ಮಡಿಕೇರಿ NEWS DESK ಡಿ.18 : ಆದಿಮ ಸಂಜಾತ ಆನಿಮಿಸ್ಟಿಕ್ ನಂಬಿಕೆಯ ಏಕಜನಾಂಗೀಯ ಕೊಡವರ ಧಾರ್ಮಿಕ ಸಂಸ್ಕಾರವಾದ ತೋಕ್ – ಗನ್ ಹಕ್ಕಿಗೆ ಸಿಖ್ಖರ ಕಿರ್ಪಾಣ್ ಮಾದರಿಯಲ್ಲಿ ಸಂವಿಧಾನದ 25-26 ನೇ ವಿಧಿ ಪ್ರಕಾರ ಎಸೆನಿಶಿಯಲ್, ರಿಲೀಜಿಯಸ್ ಅಕ್ಟಿವಿಟೀಸ್ ಆಕ್ಟ್ ನಡಿಯಲ್ಲಿ ಶಾಶ್ವತ ರಾಜ್ಯಾಂಗ ಭದ್ರತೆ ನೀಡಬೇಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಒತ್ತಾಯಿಸಿದ್ದಾರೆ. ಸಿಎನ್‌ಸಿ ವತಿಯಿಂದ ಮೂರ್ನಾಡಿನ ಬಲಂಬೇರಿಯ ರಸ್ತೆಯ ಚೇನಂಡ ಪೃಥ್ವಿ ಅವರ ಕಾಫಿ ಕ್ಯಾಸಲ್ ಕೂರ್ಗ್ ರೆಸಾರ್ಟ್ನಲ್ಲಿ ನಡೆದ 16ನೇ ವರ್ಷದ ಗನ್ ಕಾರ್ನಿವಲ್ – ತೋಕ್ ನಮ್ಮೆಯನ್ನು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
2026- 27ರ ರಾಷ್ಟ್ರೀಯ ಜನಗಣತಿಯಲ್ಲಿ ಕೊಡವರು ಎಂದೇ ಎಲ್ಲಾ ಕಾಲಂನಲ್ಲೂ ದಾಖಲಿಸಬೇಕು, ಇಲ್ಲದಿದ್ದರೆ 2029ರ ನಂತರ ತೋಕ್ ಹಕ್ಕು ಸೇರಿದಂತೆ ಕೊಡವರು ಎಲ್ಲಾ ಹಕ್ಕುಗಳನ್ನು ಕಳೆದುಕೊಳ್ಳುವ ಅಪಾಯವಿದೆ. ಆದ್ದರಿಂದ ಜನಗಣತಿಯಲ್ಲಿ ‘ಕೊಡವ’ ಎಂದೇ ದಾಖಲೀಕರಣಗೊಳ್ಳುವ ಮೂಲಕ ನಮ್ಮ ಭವಿಷ್ಯತ್ತು ನಿರ್ಣಯಕ್ಕೆ ಬುನಾದಿ ಹಾಕಬೇಕೆಂದು ಕರೆ ನೀಡಿದರು. ಬಂದೂಕು/ತೋಕ್ ಆದಿಮ ಸಂಜಾತ ಆನಿಮಿಸ್ಟಿಕ್ ನಂಬಿಕೆಯ ಏಕಜನಾಂಗೀಯ ಕೊಡವ ಕುಲದ ಧಾರ್ಮಿಕ-ಜನಾಂಗೀಯ ಸಂಸ್ಕಾರವಾಗಿದೆ. ತೋಕ್ ಕೊಡವರ ಪ್ರಾಚೀನ ಹೆಮ್ಮೆಯ ಹೆಗ್ಗುರುತು ಪೂರ್ವಕಾಲದ ಸಂಪ್ರದಾಯದ ಆಚರಣೆಗಳು ಮತ್ತು ಜಾನಪದ ಕಾನೂನು ವ್ಯವಸ್ಥೆಗಳನ್ನು ಪ್ರದರ್ಶಿಸಲು ಮತ್ತು ಸಂರಕ್ಷಿಸಲು, ಸಿಎನ್‌ಸಿ ವಾರ್ಷಿಕವಾಗಿ ತೋಕ್ ನಮ್ಮೆ ಸಾರ್ವಜನಿಕ ಗನ್ ಕಾರ್ನಿವಲ್ ಅನ್ನು