ನಾಪೋಕ್ಲು ಮೇ 21 : ಇಂದು ನಾಪೋಕ್ಲಿನಲ್ಲಿ 21ನೇ ಕೌಟುಂಬಿಕ ಕ್ರಿಕೆಟ್ ಹಬ್ಬವು ಮುಕ್ತಾಯವಾಯಿತು. ಈ ವರ್ಣರಂಜಿತ ಕ್ರಿಕೆಟ್ ಫೈನಲ್ ನಲ್ಲಿ ಹಲವು ದಾಖಲೆಗಳು ನಿರ್ಮಾಣವಾದವು. ಹಾಕಿಯ ನಕ್ಷತ್ರಗಳಾದ 1975ನೇ ಹಾಕಿ ವಿಶ್ವಕಪ್ ನ ಚಿನ್ನ ಗೆದ್ದ ಅಸ್ಲಾಂ ಶೇರ್ ಖಾನ್, ಅರ್ಚರಣ್ ಸಿಂಗ್, ವಿ.ಜೆ.ಫಿಲಿಪ್ಸ್, ಗೋವಿಂದ, ಕಾಳಯ್ಯ ಹಾಗೂ ಒಲಂಪಿಯನ್ ಎಂ.ಎಂ.ಸೋಮಯ್ಯ ಅವರ ಸಮ್ಮುಖದಲ್ಲಿ ಇಂದೆಂದೂ ಕಂಡು-ಕೇಳರಿಯದ ಬಹಳ ಉತ್ತಮ ಮಟ್ಟದ ಪಂದ್ಯಾವಳಿಯು ನಡೆಯಿತು. ಬಹಳಷ್ಟು ಕ್ರೀಡಾ ಪ್ರೇಮಿಗಳು ಹಾಕಿ ದಿಗ್ಗಜರನ್ನು ನೋಡಲು ತುದಿಗಾಲಿನಲ್ಲಿ ನಿಂತಿದ್ದರು. ಅವರೊಂದಿಗೆ ಸೆಲ್ಫಿ ಹಾಗೂ ಫೋಟೋ ತೆಗೆಯಲು ಕಾತರರಾಗಿದ್ದರು. ಅದ್ಭುತವಾದ ತಾಂತ್ರಿಕ ಸಮಿತಿ, ಒಳ್ಳೆಯ ವೀಕ್ಷಕ ವಿವರಣೆ ಹಾಗೂ ವೇದಿಕೆ ತುಂಬಿದ ಟ್ರೋಫಿಗಳು ನೋಡುವವರ ಕಣ್ಣು ಕುಕ್ಕುವಂತಿತ್ತು. ಇದೆಲ್ಲವೂ ಬಾಳೆಯಡ ಕುಟುಂಬದಲ್ಲಿ ಇಂದು ನಡೆಯಿತು. ಯಾವುದಕ್ಕೂ ಕಪ್ಪು ಚುಕ್ಕೆ ಬಾರದಂತೆ ಸಂಘಟನೆಗಾರರು ಶಿಸ್ತು ಬದ್ಧರಾಗಿದ್ದರು. ಪ್ರತಿಯೊಬ್ಬರಿಗೂ ಕಿರು ಕಾಣಿಕೆಯನ್ನು ಕೊಟ್ಟು ತಮ್ಮ ಗೌರವವನ್ನು ವ್ಯಕ್ತಪಡಿಸಿದರು. ಕ್ರಿಕೆಟ್ ಹಬ್ಬದಲ್ಲಿ ಮುಖ್ಯ ಅತಿಥಿಗಳು ಎಲ್ಲರ ಮನ ಗೆದ್ದರು.ಅವರು ಮಾತನಾಡುವಾಗ ಭಾವುಕರಾದರು. ಕೊಡಗಿನ ಕ್ರೀಡೆಯ ಬಗ್ಗೆ ಹೇಳುತ್ತಲೇ, ಕ್ರೀಡಾ ಹಬ್ಬವನ್ನು ಹೇಗೆ ನಡೆಸಬೇಕು, ಎಂಬ ನೀತಿ ಪಾಠವನ್ನು ಮಾಡಿದಂತಿತ್ತು. ಎಲ್ಲರಿಗೂ ಪಂದ್ಯಾವಳಿ ನೋಡಿ ಆನಂದಿಸಲು ಅವಕಾಶ ಸಿಕ್ಕಿತು. ಬಹುಮಾನ ವಿತರಣೆಯ ನಂತರ ಕೊಡವರ ಸಾಂಪ್ರದಾಯಿಕ ವಾಲಗಕ್ಕೆ, ಅತಿಥಿಗಳು ಸೇರಿ ಹೆಜ್ಜೆ ಹಾಕಿ ಸಂತಸ ವ್ಯಕ್ತಪಡಿಸಿದರು. ಕ್ರೀಡೆಗೆ ಅಡ್ಡಿಯಾಗದಂತೆ ಮಳೆರಾಯ ಕೂಡ ದೂರ ಸರಿದನು.
