ಮಡಿಕೇರಿ ಜೂ.22 : ನಗರದ ಸಂತ ಮೈಕಲರ ಶಾಲೆಯಲ್ಲಿ ಯೋಗ ಗುರು ಸಂಕೇತ ಅವರ ಮಾರ್ಗದರ್ಶನದಲ್ಲಿ ಯೋಗ ದಿನಾಚರಣೆ ನಡೆಯಿತು.
ಸಂಸ್ಥೆಯ ವ್ಯವಸ್ಥಾಪಕ ವಂದನೀಯ ಗುರು ನವೀನ್ ಕುಮಾರ್ ಮಾತನಾಡಿ, ಯೋಗ ಅಭ್ಯಾಸವನ್ನು ಪ್ರತಿ ನಿತ್ಯ ಮಾಡುವುದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಸಹಕಾರಿಯಾಗಲಿದೆ ಎಂದರು. ಸಂಸ್ಥೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು ಇತರರು ಇದ್ದರು.