ಆಯೋಜಿಸುತ್ತ ಬಂದಿದೆ. ಆದಿಮ ಸಂಜಾತ ಆನಿಮಿಸ್ಟಿಕ್ ನಂಬಿಕೆಯ ಏಕಜನಾಂಗೀಯ ಕೊಡವ ಕುಲದ ಹೆಗ್ಗುರುತು ಭೂಮಿ ತಾಯಿ, ಪ್ರಕೃತಿ ಮಾತೆ, ಜಲದೇವತೆ ಪವಿತ್ರ ಕಾವೇರಿ ನದಿ, ಬುಡಕಟ್ಟು ಪ್ರಾಚೀನತೆ ಜನಾಂಗ, ದೈವಿಕ ವನಪ್ರದೇಶಗಳು, ಪರ್ವತಗಳು, ಪೂಜನೀಯ ಮಂದ್‌ಗಳು, ಪಾರಂಪರಿಕ ಸಾಮುದಾಯಿಕ ಭೂಮಿಗಳು, ಅಲಿಖಿತ ಮೌಖಿಕ ಜಾನಪದ-ಕಾನೂನು ವ್ಯವಸ್ಥೆಗಳು, ಗೆಜ್ಜೆತಂಡ್, ಗುರುಕಾರೋಣ ಮತ್ತು ತೋಕ್/ಬಂದೂಕು ಸಂಸ್ಕೃತಿಯೊಂದಿಗೆ ಆಳವಾಗಿ ಹೆಣೆದುಕೊಂಡಿದೆ. ಇವು ಕೊಡವ ಜನಾಂಗದ ಭೂತ, ವರ್ತಮಾನ ಮತ್ತು ಭವಿಷ್ಯದಿಂದ ಬೇರ್ಪಡಿಸಲಾಗದ ಕೊಡವ ಪರಂಪರೆಯ ಶ್ರೀಮಂತ ಭಂಡಾರಗಳಾಗಿವೆ. ನಿಶ್ಯಸ್ತ್ರೀಕರಣ ಕಾಯಿದೆ ಜಾರಿಗೆ ಬಂದಾಗಿನಿಂದ ಆದಿಮಸಂಜಾತ ಕೊಡವ ಜನಾಂಗವು ಶಸ್ತಾçಸ್ತçಗಳನ್ನು ಹೊಂದಲು ಪರವಾನಗಿ ಪಡೆಯುವುದರಿಂದ ವಿನಾಯಿತಿ ಪಡೆದಿದೆ, ಇದು ಕಾಲಾನಂತರದಲ್ಲಿ ವಿವಿಧ ಆಡಳಿತಗಾರರಿಂದ ಗುರುತಿಸಲ್ಪಟ್ಟಿದೆ. ಭಾರತ ಸ್ವಾತಂತ್ರ್ಯ ಪಡೆದ ನಂತರ, ಭಾರತೀಯ ಶಸ್ತಾçಸ್ತç ಕಾಯಿದೆಯ ಸೆಕ್ಷನ್ 3 ಮತ್ತು 4 ರ ಅಡಿಯಲ್ಲಿ ಈ ವಿನಾಯಿತಿ ಮುಂದುವರೆಯಿತು. 1956 ರಲ್ಲಿ ರಾಜ್ಯ ಮರುಸಂಘಟನೆ ಕಾಯಿದೆಯಡಿಯಲ್ಲಿ ಕೊಡಗು ರಾಜ್ಯವನ್ನು ಕರ್ನಾಟಕದಲ್ಲಿ ವಿಲೀನಗೊಳಿಸಿದ ನಂತರ, ಆಡಳಿತ ವರ್ಗವು ವಿವಿಧ ದುರುದ್ದೇಶಪೂರಿತ ತಂತ್ರಗಳ ಮೂಲಕ ನಮ್ಮ ಧಾರ್ಮಿಕ ಸಂಸ್ಕಾರವಾದ ತೋಕ್/ಬಂದೂಕು ಹಕ್ಕುಗಳನ್ನು ಅಪಾಯಕ್ಕೆ ತರಲು ಪ್ರಾರಂಭಿಸಿತು ಎಂದು ಆರೋಪಿಸಿದರು. ಅಪರೂಪದ ಮತ್ತು ಪುರಾತನವಾದ ಕೊಡವ ಜನಾಂಗವನ್ನು ರಕ್ಷಿಸುವ ಬದಲು, ರಾಜಕೀಯ ಪ್ರಭಾವ ಮತ್ತು ಜನಸಂಖ್ಯಾ ಪ್ರಾಬಲ್ಯವನ್ನು ಬಳಸಿಕೊಂಡು