ಮಡಿಕೇರಿ ಜೂ 21 : ಕೊಡಗು ಪ್ರೆಸ್ ಕ್ಲಬ್ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಕ್ಲಬ್ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜೂ.25 ರಂದು ಪತ್ರಿಕಾ ಭವನದಲ್ಲಿ ಆಯೋಜಿಸ ಲಾಗಿದೆ ಎಂದು ಕ್ಲಬ್ ಪ್ರಧಾನ ಕಾರ್ಯದರ್ಶಿ ಕೆ.ಕೆ. ರೆಜಿತ್‍ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂದು ಬೆಳಗ್ಗೆ 11 ಗಂಟೆಗೆ ಕೊಡಗು ಪ್ರೆಸ್ ಕ್ಲಬ್ ಉಪಾಧ್ಯಕ್ಷ ಚೀಯಂಡಿ ತೇಜಸ್ ಪಾಪಯ್ಯ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಸಮಾಜ ಸೇವಕ ಮೇರಿಯಂಡ ಸಂಕೇತ್ ಪೂವಯ್ಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಿದ್ದಾರೆ. ಅತ್ಯುತ್ತಮ ಪರಿಣಾಮಕಾರಿ ವರದಿಗಾಗಿ ಕೆ.ಬಿ. ಮಹಾಂತೇಶ್ ಸ್ಮರಣಾರ್ಥ ನೀಡುವ ಪ್ರಶಸ್ತಿಗೆ ಭಾಜನರಾಗಿರುವ ಹಿರಿಕರ ರವಿ ಅವರಿಗೆ ಶಕ್ತಿ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮುಖ್ಯಅತಿಥಿಗಳಾಗಿ ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಡಾ.ಉಳ್ಳಿಯಡ ಎಂ. ಪೂವಯ್ಯ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಪಾಲ್ಗೊಳ್ಳಲಿದ್ದಾರೆ.
ಬೊಳ್ಳಜೀರ ಬಿ. ಅಯ್ಯಪ್ಪ ಪುತ್ರಿ ಬಿ.ಎ. ದೇಚಮ್ಮ, ಬಿ.ಎಸ್. ರಫೀಕ್ ಅಹಮ್ಮದ್ ಪುತ್ರಿ ರಿದಾ ಸುಮನ್, ಎಸ್.ರವಿ ಪುತ್ರಿ ಎಸ್.ಆರ್. ಸಂಸ್ಕೃತಿ, ರಂಗಸ್ವಾಮಿ ಪುತ್ರ ಆರ್. ಸಮರ್ಥ್, ಬಾಚರಣಿಯಂಡ ಅನು ಕಾರ್ಯಪ್ಪ ಪುತ್ರಿ ಪರಿಧಿ ಪೊನ್ನಮ್ಮ, ಕುಡೆಕ್ಕಲ್ ಗಣೇಶ್ ಪುತ್ರಿ ಕೆ.ಜಿ. ಶಿವಾನಿ, ಮಚ್ಚಮಾಡ ಅನೀಶ್ ಮಾದಪ್ಪ ಪುತ್ರ ಆಕಾಶ್ ಚಿಟ್ಟಿಯಪ್ಪ, ಲಸ್ಲಿ ಮೆನೆಜಸ್ ಪುತ್ರ ಲೆನಿನ್ ಮೆನೆಜಸ್, ಶಿವರಾಜ್ ಪುತ್ರಿಯರಾದ ಕೆ.ಎಸ್. ಧೀಕ್ಷಾ, ಕೆ.ಎಸ್. ಅನನ್ಯ, ಪಿ.ಎ. ಆನಂದ್ ಪುತ್ರ ಎ.ರೋಷನ್, ಪುತ್ರಿ ಎ. ಇಂಚರ, ವಿಶ್ವ ಕುಂಬೂರು ಪುತ್ರ ಇ.ವಿ. ನಿಶಾನ್, ಎ.ಎನ್. ವಾಸು ಪುತ್ರಿ ಸಮೃದ್ಧಿ, ಪಾರ್ಥ ಚಿಣ್ಣಪ್ಪ ಪುತ್ರಿ ಪಿ.ಸಿ. ಕಾಜಲ್, ಸುನಿಲ್ ಪೊನ್ನೇಟಿ ಪುತ್ರಿ ಪಿ.ಎಸ್. ತಿಷ್ಯಾ, ಬಲ್ಲಿಮಾಡ ಮೋಹನ್ ದೇವಯ್ಯ ಪುತ್ರಿ ಪರಿಣಿತ ದೇವಯ್ಯ, ಕುಯ್ಯಮುಡಿ ಸುನಿಲ್ ಪುತ್ರಿರಾದ ಕೆ.ಎಸ್. ಲಕ್ಷಿತಾ, ಕೆ.ಎಸ್. ನಿರ್ಮಿತಾತ, ಪುತ್ರ ಕೆ.ಎಸ್. ನಿವೇದ್ ಬಾಲಜಿ, ಎಂ.ಎ. ಕೃಷ್ಣ ಪುತ್ರಿಯರಾದ ಎಂ.ಕೆ. ಜೇಶ್ಮ, ಎಂ.ಕೆ. ಜಸ್ಮಿತ, ಕೆ.ಎಸ್. ನಾಗೇಶ್ ಪುತ್ರಿ ಎನ್. ಸಾಗರಿಕ, ಸಣ್ಣುವಂಡ ಕಿಶೋರ್ ನಾಚಪ್ಪ ಪುತ್ರಿ ಎಸ್.ಕೆ. ತ್ರಿಷಾ ಪೊನ್ನಮ್ಮ, ಬಡಕಡ ರಜಿತಾ ಕಾರ್ಯಪ್ಪ ಪುತ್ರಿ ಕೆ. ಈಶಾನ್ವಿ, ಟಿ.ಆರ್. ಪ್ರಭುದೇವ್ ಪುತ್ರಿಯರಾದ ಎಸ್.ಪಿ. ಇಂಚರ, ಎಸ್.ಪಿ. ಚಿತ್ತಾರ, ಎಂ.ಎನ್. ಚಂದ್ರಮೋಹನ್ ಪುತ್ರಿ ಚೈತನ್ಯ ಚಂದ್ರಮೋಹನ್, ಅಲ್ಲಾರಂಡ ವಿಠಲ ನಂಜಪ್ಪ ಪುತ್ರ ಅಲ್ಲಾರಂಡ ರಸಜ್ಞಾ ಮಾದಪ್ಪ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತದೆ.







