ಸೋಮವಾರಪೇಟೆ ಆ.23 : ಗರ್ವಾಲೆ ಗ್ರಾ.ಪಂ ವ್ಯಾಪ್ತಿಯ ಮಂಕ್ಯ, ಗರ್ವಾಲೆ, ಕುಂಬಾರಗಡಿ ವ್ಯಾಪ್ತಿಯಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಮೀಸಲು ಅರಣ್ಯಕ್ಕೆ ಓಡಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಕಳೆದ ಮೂರು ದಿನಗಳಿಂದ ಸೋಮವಾರಪೇಟೆ ವಲಯ ಅರಣ್ಯ ಇಲಾಖೆಯ ಆರ್‍ಆರ್‍ಟಿ ತಂಡ ಹಾಗೂ ಎಲಿಫೆಂಟ್ ಟಾಸ್ಕ್‌ಫೋರ್ಸ್‌ನ ಸಿಬ್ಬಂದಿಗಳು ಸೇರಿದಂತೆ ಒಟ್ಟು 35 ಮಂದಿಯ ತಂಡ ಕಾರ್ಯಾಚರಣೆ ನಡೆಸಿ, ಜನವಸತಿ ಹಾಗೂ ಕೃಷಿ ಪ್ರದೇಶದಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಮರಳಿ ಅರಣ್ಯಕ್ಕೆ ಅಟ್ಟಿದ್ದಾರೆ.
ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಚೇತನ್ ನೇತೃತ್ವದಲ್ಲಿ ಕಳೆದ 3 ದಿನಗಳಿಂದ ಕೂಂಬಿಂಗ್ ನಡೆಸಿ, ಕೊನೆಗೂ ಕಾಜೂರು ಅರಣ್ಯಕ್ಕೆ ಕಾಡಾನೆಗಳನ್ನು ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಕುಂಬಾರಗಡಿಗೆಯಲ್ಲಿದ್ದ ಒಟ್ಟು 4 ಆನೆಗಳನ್ನು ಹರಗ, ತಾಕೇರಿ, ಕಿರಗಂದೂರು, ಹಾನಗಲ್ಲುಶೆಟ್ಟಳ್ಳಿ-ಹಾನಗಲ್ಲು ಗ್ರಾಮದ ಗಡಿ, ದುದ್ದುಗಲ್ಲು ಹೊಳೆ ಮೂಲಕ ಮರಳಿ ಕಾಜೂರು ಅರಣ್ಯಕ್ಕೆ ಓಡಿಸಲಾಗಿದೆ.









