ಮಡಿಕೇರಿ ಮೇ 20 : ಜೆಸಿಐ ಸೋಮವಾರಪೇಟೆ ಪುಷ್ಪಗಿರಿ ಸಂಸ್ಥೆಯ ವತಿಯಿಂದ ಸೋಮವಾರಪೇಟೆ ಸಾರ್ವಜನಿಕ ಆಸ್ಪತ್ರೆಯ ಡಿ ಗ್ರೂಪ್ ಸಿಬ್ಬಂದಿಗಳಾದ ಕೆ.ಎ. ಸಬಿತ ಅಡುಗೆ ಸಹಾಯಕಿ ಮತ್ತು ಅನಿಲ್ ಎಲೆಕ್ಟ್ರಿಷಿಯನ್ ಅವರನ್ನು ಜೆಸಿಐ ಅಧ್ಯಕ್ಷೆ ಎಂ.ಎ.ರುಬೀನಾ ಎಂ.ಎ ಸೆಲ್ಯೂಟ್ ದಿ ಸೈಲೆಂಟ್ ವರ್ಕರ್ ಪ್ರಶಸ್ತಿ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಶಿವಪ್ರಸಾದ್, ಸರ್ಜನ್ ಡಾ. ಸತೀಶ್, ಗುತ್ತಿಗೆದಾರರು ಚಿಂತು, ನಿಕಟ ಪೂರ್ವ ಅಧ್ಯಕ್ಷ ಪ್ರಕಾಶ್ ಕೆ.ಎ., ಅಶೋಕ್, ಲಕ್ಷ್ಮೀಕುಮಾರ್, ರೇಶ್ಮಾವತಿ, ಆಸ್ಪತ್ರೆಯ ಸಿಬ್ಬಂದಿ ತಸ್ಮಿಯಾ ಮತ್ತು ಭವ್ಯ ಉಪಸ್ಥಿತರಿದ್ದರು.









