ಮಡಿಕೇರಿ ಜೂ.3 : ಪ್ರಸಕ್ತ ವರ್ಷದಲ್ಲಿ ಪ್ರಾಕೃತಿಕ ವಿಕೋಪ ಘಟನೆಗಳು ವರದಿಯಾದಲ್ಲಿ, ಕಾರ್ಯಾಚರಣೆ ನಡೆಸಲು ಅಗತ್ಯವಾದ ವಾಹನಗಳನ್ನು ಇಲಾಖಾ ವ್ಯಾಪ್ತಿಯಲ್ಲಿ ಸನ್ನದ್ದವಾಗಿರಿಸಲು ಹಾಗೂ ಈ ವಾಹನಗಳಿಗೆ ಬಾಡಿಗೆ ದರ ನಿಗದಿಪಡಿಸಲು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಹಾಗೂ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅಧ್ಯಕ್ಷತೆಯಲ್ಲಿ ನಿರ್ಧರಿಸಲಾಗಿದೆ.
ಅದರಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಕೊಡಗು ಜಿಲ್ಲೆ, ಮಡಿಕೇರಿ ಅವರು ಅಗತ್ಯ ವಾಹನಗಳ ಮಾಲೀಕರೊಂದಿಗೆ ಚರ್ಚಿಸಿ ಅವುಗಳ ಬಾಡಿಗೆ ದರವನ್ನು ನಿಗದಿಪಡಿಸಿದ್ದಾರೆ.
ವರ್ಗ-1 ಜೀಪ್ ಒಂದು ದಿನಕ್ಕೆ ರೂ 3,750, ವರ್ಗ-2 ಜೆ.ಸಿ.ಬಿ ಒಂದು ಗಂಟೆಗೆ ರೂ.950 ಹಾಗೂ ಒಂದು ದಿನಕ್ಕೆ ರೂ.7000, ವರ್ಗ-3 ಹಿಟಾಚಿ (ಶಿಪ್ಟಿಂಗ್ ಒನ್ ಸೈಡ್) ರೂ.7000 ಹಿಟಾಚಿ ಇಘಿ70 ಒಂದು ಗಂಟೆಗೆ ರೂ.1100 ಹಿಟಾಚಿ ಇಘಿ110 ಒಂದು ಗಂಟೆಗೆ ರೂ.1350 ಹಿಟಾಚಿ ಇಘಿ140 ಒಂದು ಗಂಟೆಗೆ ರೂ.1700 ವರ್ಗ-4 ಕ್ರೇನ್ ( 101 ಕೆಪಾಸಿಟಿ) ಒಂದು ಗಂಟೆಗೆ ರೂ. 1000 ಕ್ರೇನ್ (151 ಕೆಪಾಸಿಟಿ) ಒಂದು ಗಂಟೆಗೆ ರೂ.1100 ಕ್ರೇನ್ (201 ಕೆಪಾಸಿಟಿ) ಒಂದು ಗಂಟೆಗೆ ರೂ.1200/- ಆಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ತಿಳಿಸಿದ್ದಾರೆ.









