ಮಡಿಕೇರಿ ಜು.31 : ನಗರದ ಶ್ರೀ ಕೋಟೆ ಮಾರಿಯಮ್ಮ ಯುವಕ ಮಿತ್ರ ಮಂಡಳಿಯ 48ನೇ ದಸರಾ ಉತ್ಸವ ಸಮಿತಿಯ ಅಧ್ಯಕ್ಷರಾಗಿ ಪ್ರಭು ರೈ (ಪ್ರಭಾಕರ್) ಹಾಗೂ ಎಂ.ಬಿ.ರಾಜ ಸುಬ್ಬಯ್ಯ ಆಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ಮುದ್ದುರಾಜು, ಖಜಾಂಚಿಯಾಗಿ ವಿಘ್ನೇಶ್, ಸಹ ಕಾರ್ಯದರ್ಶಿಯಾಗಿ ಕವನ್ ಕೊತ್ತೋಳಿ, ಉಪಾಧ್ಯಕ್ಷರುಗಳಾಗಿ ಅಯ್ಯಪ್ಪ, ಕರಣ್ ಕುಮಾರ್, ದಿನೇಶ್ ಹಾಗೂ ಎಂ.ಜಿ.ಪ್ರಮೋದ್ ನೇಮಕಗೊಂಡಿದ್ದಾರೆ.
ಕೋಟೆ ಮಾರಿಯಮ್ಮ ದೇವಾಲಯದ ಆವರಣದಲ್ಲಿ ಬ್ರಿಜೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಸಾಲಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.








