ವಿರಾಜಪೇಟೆ ಆ.4 : ವಿರಾಜಪೇಟೆ ತಾಲ್ಲೂಕಿನ ಮಗ್ಗುಲ ಗ್ರಾಮದ ಕುಪ್ಪಚ್ಚಿರ ದಿ॥ ಭೀಮಯ್ಯ ಮತ್ತು ಕವಿತ ಭೀಮಯ್ಯರವರ ಪುತ್ರ ಕುಪ್ಪಚ್ಚಿರ ಭರತ್ ಅವರಿಗೆ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ 57ನೇ ಘಟಿಕೋತ್ಸವದಲ್ಲಿ ಎಂ.ಎಸ್ಸಿ.(ಕೃಷಿ) ಪದವಿಯೊಂದಿಗೆ ಮೂರು ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು.
ಕೃಷಿ ವಿಶ್ವವಿದ್ಯಾನಿಲಯದ ರೇಷ್ಮೆಕೃಷಿ ಸ್ನಾತಕೋತ್ತರ ವಿಭಾಗದಲ್ಲಿ ಅತೀ ಹೆಚ್ಚು ಅಂಕ ಗಳಿಸಿ, “Bio-management of root-knot nematode in mulberry ( _Morus alba_ L.) and its impact on silkworm rearing” ಎಂಬ ವಿಷಯದ ಕುರಿತಾಗಿ ಸಂಶೋಧನಾ ಪ್ರಬಂಧವನ್ನು ರಚಿಸಿರುವುದಕ್ಕೆ ಭರತ್ ಅವರಿಗೆ ಕರ್ನಾಟಕದ ರಾಜ್ಯಪಾಲರು ಹಾಗು ವಿಶ್ವವಿದ್ಯಾನಿಲಯದ ಕುಲಾಧಿಪತಿಗಳಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ರವರು ಪ್ರಶಸ್ತಿ ಪತ್ರ ಮತ್ತು ಮೂರು ಸ್ವರ್ಣ ಪದಕಗಳನ್ನು ಪ್ರದಾನ ಮಾಡಿದರು.
ಈ ಸಂದರ್ಭ ಡಾ. ಹಿಮಾಂಶು ಪಾಠಕ್, ಮಹಾನಿರ್ದೇಶಕರು – ಭಾರತೀಯ ಕೃಷಿ ಅನುಸಂಧಾನ ಪರಿಷತ್ತು, ನವದೆಹಲಿ; ಶ್ರೀ. ಎನ್. ಚೆಲ್ಲುವರಾಯಸ್ವಾಮಿ, ಕರ್ನಾಟಕ ಸರ್ಕಾರದ ಮಾನ್ಯ ಕೃಷಿ ಸಚಿವರು; ಡಾ. ಎಸ್. ವಿ. ಸುರೇಶ, ಕುಲಪತಿಗಳು, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.