ಬೈತೂರು ದೇವಾಲಯಕ್ಕೆ ಸುಮಾರು ಅಂದಾಜು 50,000 ರೂಪಾಯಿ ದೇಣಿಗೆಯನ್ನು ಸಂಗ್ರಹಿಸಲಾಯಿತು. ಪಾಲಿಬೆಟ್ಟದ ಚೆಸೈರ್ ಹೋಂ ನಲ್ಲಿರುವ ವಿಶೇಷ ಚೇತನ ಬಾಲಕ-ಬಾಲಕಿಯರನ್ನು ಕರೆದು ಮುಖ್ಯ ಅತಿಥಿಗಳ ಮುಂದೆ ನೃತ್ಯ ಪ್ರದರ್ಶನ ಮಾಡಲಾಯಿತು. ಆಗ ವೇದಿಕೆಯಲ್ಲಿದ್ದ ಅತಿಥಿಗಳು ಹಾಗೂ ಕ್ರೀಡಾಭಿಮಾನಿಗಳು ಚಪ್ಪಾಳೆಯ ಮೂಲಕ ಅವರ ಪ್ರೋತ್ಸಾಹಿಸಿದರು. ಇದರಲ್ಲೂ ಕೂಡ ಬಾಳೆಯಡ ಕುಟುಂಬಸ್ಥರು ಮಾನವಿಯತೆ ಮೆರೆದರು. ಪಂದ್ಯಾವಳಿಯಲ್ಲಿ ಪ್ರತಿಭೆ ಇರುವ ಉತ್ತಮ ಆಟಗಾರರನ್ನು ಆರಿಸಿ, ಅಂತಹ ಪ್ರತಿಭಾವಂತ ಆಟಗಾರರಿಗೆ ಟ್ರೋಫಿ ನೀಡಿ ಉತ್ತೇಜನ ನೀಡಲಾಯಿತು.
ಬ್ರಿಗೇಡಿಯರ್ ಅರ್ಚರಣ್ ಸಿಂಗ್ 1975ರ ಚಿನ್ನ ಗೆದ್ದಂತಹ ಆಟಗಾರ ಹಾಗೂ ವಿಶ್ವದಲ್ಲೇ ಏಕೈಕ ವಿಶಿಷ್ಟ ಸೇವಾ ಪದಕ ಗೆದ್ದವರು. ಅವರು ಇಂದು ಮಾತನಾಡುತ್ತಲೇ ಕೊಡಗು ಹಾಗೂ ಪಂಜಾಬ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದರು. ಕ್ರೀಡೆ, ಸೈನ್ಯ, ಸಂಸ್ಕೃತಿ ಹಾಗೂ ಎಲ್ಲಾ ಚಟುವಟಿಕೆಗಳು ಒಂದೇ ಎಂದರು. ನಾನು ಇಲ್ಲಿಗೆ ಬಂದದ್ದು ಸಾರ್ಥಕವಾಯಿತು ಎಂದು ನುಡಿದರು.
ಬಾನಿನಲ್ಲಿ ಚಂದ್ರನ ಮೇಲೆ ಕಪ್ಪುಚುಕ್ಕೆ ಇದೆ. ಆದರೆ ಇಂದು ಬಾಳೆಯಡ ಕುಟುಂಬಸ್ಥರು ಆಯೋಜಿಸಿದ ಕ್ರಿಕೆಟ್ ಅಬ್ಬದಲ್ಲಿ ಯಾವ ಕೊರತೆಯೂ ಕಾಣಲಿಲ್ಲ. ಶಿಸ್ತಿಗೆ ಆದ್ಯತೆ ನೀಡಿದರು. ಸ್ವಚ್ಛತೆಯನ್ನು ಕಾಪಾಡಿದರು. ಕೊಡವರ ಸಾಂಪ್ರದಾಯವನ್ನು ಉಳಿಸಿಕೊಂಡರು. ಎಲ್ಲರ ಕೈಯಲ್ಲಿ ಶಹಬ್ಬಾಶ್ ಎನಿಸಿಕೊಂಡರು. ಇದೆ ಬಾಳೆಯಡ ಹಬ್ಬದ ವಿಶೇಷತೆ. (ಕ್ರೀಡಾ ವಿಶ್ಲೇಷಣೆ : ಚೆಪ್ಪುಡೀರ ಕಾರ್ಯಪ್ಪ)