವಿ, ಪದಿಕಂಡ ಕುಶ, ಪಡಿಞರಂಡ ಕವಿತಾ, ತೊರೇರ ಉಮೇಶ್, ಕೊಂಗೆಪಂಡ ಕುಟ್ಟಪ್ಪ, ಪದಿಕಂಡ ಈಶ್ವರ ಮತ್ತಿತರರು ಹಾಜರಿದ್ದರು.