ಸುಂಟಿಕೊಪ್ಪ ಜೂ.22 : ವಿದ್ಯಾರ್ಥಿ ಜೀವನದಲ್ಲಿ ಮತದಾನದ ಹಕ್ಕಿನ ಮಹತ್ವತೆಯನ್ನು ಅರಿತುಕೊಳ್ಳಲು ಕಾಲೇಜು ಸಂಸತ್ ರಚನೆ ಚುನಾವಣೆ ಸಹಕಾರಿ ಎಂದು ಕಾಲೇಜು ಪ್ರಾಚಾರ್ಯ ಪಿ.ಎಸ್.ಜಾನ್ ತಿಳಿಸಿದರು.
ಸುಂಟಿಕೊಪ್ಪ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಮತದಾನ ಹಾಗೂ ಸಂಸತ್ ರಚನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮತದಾನದ ಬಗ್ಗೆ ಅರಿವನ್ನು ಹೊಂದಿ ಚುನಾವಣಾ ಪ್ರಕ್ರಿಯೆಗಳ ಬಗ್ಗೆ ತಿಳಿದುಕೊಳ್ಳಲಿ ಎಂಬ ಸದುದ್ದೇಶ ಇರಿಸಿಕೊಂಡು ಕಾಲೇಜಿನಲ್ಲಿ ಸಂಸತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಗಳು ತಪ್ಪದೆ ಮತದಾನದಲ್ಲಿ ಪಾಲ್ಗೊಳ್ಳುವುದು ಮುಖ್ಯ ಎಂದರು.
ಮತದಾನ ಸಂಚಾಲಕರಾದ ಉಪನ್ಯಾಸಕಿ ಸರಳಾ ಮಾದರಿ ವiತಗಟ್ಟೆಯನ್ನು ರಚಿಸಿ ಮತದಾನ ಮಾಡುವ ರೀತಿಯನ್ನು ವಿವರಿಸಿದರು. ಅರ್ಥಶಾಸ್ತ್ರ ಉಪನ್ಯಾಸಕಿ ಮತ ಪತ್ರಗಳನ್ನು ಸಿದ್ಧಪಡಿಸಿದರು.
ಉಪನ್ಯಾಸಕಿಯರಾದ ಸುನೀತ, ಕವಿತಾ ಮತ ಎಣಿಕೆ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು.
ಕಾಲೇಜು ನಾಯಕನಾಗಿ ಹಸೈನಾರ್, ಉಪನಾಯಕ ಕೃತಿಕ್, ಆರೋಗ್ಯ ಮತ್ತು ಸ್ವಚ್ಚತಾ ಮಂತ್ರಿಯಾಗಿ ಭೂಮಿಕ, ಸಾಂಸ್ಕøತಿಕ ಚಟುವಟಿಕೆ ನಿರ್ವಹಣಾ ಮಂತ್ರಿಯಾಗಿ ರಾಜಿಲಾ ಮತದಾನದಲ್ಲಿ ಜಯಗಳಿಸುವ ಮೂಲಕ ಅಧಿಕಾರದ ಗದ್ದುಗೇರಿದರು.
ಈ ಸಂದರ್ಭ ಕಾಲೇಜು ಉಪನ್ಯಾಸಕ ಪದ್ಮಾವತಿ, ಕವಿತಭಕ್ತ್, ಮಂಜುಳಾ, ಅನುಷಾ, ಸಂಧ್ಯಾ, ಅಭಿಷೇಕ್ ಹಾಗೂ ಕನಕ ಇದ್ದರು.









