ಸೋಮವಾರಪೇಟೆ ಮೇ 30 : ಶಾಲಾ ಆರಂಭೋತ್ಸವದ ಅಂಗವಾಗಿ ಕಿರಗಂದೂರು ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಿಕ್ಷಕರು ವಿದ್ಯಾರ್ಥಿಗಳನ್ನು ಸಿಹಿ ಮತ್ತು ಹೂ ನೀಡುವ ಮೂಲಕ ಸ್ವಾಗತಿಸಿದರು.
ಈ ಸಂದರ್ಭ ಶಾಲಾ ಮುಖ್ಯ ಶಿಕ್ಷಕ ಚಂದ್ರಾಚಾರಿ, ಶಿಕ್ಷಕರಾದ ಡಿ.ಪಿ. ಧರ್ಮಪ್ಪ, ಬಿ. ವಿಜಯಕುಮಾರ್, ಎಸ್.ಎಚ್. ಮಂಜುನಾಥ್, ಪ್ರಾಥಮಿಕ ಶಾಲಾ ಪ್ರಬಾರ ಮುಖ್ಯ ಶಿಕ್ಷಕಿ ವಿ.ಎನ್. ವಿನೋದ, ಶಿಕ್ಷಕ ಕೆಂಪರಾಜು ಹಾಗೂ ಪೋಷಕರು ಇದ್ದರು.









