ಮಡಿಕೇರಿ ಮೇ 12 : ಕೊಡಗು ಮೂಲದ ಚರಿಷ್ಮಾ ಮಾದಪ್ಪ ಆಸ್ಟ್ರೇಲಿಯಾದ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದು, ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು. ಕೊಡವ ಸಾಂಪ್ರದಾಯಿಕ ಧಿರಿಸಿನಲ್ಲಿ ಅಧಿಕಾರ ಸ್ವೀಕರಿಸಿದ್ದು ವಿಶೇಷವಾಗಿತ್ತು.
ಚರಿಷ್ಮಾ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಕೊಡಗಿನ ಹಿರಿಮೆಯನ್ನು ವಿದೇಶಿಗರ ಮನ ಮುಟ್ಟುವಂತೆ ಮಾಡಿದರು. ಮೂಲತಃ ನಾಪೋಕ್ಲು ವಿಭಾಗದ ಕಲಿಯಂಡ ಚರಿಷ್ಮಾ ಆಸ್ಟ್ರೇಲಿಯಾದ ಲಿವರ್ ಪೂಲ್ ಕ್ಷೇತ್ರದಿಂದ ಸ್ಪರ್ಧಿಸಿ ಸಂಸತ್ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾದ ರಾಜಕೀಯದಲ್ಲಿ ಚರಿಷ್ಮಾ ಮಾದಪ್ಪ ಗುರುತಿಸಿಕೊಂಡಿದ್ದಾರೆ.








