ವಿರಾಜಪೇಟೆ ಮೇ 27 : ವಿರಾಜಪೇಟೆ ತಾಲೂಕಿನ ಬೆಳ್ಳುಮಾಡು ಗ್ರಾಮದ ಆಡುಕೋಣಿ ಶ್ರೀ ಶಾಸ್ತಾವು (ಈಶ್ವರ) ಮತ್ತು ವಿಷ್ಣುಮೂರ್ತಿ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ
ದೃಢಕಲಶಾಭಿಷೇಕ ಜರುಗಿತು.
ಪುರಾತನ ದೇವಾಲಯಗಳಲ್ಲೊಂದಾದ ಶ್ರೀ ಶಾಸ್ತಾವು ಸುಮಾರು 50 ಲಕ್ಷ ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡು ಲೋಕಾರ್ಪಣೆಗೊಂಡಿತ್ತು. ದೇಗುಲ ನಿರ್ಮಾಣವಾದ ಬಳಿಕ 48 ದಿನಗಳ ಬಳಿಕ ಶ್ರೀ ದೇವರಿಗೆ ನಿತ್ಯ ಪೂಜೆ, ವಾರ್ಷಿಕ ಪೂಜೆ, ವಿಶೇಷ ಪೂಜೆ ಮಾಡುವುದು ದೈವಿಕ ಸೇವೆಯ ವಾಡಿಕೆಯಾಗಿದೆ. ಈ ಹಿನ್ನಲೆಯಲ್ಲಿ ಶ್ರೀ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಪ್ರಜ್ವಲ್ ಕುದ್ದಣಾಯ ಮತ್ತು ಇತರ ಪೊರೋಹಿತ ವೃಂದದ ಸಾನಿಧ್ಯದಲ್ಲಿ ದೃಢಕಲಶಾಭಿಷೇಕ ಸೇರಿದಂತೆ ವಿವಿಧ ವಿಶೇಷ ಪೂಜೆಗಳು ನಡೆಯಿತು.
ನಂತರ ದೇವಾಲಯದ ಆಡಳಿತ ಮಂಡಳಿಯ ವತಿಯಿಂದ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿತು.
ಈ ಸಂದರ್ಭ ದೇವಾಲಯದ ತಕ್ಕ ಮುಖ್ಯಸ್ಥರು, ಅಧ್ಯಕ್ಷರು ಸೇರಿದಂತೆ ಆಡಳಿತ ಮಂಳಿಯ ಸದಸ್ಯರು ಬೆಳ್ಳುಮಾಡು ಗ್ರಾಮ ಹಾಗೂ ನೆರೆಕೆರೆಯ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ವರದಿ : ಕಿಶೋರ್ ಕುಮಾರ್ ಶೆಟ್ಟಿ