ಮಡಿಕೇರಿ ಜು.8: ಮಡಿಕೇರಿ ರೋಟರಿ ಸಂಸ್ಥೆಯ 73ನೇ ಅಧ್ಯಕ್ಷೆಯಾಗಿ ಗೀತಾ ಗಿರೀಶ್ ಅಧಿಕಾರ ಸ್ವೀಕರಿಸಿದ್ದಾರೆ.
ನಗರದ ರೋಟರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧಿಕಾರಿ ಸ್ವೀಕರಿಸಿದ್ದು, ಕಾರ್ಯದರ್ಶಿಯಾಗಿ ಎಂ.ಕೆ.ಶರತ್ ಕರ್ತವ್ಯ ನಿರ್ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ವಿರಾಜಪೇಟೆ ಸ್ಥಾಪನಾ ಅಧಿಕಾರಿ ರೋಟರಿಯನ್ ಡಾ. ಎಸ್.ವಿ.ನರಸಿಂಹನ್, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಡಾ.ನಯನಾ ಕಶ್ಯಪ್, ರೋಟರಿ ಸಹಾಯಕ ಗವರ್ನರ್ ಡಿ.ಎಮ್.ತಿಲಕ್, ರೋಟರಿ ಝೋನಲ್ ಲೆಫ್ಟಿನೆಂಟ್ ಎಸ್.ಎಸ್.ಸಂಪತ್ ಕುಮಾರ್ ಪಾಲ್ಗೊಂಡಿದ್ದರು.
ವನಮಹೋತ್ಸವದ ಪ್ರಯುಕ್ತ ಕಾರ್ಯಕ್ರಮಕ್ಕೆ ಆಗಮಿಸಿದ ಹಿರಿಯರಿಗೆ ಗಿಡಗಳನ್ನು ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ರೋಟರಿ ಬುಲೆಟಿನ್ ಬಿಡುಗಡೆ ಮಾಡಲಾಯಿತು.









