ಸೋಮವಾರಪೇಟೆ ಆ.24 : ಕೊಡಗು ಜಿಲ್ಲಾ ವೀರಶೈವ ಲಿಂಗಾಯತ ಜಂಗಮ ಅರ್ಚಕರು ಹಾಗೂ ಪುರೋಹಿತರ ಸಂಘದ ಅಧ್ಯಕ್ಷರಾಗಿ ಮಡಿಕೇರಿ ಬಸವೇಶ್ವರ ದೇವಾಲಯದ ಅರ್ಚಕ ವೇದಮೂರ್ತಿ ಶ್ರೀ ಎಫ್.ಸಿ.ಹಿರೇಮಠ್ ಶಾಸ್ತ್ರಿಗಳು ಆಯ್ಕೆಯಾಗಿದ್ದಾರೆ.
ಪಟ್ಟಣದ ಸಂಘದ ಆವರಣದಲ್ಲಿ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ಹಾಗೂ ಮೋಹನಮೂರ್ತಿ ಶಾಸ್ತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು.
ಪ್ರಧಾನ ಕಾರ್ಯದರ್ಶಿಯಾಗಿ ಸೋಮವಾರಪೇಟೆಯ ಯೋಗೇಶ್ ಶಾಸ್ತ್ರಿ, ಉಪಾಧ್ಯಕ್ಷರಾಗಿ ಅಮ್ಮತ್ತಿಯ ಮಹೇಶ ಶಾಸ್ತ್ರಿ, ಖಜಾಂಚಿಯಾಗಿ ಮನುಕುಮಾರ್, ನಿದೇಶಕರುಗಳಾಗಿ ಅಭಿಮಠ ಮಹೇಶ್, ಪುಷ್ಪಗಿರಿ ನಂದೀಶ್, ಕೊಡ್ಲಿಪೇಟೆ ಸೋಮಶೇಖರ್, ಕೋಗೇಕೊಡಿ ನಂಜುಂಡಪ್ಪ, ಸೋಮವಾರಪೇಟೆ, ಮೋಹನ್ ಮೂರ್ತಿ, ಚಂದ್ರಶೇಖರ್, ತೋರೇನೂರು ಸೋಮಶೇಖರ್, ಗುಮ್ಮನ ಕೊಲ್ಲಿ ಚಂದ್ರಶೇಖರ್ ಆಯ್ಕೆಯಾಗಿದ್ದಾರೆ.