ಕುಶಾಲನಗರ ಜು.20 : ಕೂಡುಮಂಗಳೂರು ಗ್ರಾ.ಪಂ ನ ಕೂಡ್ಲೂರು ವಾರ್ಡ್ ನಲ್ಲಿ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೆ.ಆರ್.ಸುರೇಶ್ ಪರವಾಗಿ ಮತ ಪ್ರಚಾರ ನಡೆಸಲಾಯಿತು.
ಕೂಡುಮಂಗಳೂರು ಗ್ರಾ.ಪಂ ನ ಕೂಡ್ಲೂರು ವಾರ್ಡ್ ನ ಕುಮಾರ್ ಎಂಬುವವರ ಅಕಾಲಿಕ ಮರಣದಿಂದ ತೆರವಾದ ಸ್ಥಾನಕ್ಕೆ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೆ.ಆರ್.ಸುರೇಶ್ ಸ್ಪರ್ಧಿಸಿದ್ದಾರೆ. ಕೆ.ಆರ್.ಸುರೇಶ್ ಅವರ ಪರವಾಗಿ ಕೂಡುಮಂಗಳೂರು ಗ್ರಾ.ಪಂ ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಹಾಗೂ ಪ್ರಮುಖರಿಂದ ಬಿರುಸಿನ ಪ್ರಚಾರ ನಡೆಯಿತು.
ಈ ಸಂದರ್ಭ ಮಾತನಾಡಿದ ಸದಸ್ಯ ಕೆ.ಬಿ.ಶಂಶುದ್ಧೀನ್, ಕೂಡ್ಲೂರು ಎಸ್.ಟಿ ಮೀಸಲಾತಿಯ ಸ್ಥಾನಕ್ಕೆ ಕೆ.ಆರ್.ಸುರೇಶ್ ಅವರು ಕಣದಲ್ಲಿದ್ದಾರೆ. ಇವರ ಪರವಾಗಿ ಮತಪ್ರಚಾರ ನಡೆಸಲಾಯಿತು. ಯುವ ಉತ್ಸಾಹಿ, ಸ್ಥಳೀಯರು ಕೂಡಾ ಆಗಿರುವ ಕೆ.ಆರ್.ಸುರೇಶ್ ಅವರು ಸಾಮಾಜಿಕ ಸೇವಾ ಮನೋಭಾವನೆಯುಳ್ಳ ವ್ಯಕ್ತಿಯಾಗಿದ್ದಾರೆ. ಸಾರ್ವಜನಿಕರು ತಮ್ಮ ಮತವನ್ನು ನೀಡಿ ಜಯಶಾಲಿಯನ್ನಾಗಿಸಲಿದ್ದು, ಕೆ.ಆರ್.ಸುರೇಶ್ ಅವರ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೆ.ಆರ್.ಸುರೇಶ್ ಮಾತನಾಡಿ, ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ತಮ್ಮ ಅಮೂಲ್ಯವಾದ ಗುರುತನ್ನು ಕ್ರಮ ಸಂಖ್ಯೆ 2 ಹಾಗೂ ತೆಂಗಿನ ತೋಟದ ಗುರುತಿಗೆ ಹಾಕುವ ಮೂಲಕ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು.
ಈ ಸಂದರ್ಭ ಕಾಂಗ್ರೆಸ್ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಇದ್ದರು.