ನಮ್ಮನ್ನು ಬೆದರಿಸುತ್ತಾರೆ. ಕೊಡವ ಜನಾಂಗದ ಧಾರ್ಮಿಕ-ಸಾಂಸ್ಕೃತಿಕ ಲಾಂಛನ ಹಾಗೂ ಜನಪದ ಸಂಕೇತವಾಗಿರುವ ಬಂದೂಕನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು ಹಾಗೂ ಈ ತೋಕ್ ಸಂಸ್ಕೃತಿ ಶಾಶ್ವತವಾಗಿ ಸ್ಥಿರೀಕರಣಗೊಳ್ಳಲು ಹಾಗೂ ಇದರ ಸ್ಥಿತಿಸ್ಥಾಪಕತ್ವನ್ನು ಕಾಯ್ದುಗೊಳ್ಳಲು ರಾಜ್ಯಾಂಗ ಖಾತ್ರಿ ಅತ್ಯವಶ್ಯವಾಗಿದೆ ಎಂದರು. ಕೊಡವರ ಗೌರವಾನ್ವಿತ ಗುರಿಗಳು ಮತ್ತು ಶಾಸನ ಬದ್ಧ ಹಕ್ಕೊತ್ತಾಯಗಳನ್ನು ಪರಿಗಣಿಸಬೇಕೆಂಬ ನಿರ್ಣಯ ಕೈಗೊಂಡ ಎನ್.ಯು.ನಾಚಪ್ಪ, ವಿಶ್ವದಲ್ಲೇ ಈ ವೈಶಿಷ್ಟ್ಯ ಪೂರ್ಣ ಕೊಡವ ಗನ್ ಕಾರ್ನಿವಲ್-ತೋಕ್ ನಮ್ಮೆಯನ್ನು ಕೇಂದ್ರ-ರಾಜ್ಯ ಸರ್ಕಾರಗಳು ಮಧ್ಯೆಏಷ್ಯಾ ದೇಶಗಳಲ್ಲಿ ನಡೆಸುತ್ತಿರುವ ಸಂಪ್ರದಾಯಿಕ “ಬುಜಕಾಸಿ” ಉತ್ಸವದಂತೆ ನಡೆಸಲು ಉತ್ತೇಜನ ಮತ್ತು ಪ್ರೋತ್ಸಾಹ ನೀಡಬೇಕೆಂದು ಒತ್ತಾಯಿಸಿದರು. *ಹಕ್ಕೊತ್ತಾಯಗಳು* ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆಯೊಂದಿಗೆ ಕೊಡವ ಸ್ವಯಂ ಆಡಳಿತ ಹಾಗೂ ಆಂತರಿಕ ರಾಜಕೀಯ ಸ್ವ-ನಿರ್ಣಯ ಹಕ್ಕುಗಳನ್ನು ಮಾನ್ಯ ಮಾಡಬೇಕು. ವಿಶ್ವ ರಾಷ್ಟ್ರ ಸಂಸ್ಥೆಯ ಅಂತರಾಷ್ಟ್ರೀಯ ಕಾನೂನಿನನ್ವಯ ಆದಿಮ ಸಂಜಾತ ಕೊಡವರನ್ನು ಶಾಸಕ ಬದ್ಧವಾಗಿ ರಕ್ಷಿಸಬೇಕು ಹಾಗೂ ಹಿಂದೆ ಹೊರಗಿನ ಆಡಳಿತಗಾರರು ಕೊಡವರಿಂದ ವಶಪಡಿಸಿಕೊಂಡು ಹೊರಗಿನ ಬಂಡವಾಳ ಶಾಹಿಗಳಿಗೆ ಭೋಗ್ಯಕ್ಕೆ ನೀಡಿದ, ಮಾರಾಟ ಮಾಡಿದ ಮತ್ತು ಅಡಮಾನವಿಟ್ಟ ಕೊಡವರ ಪೂರ್ವಾರ್ಜಿತ ಆಸ್ತಿಗಳನ್ನು ವಿಶ್ವ ರಾಷ್ಟ್ರ ಸಂಸ್ಥೆಯ ಇಂಡಿಜಿನೆಸ್ ಪಿಪಲ್ಸ್ ಪ್ರಾಪರ್ಟಿ ರಿ ಕ್ಲೆಮ್ ಕಾಯ್ದೆಯಡಿ ಕೊಡವರಿಗೆ ಪುನರ್ ಸ್ಥಾಪಿಸಬೇಕು. ಕೊಡವ ಜನಾಂಗೀಯ ಸಂಸ್ಕಾರದ ಗನ್/ತೋಕ್ ಅನ್ನು ನಮ್ಮ ಸಂವಿಧಾನದ 25 ಮತ್ತು 26 ನೇ ವಿಧಿಯ ಅಡಿಯಲ್ಲಿ ಸಿಖ್ಖರ ಕಿರ್ಪಾನ್ ಗೆ ಸಮಾನವಾಗಿ ರಕ್ಷಿಸಬೇಕು. ಕೊಡವ ಜನಾಂಗೀಯ ಬುಡಕಟ್ಟು ಜನಾಂಗದವರು ಜನಸಾಂದ್ರತೆಯಿಲ್ಲದ ಆಯಕಟ್ಟಿನ ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುವುದರಿಂದ, ಸ್ವಯಂ ರಕ್ಷಣೆಗಾಗಿ ಕೊಡವ ಮಹಿಳೆಯರಿಗೆ ವಿಶೇಷ ಗನ್ ಶೂಟಿಂಗ್ ತರಬೇತಿಯನ್ನು ಸರ್ಕಾರ ಪ್ರಾರಂಭಿಸಬೇಕು. ವಿನಾಯಿತಿ ಪ್ರಮಾಣಪತ್ರಗಳ ವಿತರಣೆಗೆ ಸಂಬAಧಿಸಿದAತೆ ಎಲ್ಲಾ ರೀತಿಯ ಆಡಳಿತಾತ್ಮಕ ಅಡಚಣೆಗಳನ್ನು ಸರ್ಕಾರ ತೆಗೆದುಹಾಕಬೇಕು. ಸರ್ಕಾರವು ಒಂದೇ ವಿಂಡೋ ಏಕ ಗವಾಕ್ಷಿ ಯೋಜನೆ ಮೂಲಕ ತೋಕ್ ವಿನಾಯಿತಿ ಪತ್ರವನ್ನು ವಿಳಂಬ ದ್ರೋಹ ಎಸಗದೆ ಫಲಾನುಭವಿ ಕೊಡವರಿಗೆ ವಿತರಿಸಬೇಕು/ಒದಗಿಸಬೇಕು. ಕೊಡವ ಕುಲದ ಯಾವುದೇ ಒಬ್ಬ ವ್ಯಕ್ತಿ ಅಂದರೆ ಅವಳು ಅಥವಾ ಅವನು ವಿನಾಯಿತಿ ಪತ್ರಕ್ಕೆ ಅರ್ಜಿ ಸಲ್ಲಿಸಿದಾಗ ಆತ ಕೊಡವ ಎಂದು ದೃಢಿಕರಿಸಲ್ಪಟ್ಟರೆ ಅಂತವರಿಗೆ ವಿಳಂಬ ಮಾಡದೆ ಗನ್ ವಿನಾಯಿತಿ ಪತ್ರ ನೀಡಬೇಕು. ಕೊಡವ ಪೋಷಕರು ತಮ್ಮ ಹೆಣ್ಣುಮಕ್ಕಳಿಗೆ ವಿವಾಹವಾಗುವಾಗ ವಿನಾಯಿತಿ ಪ್ರಮಾಣಪತ್ರ ಮತ್ತು ಗನ್/ತೋಕ್ ಅನ್ನು ಕಡ್ಡಾಯವಾಗಿ ನೀಡಬೇಕು. ಪೊಟ್ಟಿ ದುಂಬಚಿಡುವ ಆಚರಣೆಯಲ್ಲಿ ಬಂದೂಕು ಮತ್ತು ಬಂದೂಕು ವಿನಾಯಿತಿ ಪ್ರಮಾಣಪತ್ರವನ್ನು ಸೇರಿಸಬೇಕು. ಎಲ್ಲಾ ಕೊಡವ ಆಚರಣೆಗಳಲ್ಲಿ, ಬಂದೂಕು ಗುಂಡು ಹಾರಿಸಲಾಗುತ್ತದೆ. ಆದರೆ ಇಂದಿನ ದಿನಗಳಲ್ಲಿ ಕೊಡವ ವಿರೋಧಿ ತಂತ್ರದಿಂದಾಗಿ ನಮ್ಮ ಎಲ್ಲಾ ಗನ್/ತೋಕ್ ಆಚರಣೆಗಳು ಹಿಂದಕ್ಕೆ ತಳ್ಳಲ್ಪಟ್ಟಿವೆ. ಜನನ, ಮರಣ, ಮದುವೆ ಮತ್ತು ತಲಕಾವೇರಿಯಲ್ಲಿ ತೀರ್ಥೋದ್ಭವದ ಸಂದರ್ಭದಲ್ಲಿಯೂ ಬಂದೂಕಿನಿAದ ಗುಂಡು ಹಾರಿಸಲಾಗುತ್ತಿತ್ತು. ಅದು ಮುಂದುವೆಯಬೇಕು. ಒಟ್ಟಾರೆ ಕೊಡವ ಸಂಸ್ಕೃತಿಯ ಧಾರ್ಮಿಕ ಸಂಸ್ಕಾರವಾಗಿರುವ ತೋಕ್/ಗನ್ ಅದರ ಸ್ಥಿತಿ ಸ್ಥಾಪಕತ್ವವನ್ನು ಮುಂದುವರೆಸುವ ಸ್ಥಿತಿ ನಿರ್ಮಾಣವಾಗಬೇಕು ಎಂದು ಎನ್.ಯು.ನಾಚಪ್ಪ ಆಗ್ರಹಿಸಿದರು. *ಕೊಡವ ವಿಭೂಷಣ ಪ್ರಶಸ್ತಿ ಪ್ರದಾನ* ಕಾರ್ಯಕ್ರಮದಲ್ಲಿ ಕಗ್ಗಟ್ ನಾಡ್ ಹಿರಿಯ ನಾಗರೀಕರ ವೇದಿಕೆಯ ಅಧ್ಯಕ್ಷ ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಮಡಿಕೇರಿಯ ಹಿರಿಯ ಸಮಾಜ ಸೇವಕ ಕುಕ್ಕೇರ ಜಯ ಚಿಣ್ಣಪ್ಪ, ಹೆಸರಾಂತ ಪರ್ವತಾರೋಹಿ ಜಮ್ಮಡ ಪ್ರೀತ್ ಅಯ್ಯಣ್ಣ, ತೆರಾಲು ಗ್ರಾಮದ ಸಾಮಾಜಿಕ ಕಾರ್ಯಕರ್ತೆ ಬೊಟ್ಟಂಗಡ ಸವಿತಾ ಪೆಮ್ಮಯ್ಯ, ಸಿಎನ್‌ಸಿಯ ಗನ್ ಕಾರ್ನಿವಲ್ ಗೆ ಹಲವಾರು ವರ್ಷಗಳಿಂದ ಸಹಕಾರ ನೀಡುತ್ತಿರುವ ಕೊಳಕೇರಿಯ ಅಪ್ಪಚ್ಚೀರ ರಮ್ಮಿ ನಾಣಯ್ಯ ಹಾಗೂ ರೀನಾ ನಾಣಯ್ಯ ಕೊಳಕೇರಿ, ಅಂಜಿಗೇರಿ ನಾಡಿನ ಮುಚ್ಚಿ ಹೋದ ಬುದ್ರೋಡೆ ನಾಡ್ ಮಂದ್ ಗೆ ಮರುಜೀವ ಕಲ್ಪಿಸಿದ ಕೋಳೇರ ರಾಜು ನರೇಂದ್ರ, ಸೂರ್ಲಬ್ಬಿ ನಾಡಿನ ಹೆಸರಾಂತ ಕೊಡವ ಜಾನಪದ ಕಲಾತಜ್ಞ ಮೇದುರ ಪೂವಯ್ಯ, ನಿವೃತ್ತ ಸೇನಾಧಿಕಾರಿ ಹಾಗೂ ತಿತಿಮತಿಯ ಸಮಾಜ ಸೇವಕ ಲೆಫ್ಟಿನೆಂಟ್ ಬೊಳ್ಳಿಮಾಡ ನಂಜಪ್ಪ, ಕಿಗ್ಗಾಲು ಗ್ರಾಮದ ನಿವೃತ್ತ ಕೃಷಿ ವಿಜ್ಞಾನಿ ಬಾಚೆಟ್ಟಿರ ಮಿಟ್ಟು ಬೊಳ್ಯಪ್ಪ ಹಾಗೂ ಚೆಟ್ಟಳ್ಳಿಯ ನಾಟಿ ವೈದ್ಯ ಬಟ್ಟಿರ ವೇಣು ನಾಚಪ್ಪ ಅವರುಗಳಿಗೆ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಕೊಡವ ವಿಭೂಷಣ ಪ್ರಶಸ್ತಿ ಪ್ರದಾನ ಮಾಡಿದರು. *ತೋಕ್ ನಮ್ಮೆ ವಿಜೇತರು* ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ನೆಲ್ಲಮಕ್ಕಡ ವಿವೇಕ್ ಮೊದಲ ಸ್ಥಾನ ಗಳಿಸಿದರಲ್ಲದೇ, ಮ್ಯಾನ್ ಆಫ್ ದಿ ಇವೆಂಟ್ ಪ್ರಶಸ್ತಿಗೆ ಭಾಜನರಾದರು. ಪುಗ್ಗೇರ ರಾಜೇಶ್, ಮಚ್ಚಂಡ ನೀಲ್ ಬೆಳ್ಯಪ್ಪ, ನೆಲ್ಲಮಕ್ಕಡ ವಿನೋದ್, ಮಚ್ಚಂಡ ನಾಣಯ್ಯ, ಮಂದಪಂಡ ಮನೋಜ್, ಪುತ್ತರಿರ ನಂಜಪ್ಪ, ಮಚ್ಚಂಡ ಹ್ಯಾಪಿನ್, ಜಮ್ಮಡ ಪ್ರೀತ್ ಅಯ್ಯಪ್ಪ, ಮಂದಪಂಡ ರಚನಾ ಮನೋಜ್, ಚೋಳಪಂಡ ಜ್ಯೋತಿ ನಾಣಯ್ಯ, ಪುತ್ತರಿರ ವನಿತಾ ಮುತ್ತಪ್ಪ, ಪುಲ್ಲೇರ ಸ್ವಾತಿ, ಬೊಟ್ಟಂಗಡ ಸವಿತಾ ಗಿರೀಶ್ ವಿಜೇತರಾದರು. ಬಂದೂಕುಗಳನ್ನು ಹೂವುಗಳಿಂದ ಅಲಂಕರಿಸಿ, ವಾಹನದಲ್ಲಿರಿಸಿ ದುಡಿಕೋಟ್ ಪಾಟ್‌ನೊಂದಿಗೆ ಮೆರವಣಿಗೆ ನಡೆಸಲಾಯಿತು. ನಂತರ ಮಕ್ಕಳು, ಮಹಿಳೆಯರು ಹಾಗೂ ಪುರುಷರಿಗಾಗಿ ಶೂಟಿಂಗ್ ಸ್ಪರ್ಧೆಗಳು ನಡೆದವು. ಹೆಚ್ಚಿನ ಸಂಖ್ಯೆಯಲ್ಲಿ ಕೊಡವತಿ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆರಂಭದಲ್ಲಿ ನಂದಿನೆರವಂಡ ನಿಶಾ ಅಚ್ಚಯ್ಯ ಅವರು ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಅವರ ರಚನೆಯ ತೋಕ್ ಪಾಟ್ ಹಾಡಿದರು. ಕಾರ್ಯಕ್ರಮದಲ್ಲಿ ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಕಲಿಯಂಡ ಮೀನಾ ಪ್ರಕಾಶ್, ಪುಲ್ಲೇರ ಸ್ವಾತಿ ಕಾಳಪ್ಪ, ಚೋಳಪಂಡ ಜ್ಯೋತಿ ನಾಣಯ್ಯ, ನಂದೇಟಿರ ಕವಿತಾ ಸುಬ್ಬಯ್ಯ, ಬೊಟ್ಟಂಗಡ ಸವಿತಾ ಪೆಮ್ಮಯ್ಯ, ಅರೆಯಡ ಸವಿತಾ ಗಿರೀಶ್, ಪಚ್ಚಾರಂಡ ಶಾಂತಿ ಪೊನ್ನಪ್ಪ, ಮಂದಪಂಡ ರಚನಾ ಮನೋಜ್, ನಂದಿನೆರವAಡ ರೇಖಾ ನಾಚಪ್ಪ, ಬಿದ್ದಂಡ ಉಷಾ ದೇವಮ್ಮ, ಬೊಳ್ಳಚೆಟ್ಟಿರ ಜಯಂತಿ, ಜಮ್ಮಡ ಪ್ರೀತ್ ಅಯ್ಯಣ್ಣ, ಕರವಂಡ ಸರಸು, ಅಪ್ಪಚ್ಚಿರ ರೀನಾ ನಾಣಯ್ಯ, ಬೊಜ್ಜಂಗಡ ಚಂಪಾ ನಂದ, ಪುತ್ತರಿರ ವನಿತಾ ಮುತ್ತಪ್ಪ, ಬೊಳ್ಳಚೆಟ್ಟಿರ ಸುಂದರಿ ಪೊನ್ನಣ್ಣ, ಬೊಳ್ಳಚೆಟ್ಟಿರ ಯಮುನಾ ಪೂಣಚ್ಚ, ಅಚ್ಚಕಾಳೇರ ರಚನಾ ಅಪ್ಪಣ್ಣ, ಅಚ್ಚಕಾಳೇರ ಕಿಶಾನ್ ಕಾರ್ಯಪ್ಪ, ಅಚ್ಚಕಾಳೇರ ಸವಿತಾ ನಾಣಯ್ಯ, ಅಚ್ಚಕಾಳೇರ ಶಾಯಿನ್ ಪೂವಮ್ಮ, ಮಚ್ಚಂಡ ಹ್ಯಾಪಿನಾ ಕಿರಣ್, ನಂದಿನೆರವಂಡ ನಿಶಾ ಅಚ್ಚಯ್ಯ, ನಂದಿನೆರವಂಡ ಬೀನಾ ಅಯ್ಯಣ್ಣ, ಮಚ್ಚಂಡ ನೀಲ್ ಬೆಳ್ಯಪ್ಪ, ಕಲಿಯಂಡ ಪ್ರಕಾಶ್, ಬಾಚರಣಿಯಂಡ ಚಿಪ್ಪಣ್ಣ, ಬಡುವಂಡ ವಿಜಯ, ನಂದೇಟಿರ ರವಿ ಸುಬ್ಬಯ್ಯ, ಚಙಂಡ ಸೂರಜ್, ನೆಲ್ಲಮಕ್ಕಡ ವಿವೇಕ್, ಬೊಳ್ಳಚೆಟ್ಟಿರ ಸುರೇಶ್, ಬೊಳ್ಳಚೆಟ್ಟಿರ ಪ್ರಕಾಶ್, ಚಙಂಡ ಚಾಮಿ ಪಳಂಗಪ್ಪ, ಅಪ್ಪಚ್ಚಿರ ರಮ್ಮಿ ನಾಣಯ್ಯ, ಕಾಟುಮಣಿಯಂಡ ಉಮೇಶ್, ಅಜ್ಜಿಕುಟ್ಟೀರ ಲೋಕೇಶ್, ಕಾಂಡೇರ ಸುರೇಶ್, ಚಂಬಂಡ ಜನತ್, ಪುಲ್ಲೇರ ಕಾಳಪ್ಪ, ಬೇಪಡಿಯಂಡ ದಿನು, ತೋಲಂಡ ಸೋಮಯ್ಯ, ಕಿರಿಯಮಾಡ ಶರಿನ್, ನಂದಿನೆರವಂಡ ವಿಜು, ಚೋಳಪಂಡ ನಾಣಯ್ಯ, ಅರೆಯಡ ಗಿರೀಶ್, ಬೊಟ್ಟಂಗಡ ಗಿರೀಶ್, ಬಾಚಮಾಡ ರಾಜಾ ಪೂವಣ್ಣ, ಮೇದುರ ಮಾದಪ್ಪ, ಮೇದುರ ಪೂವಯ್ಯ, ನಂದಿನೆರವಂಡ ಅಯ್ಯಣ್ಣ, ಜಂಬಂಡ ಜಾಗೃತ್ ಬಿದ್ದಪ್ಪ, ಅಜ್ಜಿನಿಕಂಡ ಮಹೇಶ್ ನಾಚಯ್ಯ, ಮಂದಪಂಡ ಸೂರಜ್, ನಂದೇಟಿರ ಮೋಹನ್ ಸುಬ್ಬಯ್ಯ, ಮುಕ್ಕಾಟಿರ ಕಿಟ್ಟು ಮುತ್ತಣ್ಣ, ಮಣವಟ್ಟಿರ ಚಿಣ್ಣಪ್ಪ, ಮಂದಪಂಡ ಮನೋಜ್, ಅಪ್ಪೇಂಗಡ ಮಾಲೆ ಪೂಣಚ್ಚ, ಪಟ್ಟಮಾಡ ಕುಶ, ಬೊಳ್ಳಚೆಟ್ಟಿರ ಪ್ರವೀಣ್, ನಂದೇಟಿರ ಗಾಂಧಿ, ಪುಗ್ಗೇರ ರಾಜೇಶ್, ಪುತ್ತರಿರ ನಂಜಪ್ಪ, ನಂದೇಟಿರ ಜೀವನ್, ಪೊರಿಮಂಡ ಧ್ಯಾನ್ ಪೊನ್ನಣ್ಣ, ಚಂಗಂಡ ನಾಗೇಶ್, ಮಾನಿಪಂಡ ದೇವಯ್ಯ, ಮಚ್ಚಂಡ ಕಿರಣ್ ನಾಣಯ್ಯ, ಅಪ್ಪೆಂಗಡ ರಾಮು ಮೇದಪ್ಪ, ಅಚ್ಚಕಾಳೇರ ಸಂತು ಅಪ್ಪಣ್ಣ, ಅಚ್ಚಕಾಳೇರ ನವೀನ್ ಮೊಣ್ಣಪ್ಪ, ಪುಟ್ಟಿಚಂಡ ಡಾನ್ ದೇಚಯ್ಯ, ಪುದಿಯೊಕ್ಕಡ ಪೃಥ್ವಿ ಬೋಪಣ್ಣ, ಮೇದುರ ಕಂಠಿ ನಾಣಿಯಪ್ಪ, ಬೇಪಡಿಯಂಡ ಬಿದ್ದಪ್ಪ, ಸೋಮೆಯಂಡ ರೇಷಾ ತಿಮ್ಮಯ್ಯ, ಬಾಚಿರ ಚಿಣ್ಣಪ್ಪ, ಕೊಳ್ಳಿಮಾಡ ಕಾರ್ಯಪ್ಪ, ಕಾಟಿಮಾಡ ಡಿಕ್ಕಿ, ಕಾಟಿಮಾಡ ಜಿಮ್ಮಿ ನಾಣಯ್ಯ, ನೆರ್ಪಂಡ ಜಿಮ್ಮಿ ಚೆಂಗಪ್ಪ, ಬೇಪಡಿಯಂಡ ಬಿದ್ದಪ್ಪ, ಬಲ್ಲಚಂಡ ಸುನೀಲ್ ಬಿದ್ದಪ್ಪ, ಬಲ್ಲಟಿಕಾಳಂಡ ರಾಯ್ ಮಂದಣ್ಣ, ಕಾಂಗೀರ ವಿಷ್ಣು, ಅಪ್ಪಾರಂಡ ಪ್ರಸಾದ್, ಪಾಲೇಕಂಡ ಪ್ರತಾಪ್, ಅಪ್ಪಾರಂಡ ಪ್ರಕಾಶ್, ಚಂಗಙಮಕ್ಕಡ ವಿನು, ಅಪ್ಪಾರಂಡ ವಿಜು, ಬೊಜ್ಜಂಗಡ ನಂದ, ಕೋಳೇರ ರಾಜು ನರೇಂದ್ರ, ತೊತ್ತಿಯಂಡ ಬೆಳ್ಯಪ್ಪ, ದೇಯಂಡ ಗಿರೀಶ್, ಮೊಣ್ಣಂಡ ಕಾರ್ಯಪ್ಪ, ಕುಕ್ಕೇರ ಜಯ ಚಿಣ್ಣಪ್ಪ, ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಬಾಳೆಯಡ ಸೋಮಯ್ಯ, ಕಾಟಿಮಾಡ ಡಿಕ್ಕಿ, ನಂದೇಟಿರ ಗಾಂಧಿ ದೇವಯ್ಯ, ನಂದೇಟಿರ ನಿಶು ನಂಜಪ್ಪ, ಚಂಬಂಡ ಜಾಗೃತ್, ಪಾರುವಂಗಡ ನವೀನ್, ಅಪ್ಪನೆರವಂಡ ರಾಮು ಬೆಳ್ಯಪ್ಪ, ಕುಲ್ಲೇಟಿರ ಬೇಬ ಅರುಣ, ಕಾಟುಮಣಿಯಂಡ ಉಮೇಶ್, ಬೊಜ್ಜಂಗಡ ನಂದ, ಬೊಳ್ಳಿಮಾಡ ವಸಂತ್, ನಂದೇಟಿರ ಮೋಹನ್ ಸುಬ್ಬಯ್ಯ, ನಂದೇಟಿರ ಜೀವನ್, ಐಚೆಟ್ಟಿರ ರಂಜಿ ಕುಟ್ಟಯ್ಯ, ಐಚೆಟ್ಟಿರ ಸುಬ್ಬಯ್ಯ, ಮಣವಟ್ಟಿರ ನಂದ, ಅಪ್ಪಾರಂಡ ಪ್ರಕಾಶ್, ಅಪ್ಪಾರಂಡ ವಿಜು, ಮೇಕೇರಿರ ಬಬ್ಬು ಉಪಸ್ಥಿತರಿದ್ದರು.










