ಕೊಡ್ಲಿಪೇಟೆ ಮೇ 24 : ಸಮೀಪದ ನೀರಗುಂದ ಗ್ರಾಮದೇವತೆ ಶ್ರೀ ಕನ್ನಂಬಾಡಿ ಅಮ್ಮನವರ ನೂತನ ವಿಗ್ರಹ ಉತ್ಸವ ಮೆರವಣಿಗೆ ನಡೆಯಿತು. ಹೇಮಾವತಿ ನದಿಯಿಂದ ದೇವರ ವಿಗ್ರಹಕ್ಕೆ ಗಂಗಾಸ್ನಾನ ಜಲಾಧಿವಾಸ, ಕ್ಷೀರಾಧಿವಾಸದ ನಂತರ ಸುಮಾರು 3 ಕಿಲೋ ಮೀಟರ್ ದೂರದಿಂದ ಕಳಸ ಹೊತ್ತ ಸುಮಂಗಲಿಯರು, ಮಂಗಳ ವಾದ್ಯ, ಅಡ್ಡೆಸಮೇತ ಉತ್ಸವ ಮೂರ್ತಿಯ ಮೆರವಣಿಗೆ ಸಾಗಿಬಂದು ಕೆಂಡೋತ್ಸವದೊಂದಿಗೆ ಸಂಪನ್ನಗೊಂಡಿತು. ಅಬ್ಬರದ ಮಳೆಸುರಿದರೂ ಮಳೆಯನ್ನೂ ಲೆಕ್ಕಿಸದೆ ಶ್ರೀ ಕನ್ನಂಬಾಡಿ ಅಮ್ಮನವರ ನೂತನ ವಿಗ್ರಹ ಉತ್ಸವ ಮೆರವಣಿಗೆ ಹಾಗು ಕೆಂಡೋತ್ಸವ ನಡೆಯಿತು. ದಾರ್ಮಿಕ ಸಭೆಯಲ್ಲಿ ಮಾತನಾಡಿದ ಶ್ರೀ ಕ್ಷೇತ್ರ ಕಿರಿಕೊಡ್ಲಿ ಮಠಾಧ್ಯಕ್ಷರಾದ ಶ್ರೀ ಶ್ರೀ ಸದಾಶಿವಸ್ವಾಮಿಗಳು ಭಾರತೀಯ ಸಂಸ್ಕೃತಿಯಲ್ಲಿ ದೇವಾಲಯ ಸಂಸ್ಕೃತಿಯನ್ನು ಮೂಲವಾಗಿರಿಸಿಕೊಂಡು ದರ್ಮದ ತಳಹದಿಯಲ್ಲಿ ಬದುಕನ್ನು ಕಟ್ಟಿಕೊಂಡವರು ನಾವು. ಪ್ರಪಂಚದಲ್ಲೇ ನಮ್ಮ ಭಾರತ ದೇಶ ಒಂದು ದೇವಾಲಯವಿದ್ದಂತೆ ಅಂತಹ ಪವಿತ್ರ ದೇಶದಲ್ಲಿ ನಾವಿದ್ದೇವೆ. ಪರಿಸರವನ್ನು ಮೈಗೂಡಿಕೊಂಡು ಕಷ್ಟ ನಷ್ಟಗಳೊಂದಿಗೆ ಧರ್ಮದ ಹಾದಿಯಲ್ಲಿ ನೆಮ್ಮದಿಯ ಬದುಕನ್ನು ಕಾಣುತ್ತಿದ್ದೇವೆ. ನೀರಗುಂದ ಗ್ರಾಮದಲ್ಲಿ ನಿರಂತರ ದಾರ್ಮಿಕ ಪೂಜಾ ಚಟುವಟಿಕೆಗಳನ್ನು ಇತ್ತೀಚಿನ ದಿಗಳಲ್ಲಿ ಹೆಚ್ಚಾಗಿ ಗ್ರಾಮಸ್ಥರು ಒಟ್ಟುಗೂಡಿಸಿ ನಡೆಸಿಕೊಂಡು ಬರುತ್ತಿದ್ದಾರೆ. ಊರಿನ ಪ್ರಮುಖ ದೇವರುಗಳಾದ ಶ್ರೀ ಮಲ್ಲೇಶ್ವರ, ಶ್ರೀ ವೀರಭದ್ರೇಶ್ವರ, ಶ್ರೀ ಕನ್ನಂಬಾಡಿ ಅಮ್ಮನವರ ದೇವಾಲಯಗಳನ್ನು ನವೀಕರಣ ಮಾಡುವ ಮೂಲಕ ಒಗ್ಗೂಡುವಿಕೆಯನ್ನು ಮಾಡುತ್ತಿದ್ದಾರೆ ಅದನ್ನು ಮುಂದುವರೆಸಿಕೊಂಡು ಸಾಗಿ ಎಂದು ಆಶೀರ್ವಚನ ನೀಡಿದರು. ಪ್ರಧಾನ ಅರ್ಚಕರು ಪಂ॥ ಮಣಿಕಂಠ ಹಾಗು ಅರ್ಚಕರಾದ ಚಂದ್ರಯ್ಯ ದೇವಾಲಯ ಸಮಿತಿಯ ಪದಾಧಿಕಾರಿಗಳು ಹಾಗು ಗ್ರಾಮದ ಹಾಗು ಸ್ಥಳೀಯ ಗ್ರಾಮದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.
Breaking News
- *ಬಾಳುಗೋಡುವಿನಲ್ಲಿ ಸಂಭ್ರಮದ ಕೊಡವ ನಮ್ಮೆ : ಕೊಡವ ಸಂಸ್ಕೃತಿ, ಪರಂಪರೆಗಳ ಉಳಿವಿಗೆ ಶ್ರಮಿಸಿ : ಶಾಸಕ ಎ.ಎಸ್.ಪೊನ್ನಣ್ಣ*
- *ವಿರಾಜಪೇಟೆಯಲ್ಲಿ ಶಾಸಕರಿಂದ ಕೃಷಿ ಯಂತ್ರೋಪಕರಣ ವಿತರಣೆ*
- *ಮಡಿಕೇರಿ : ನ್ಯುಮೋನಿಯಾ ಯಶಸ್ವಿಯಾಗಿ ಕೊನೆಗೊಳಿಸಲು ಸಾಮಾಜಿಕ ಜಾಗೃತಿ ಅಭಿಯಾನ*
- *ಕೊಡಗು : ಪ್ರಧಾನಮಂತ್ರಿ 15 ಅಂಶದ ಕಾರ್ಯಕ್ರಮ ಪ್ರಗತಿ ಸಾಧಿಸಿ : ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚನೆ*
- *ಕೊಡಗು : ಶಿಶು ಮರಣ ತಡೆಯಲು ಹೆಚ್ಚಿನ ಜಾಗೃತಿ ಮೂಡಿಸಿ : ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಸೂಚನೆ*
- *ಮಡಿಕೇರಿಯ ಹೃದಯ ಭಾಗದಲ್ಲಿ ವಾಣಿಜ್ಯ ಸಂಕೀರ್ಣ ಮಾರಾಟಕ್ಕಿದೆ*
- *ನ.30 ರಂದು ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಕೊಡಗು ಜಿಲ್ಲಾ ಪ್ರವಾಸ*
- *ಜಾರ್ಖಂಡ್ನ 14ನೇ ಮುಖ್ಯಮಂತ್ರಿಯಾಗಿ ಹೇಮಂತ್ ಸೊರೆನ್ ಪ್ರಮಾಣ ವಚನ ಸ್ವೀಕಾರ*
- *ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು*
- *TO LET / ಬಾಡಿಗೆಗೆ*